ಬ್ರೇಕಿಂಗ್
ಅಂಚೆ ಇಲಾಖೆಯಿಂದ ಡೆಲಿವರಿ ಪಾಲುದಾರರಿಗಾಗಿ ಆನ್ಲೈನ್ ಅರ್ಜಿ ಆಹ್ವಾನ  ರಾಷ್ಟ್ರೀಯ ಜೂನಿಯರ್ ಚಾಂಪಿಯನ್ ಶಿಪ್ ಈಜು ಸ್ಪರ್ಧೆಗೆ ಬೆಳಗಾವಿ ಅಮನ್ ಸುಣಗಾರ ಆಯ್ಕೆ ಕೆಪಿಸಿಸಿ ಎಸ್‌ಸಿ ವಿಭಾಗದ ರಾಜ್ಯ ನಿರ್ದೇಶಕರಾಗಿ ಮಲ್ಲೇಶ ಚೌಗುಲೆ ನೇಮಕ ಬೆಳಗಾವಿ ಜಿಲ್ಲೆಯಲ್ಲಿ ಶೇ.95 ರಷ್ಟು ಬಿತ್ತನೆ : ಜಿಪಂ ಸಿಇಒ ರಾಹುಲ್ ಶಿಂಧೆ ನೀರು ವ್ಯರ್ಥವಾಗದಂತೆ ಕಾಲುವೆಗಳ ತ್ವರಿತ ನಿರ್ವಹಣೆಗೆ ಸತೀಶ್ ಜಾರಕಿಹೊಳಿ ಸೂಚನೆ ಬೆಳಗಾವಿ : ಪೊಲೀಸ್‌ ಪೇದೆ ನೇಮಕಾತಿ ಪರೀಕ್ಷೆಗೆ ೬೧ ಕೇಂದ್ರಗಳಲ್ಲಿ ೨೫ ಸಾವಿರಕ್ಕೂ ಅಧಿಕ ಸಂಖ್ಯೆ ಅಭ್ಯರ್ಥಿಗಳು ರಾಯಬಾಗ ತಾಲ್ಲೂಕಿನ 39 ಕೆರೆ ತುಂಬಿಸುವ ಮಹತ್ವಾಕಾಂಕ್ಷೆಯ ಯೋಜನೆ ಯಶಸ್ವಿ ಅನುಷ್ಠಾನ ಪ್ರಗತಿ - ಸತೀಶ್ ಜಾರಕಿಹೊಳಿ 10 ಜನ ಮಕ್ಕಳು, 50 ಜನ ಮೊಮ್ಮಕ್ಕಳ ಪ್ರೀತಿಯ ನಿಜಪ್ಪಜ್ಜ ಇನ್ನಿಲ್ಲ 70 ಸಾವಿರ ಹುದ್ದೆಗಳು, 35 ಲಕ್ಷ ಅರ್ಜಿ ನಿರೀಕ್ಷೆ: ಇಡೀ ದೇಶಕ್ಕೆ ಮಾದರಿಯಲ್ಲಿ ಅತ್ಯಂತ ಪಾರದರ್ಶಕ ನೇಮಕಾತಿ : ಸಿಎಮ್ ನಿರ್ಧಾರ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ಬಸವ ಅಧ್ಯಯನ ಪೀಠ ಸ್ಥಾಪನೆ ಅಂಚೆ ಇಲಾಖೆಯಿಂದ ಡೆಲಿವರಿ ಪಾಲುದಾರರಿಗಾಗಿ ಆನ್ಲೈನ್ ಅರ್ಜಿ ಆಹ್ವಾನ  ರಾಷ್ಟ್ರೀಯ ಜೂನಿಯರ್ ಚಾಂಪಿಯನ್ ಶಿಪ್ ಈಜು ಸ್ಪರ್ಧೆಗೆ ಬೆಳಗಾವಿ ಅಮನ್ ಸುಣಗಾರ ಆಯ್ಕೆ ಕೆಪಿಸಿಸಿ ಎಸ್‌ಸಿ ವಿಭಾಗದ ರಾಜ್ಯ ನಿರ್ದೇಶಕರಾಗಿ ಮಲ್ಲೇಶ ಚೌಗುಲೆ ನೇಮಕ ಬೆಳಗಾವಿ ಜಿಲ್ಲೆಯಲ್ಲಿ ಶೇ.95 ರಷ್ಟು ಬಿತ್ತನೆ : ಜಿಪಂ ಸಿಇಒ ರಾಹುಲ್ ಶಿಂಧೆ ನೀರು ವ್ಯರ್ಥವಾಗದಂತೆ ಕಾಲುವೆಗಳ ತ್ವರಿತ ನಿರ್ವಹಣೆಗೆ ಸತೀಶ್ ಜಾರಕಿಹೊಳಿ ಸೂಚನೆ ಬೆಳಗಾವಿ : ಪೊಲೀಸ್‌ ಪೇದೆ ನೇಮಕಾತಿ ಪರೀಕ್ಷೆಗೆ ೬೧ ಕೇಂದ್ರಗಳಲ್ಲಿ ೨೫ ಸಾವಿರಕ್ಕೂ ಅಧಿಕ ಸಂಖ್ಯೆ ಅಭ್ಯರ್ಥಿಗಳು ರಾಯಬಾಗ ತಾಲ್ಲೂಕಿನ 39 ಕೆರೆ ತುಂಬಿಸುವ ಮಹತ್ವಾಕಾಂಕ್ಷೆಯ ಯೋಜನೆ ಯಶಸ್ವಿ ಅನುಷ್ಠಾನ ಪ್ರಗತಿ - ಸತೀಶ್ ಜಾರಕಿಹೊಳಿ 10 ಜನ ಮಕ್ಕಳು, 50 ಜನ ಮೊಮ್ಮಕ್ಕಳ ಪ್ರೀತಿಯ ನಿಜಪ್ಪಜ್ಜ ಇನ್ನಿಲ್ಲ 70 ಸಾವಿರ ಹುದ್ದೆಗಳು, 35 ಲಕ್ಷ ಅರ್ಜಿ ನಿರೀಕ್ಷೆ: ಇಡೀ ದೇಶಕ್ಕೆ ಮಾದರಿಯಲ್ಲಿ ಅತ್ಯಂತ ಪಾರದರ್ಶಕ ನೇಮಕಾತಿ : ಸಿಎಮ್ ನಿರ್ಧಾರ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ಬಸವ ಅಧ್ಯಯನ ಪೀಠ ಸ್ಥಾಪನೆ
06 ಆಗಸ್ಟ್ 2026
ಏರ್ ಶೋ” ವೀಕ್ಷಿಸಿದ  ಸರ್ಕಾರಿ ವಸತಿ ಶಾಲೆಯ ವಿದ್ಯಾರ್ಥಿಗಳು
📄 ಬೆಳಗಾವಿ ಜಿಲ್ಲೆಯ ಸುದ್ದಿ
Dr. K N Doddmani · · 201 ವೀಕ್ಷಣೆಗಳು

ಏರ್ ಶೋ” ವೀಕ್ಷಿಸಿದ  ಸರ್ಕಾರಿ ವಸತಿ ಶಾಲೆಯ ವಿದ್ಯಾರ್ಥಿಗಳು

ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಜಿಲ್ಲೆಯ ವಿವಿಧ ವಸತಿ ಶಾಲೆಗಳ 373 ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳು ಹಾಗೂ 287 ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಸೇರಿ ಒಟ್ಟು 660 ವಿದ್ಯಾರ್ಥಿಗಳು ಉಚಿತವಾಗಿ ಭಾಗವಹಿಸಿ, ಏರ್ ಶೋ ವನ್ನು ಕಣ್ತುಂಬಿಕೊಂಡು ಸಂತಸಪಟ್ಟರು

lಏರ್ ಶೋ” ವೀಕ್ಷಿಸಿದ  ಸರ್ಕಾರಿ ವಸತಿ ಶಾಲೆಯ ವಿದ್ಯಾರ್ಥಿಗಳು

**

ಬೆಳಗಾವಿ : ಹೊರವಲಯ ಸಾಂಬ್ರಾದ ವಾಯುಪಡೆ ತರಬೇತಿ ಶಾಲೆ (ATS) ಆವರಣದಲ್ಲಿ ಭಾರತೀಯ ವಾಯುಸೇನೆಯ ವಿಶ್ವವಿಖ್ಯಾತ ಸಾರಂಗ್ ಹೆಲಿಕಾಪ್ಟರ್ ಡಿಸ್ಪ್ಲೇ ತಂಡದಿಂದ ಶುಕ್ರವಾರ ಆಯೋಜಿಸಿದ್ದ ಏರ್ ಶೋ ವನ್ನು ಜಿಲ್ಲೆಯ ವಿವಿಧ  ವಸತಿ, ಸರ್ಕಾರಿ ಶಾಲಾ- ಕಾಲೇಜಿನ ವಿದ್ಯಾರ್ಥಿಗಳ ವೀಕ್ಷಿಸಿಣೆ ಅವಕಾಶ ಕಲ್ಪಿಸಲಾಗಿತ್ತು.

ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಜಿಲ್ಲೆಯ ವಿವಿಧ ವಸತಿ ಶಾಲೆಗಳ 373 ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳು ಹಾಗೂ 287 ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಸೇರಿ ಒಟ್ಟು 660 ವಿದ್ಯಾರ್ಥಿಗಳು ಉಚಿತವಾಗಿ ಭಾಗವಹಿಸಿ, ಏರ್ ಶೋ ವನ್ನು ಕಣ್ತುಂಬಿಕೊಂಡು ಸಂತಸಪಟ್ಟರು.

5 ಹೆಲಿಕ್ಯಾಪ್ಟರ್ ಗಳಿಂದ ಮೈನವಿರೇಳಿಸುವ ಸಾಹಸ ಪ್ರದರ್ಶನ:

ಭಾರತೀಯ ವಾಯುಪಡೆಯ (IAF) ಹೆಮ್ಮೆಯ 'ಸಾರಂಗ್' ಹೆಲಿಕಾಪ್ಟರ್ ಪ್ರದರ್ಶನ ತಂಡವು (Sarang Helicopter Display Team) ಅದ್ಭುತ ವೈಮಾನಿಕ ಪ್ರದರ್ಶನವನ್ನು (ಏರ್ ಶೋ) ನಡೆಸಿತು. ಅಗ್ನಿವೀರವಾಯು (Agniveervayu) ಮೊದಲ ಬ್ಯಾಚ್ನ ಪಾಸಿಂಗ್ ಔಟ್ ಪರೇಡ್ ಅಂಗವಾಗಿ ಸಾಂಬ್ರಾದಲ್ಲಿರುವ ಏರ್ಮೆನ್ ಟ್ರೈನಿಂಗ್ ಸ್ಕೂಲ್ (ATS) ಆವರಣದಲ್ಲಿ ಈ ಐತಿಹಾಸಿಕ ಪ್ರದರ್ಶನ ನಡೆಸಲಾಯಿತು.

ಏರ್ ಶೋನಲ್ಲಿ ವಿಶ್ವದಲ್ಲೇ ಏಕೈಕ 5 ಹೆಲಿಕಾಪ್ಟರ್ ಡಿಸ್ಪ್ಲೇ ತಂಡವಾದ 'ಸಾರಂಗ್', ಸ್ವದೇಶಿ ನಿರ್ಮಿತ ಎಎಲ್ಎಚ್ ಧ್ರುವ (ALH Dhruv) ಹೆಲಿಕಾಪ್ಟರ್ಗಳನ್ನು ಬಳಸಿ ಆಕಾಶದಲ್ಲಿ ನಾನಾ ರೀತಿಯ ಕಸರತ್ತುಗಳನ್ನು ಪ್ರದರ್ಶಿಸಿತು.

ವಿದ್ಯಾರ್ಥಿಗಳೊಂದಿಗೆ ಪೈಲಟ್ ಗಳ ಸಂವಾದ:

ಏರ್ ಶೋ ಬಳಿಕ ಏರ್ ಕಮಾಂಡರ್ ಸೂರಜ್ ಶಂಕರ ಅವರು ವಿದ್ಯಾರ್ಥಿಗಳೊಂದಿಗೆ ಮಾತನಾಡಿ, ಏರ್ ಶೋ ಬಗ್ಗೆ ಅನಿಸಿಕೆಗಳನ್ನು ಪಡೆದರು.  ಭಾರತೀಯ ವಾಯುಸೇನೆಯ ಕುರಿತು ಹಾಗೂ ವಾಯುಸೇನೆಗೆ ಸೇರ್ಪಡೆಯಾಗಲು ಇರುವ ಅರ್ಹತೆಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.

ನಂತರ ಏರ್ ಶೋ ಪ್ರದರ್ಶನ ನೀಡಿದ ಒಟ್ಟು 7 ಜನ ಪೈಲಟ್ ಗಳು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರ ನೀಡಿದರು.

ನಾಳೆ ನಿರ್ಗಮನ ಪಥ ಸಂಚಲನ:

ನಾಳೆ ದಿ.6 ರಂದು ಮುಂಜಾನೆ ವಾಯುಪಡೆ ತರಬೇತಿ ಪಡೆದ 7 ತಂಡ ವಾಯುಅಗ್ನಿವೀರ ಪ್ರಶಿಕ್ಷಣಾರ್ಥಿಗಳ ಆಕರ್ಷಕ ನಿರ್ಗಮನ ಪಥ ಸಂಚಲನೆ ಮುಂಜಾನೆ 8 ಗಂಟೆಯಿಂದ ನಡೆಯಲಿದೆ. ನಂತರ, ಸಾರಂಗ ತಂಡದಿಂದ  ಹೆಲಿಕಾಪ್ಟರ್ ಸಾಹಸ ಪ್ರದರ್ಶನ ಆಯೋಜಿಸಲಾಗಿದೆ.

***

ಈ ಲೇಖನ ಹಂಚಿಕೊಳ್ಳಿ

ಇನ್ನಷ್ಟು ಓದಿ