ಬ್ರೇಕಿಂಗ್
ಗಿರೀಶ್ ಕಾರ್ನಾಡರ 'ತುಘಲಕ್' ನಾಟಕದ ಓದು: "ವೇದಿಕೆಯ ಸಿದ್ಧತೆಗೆ ಓದು ಮೊದಲ ಹೆಜ್ಜೆ; ಕಾರ್ನಾಡ್ ರ ನಾಟಕ ಸಮಕಾಲೀನ ವೈರುದ್ಯಗಳ ಪ್ರತಿಬಿಂಬ" ವಿನೋಧ ಜಾಧವ ಅವರಿಗೆ ಪಿಎಚ್.ಡಿ. ಡಾಕ್ಟರೇಟ್ ಬೆಳಗಾವಿಯ ICMR ದಲ್ಲಿ ರಾಷ್ಟ್ರೀಯ ಉನ್ನತ ಮಟ್ಟದ ಸಭೆ - ಆಯುಷ್ - ಆಧುನಿಕ‌ ಔಷಧಿ ಹೊಸ ಪ್ರಯೋಗ ಶಿಕ್ಷಕಿ ಶುಭಾ ಹೆಗಡೆಗೆ ಬೇಲಾ ಟೀಚರ್ಸ್ ಅವಾರ್ಡ್ ಮರಾಠಾ ಎಲ್‌ಐಆರ್‌ಸಿ ಕೇಂದ್ರದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ 'ಛಾತ್ರೋಂ ಕಿ ಗೂಂಜ್' -'ವಿದ್ಯಾರ್ಥಿಗಳ ಪ್ರತಿಧ್ವನಿ' ಅಭಿಯಾನದ ಮೂಲಕ ಶೈಕ್ಷಣಿಕ ಬದಲಾವಣೆಗೆ ಸರ್ಕಾರ ನಿರ್ಧಾರ ಸ್ವಯಂ ಪ್ರೇರಿತ ರಕ್ತದಾನ : 4634 ಯುನಿಟ್ ದಾಖಲಾರ್ಹ ರಕ್ತ ಸಂಗ್ರಹಣೆ ದಲಿತರು ಆರ್ಥಿಕತೆ ಸಬಲತೆಗೆ ಆಧ್ಯತೆ ನೀಡಬೇಕು - ಎಸ್. ಪಿ. ತಳವಾರ ಜನರನ್ನು ವಿಭಜಿಸುವ  ವಿಷಾದನೀಯ ಬೆಳವಣಿಗೆ : ಎಚ್.ಬಿ. ರಾಜಶೇಖರ ಕೂಲಿ ನೇಕಾರ ಕಾರ್ಮಿಕ ಕಲ್ಯಾಣ ಮಂಡಳಿ ಸ್ಥಾಪನೆಗೆ ಕಾರ್ಮಿಕರ  ಸಂಘಟಿತ ಹೋರಾಟ ಗಿರೀಶ್ ಕಾರ್ನಾಡರ 'ತುಘಲಕ್' ನಾಟಕದ ಓದು: "ವೇದಿಕೆಯ ಸಿದ್ಧತೆಗೆ ಓದು ಮೊದಲ ಹೆಜ್ಜೆ; ಕಾರ್ನಾಡ್ ರ ನಾಟಕ ಸಮಕಾಲೀನ ವೈರುದ್ಯಗಳ ಪ್ರತಿಬಿಂಬ" ವಿನೋಧ ಜಾಧವ ಅವರಿಗೆ ಪಿಎಚ್.ಡಿ. ಡಾಕ್ಟರೇಟ್ ಬೆಳಗಾವಿಯ ICMR ದಲ್ಲಿ ರಾಷ್ಟ್ರೀಯ ಉನ್ನತ ಮಟ್ಟದ ಸಭೆ - ಆಯುಷ್ - ಆಧುನಿಕ‌ ಔಷಧಿ ಹೊಸ ಪ್ರಯೋಗ ಶಿಕ್ಷಕಿ ಶುಭಾ ಹೆಗಡೆಗೆ ಬೇಲಾ ಟೀಚರ್ಸ್ ಅವಾರ್ಡ್ ಮರಾಠಾ ಎಲ್‌ಐಆರ್‌ಸಿ ಕೇಂದ್ರದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ 'ಛಾತ್ರೋಂ ಕಿ ಗೂಂಜ್' -'ವಿದ್ಯಾರ್ಥಿಗಳ ಪ್ರತಿಧ್ವನಿ' ಅಭಿಯಾನದ ಮೂಲಕ ಶೈಕ್ಷಣಿಕ ಬದಲಾವಣೆಗೆ ಸರ್ಕಾರ ನಿರ್ಧಾರ ಸ್ವಯಂ ಪ್ರೇರಿತ ರಕ್ತದಾನ : 4634 ಯುನಿಟ್ ದಾಖಲಾರ್ಹ ರಕ್ತ ಸಂಗ್ರಹಣೆ ದಲಿತರು ಆರ್ಥಿಕತೆ ಸಬಲತೆಗೆ ಆಧ್ಯತೆ ನೀಡಬೇಕು - ಎಸ್. ಪಿ. ತಳವಾರ ಜನರನ್ನು ವಿಭಜಿಸುವ  ವಿಷಾದನೀಯ ಬೆಳವಣಿಗೆ : ಎಚ್.ಬಿ. ರಾಜಶೇಖರ ಕೂಲಿ ನೇಕಾರ ಕಾರ್ಮಿಕ ಕಲ್ಯಾಣ ಮಂಡಳಿ ಸ್ಥಾಪನೆಗೆ ಕಾರ್ಮಿಕರ  ಸಂಘಟಿತ ಹೋರಾಟ
19 ಸೆಪ್ಟೆಂ 2026
ಫುಟ್ ಪಾತ್ ಪಾದಚಾರಿಗಳ ಹಕ್ಕು; ಹಾದಿಮ್ಯಾಲಿನವರ ಬದುಕಿನ ಹಕ್ಕಿನ ದಿಕ್ಕು?
📄 ಕರ್ನಾಟಕ ಸುದ್ದಿ
Dr. K N Doddmani · · 124 ವೀಕ್ಷಣೆಗಳು

ಫುಟ್ ಪಾತ್ ಪಾದಚಾರಿಗಳ ಹಕ್ಕು; ಹಾದಿಮ್ಯಾಲಿನವರ ಬದುಕಿನ ಹಕ್ಕಿನ ದಿಕ್ಕು?

ಪದಚಾರಿಗಳ ಹಕ್ಕು ಸ್ಥಾಪಿಸಲು ಹೊರಟಿರುವ ಸಂದರ್ಭದಲ್ಲಿ ಸಚಿವ  ಕೃಷ್ಣ ಬೈರೇಗೌಡರು ಹಾಗು ಜನಪ್ರತಿನಿಧಿತ್ವದ ಸರ್ಕಾರ, ಕಾರ್ಯರೂಪಕ್ಕಾಗಿ ಕ್ಷೇತ್ರಕ್ಕೆ ಇಳಿಯುವ ಆಡಳಿತ ವ್ಯವಸ್ಥೆ  ಬೀದಿ ಬದಿ ವ್ಯಾಪಾರಿಗಳು ಯಾಕಿದ್ದಾರೆ ಎಂಬುದನ್ನೂ ಗಮನಿಸಬೇಕಿದೆ. ಭಾರತದ ಜನರ ದುಡಿಮೆಯ ಅವಕಾಶ, ಆದಾಯ, ಕುಟುಂಬ ನಿರ್ವಹಣೆಯ ಕನಿಷ್ಟ ಖರ್ಚುಗಳು, ಸಾಮಾಜಿಕ ಸಮೀಕರಣಗಳನ್ನೂ ಗಮನಿಸಬೇಕಿದೆ ಎಂದು ನಾಗರಿಕ ಸಮಾಜ ಮಾತನಾಡಿಕೊಳ್ಳುತ್ತಿದೆ.

ಅಸ್ಮಿತೆ ಸುದ್ದಿ : ಬೆಂಗಳೂರು, ಬೆಳಗಾವಿ ಸೇರಿದಂತೆ ವಾಣಿಜ್ಯ ನಗರಗಳಲ್ಲಿ ಬೀದಿ ಬದಿ ವ್ಯಾಪಾರಸ್ಥರಿಂದ ಅತಿಕ್ರಮಣಗೊಂಡ ಫುಟ್ ಪಾತ್ ನ್ನು ತೆರವುಗೊಳಿಸಿ ಪಾದಚಾರಿಗಳ ಹಕ್ಕು ಸ್ಥಾಪಿಸುವ ಕಾರ್ಯಚರಣೆ ವ್ಯಾಪಕವಾಗಿ ನಡೆಯುತ್ತಿದೆ. ಹೌದು ನಡೆಯಬೇಕು. ನಗರ ಬೆಳೆದಂತೆ ನಾಗರಿಕ ಜೀವನದ ಸುಗಮಕ್ಕೆ ಅಡಚಣೆಯಾಗುವುದನ್ನು ನಿವಾರಣೆ ಮಾಡಬೇಕಾಗುತ್ತದೆ. ಅದು ಸರ್ಕಾರ ಹಾಗೂ ಸಾರ್ವಜನಿಕ ಆಡಳಿತ ವ್ಯವಸ್ಥೆಯ ಆದ್ಯತೆಯೂ‌ ಹೌದು ಎಂದು ನಾಗರಿಕ ವರ್ಗ ಮೆಚ್ಚುಗೆ ವ್ಯಕ್ತಪಡಿಸಿದೆ.

ಬೆಂಗಳೂರಿನ ಬೀದಿ ಬದಿ ವ್ಯಾಪಾರಸ್ಥರನ್ನು ಒಕ್ಕಲೆಬ್ಬಿಸುತ್ತಿರುವ ಸಚಿವ ಕೃಷ್ಣ ಬೈರೇಗೌಡರಿಗೆ ಅಭಿನಂದನೆಗಳ ಸುರಿಮಳೆ ಆಗುತ್ತಿದೆ. ಪಾದಚಾರಿಗಳ ಹಕ್ಕಿನ ಕುರಿತು  ಮಾತುಗಳು, ಕಾಳಜಿಗಳು ವ್ಯಕ್ತ ಆಗುತ್ತಿದೆ. ಕೃಷ್ಣ ಬೈರೇಗೌಡರೂ ಫುಟ್ ಪಾತ್ ಎಂಬುದು ಪಾದಚಾರಿಗಳು ಮೂಲಭೂತ ಹಕ್ಕು ಎಂದು ತಮ್ಮ ಕಾರ್ಯಾಚರಣೆಯನ್ನು ಸಮರ್ಥಿಸಿ, ನ್ಯಾಯಾಲಯದ ಆದೇಶ ಗೌರವಿಸುತ್ತಿರುವುದು ಸ್ವಾಗತಾರ್ಹ ಬೆಳವಣಿಗೆ ಎಂದು ಸಮರ್ಥಿಸಲಾಗುತ್ತಿದೆ.

ನ್ಯಾಯಾಲಯದ ಆದೇಶಕ್ಕೂ ಹೊರತುಪಡಿಸಿ ಪ್ರಜಾಪ್ರಭುತ್ವ ವ್ಯವಸ್ಥೆಯ ಸರ್ಕಾರಗಳು ತುತ್ತಿನ ಚೀಲಕ್ಕಾಗಿ ಬೀದಿಗೆ ಬಂದಿರುವವ ಬದುಕಿನ ಹಕ್ಕು ಒದಗಿಸುವ ಮತ್ತು ಕಾಪಾಡುವ ಸಾಂವಿಧಾನಿಕ ಪ್ರಥಮ ಆದ್ಯತೆಯಾಗಬೇಕಾಗುತ್ತದೆ. ಇವರಿಗೆ ಬದುಕು ಹಕ್ಕು ಇಲ್ಲವೆ ?ಎಂದು ಪ್ರಜ್ಞಾಶೀಲ ಮನಸ್ಸುಗಳು ಹಾಗೂ ಬೀದಿಯನ್ನೇ ನಂಬಿ ಜೀವಿಸುತ್ತಿದ್ದ ಬಡ ಜೀವಿಗಳು ತಮ್ಮದೇ ಆದ ಸಂಕಟ ತಳಮಳಗಳ ಮೂಲಕ ಕೇಳಿಕೊಳ್ಳಿಕೊಳ್ಳುತ್ತಿವೆ.

ಬೀದಿ ವ್ಯಾಪಾರವನ್ನೇ ನಂಬಿ ನಮ್ಮ ಕುಟುಂಬ ವರ್ಗ ಉಸಿರಾಡುತ್ತಿದೆ ಎಂದು ಕಾರ್ಯಚರಣೆಯ ಸಂದರ್ಭದಲ್ಲಿ ಬೀದಿ ಬದಿಯಲ್ಲಿದ್ದವರು ಹಾದಿಗೆ ಬಂದು ನೋವು ತೋಡಿಕೊಳ್ಳುತ್ತಿದ್ದಾರೆ. ಬೀದಿ ಬದಿಯ ಸಣ್ಣ ವ್ಯಾಪಾರವನ್ನೇ ನಂಬಿರುವ ಆಡಳಿತ ವ್ಯವಸ್ಥೆಗೆ ಬಡವರು ಮಾತ್ರ ಕಾಣಿಕೊಳ್ಳುತ್ತಾರೆ ಬೆಳಗಾವಿ ಬೋಗರವೆಸ್ದ ಉದ್ದಕ್ಕೂ ಖಾವು ಕಟ್ಟಾದವರು ಫುಟ್ ಪಾತ್ ವನ್ನೇ ಸುಂದರವಾದ ವ್ಯಾಪರ ಕೇಂದ್ರವಾಗಿರಿಸಿಕೊಂಡಿರುವುದು ಕಾಣುವುದಿಲ್ಲವೇ, ಅದನ್ನು ತೆರವುಗೊಳಿಸುವ ದಮ್ಮು ಇಲ್ಲವೇ? ಎಂದು ಬೆಳಗಾವಿ ಆನಗೋಳ ಪ್ರದೇಶದ ಬೀದಿ‌ ವ್ಯಾಪಾರಸ್ಥರು ಹಾಗೂ ಅವರ ಬಗ್ಗೆ ಕಾಳಜಿ ಹೊಂದಿದ ಪ್ರಜ್ಞಾವಂತ ನಾಗರಿಕ ಮನಸ್ಸುಗಳು ಕೇಳುತ್ತಿವೆ.

ಪದಚಾರಿಗಳ ಹಕ್ಕು ಸ್ಥಾಪಿಸಲು ಹೊರಟಿರುವ ಸಂದರ್ಭದಲ್ಲಿ ಸಚಿವ  ಕೃಷ್ಣ ಬೈರೇಗೌಡರು ಹಾಗು ಜನಪ್ರತಿನಿಧಿತ್ವದ ಸರ್ಕಾರ, ಕಾರ್ಯರೂಪಕ್ಕಾಗಿ ಕ್ಷೇತ್ರಕ್ಕೆ ಇಳಿಯುವ ಆಡಳಿತ ವ್ಯವಸ್ಥೆ  ಬೀದಿ ಬದಿ ವ್ಯಾಪಾರಿಗಳು ಯಾಕಿದ್ದಾರೆ ಎಂಬುದನ್ನೂ ಗಮನಿಸಬೇಕಿದೆ. ಭಾರತದ ಜನರ ದುಡಿಮೆಯ ಅವಕಾಶ, ಆದಾಯ, ಕುಟುಂಬ ನಿರ್ವಹಣೆಯ ಕನಿಷ್ಟ ಖರ್ಚುಗಳು, ಸಾಮಾಜಿಕ ಸಮೀಕರಣಗಳನ್ನೂ ಗಮನಿಸಬೇಕಿದೆ ಎಂದು ನಾಗರಿಕ ಸಮಾಜ ಮಾತನಾಡಿಕೊಳ್ಳುತ್ತಿದೆ.

ಬೀದಿ ಬದಿಯಲ್ಲಿ ವ್ಯಾಪಾರ ಮಾಡುವವರು ಯಾರು ? ದುಡಿಮೆಗೆ, ಕುಟುಂಬ ನಿರ್ವಹಣೆಗೆ ಬೇಕಾದಷ್ಟು ಆದಾಯದ ಅವಕಾಶಗಳು ಅವರಿಗೆ ದೊರಕುವಂತಿದ್ದರೆ ಅವರು ಬೀದಿ ಬದಿಗೆ ಬಂದು ಇಂತಹ ಅಭದ್ರತೆಯ, ಅವಮಾನದ ದುಡಿಮೆಗೆ ಕೈ ಹಾಕುತ್ತಿದ್ದರೆ ? ಫುಟ್ ಪಾತ್ ಗಳು ಪಾದಚಾರಿಗಳ ಮೂಲಭೂತ ಹಕ್ಕು. ಹಾಗೆಯೆ, ಬದುಕುವುದು ಭಾರತದ ಪ್ರತಿಯೊಬ್ಬ ನಾಗರಿಕನ ಮೂಲಭೂತ ಹಕ್ಕಲ್ಲವೆ ? ಪ್ರತಿಯೊಬ್ಬರಿಗೂ ಕುಟುಂಬ ನಿರ್ವಹಣೆ ನಡೆಸುವಷ್ಟು ದುಡಿಮೆ ಖಾತರಿ ಪಡಿಸುವುದು (ಅಂದರೆ, ಶಿಕ್ಷಣ, ಆರೋಗ್ಯ,ವಸತಿ, ಆಹಾರಗಳು ದೊರಕುವುದು) ಸರಕಾರಗಳು ಕರ್ತವ್ಯ ಅಲ್ಲವೆ ? ಪಾದಚಾರಿಗಳಿಗೆ ಫುಟ್ ಪಾತ್ ಬಿಡಿಸಿಕೊಡುವ ಸರಕಾರಕ್ಕೆ, ಸಚಿವರಿಗೆ, ರಾಜಕೀಯ ಪಕ್ಷಗಳಿಗೆ ಈ ಎಲ್ಲಾ ಜನರಿಗೆ ಬದುಕುವ ಹಕ್ಕು, ಬದುಕಲು ಬೇಕಾದಷ್ಟು ದುಡಿಮೆಯ ಅವಕಾಶ ಒದಗಿಸಿಕೊಡುವ ಕರ್ತವ್ಯವೂ ಇದೆಯಲ್ಲವೆ ? ಫುಟ್ ಪಾತ್ ತೆರವಿಗಾಗಿ ಶಹಬ್ಬಾಸ್ ಗಿರಿ ಕೊಡುವ ನಾಗರಿಕರು ಈ ಕುರಿತೂ ನಿಮ್ಮ ಕರ್ತವ್ಯ ನಿಭಾಯಿಸಿ ಎಂದು ಧ್ವನಿ ಎತ್ತಿ ಮಾತಾಡಬೇಕಲ್ಲವೆ ? ಎಂದು ಬೀದಿ ಬದಿಯಿಂದ ಹಾದಿಗೆ ಬಂದು ಎದೆ ಬಡೆದುಕೊಳ್ಳುತ್ತಿದ್ದವರ ಪ್ರಶ್ನೆಗಳಾಗಿವೆ.

ಪ್ರತಿರೋಧ

ಬೀದಿ ಬದಿಯಲ್ಲಿ ಚಪ್ಪಲಿ, ಛತ್ರಿ, ಬಟ್ಟೆ ಮಾರುವ, ಎಗ್ ರೈಸ್, ಚಿತ್ರಾನ್ನ ಮಾರುವ, ಅಂತಹ ಕಡೆ ಅಗ್ಗದ ವಸ್ತು, ಅಗ್ಗದ ಆಹಾರ ಹುಡುಕಿಕೊಂಡು ಬರುವ ಬಡವರ ಕುಟುಂಬದ ಹಿನ್ನಲೆಯಲ್ಲಿ ಬಂದಿರುವ ಜನಗಳಾಗಿ ಆಲೋಚಿಸಿದಾಗ ಲೋಕ ಬೇರೆಯೆ ಆಗಿ ಕಾಣುತ್ತದೆ.

ಉತ್ತಮ ರಸ್ತೆಗಳು, ಆರಾಮವಾಗಿ ನಡೆದಾಡಲು ಅವಕಾಶಗಳ ಫುಟ್ ಪಾತ್ ಗಳು ನಾಗರಿಕ ಸಮಾಜದ ನಿರೀಕ್ಷೆಯು ಹೌದು. ಹಾಗೆಯೆ ಹಸಿವು, ಬಡತನ, ಅವಮಾನ ಮುಕ್ತ ಸಮಾಜ, ಎಲ್ಲರಿಗೂ ಕನಿಷ್ಟ ನೆಮ್ಮದಿಯಲ್ಲಿ ಕುಟುಂಬ ನಿರ್ವಹಣೆ ಮಾಡಬಲ್ಲಷ್ಟು ದುಡಿಮೆಗೆ ಅವಕಾಶಗಳು ಅದೇ ನಾಗರಿಕ  ಸಮಾಜ ನಿರೀಕ್ಷೆಯೂ ಹೌದು ಎಂದು ಅನಾಥ ಬದುಕಿನ ಪರವಾಗಿರುವ ಮನಸ್ಸುಗಳು ಎತ್ತಿತುವ ಪ್ರಶ್ನೆಗಳಿಗೆ ಸಚಿವರು ಮತ್ತು ಸರ್ಕಾರ ಕ್ರಿಯಾರೂಪದ ಉತ್ತರ ಕೊಡಬೇಕಾಗುತ್ತದೆ.

**

ಈ ಲೇಖನ ಹಂಚಿಕೊಳ್ಳಿ

ಇನ್ನಷ್ಟು ಓದಿ

'ಕರ್ನಾಟಕ ಸರ್ಕಾರಿ ಆವರಣ ಮತ್ತು ಸಾರ್ವಜನಿಕ ಆಸ್ತಿಗಳ ಬಳಕೆ ನಿಯಂತ್ರಣ ವಿಧೇಯಕ, 2026'ಕ್ಕೆ ಸಂಪುಟ ಸಭೆಯಲ್ಲಿ ಅನುಮೋದನೆ ಕರ್ನಾಟಕ ಸುದ್ದಿ

'ಕರ್ನಾಟಕ ಸರ್ಕಾರಿ ಆವರಣ ಮತ್ತು ಸಾರ್ವಜನಿಕ ಆಸ್ತಿಗಳ ಬಳಕೆ ನಿಯಂತ್ರಣ ವಿಧೇಯಕ, 2026'ಕ್ಕೆ ಸಂಪುಟ ಸಭೆಯಲ್ಲಿ ಅನುಮೋದನೆ

ಇದು ಯಾವುದೋ ಒಂದು ನಿರ್ದಿಷ್ಟ ಸಂಸ್ಥೆ, ಸಂಘ, ಸಂಘಟನೆ, ಸೊಸೈಟಿ, ಕ್ಲಬ್, ಒಕ್ಕೂಟ, ಸಿಂಡಿಕೇಟ್ ಅಥವಾ ಎನ್‌ಜಿಒವನ್ನು ನಿರ್ಬಂಧಿಸಲು ಅಥವಾ ಮಟ್ಟಹಾಕಲು ಎಂದು ಎಲ್ಲರೂ ಯಾಕೆ ಭಾವಿಸುತ್ತಿದ್ದಾರೋ? ಇದು ಯಕ್ಷ ಪ್ರಶ್ನೆ!

Admin