ಬ್ರೇಕಿಂಗ್
ಎಸ್‌ಐಆರ್ (SIR) ನಮೂನೆಯನ್ನು ಭರ್ತಿ ಮಾಡಿ ಸಲ್ಲಿಸಿದೆ ಸಚಿವ ಸತೀಶ್ ಜಾರಕಿಹೊಳಿ ವೈಜ್ಞಾನಿಕತೆ ಶಿಕ್ಷಣದಲ್ಲಿ ಬರದೆ ಹೋದರೆ ಮೌಢ್ಯಗಳು ಹಾಗೆ ಮುಂದುವರಿಯುವಂತ ಕೆಲಸಗಳು ನಡೆಯುತ್ತದೆ - ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ 60 ಸಾವಿರ ಬೀದಿ ವ್ಯಾಪಾರಸ್ಥರಿಗೆ ಗುರುತಿನ ಚೀಟಿ ಮೂಲಕ ಪರ್ಯಾಯ ವ್ಯವಸ್ಥೆ : ಮುಖ್ಯಮಂತ್ರಿ ಕುಡಿಯುವ ನೀರಿನ ಸಮಸ್ಯೆಯ ನಿಭಾವಣೆಗೆ ಗ್ರಾಮೀಣ ಪ್ರದೇಶದ ಪ್ರತಿ‌ಕ್ಷೇತ್ರದ ಶಾಸಕರಿಗೆ ತಲಾ ಒಂದು ಕೋಟಿ ಅನುದಾನ: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್  ಭಾರತ ಜೋಡೋ ಯುವಕ ಸಂಘ ಸ್ಥಾಪನೆಗೆ ಸಾವಿರ ಕೋಟಿ ರೂಪಾಯಿ ಮೀಸಲು - ಡಿ.ಕೆ. ಶಿವಕುಮಾರ ಜನರ ಅಹವಾಲು ಪರಿಹರಿಸಲು ಪ್ರಜಾಸೇವಾ ಇಲಾಖೆ : ಪ್ರತ್ಯೇಕ ಮಂತ್ರಿಯೊಬ್ಬರ ನಿಯೋಜಿನೆ- ಮುಖ್ಯಮಂತ್ತಿ ಡಿ.ಕೆ.ಶಿವಕುಮಾರ್ ಬೆಳಗಾವಿ ಅರಣ್ಯ ವಲಯದ 7 ಜಲಪಾತ ವೀಕ್ಷಣೆಗೆ  ಇನ್ನೊಂದು ತಿಂಗಳಲ್ಲಿ ಪರಿಸರ ಸ್ನೇಹಿ ಇಕೋ ಟೂರಿಸಂ ಅವಕಾಶ : ಜಿಲ್ಲಾಧಿಕಾರಿ ಮೊಹಮ್ಮದ ರೋಷನ್‌   ಬೆಳಗಾವಿ ಜಿಲ್ಲೆಯಲ್ಲಿ ಉತ್ತಮ ಮಳೆ: ಮೈದುಂಬಿ ಹರಿಯುತ್ತಿರುವ ನದಿಗಳು; ಕೆಳ ಹಂತದ ೭ ಸೇತುವೆಗಳು ಜಲಾವೃತ್ತ ಶರಣರ ಅನುಭವ ಮಂಟಪಕ್ಕೆ ಭೆಟ್ಟಿ ನೀಡಿದ AI ರೇಖಾ ಚಿತ್ರಗಳನ್ನು ಹಂಚಿಕೊಂಡ ಮುಖ್ಯಮಂತ್ರಿ ಅಂಗನವಾಡಿಯಿಂದ ಪಿಯುಸಿ ವರೆಗೂ ನಾಳೆ ರಜೆ ಎಸ್‌ಐಆರ್ (SIR) ನಮೂನೆಯನ್ನು ಭರ್ತಿ ಮಾಡಿ ಸಲ್ಲಿಸಿದೆ ಸಚಿವ ಸತೀಶ್ ಜಾರಕಿಹೊಳಿ ವೈಜ್ಞಾನಿಕತೆ ಶಿಕ್ಷಣದಲ್ಲಿ ಬರದೆ ಹೋದರೆ ಮೌಢ್ಯಗಳು ಹಾಗೆ ಮುಂದುವರಿಯುವಂತ ಕೆಲಸಗಳು ನಡೆಯುತ್ತದೆ - ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ 60 ಸಾವಿರ ಬೀದಿ ವ್ಯಾಪಾರಸ್ಥರಿಗೆ ಗುರುತಿನ ಚೀಟಿ ಮೂಲಕ ಪರ್ಯಾಯ ವ್ಯವಸ್ಥೆ : ಮುಖ್ಯಮಂತ್ರಿ ಕುಡಿಯುವ ನೀರಿನ ಸಮಸ್ಯೆಯ ನಿಭಾವಣೆಗೆ ಗ್ರಾಮೀಣ ಪ್ರದೇಶದ ಪ್ರತಿ‌ಕ್ಷೇತ್ರದ ಶಾಸಕರಿಗೆ ತಲಾ ಒಂದು ಕೋಟಿ ಅನುದಾನ: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್  ಭಾರತ ಜೋಡೋ ಯುವಕ ಸಂಘ ಸ್ಥಾಪನೆಗೆ ಸಾವಿರ ಕೋಟಿ ರೂಪಾಯಿ ಮೀಸಲು - ಡಿ.ಕೆ. ಶಿವಕುಮಾರ ಜನರ ಅಹವಾಲು ಪರಿಹರಿಸಲು ಪ್ರಜಾಸೇವಾ ಇಲಾಖೆ : ಪ್ರತ್ಯೇಕ ಮಂತ್ರಿಯೊಬ್ಬರ ನಿಯೋಜಿನೆ- ಮುಖ್ಯಮಂತ್ತಿ ಡಿ.ಕೆ.ಶಿವಕುಮಾರ್ ಬೆಳಗಾವಿ ಅರಣ್ಯ ವಲಯದ 7 ಜಲಪಾತ ವೀಕ್ಷಣೆಗೆ  ಇನ್ನೊಂದು ತಿಂಗಳಲ್ಲಿ ಪರಿಸರ ಸ್ನೇಹಿ ಇಕೋ ಟೂರಿಸಂ ಅವಕಾಶ : ಜಿಲ್ಲಾಧಿಕಾರಿ ಮೊಹಮ್ಮದ ರೋಷನ್‌   ಬೆಳಗಾವಿ ಜಿಲ್ಲೆಯಲ್ಲಿ ಉತ್ತಮ ಮಳೆ: ಮೈದುಂಬಿ ಹರಿಯುತ್ತಿರುವ ನದಿಗಳು; ಕೆಳ ಹಂತದ ೭ ಸೇತುವೆಗಳು ಜಲಾವೃತ್ತ ಶರಣರ ಅನುಭವ ಮಂಟಪಕ್ಕೆ ಭೆಟ್ಟಿ ನೀಡಿದ AI ರೇಖಾ ಚಿತ್ರಗಳನ್ನು ಹಂಚಿಕೊಂಡ ಮುಖ್ಯಮಂತ್ರಿ ಅಂಗನವಾಡಿಯಿಂದ ಪಿಯುಸಿ ವರೆಗೂ ನಾಳೆ ರಜೆ
11 ಜುಲೈ 2026
ವಿಟಿಯು ಜಾಗತಿಕ ಮಟ್ಟದ ಖ್ಯಾತಿಗೆ ಗುಣಮಟ್ಟದ ಶಿಕ್ಷಣ ಅಳವಡಿಕೆ ಅಗತ್ಯ : ಕುಲಪತಿ ವಿದ್ಯಾಶಂಕರ್ ಸಲಹೆ
🎓 ಶಿಕ್ಷಣ
Dr. K N Doddmani · · 65 ವೀಕ್ಷಣೆಗಳು

ವಿಟಿಯು ಜಾಗತಿಕ ಮಟ್ಟದ ಖ್ಯಾತಿಗೆ ಗುಣಮಟ್ಟದ ಶಿಕ್ಷಣ ಅಳವಡಿಕೆ ಅಗತ್ಯ : ಕುಲಪತಿ ವಿದ್ಯಾಶಂಕರ್ ಸಲಹೆ

ಅಸ್ಮಿತೆ ಸುದ್ದಿ : ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ  ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸಬೇಕಾಗಿದ್ದು, ಇದಕ್ಕೆ ಮತ್ತಷ್ಟು ಗುಣಮಟ್ಟ ಹೆಚ್ಚಿಸಿಕೊಳ್ಳುವ ಅಗತ್ಯವಿದ್ದು ಪ್ರಾಧ್ಯಾಪಕರು ಬೋಧನಾ ವಿಧಾನದಲ್ಲಿ ಮತ್ತಷ್ಟು ತಂತ್ರಜ್ಞಾನವನ್ನು ಅವಳಡಿಸಿಕೊಂಡು ಗುಣಮಟ್ಟ ಶಿಕ್ಷಣ ನೀಡಲು ಮುಂದಾಗಬೇಕೆಂದು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎಸ್. ವಿದ್ಯಾಶಂಕರ ಸಲಹೆ ನೀಡಿದ್ದಾರೆ.

 ರಾಷ್ಟ್ರೀಯ ಮಾನ್ಯತಾ ಮಂಡಳಿ(ಎನ್‌ಬಿಎ) ಶ್ರೇಣಿ ಪಡೆಯುವ ಮಾನದಂಡ ಕುರಿತು ಪ್ರಾಧ್ಯಾಪಕರಿಗಾಗಿ ವಿಟಿಯು ಆಂತರಿಕ ಗುಣಮಟ್ಟ ಭರವಸೆಯ ಕೋಶ ಹಮ್ಮಿಕೊಂಡ ಎರಡು ದಿನದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಗುಣಮಟ್ಟದ ಶಿಕ್ಷಣದ  ಬೋಧನಾ ಕ್ರಮಗಳನ್ನು ಅನುಸರಿಸಲು ಅಗತ್ಯವಿರುವ ಗುಣಮಟ್ಟ ಕಟ್ಟಡಗಳು ಹಾಗೂ ಅಗತ್ಯ ಸೌಕರ್ಯಗಳನ್ನು ಒದಗಿಸಲು ಆಡಳಿತ ಮಂಡಳಿ ಸಿದ್ಧವಿದೆ. ಅದರ ಸದುಪಯೋಗಕ್ಕೆ ಪ್ರಾಧ್ಯಾಪಕರ ಸಿದ್ಧತೆ ಅಗತ್ಯವಿದೆ ಎಂದು ತಿಳಿಸಿದರು.

ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಶ್ವವಿದ್ಯಾಲಯ ಉತ್ತಮ ಶ್ರೇಣಿಯೊಂದಿಗೆ ಖ್ಯಾತಿ ಪಡೆಯಬೇಕಾಗಿದೆ. ಇದಕ್ಕೆ  ಎಲ್ಲ ಪ್ರಾಧ್ಯಾಪಕರು, ಸಿಬ್ಬಂದಿ ಸಮರ್ಪಣಾ ಭಾವದಿಂದ ಶ್ರಮಿಸಬೇಕಾಗಿದೆ ಎಂದು  ಕುಲಪತಿ ಪ್ರೊ.ಎಸ್.ವಿದ್ಯಾಶಂಕರ್ ಸೂಚಿಸಿದರು.

ಎರಡು ದಿನ ನಡೆದ ಈ ಕಾರ್ಯಾಗಾರದಲ್ಲಿ  ಮಾನ್ಯತೆ ಪಡೆಯಲು ಅನುಸರಿಸಬೇಕಾದ ಮಾನದಂಡಗಳು, ಔದ್ಯೋಗಿಕ ಆಧಾರಿತ ಶಿಕ್ಷಣ, ವಿಶ್ವವಿದ್ಯಾಲಯ ಮತ್ತು ಸಂಯೋಜಿತ ಕಾಲೇಜುಗಳಲ್ಲಿ ಗುಣಮಟ್ಟ ಸುಧಾರಣೆ ಕುರಿತು ಚರ್ಚೆ ನಡೆಸಲಾಯಿತು.

ಶಿಕ್ಷಣ ತಜ್ಞರಾದ ಡಾ.ಆರ್.ವಿ.ರಂಗನಾಥ, ಡಾ.ಡಿ.ಶೇಷಚಲಂ, ಡಾ.ರವಿರಾಜ್ ಎಂ.ಕುಲಕರ್ಣಿ, ಐಕ್ಯೂಎಸ್‌ಸಿ ನಿರ್ದೇಶಕ ಡಾ.ಸಂತೋಷ್ ಎಂ.ನೇಜ್ಕರ್ ಹಾಗೂ  ವಿಟಿಯು ವ್ಯಾಪ್ತಿಯ 220 ಎಂಜಿನಿಯರಿಂಗ್ ಕಾಲೇಜುಗಳ ಪ್ರಾಧ್ಯಾಪಕರು ಪಾಲ್ಗೊಂಡಿದ್ದರು.

***

ಈ ಲೇಖನ ಹಂಚಿಕೊಳ್ಳಿ

ಇನ್ನಷ್ಟು ಓದಿ

ಎಂಜನಿಯರಿಂಗ್ ಪರೀಕ್ಷೆ ಮುಗಿಸಿ ಹೊರಬರುವಷ್ಟರಲ್ಲಿ ಫಲಿತಾಂಶ ಲಭ್ಯ - ವಿಟಿಯು ಸಾಧನೆ  ಶಿಕ್ಷಣ

ಎಂಜನಿಯರಿಂಗ್ ಪರೀಕ್ಷೆ ಮುಗಿಸಿ ಹೊರಬರುವಷ್ಟರಲ್ಲಿ ಫಲಿತಾಂಶ ಲಭ್ಯ - ವಿಟಿಯು ಸಾಧನೆ

6ನೇ ಸೆಮಿಸ್ಟರ್ ಪರೀಕ್ಷೆಗೆ ರಾಜ್ಯದ ವಿವಿಧ ಕಾಲೇಜುಗಳಲ್ಲಿ  60 ಸಾವಿರದ 856 ವಿದ್ಯಾರ್ಥಿಗಳು ಹಾಜರಿದ್ದರು. ಈ ಪೈಕಿ 46 ಸಾವಿರದ 762 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಪ್ರತಿಶತ 76.84 ಫಲಿತಾಂಶ ದಾಖಲಾಗಿದೆ. ಇತ್ತೀಚಿಗೆ 8 ನೇ ಸೆಮಿಸ್ಟರ್ ಫಲಿತಾಂಶವನ್ನು ಕೇವಲ 10 ನಿಮಿಷದಲ್ಲಿ ಪ್ರಕಟಿಸಲಾಗಿತ್ತು. ಈ ಮೂಲದ  ಫಲಿತಾಂಶ ಪ್ರಕಟಿಸಲು 10 ರಿಂದ 12 ದಿನಗಳ ತೆಗೆದುಕೊಳ್ಳಲಾಗುತ್ತಿತ್ತು. ಪ್ರಸ್ತುತ 5 ನಿಮಿಷದಲ್ಲಿ ಫಲಿತಾಂಶ ನೀಡಲಾಗಿದೆ.

Admin
ಡಿಜಿಟಲ್‌ ವಾರಸುದಾರಿಕೆ ಮಕ್ಕಳೊಂದಿಗೆ  ಸಮನ್ವಯ ಸಾಧಿತ ಶಿಕ್ಷಣ ಅಗತ್ಯ - ಶಿಕ್ಷಣ ತಜ್ಞರಾದ ವಿಷ್ಣು ಶಿಂಧೆಯೊಂದಿಗೆ ಸಂವಾದ ಶಿಕ್ಷಣ

ಡಿಜಿಟಲ್‌ ವಾರಸುದಾರಿಕೆ ಮಕ್ಕಳೊಂದಿಗೆ  ಸಮನ್ವಯ ಸಾಧಿತ ಶಿಕ್ಷಣ ಅಗತ್ಯ - ಶಿಕ್ಷಣ ತಜ್ಞರಾದ ವಿಷ್ಣು ಶಿಂಧೆಯೊಂದಿಗೆ ಸಂವಾದ

ಪ್ರಾಧ್ಯಾಪಕರು, ಚಿಂತಕರು ಮತ್ತು ಸಂವೇದನಾಶೀಲ ಬರಹಗಾರರಾದ ಡಾ.ವಿಷ್ಣು ಶಿಂಧೆ ಅವರು ಕರ್ನಾಟಕ ರಾಜ್ಯ ಅಕ್ಕಮಹಾದೇವಿ ವಿಶ್ವವಿದ್ಯಾಲಯ ಸ್ನಾತಕೋತ್ತರ ಕೇಂದ್ರ ಮಂಡ್ಯ ಇಲ್ಲಿ ವಿಶೇಷ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ವಿದ್ಯಾರ್ಥಿಗಳ ಕೇಂದ್ರೀಕೃತ ಶಿಕ್ಷಣ ವ್ಯವಸ್ಥೆಯಲ್ಲಿ ಶಿಕ್ಷಕರ ಮತ್ತು ವಿದ್ಯಾರ್ಥಿಗಳ ಮಧ್ಯ ಸಮನ್ವಯ ಸಾಧಿಸಿದರೆ ಶೈಕ್ಷಣಿಕ ಗುಣಮಟ್ಟ ಕಾಯ್ದುಕೊಳ್ಳಲು ಸಾಧ್ಯ. ಮಕ್ಕಳನ್ನು ಸಾಮಾಜೀಕರಣಗೊಳಿಸಿ ವ್ಯಕ್ತಿತ್ವ ರೂಪಿಸಿದರೆ ಅದೇ ಕೌಶಲ್ಯ ಆಧಾರಿ ಶಿಕ್ಷಣ. ಇಂದಿನ ವಿದ್ಯಾರ್ಥಿಗಳು ಡಿಜಿಟಲ್ ವಾರಸುದಾರರರು - ಹೀಗೆ ಅಸ್ಮಿತೆಯೊಂದಿಗೆ ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

Admin