ಬ್ರೇಕಿಂಗ್
ಸಾಮರಸ್ಯ ಕೆಡಿಸುವ ಎಂಇಎಸ್‌, ಶಿವಸೇನೆ ನಿಷೇಧಕ್ಕೆ ಕರವೇ ಆಗ್ರಹ ಸುವರ್ಣ ಸೌಧದ ಎದುರು ಅಂತರಾಷ್ಟ್ರೀಯ ಯೋಗ‌ ದಿನಾಚರಣೆ ಸೈಬರ್ ವಂಚನೆಯಿಂದ ಹಣ ಕಳೆದುಹೋಗದಂತೆ ಪೊಲೀಸ್ ಇಲಾಖೆ ಆಧುನಿಕ ತಂತ್ರಜ್ಞಾನದ ಬಿಗಿಕ್ರಮ - ಪ್ರಿಯಾಂಕ ಖರ್ಗೆ ಕನ್ನಡಕ್ಕೆ ಮೊದಲ ಆದ್ಯತೆ ನೀಡಲು ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗಕ್ಕೆ ಬಿಳಿಮಲೆ ಆಗ್ರಹ ರಕ್ಷಣಾ ಭದ್ರತಾ ದಳಕ್ಕೆ (ಡಿಎಸ್‌ಸಿ) ಮಾಜಿ ಸೈನಿಕರ ನೇಮಕಾತಿ ಮಂಗಾವತಿ :   ಸೇವಾ ನಿವೃತ್ತ ಹಾಗೂ ಪ್ರತಿಭಾ ಸಾಧಕರಿಗೆ ಗೌರವ ಸನ್ಮಾನ 232 ಗ್ರೇಡ್-2 ತಹಶೀಲ್ದಾರ್‌ಗಳಿಗೆ ಗ್ರೇಡ್-1 ತಹಶೀಲ್ದಾರ್ ಹುದ್ದೆಗೆ ಬಡ್ತಿ ಮಹಾದಾಯಿ, ಕೃಷ್ಣೆ, ಕಾವೇರಿ ಜಲ ವಿವಾದ ನಿವಾರಣೆಗೆ ರಾಜ್ಯ ಸರ್ಕಾರದ ಹೆಚ್ಚಿನ ಮುತವರ್ಜಿ ಅಗತ್ಯ : ನ್ಯಾಯವಾದಿ ಮೋಹನ ಕಾತರಕಿ ಸಂವಿಧಾನ ಹಾಗೂ ಬಾಬಾಸಾಹೇಬರ ಸಿದ್ಧಂತಕ್ಕೆ ಅನುಸಾರ ರಾಜಕೀಯ ಮಾಡುತ್ತ ಬಂದಿದ್ದೇನೆ - ಮಾಜಿ ಸಚಿವ ಎಚ್.ಸಿ. ಮಹಾದೇವಪ್ಪ ಸ್ಪಷ್ಟನೆ ಅಭಿವೃದ್ಧಿಯ ಸ್ಪಷ್ಟವಾದ ಗುರಿಯೊಂದಿಗೆ ನರೇಂದ್ರ ಮೋದಿ ಸರ್ಕಾರ ಸಾಧನೆ : ಕೇಂದ್ರ ಸಚಿವ ಭೂಪತಿರಾಜ್ ಶ್ರೀನಿವಾಸ ವರ್ಮಾ ಸಾಮರಸ್ಯ ಕೆಡಿಸುವ ಎಂಇಎಸ್‌, ಶಿವಸೇನೆ ನಿಷೇಧಕ್ಕೆ ಕರವೇ ಆಗ್ರಹ ಸುವರ್ಣ ಸೌಧದ ಎದುರು ಅಂತರಾಷ್ಟ್ರೀಯ ಯೋಗ‌ ದಿನಾಚರಣೆ ಸೈಬರ್ ವಂಚನೆಯಿಂದ ಹಣ ಕಳೆದುಹೋಗದಂತೆ ಪೊಲೀಸ್ ಇಲಾಖೆ ಆಧುನಿಕ ತಂತ್ರಜ್ಞಾನದ ಬಿಗಿಕ್ರಮ - ಪ್ರಿಯಾಂಕ ಖರ್ಗೆ ಕನ್ನಡಕ್ಕೆ ಮೊದಲ ಆದ್ಯತೆ ನೀಡಲು ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗಕ್ಕೆ ಬಿಳಿಮಲೆ ಆಗ್ರಹ ರಕ್ಷಣಾ ಭದ್ರತಾ ದಳಕ್ಕೆ (ಡಿಎಸ್‌ಸಿ) ಮಾಜಿ ಸೈನಿಕರ ನೇಮಕಾತಿ ಮಂಗಾವತಿ :   ಸೇವಾ ನಿವೃತ್ತ ಹಾಗೂ ಪ್ರತಿಭಾ ಸಾಧಕರಿಗೆ ಗೌರವ ಸನ್ಮಾನ 232 ಗ್ರೇಡ್-2 ತಹಶೀಲ್ದಾರ್‌ಗಳಿಗೆ ಗ್ರೇಡ್-1 ತಹಶೀಲ್ದಾರ್ ಹುದ್ದೆಗೆ ಬಡ್ತಿ ಮಹಾದಾಯಿ, ಕೃಷ್ಣೆ, ಕಾವೇರಿ ಜಲ ವಿವಾದ ನಿವಾರಣೆಗೆ ರಾಜ್ಯ ಸರ್ಕಾರದ ಹೆಚ್ಚಿನ ಮುತವರ್ಜಿ ಅಗತ್ಯ : ನ್ಯಾಯವಾದಿ ಮೋಹನ ಕಾತರಕಿ ಸಂವಿಧಾನ ಹಾಗೂ ಬಾಬಾಸಾಹೇಬರ ಸಿದ್ಧಂತಕ್ಕೆ ಅನುಸಾರ ರಾಜಕೀಯ ಮಾಡುತ್ತ ಬಂದಿದ್ದೇನೆ - ಮಾಜಿ ಸಚಿವ ಎಚ್.ಸಿ. ಮಹಾದೇವಪ್ಪ ಸ್ಪಷ್ಟನೆ ಅಭಿವೃದ್ಧಿಯ ಸ್ಪಷ್ಟವಾದ ಗುರಿಯೊಂದಿಗೆ ನರೇಂದ್ರ ಮೋದಿ ಸರ್ಕಾರ ಸಾಧನೆ : ಕೇಂದ್ರ ಸಚಿವ ಭೂಪತಿರಾಜ್ ಶ್ರೀನಿವಾಸ ವರ್ಮಾ
21 ಜೂನ್ 2026
ಬರಗೂರು ರಾಜ್ಯಸಭೆಗೆ ನೇಮಕವಾಗಬೇಕು - ಸತ್ಯಾನಂದ ಪಾತ್ರೋಟ
📚 ಸಾಹಿತ್ಯ
Dr. K N Doddmani · · 229 ವೀಕ್ಷಣೆಗಳು

ಬರಗೂರು ರಾಜ್ಯಸಭೆಗೆ ನೇಮಕವಾಗಬೇಕು - ಸತ್ಯಾನಂದ ಪಾತ್ರೋಟ

ಬರಗೂರು ರಾಜ್ಯಸಭೆಗೆ ನೇಮಕವಾಗಬೇಕು - ಸತ್ಯಾನಂದ ಪಾತ್ರೋಟ

ಬೆಳಗಾವಿ, ಮೆ-25: ಪ್ರತಿಭಾ ಸಂಪನ್ನ, ಮಗುವಿನ ಮನಸ್ಥಿತಿಯ ಪ್ರೊ. ಬರಗೂರು ರಾಮಚಂದ್ರಪ್ಪ ಅವರು ರಾಜ್ಯಸಭೆಗೆ ನೇಮಕವಾಗಬೇಕು ಎಂದು ಖ್ಯಾತ ಕವಿ‌ ಸತ್ಯಾನಂದ ಪಾತ್ರೋಟ ಅಭಿಮತ ವ್ಯಕ್ತಪಡಿಸಿದ್ದಾರೆ.

ರಾಜ್ಯ ಬಂಡಾಯ ಸಾಹಿತ್ಯ ಸಂಘಟನೆ ನಡೆಸುತ್ತಿರುವ "ಬಂಡಾಯ ಸಾಹಿತ್ಯ: ಹೊಸ ತಲೆಮಾರು" ಅಭಿಯಾನ ಅಂಗವಾಗಿ ಬೆಳಗಾವಿಯ ಕುಮಾರ ಗಂಧರ್ವ ರಂಗಮಂದಿರದ ಬಸವರಾಜ ಕಟ್ಟೀಮನಿ ಸಭಾಭವನದಲ್ಲಿ ಶನಿವಾರ ದಿ.23 ರಂದು ಆಯೋಜಿಸಲಾದ "ಕನ್ನಡ ಸಿನಿಮಾ : ಪ್ರಗತಿಪರ ನೆಲೆಗಳ ಸ್ವರೂಪ" ವಿಷಯ‌ ಕುರಿತಾದ ವಿಚಾರ ಹಾಗೂ ಕವಿಗೋಷ್ಠಿಯ ಕಾರ್ಯಕ್ರಮದಲ್ಲಿ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಬರಗೂರು ಅವರು ರಾಜ್ಯಸಭೆಗೆ ನೇಮಕವಾದರೆ ಸಾಹಿತ್ಯಕ್ಕೆ ಹೆಚ್ಚಿನ ಆದ್ಯತೆ‌ ಹಾಗೂ ಮಾನ್ಯತೆ ದೊರೆಯುತ್ತದೆ.‌ಲಾಭಿ ಮತ್ತು ಲೋಭಿಗಳ ಪ್ರಸ್ತುತ ಸಂದರ್ಭದಲ್ಲಿ ಕವಿ, ಬರಹಗಾರ ಕಾಲದೊಳಗಿದ್ದೂ ಕಾಲ ಮೀರಿ ಬರೆಯಬೇಕು. ಬಸವಣ್ಣ‌ ಜಡಗಟ್ಟುದ ಧರ್ಮ ಮೀರಿ ಎಲ್ಲರನ್ನೂ ಒಪ್ಪಿ, ಅಪ್ಪಿಕೊಂಡು ಸಮಾನಾತೆಯ ನೆಲೆಯಲ್ಲಿ ಹೊಸ ಧರ್ಮ ಕಟ್ಟಿದ. ಕುವೆಂಪು ವಿಶ್ವಮಾನ ಸಂದೇಶ ಹರಡಿ ಬದುಕಿ ಬರೆದರು. ವರ ನಟ ಡಾ. ರಾಜಕುಮಾರ ಜಾತಿ ಮೀರಿ ವಿಶ್ವ ಮಟ್ಟದಲ್ಲಿ ಕನ್ನಡತ್ವ ಮೆರೆದ ಶ್ರೇಷ್ಠ ಕಲಾವಿದ. ಕವಿ, ಬರಹಗಾರ ಕಾಲದೊಳಿದ್ದು ಕಾಲ ಮೀರಬೇಕು, ಜಾತಿಯೊಳಿದ್ದೂ ಜಾತಿ ಮೀರಬೇಕು, ವರ್ಗ, ಧರ್ಮಗಳಲ್ಲಿದ್ದು ಅವುಗಳನ್ನು ಮೀರಿ ಬರೆಯಬೇಕು ಎಂದು ಸತ್ಯಾನಂದ ಪಾತ್ರೋಟ ತಿಳಿಸಿದರು.

ಪ್ರಶಸ್ತಿ, ಪ್ರಚಾರ - ಪ್ರಸಿದ್ದಿಯ ಅವಕಾಶವಾದಕ್ಕೆ ಗಂಟುಬಿದ್ದು ಬರೆಯುವವರು ಹೆಚ್ಚಾಗಿದ್ದಾರೆ. ವಿಮರ್ಶೆ ತಮಗೆ ಬೇಕಾದ ಕೆಲ ಬರಹಗಾರರಿಗೆ ಸೀಮಿತಕ್ಕೆ ಒಳಗಾಗಿದೆ. ಇಂಥ ವಿಮರ್ಶೆಯ ಮೇಲೆ ವಿಮರ್ಶೆ ನಡೆಯಬೇಕಾದ ಅವಶ್ಯಕತೆಯಿದೆ. ಪ್ರಜಾಪ್ರಭುತ್ವದಲ್ಲಿ ಪಾಳೆಗಾರಿಕೆ ಎದ್ದು ಕಾಣುತ್ತಿದೆ. ಇದಕ್ಕೆ ಬರಹ ಪ್ರತಿರೋಧ ಒಡ್ಡಬೇಕು. ಪ್ರತಿರೋಧಾತ್ಮಕವಾಗಿ ಕೇವಲ ಕೆಲವರು ಮಾತ್ರ ಬರೆಯುವುತ್ತಿರುವುದು ಸಾಹಿತ್ಯ - ಸಾಂಸ್ಕೃತಿಕ ಲೋಕದ ದೊಡ್ಡ ದುರಂತ ಎಂದು ಪಾತ್ರೋಟ ಖೇದ ವ್ಯಕ್ತಪಡಿಸಿದರು.

ಕವಿ‌ ಕವಿತ್ವಕ್ಕೆ ಪ್ರಾಮಾಣಿಕನಾಗಿರಬೇಕು. ಮಾತಿಗೆ ತಕ್ಕುದಾದ ಬದುಕು ಇದೆಯೇ ಎಂದು ಪ್ರಶ್ನೆ ಹಾಕಿಕೊಳ್ಳಬೇಕು. ಬದುಕಿಗೆ ತಕ್ಕುದಾದ ಬರಹ ಇಲ್ಲದರೆ ಯಾವ ಕಾರಣಕ್ಕಾಗಿ ಬರೆಯಬೇಕು ಎಂದು ಪ್ರಶ್ನಿಸಿದರು.

"ನಾನು ಬರಗೂರ ಅವರ ಮಾನಸ ಪುತ್ರ" ಎಂದು ಖ್ಯಾತಿಗೆ ಒಳಗಾದವನೆಂದು ಬಣ್ಣಿಸಿದ ಸತ್ಯಾನಂದ ಪಾತ್ರೋಟ, ನಾನು ಕವಿಯಾಗಿ ಖ್ಯಾತಿಗೊಳ್ಳಲು ಬರಗೂರ ಅವರು ಪ್ರೋತ್ಸಾಹಿಸಿದರು. ಸಾಹಿತ್ಯ ಅಕಾಡೆಮಿ,ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯತ್ವ, ಬಂಡಾಯ ಸಾಹಿತ್ಯ ಸಂಘಟನೆಯ ಸಂಚಾಲಕತ್ವದ ಅವಕಾಶ ಕಲ್ಪಿಸಿ ಬೆಳೆಸಿದವರು. ಅಂದು ಪ್ರತಿಭೆ ನೋಡಿ ಅವಕಾಶ ನೀಡುವ ಕಾಲವಿತ್ತು. ಕಳೆದ 36 ವರ್ಷಗಳ ನಂತರ ನಾನು ಅವಕಾಶ ವಂಚಿತನಾಗಿರುವೆ ಎಂದು ಅಳಲು ತೋಡಿಕೊಂಡರು.

ಅಕ್ಷರಕ್ಕೂ ಅಸ್ಪೃಶ್ಯತೆ ಅಂಟಿಕೊಂಡಿದೆ. ಇದರ ವ್ಯಾಪ್ತಿಯಲ್ಲಿ ಪ್ರಸಿದ್ದ ಸಾಹಿತಿಗಳ ಒಳಗೊಂಡಿದ್ದಾರೆ. ಮತಿಯವಾದದ ಬಗ್ಗೆ ಮಾತನಾಡುವವರು ಜಾತಿಯ ಬಗ್ಗೆ ಪ್ರಶ್ನಿಸುವುದಿಲ್ಲ. ಜಾತಿ ಅವಕಾಶವಾದವಾಗಿದ್ದು, ಅವಕಾಶ ತಪ್ಪಿಹೋದೀತು ಎಂದು ಜಾತಿ ಬಗ್ಗೆ ಮಾತನಾಡುವುದಿಲ್ಲ.ಕವಿತೆ ಸಂಕಟ ಹಾಗೂ ಭೀತಿಯಿಂದ ಹುಟ್ಟುತ್ತದೆ ಹೊರತು ಅಹಂಕಾರದಿಂದಲ್ಲ. ಕವಿತೆ ಪ್ರೀತಿಯಿಂದ ಜನಿಸಬೇಕು ಎಂದು ಕವಿ ಸತ್ಯಾನಂದ ಪಾತ್ರೋಟ ಸಲಹೆ ನೀಡಿದರು.

ಈ ಲೇಖನ ಹಂಚಿಕೊಳ್ಳಿ