ಡಾ. ರಾಜಕುಮಾರ ಸಾಂಸ್ಕೃತಿಕ ವ್ಯಕ್ತಿತ್ವ ಬಿಂಬಿಸಿದ TV5 ವಾಹಿನಿ
ಅಕ್ಷರ ಜಗತ್ತು, ಬುದ್ಧಿವಂತರ ವಲಯ ವಿರೋಧಿಸುತ್ತ ರಾಜ್ ಸಿನಿಮಾಗಳನ್ನು ವಿರೋಧಿಸುವುದರ ಮೂಲಕ ಅವರು ಕಟ್ಟಿಕೊಟ್ಟ ಸಾಂಸ್ಕೃತಿಕ ಚೇತನವನ್ನು ಕುಂದಿಸಲು ಪ್ರಯತ್ನಿಸಿದರೂ ಅದು ಸಾಧ್ಯವಾಗದೇ ನಿಜವಾದ ಪ್ರಜ್ಞಾವಂತ ಅಕ್ಷರ ಸಂಸ್ಕೃತಿ ಅವರ ಸಾಂಸ್ಕೃತಿಕ ಶಕ್ತಿಯವನ್ನು ಒಪ್ಪಿ ಅಪ್ಪಿಕೊಳ್ಳುವುದರ ಮೂಲಕ ಸುಮಾರು ೮೦ ಹೆಚ್ಚು ಅವರ ಕುರಿತು ಕೃತಿಗಳನ್ನು ನೀಡಿದೆ. ಇಷ್ಟೊಂದು ಕೃತಿಗಳು ಯಾವ ಕಲಾವಿದನಿಗೂ ಸಾಧ್ಯವಾಗಿಲ್ಲ.
ಡಾ. ರಾಜಕುಮಾರ ಸಾಂಸ್ಕೃತಿಕ ವ್ಯಕ್ತಿತ್ವ ಬಿಂಬಿಸಿದ TV5 ವಾಹಿನಿ
ಅಸ್ಮಿತೆ ಸುದ್ದಿ: ನಮ್ಮ ಟಿವಿ ಚಾನಲ್‌ಗಳು ಸಾಹಿತ್ಯ, ಸಂಗೀತ, ಸಾಂಸ್ಕೃತಿಕ ಸಂಗತಿಗಳಿಗೆ ಸಂಬಂಧವಿಲ್ಲದಂತೆ ರಾಜಕೀಯ ಭಿನ್ನಾಭಿಪ್ರಾ, ಕುರ್ಚಿ ಕದನ, ಅರೋಪ – ಪ್ರತ್ಯಾರೋಪಗಳು, ಸೆಲಿಬ್ರಟಿಗಳು, ಕ್ರೈಂ ಸುದ್ದಿಗಳಿಗೇ ಗಂಟುಬಿದ್ದು ಮಂದಿ ಮೆದುಳಿನಲ್ಲಿ ಕೈಯಾಡಿಸಿ ತಮ್ಮಂತೆ ಮಾಡಿಕೊಂಡಿವೆ. ಪರಿಸ್ಥಿತಿ ಹೀಗಿರಬೇಕಾದರೆ TV5 ವಾಹಿನಿಯವರ ಚಾನಲ್ ನಟ ಸಾರ್ವಭೌಮ ಡಾ. ರಾಜಕುಮಾರ ಬಗ್ಗೆ ಆಸಕ್ತಿದಾಯಕ ಕಾಯಕ್ರಮ ಪ್ರಸಾರವಾಗುವುದನ್ನು ಕಂಡೆ. ಖುಷಿಯಾಯಿತು. ಇಂದು ಶನಿವಾರ ದಿ.೧೩.೦೬.೨೬ ಸಂಜೆ ೬.೩೦ ರ ಸುಮಾರಿಗೆ ರಾಜ್ ಉತ್ಸವ ವಿಶೇಷ ಕಾರ್ಯಕ್ರಮವನ್ನು ರಾತ್ರಿ ೮ ಗಂಟೆ ಮುಗಿಯುವರೆಗೂ ವೀಕ್ಷಿಸುವಂತೆ ವಾಹಿನಿ ಸೆಳೆದಿತ್ತು.
ವಾಹಿನಿಯಲ್ಲಿ ಡಾ. ರಾಜುಮಾರ ಬಗ್ಗೆ ಹಂಪಿ ಕನ್ನಡ ವಿಶ್ವವಿದ್ಯಾಲಯ ಹೊರ ತಂದಿರುವ “ಕಥಾ ನಾಯಕನ ಕಥೆ” ಕೃತಿಯ ಅರ್ಥಪೂರ್ಣ ವಿಶ್ಲೇಷನಾತ್ಮಕ ನಿರೂಪಣೆ ವಿಡಿಯೋ, ಫೋಟೋಗಳ ಮೂಲಕ ವೀಕ್ಷಿಸುತ್ತಿದ್ದಂತೆ ಅದಕ್ಕೆ ಪೂರಕವಾದ ವಿಚಾರ ಪ್ರಧಾನ ಬರಹಗಾರರ ಸಂದರ್ಶನ ಮತ್ತಷ್ಟು ಕುತೂಹಲ ಮೂಡಿಸಿತು. ಕನ್ನಡದ ಇಂಥ ಕಾರ್ಯಕ್ರಮಗಳು ಸಾಮಾನ್ಯವಾಗಿ ನಮ್ಮ ಚಂದನ ವಾಹಿನಿಯಲ್ಲಿ ಪ್ರಸಾರವಾಗುತ್ತವೆ. ಆದರೆ, ಟಿವಿ೫ ಪ್ರಸಾರ ಮಾಡಿದ್ದ ವಿಶೇಷ. ಅದರಲ್ಲೂ ಕೃತಿಯ ವಿಶ್ಲೇಷಣೆ, ವಿಮರ್ಶೆ ಹಾಗೂ ವಿಚಾರ ಪ್ರಧಾನ ಮುಕ್ತವಾದ ಸಂವಾದಕ್ಕೆ ಅವಕಾಶ ಕಲ್ಪಸಿರುವುದು ಶ್ಲಾಘನೀಯ.
“ಕಥಾ ನಾಯಕನ ಕಥೆʼ ಕೃತಿಯ ಅರ್ಥಪೂರ್ಣ ನಿರೂಪಣೆಯ ನಂತರ ನಡೆದ ಸಂವಾದ ಡಾ. ರಾಜಕುಮಾರರನ್ನು ಶ್ರಮಿಕ ಹಾಗೂ ಪ್ರಜ್ಞಾಶೀಲ ವರ್ಗ ಅಪ್ಪಿಕೊಂಡ ಮತ್ತು ಗ್ರಹಿಸಿದ ರೀತಿ ಹಾಗೂ ಕಾರಣಗಳ ಕುರಿತು ಒಂದು ಗಂಟೆಯ ವರೆಗೆ ನಡೆದ ಚರ್ಚೆ ಆಸಕ್ತಿದಾಯಕವಾಗಿತ್ತು. ಚರ್ಚೆಯಲ್ಲಿ ವಾಹಿನಿಯ ನಿರೂಪಕರೊಂದಿಗೆ ಚಿಂತಕ, ಪತ್ರಕರ್ತ ಮಂಜುನಾಥ ಅದ್ದೆ, ಬರಹಗಾರರಾದ ಬಿ.ಸಿ. ನಾಗೇಂದ್ರಕುಮಾರ ಹಾಗೂ ಎಸ್. ಜಗನ್ನಾಥರಾವ್ ಬಹುಳೆ ಅವರು ಭಾಗವಹಿಸಿ ರಾಜಕುಮಾರ ವ್ಯಕ್ತಿತ್ವದ ಮೇಲೆ ಹೊಸ ಬೆಳಕು ಚಲ್ಲಿದರು. ಅದರಲ್ಲೂ ವಿಶೇಷವಾಗಿ ರಾಜ್ ಅವರನ್ನು ಬೆವರು ಸಂಸ್ಕೃತಿಯ ಕೇಂದ್ರವನ್ನಾಗಿಸಿ ಸಾಮಾಜಿಕ ನೆಲೆಯಲ್ಲಿ ವಿಶ್ಲೇಷಿಸಿದ ಮಂಜುನಾಥ ಅದ್ದೆ ಅವರ ಗ್ರಹಿಕೆ ತುಂಬಾ ವಿಶೇಷವಾಗಿತ್ತು. ಮಂಜುನಾಥ ಒಬ್ಬ ಸಾಮಾಜಿಕ ವಾಸ್ತವ ಅಧ್ಯಯನಕಾರ ಹಾಗೂ ವಿಮರ್ಶೆಗೆ ಒಳಪಡಿಸಿ ನೋಡಿವ ಪ್ರಜ್ಞಾಶೀಲ ಪತ್ರಕರ್ತನಾಗಿರುವುದರಿಂದ ರಾಜುಮಾರರ ನಿಜವಾದ ವ್ಯಕ್ತಿತ್ವ ಕಂಡುಕೊಳ್ಳಲು ಸಾಧ್ಯವಾದದ್ದು.

ಸಂವಾದದಲ್ಲಿ ವ್ಯಕ್ತಗೊಂಡ ಕೆಲ ವಿಶೇಷ ಅಂಶಗಳು ತುಂಬಾ ಅರ್ಥಪೂರ್ಣವಾಗಿದ್ದರಿಂದ ಈ ಲೇಖನ ಬರೆಯಲು ಕಾರಣವಾಯಿತು.
೧. ಆಧುನಿಕ ಸಂದರ್ಭದಲ್ಲಿ ಕುವೆಂಪು ಒಬ್ಬ ಭೌದ್ಧಿಕ ಸಾಂಸ್ಕೃತಿಕ ನಾಯಕರಾದರೆ, ಡಾ. ರಾಜಕುಮಾರ ಒಬ್ಬ ಕಲಾವಿದರಾಗಿ ಭೌತಿಕ ಸಾಂಸ್ಕೃತಿಕ ನಾಯಕರಾಗುತ್ತಾರೆ.
೨. ಡಾ. ರಾಜಕುಮಾರು ಸಾಮಾಜಿಕ ಮತ್ತು ಸಾಂಸ್ಕೃತಿಕ ಬಿಕ್ಕಟ್ಟುಗಳನ್ನು ದಾಟಿ ನಾಲ್ಕು ತಲೆಮಾರುಗಳನ್ನು ಮೀರಿ ಬೆಳೆದವರು.
೩. ಮಕ್ಕಳ, ಮಹಿಳೆಯರು, ಮುದುಕರು ಸೇರಿ ಎಲ್ಲ ವಯೋಮಾನದವರನ್ನು ರಾಜ್ ಆದರ್ಶತ್ವವಾಗಿ ಸೆಳೆದವರು. ಸಮಗ್ರ ಬೆವರು ಸಂಸ್ಕೃತಿ ಜನಾಂಗದ ಪಡಿಯಚ್ಚು ಒತ್ತಿದವರು. ಆ ಮೂಲಕ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಕಟ್ಟಿಕೊಟ್ಟವರು.
೪. ಡಾ. ರಾಜಕುಮಾರ ಅವರು ಬದುಕಿನ ವಿಶೇಷ ಟ್ರೆಂಡ್ ನಿರ್ಮಿಸಿಕೊಂಡು ತಮ್ಮ ಸಿನಿಮಾಗಳ ಮೂಲಕ ಆದರ್ಶ, ಮೌಲ್ಯಗಳ ತೋರಿಸಿದವರು ಮಾತ್ರವಲ್ಲ ಅವುಗಳನ್ನು ಬಿತ್ತಿದವರು.
೫. ವರ್ಗ-ವರ್ಣ-ಜಾತಿ- ಲಿಂಗ ಭೇದಗಳನ್ನು ಒಡೆದು ಕುಲಕಸಬುಗಳ ಮೂಲಕ ಜನಾಂಗೀಯ ಗೌರವ ತಂದುಕೊಟ್ಟವರು.
೬. ಅಕ್ಷರ ಜಗತ್ತು, ಬುದ್ಧಿವಂತರ ವಲಯ ವಿರೋಧಿಸುತ್ತ ರಾಜ್ ಸಿನಿಮಾಗಳನ್ನು ವಿರೋಧಿಸುವುದರ ಮೂಲಕ ಅವರು ಕಟ್ಟಿಕೊಟ್ಟ ಸಾಂಸ್ಕೃತಿಕ ಚೇತನವನ್ನು ಕುಂದಿಸಲು ಪ್ರಯತ್ನಿಸಿದರೂ ಅದು ಸಾಧ್ಯವಾಗದೇ ನಿಜವಾದ ಪ್ರಜ್ಞಾವಂತ ಅಕ್ಷರ ಸಂಸ್ಕೃತಿ ಅವರ ಸಾಂಸ್ಕೃತಿಕ ಶಕ್ತಿಯವನ್ನು ಒಪ್ಪಿ ಅಪ್ಪಿಕೊಳ್ಳುವುದರ ಮೂಲಕ ಸುಮಾರು ೮೦ ಹೆಚ್ಚು ಅವರ ಕುರಿತು ಕೃತಿಗಳನ್ನು ನೀಡಿದೆ. ಇಷ್ಟೊಂದು ಕೃತಿಗಳು ಯಾವ ಕಲಾವಿದನಿಗೂ ಸಾಧ್ಯವಾಗಿಲ್ಲ.
೭. ಅಲೆಮಾರಿ ಸಮುದಾಯಗಳ ಟ್ರೆಂಡ್ ನಿರ್ಮಿಸಿದ ರಾಜಕುಮಾರ ಅವರು, ಮುಗ್ಧ ಭಕ್ತಿ, ರೈತಾಪಿ ವರ್ಗಗಳಲ್ಲಿನ ಬಿರುಕು ಹಾಗೂ ಬಾಂಧವ್ಯಗಳನ್ನು ಎತ್ತಿ ಹಿಡಿದವರು. ತಳಸಮುದಾಯಗಳ ಪ್ರಾತಿನಿಧಿಕ ಪಾತ್ರಗಳನ್ನು ನಿರ್ವಹಿಸಿ ಆ ಸಮುದಾಯಗಳ ಬೆವರು ಸಂಸ್ಕೃತಿ ಮೌಲ್ಯಗಳಿಗೆ ಬೆಲೆ ತಂದುಕೊಟ್ಟವರು.

೮. ರಾಜಕುಮಾರ ಯಾಕೆ ಹೆಚ್ಚು ಇಷ್ಟವಾಗುವುದ ಎಂದರೆ ಈ ರೀತಿ ಪ್ರಜ್ಞಾಶೀಲ ಕಲಾವಂತಿಕೆಯ ಜೊತೆಗೆ ಅವರದೇ ಆದ ವಿನಿತ್ವದ ಬದುಕಿನ ಗ್ರಹಿಕೆಯಿಂದಾಗಿ. ಓದಿದ್ದು ಏನಿಲ್ಲವಾದರೂ ಬದುಕಿನ ಗ್ರಹಿಕೆಯ ಮೂಲಕ ದೊಡ್ಡದಾದ ವ್ಯಕ್ತಿತ್ವ ಸಾಧಿಸಿದವರು. ತುಂಬಾ ಪರಿಶ್ರಮದಿಂದ ಬಹು ವಿದ್ಯೆಗಳನ್ನು ಕಲಿತು ಕರಗತ ಮಾಡಿಕೊಂಡವರು. ಬದುಕಿನ ಗ್ರಹಿಕೆಯಿಂದ ಬಂದ ನೀತಿಯನ್ನು ಕೊನೆಯ ವರೆಗೂ ಪಾಲಿಸಿಕೊಂಡು ಬಂದವರು.
೯. ಅಭಿಮಾನಿಗಳನ್ನು ದೇವರೆಂದು ಕರೆದ ಏಕೈಕ ಕಲಾವಿದ. ಅಂಧಿನ ಹಳ್ಳಿಗಾಡಿನ ಕ್ರೌರ್ಯಗಳ ಅನುಭವ ಸಾಮಾನ್ಯವಾದದ್ದು ಎಂದು ಭಾವಿಸಿಕೊಂಡು ಬೆಳೆದವರು.
೧೦. ಡಾ. ರಾಜಕುಮಾರ ಅವರಿಗೆ ಭಾರತ ರತ್ನ ಎಂದೋ ನೀಡಬೇಕಾಗಿತ್ತು. ಅವರು ತಮ್ಮ ಜೀವಿತ ಕಾಲದಲ್ಲಿಯೇ ಭಾರತ ರತ್ನಕ್ಕೆ ಅತ್ಯಂತ ಅರ್ಹರಾಧವರು ಎಂಬುದು ಸಾಬೀತವಾಗಿತ್ತು. ಭಾರತ ರತ್ನ ಪ್ರಶಸ್ತಿಯ ಮೌಲ್ಯ ಹೆಚ್ಚಿಸುವ ವ್ಯಕ್ತಿತ್ವ ಡಾ. ರಾಜುಕಮಾರ ಅವರ ಸಾಂಸ್ಕೃತಿಕ ವ್ಯಯಕ್ತಿತ್ವದಲ್ಲಿದೆ.
**
ಈ ಲೇಖನ ಹಂಚಿಕೊಳ್ಳಿ