ಬ್ರೇಕಿಂಗ್
ಸಾಮರಸ್ಯ ಕೆಡಿಸುವ ಎಂಇಎಸ್‌, ಶಿವಸೇನೆ ನಿಷೇಧಕ್ಕೆ ಕರವೇ ಆಗ್ರಹ ಸುವರ್ಣ ಸೌಧದ ಎದುರು ಅಂತರಾಷ್ಟ್ರೀಯ ಯೋಗ‌ ದಿನಾಚರಣೆ ಸೈಬರ್ ವಂಚನೆಯಿಂದ ಹಣ ಕಳೆದುಹೋಗದಂತೆ ಪೊಲೀಸ್ ಇಲಾಖೆ ಆಧುನಿಕ ತಂತ್ರಜ್ಞಾನದ ಬಿಗಿಕ್ರಮ - ಪ್ರಿಯಾಂಕ ಖರ್ಗೆ ಕನ್ನಡಕ್ಕೆ ಮೊದಲ ಆದ್ಯತೆ ನೀಡಲು ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗಕ್ಕೆ ಬಿಳಿಮಲೆ ಆಗ್ರಹ ರಕ್ಷಣಾ ಭದ್ರತಾ ದಳಕ್ಕೆ (ಡಿಎಸ್‌ಸಿ) ಮಾಜಿ ಸೈನಿಕರ ನೇಮಕಾತಿ ಮಂಗಾವತಿ :   ಸೇವಾ ನಿವೃತ್ತ ಹಾಗೂ ಪ್ರತಿಭಾ ಸಾಧಕರಿಗೆ ಗೌರವ ಸನ್ಮಾನ 232 ಗ್ರೇಡ್-2 ತಹಶೀಲ್ದಾರ್‌ಗಳಿಗೆ ಗ್ರೇಡ್-1 ತಹಶೀಲ್ದಾರ್ ಹುದ್ದೆಗೆ ಬಡ್ತಿ ಮಹಾದಾಯಿ, ಕೃಷ್ಣೆ, ಕಾವೇರಿ ಜಲ ವಿವಾದ ನಿವಾರಣೆಗೆ ರಾಜ್ಯ ಸರ್ಕಾರದ ಹೆಚ್ಚಿನ ಮುತವರ್ಜಿ ಅಗತ್ಯ : ನ್ಯಾಯವಾದಿ ಮೋಹನ ಕಾತರಕಿ ಸಂವಿಧಾನ ಹಾಗೂ ಬಾಬಾಸಾಹೇಬರ ಸಿದ್ಧಂತಕ್ಕೆ ಅನುಸಾರ ರಾಜಕೀಯ ಮಾಡುತ್ತ ಬಂದಿದ್ದೇನೆ - ಮಾಜಿ ಸಚಿವ ಎಚ್.ಸಿ. ಮಹಾದೇವಪ್ಪ ಸ್ಪಷ್ಟನೆ ಅಭಿವೃದ್ಧಿಯ ಸ್ಪಷ್ಟವಾದ ಗುರಿಯೊಂದಿಗೆ ನರೇಂದ್ರ ಮೋದಿ ಸರ್ಕಾರ ಸಾಧನೆ : ಕೇಂದ್ರ ಸಚಿವ ಭೂಪತಿರಾಜ್ ಶ್ರೀನಿವಾಸ ವರ್ಮಾ ಸಾಮರಸ್ಯ ಕೆಡಿಸುವ ಎಂಇಎಸ್‌, ಶಿವಸೇನೆ ನಿಷೇಧಕ್ಕೆ ಕರವೇ ಆಗ್ರಹ ಸುವರ್ಣ ಸೌಧದ ಎದುರು ಅಂತರಾಷ್ಟ್ರೀಯ ಯೋಗ‌ ದಿನಾಚರಣೆ ಸೈಬರ್ ವಂಚನೆಯಿಂದ ಹಣ ಕಳೆದುಹೋಗದಂತೆ ಪೊಲೀಸ್ ಇಲಾಖೆ ಆಧುನಿಕ ತಂತ್ರಜ್ಞಾನದ ಬಿಗಿಕ್ರಮ - ಪ್ರಿಯಾಂಕ ಖರ್ಗೆ ಕನ್ನಡಕ್ಕೆ ಮೊದಲ ಆದ್ಯತೆ ನೀಡಲು ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗಕ್ಕೆ ಬಿಳಿಮಲೆ ಆಗ್ರಹ ರಕ್ಷಣಾ ಭದ್ರತಾ ದಳಕ್ಕೆ (ಡಿಎಸ್‌ಸಿ) ಮಾಜಿ ಸೈನಿಕರ ನೇಮಕಾತಿ ಮಂಗಾವತಿ :   ಸೇವಾ ನಿವೃತ್ತ ಹಾಗೂ ಪ್ರತಿಭಾ ಸಾಧಕರಿಗೆ ಗೌರವ ಸನ್ಮಾನ 232 ಗ್ರೇಡ್-2 ತಹಶೀಲ್ದಾರ್‌ಗಳಿಗೆ ಗ್ರೇಡ್-1 ತಹಶೀಲ್ದಾರ್ ಹುದ್ದೆಗೆ ಬಡ್ತಿ ಮಹಾದಾಯಿ, ಕೃಷ್ಣೆ, ಕಾವೇರಿ ಜಲ ವಿವಾದ ನಿವಾರಣೆಗೆ ರಾಜ್ಯ ಸರ್ಕಾರದ ಹೆಚ್ಚಿನ ಮುತವರ್ಜಿ ಅಗತ್ಯ : ನ್ಯಾಯವಾದಿ ಮೋಹನ ಕಾತರಕಿ ಸಂವಿಧಾನ ಹಾಗೂ ಬಾಬಾಸಾಹೇಬರ ಸಿದ್ಧಂತಕ್ಕೆ ಅನುಸಾರ ರಾಜಕೀಯ ಮಾಡುತ್ತ ಬಂದಿದ್ದೇನೆ - ಮಾಜಿ ಸಚಿವ ಎಚ್.ಸಿ. ಮಹಾದೇವಪ್ಪ ಸ್ಪಷ್ಟನೆ ಅಭಿವೃದ್ಧಿಯ ಸ್ಪಷ್ಟವಾದ ಗುರಿಯೊಂದಿಗೆ ನರೇಂದ್ರ ಮೋದಿ ಸರ್ಕಾರ ಸಾಧನೆ : ಕೇಂದ್ರ ಸಚಿವ ಭೂಪತಿರಾಜ್ ಶ್ರೀನಿವಾಸ ವರ್ಮಾ
21 ಜೂನ್ 2026
ಕೆರೆ ಬಾವಿಗಳಿಗೆ ಜೀವ ತುಂಬುತ್ತಿರುವ ಪ್ಯಾಸ್ ಫೌಂಡೇಷನ್
🤝 ಸಮಾಜ
Dr. K N Doddmani · · 177 ವೀಕ್ಷಣೆಗಳು

ಕೆರೆ ಬಾವಿಗಳಿಗೆ ಜೀವ ತುಂಬುತ್ತಿರುವ ಪ್ಯಾಸ್ ಫೌಂಡೇಷನ್

ಕುಡಿಯುವ ನೀರಿನ ಶಾಶ್ವತ ಪರಿಹಾರ ಮಾರ್ಗದಲ್ಲಿ ಪ್ಯಾಸ್ ಫೌಂಡೇಷನ್ ಸಾಹಸ

ಆಧುನಿಕ ನಾಗರಿಕ ಜೀವನ ವಿಧಾನದಿಂದ ಪ್ರಾಕೃತಿಕ ಅತ್ಯವಶ್ಯ ಸಂಪನ್ಮೂಲಗಳಲ್ಲಿ ಒಂದಾ ನೀರು ದಿನಗಳಿದಂತೆ ಆಳಕ್ಕೆ ಇಳಿಯುವ ಮತ್ತು ಇಲ್ಲವಾಗುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಒಂದೆಡೆ ಕೆರೆ ಬಾವಿಗಳು ಬತ್ತಿದರೆ ಇನ್ನೊಂದೆಡೆ ನದಿ‌ಮೂಲಗಳ ಒತ್ತುವರಿಂದ ಹೂಳುತುಂಬಿ ನದಿಗಳು ಬೇಗ ಬರಿದಾಗುತ್ತಿವೆ. ಪರಿಸ್ಥಿತಿ ಅರಿವು ಮೂಡಿಸುವ ಪ್ರಯತ್ನ ಒಂದೆಡೆಯಾದರೆ, ನಾಗರಿಕ ಸಮಾಜದ ಜೀವನ ವಿಧಾನದ ಬಲಪ್ರಯೋಗ ಇನ್ನೊಂದೆಡೆ ಸಾಗುತ್ತಿದೆ. ಇದರ ಮಧ್ಯ ಉಳಿದಿರುವುದನ್ನು ಉಳಿಸಿಕೊಂಡು ಸಾಗಬೇಕಾದ ಅನಿವಾರ್ಯತೆ ಇದೆ.

ಬೆಳಗಾವಿ ಪಶ್ಚಿಮ ಘಟದ ಸೆರಗಿನ ಅಂಚಿನಲ್ಲಿರುವ ಮಲೆನಾಡು ಪ್ರದೇಶ. ಗಾಬರಿಯಾಗುವಷ್ಟು ನೀರಿಗೆ ಬರವಿಲ್ಲ. ಆದರೆ, ಇರುವ ನೀರು ಮತ್ತು ನೀರಿನ ಮೂಲಗಳ ಸದ್ಭಳಕೆಯತ್ತ ಸರಿಯಾಗಿ ಗಮನ ಹರಿಸದೇ ಇರುವುದರಿಂದ ನೀರಿನ ಸಮಸ್ಯೆ ಎದುರಿಸಬೇಕಾಗಿದೆ.

ಆಧುನಿಕ ನೀರು ಸರಬರಾಜು ಪದ್ದತಿ ಅನುಷ್ಟಾನಗೊಳ್ಳುವ ಮೊದಲು ಎಲ್ಲಡೆ ಇರುವಂತೆ ಬೆಳಗಾವಿ ನಗರ ಪ್ರದೇಶ‌ ಹಾಗೂ ಜಿಲ್ಲೆಯಾದ್ಯಂತ ಕೆರೆಗಳು, ಬಾವಿಗಳು ತುಂಬಿ ತುಳುಕುತ್ತಿದ್ದವು. ಈಗಲೂ ಸರಿಯಾಗಿ ನೀರು ಪೂರೈಕೆ ವ್ಯವಸ್ಥೆ ಇಲ್ಲದ ಪ್ರದೇಶಗಳಲ್ಲಿ ಬಾವಿ,ಕೊಳವೆ ಬಾವಿ, ಕೆರೆಗಳು ನೀರಿನ ಆಧಾರಗಳಾಗಿವೆ. ಆದರೆ, ಬೆಳಗಾವಿ ನಗರ ಹಾಗೂ ಬೆಳಗಾವಿ ಹೊರವಲಯದ ಪ್ರದೇಶದಲ್ಲಿ ಆಧುನಿಕ ನೀರಿನ ಸೌಕರ್ಯದಿಂದ ಹಿಂದೆ ವೈಭವ ಮೆರೆದ ಬಾವಿ, ಕೆರೆಗಳು ಕಾಲರಾಯನ ಗರ್ಭ ಸೇರಿವೆ. ಅವುಗಳ ಒಡಲಿನಲ್ಲಿ ನೀರಿನ ಬುಗ್ಗಿ ಬತ್ತಿಲ್ಲ. ಮನುಷ್ಯನ ಆಕ್ರಮಣದಿಂದ ಮಣ್ಣು ಮುಚ್ಚಿಕೊಂಡಿವೆ.

ಹೀಗೆ ಮಣ್ಣಿನ ಒಡಲಿನಲ್ಲಿ ಮಂಕಾದ ಬಾವಿಗಳು ಮತ್ತು ಕೆರೆಗಳನ್ನು ಗುರುತಿಸಿ ಅವುಗಳ ಜಲದ ಜೀವ ತುಂಬಿ ಮೊದಲಿನ ವೈಭವ ತರಿಸುವಲ್ಲಿ ಬೆಳಗಾವಿಯ ಪ್ಯಾಸ್ ಫೌಂಡೇಷನ್ ಕ್ರಿಯಾಶೀಲ ವ್ಯಕ್ತಿತ್ವಗಳು ಗುರುತರ ಹೆಜ್ಜೆ ಇಟ್ಟಿವೆ.

2016ರಲ್ಲಿ ಉಂಟಾದ ಬರಗಾಲ ಪರಿಸ್ಥಿತಿಯಲ್ಲಿ ಪ್ಯಾಸ್ ಫೌಂಡೇಷನ್ ಗೆಳೆಯರು ತೀವ್ರ ಕುಡಿಯುವ ನೀರಿನ ಸಮಸ್ಯೆ ಇದ್ದಲ್ಲಿ ಸ್ವಂತ ಖರ್ಚಿನಿಂದ ಟ್ಯಾಂಕರ್ ಮೂಲಕ ನೀರು ಪೂರೈಸಲು ಪ್ರಾರಂಭಿಸಿದರು.

ಬೆಳಗಾವಿಯ ಪ್ರಜ್ಞಾವಂತ ಏಳು‌ಜನರ ಯುವ ಪಡೆಯೊಂದು ತಮ್ಮೊಳಗೆ ಸುಮಾರು 75 ಸಾವಿರ ಹಣ ಸಂಗ್ರಹಿಸಿ ಬೆಳಗಾವಿ ನಗರದ ಜನ ಜಾನುವಾರುಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಸುವ ಸಾಮಾಜಿಕ ಕಾರ್ಯ ಕೈತ್ತಿಕೊಂಡದ್ದು ಮೊದಲಾಗಿ ನೀರಿನ ಶಾಶ್ವತ ಪರಿಹಾರಕ್ಕೆ ವಿವೇಚಿಸುತ್ತಾರೆ.

ಬೆಳಗಾವಿಯ ಪ್ರಭುನಗರದಲ್ಲಿ ನೀರಿನ ಸಮಸ್ಯೆ ಪರಿಶೀಲಿಸುವ ಊರಿನ ಹಿರಿಯರೊಬ್ಬರು ಊರಲ್ಲಿದ್ದ ಕೆರೆಯ ಬಗ್ಗೆ ಈ ಸೇವಕರ ಮುಂದೆ ಪ್ರಸ್ತಾಪಿಸುತ್ತಾರೆ. ಆ ಸಂದರ್ಭದಲ್ಲಿ ಕೆರೆ ಮುಚ್ಚಿ ನಿವೇಶನಗಳನ್ನಾಗಿ ಮಾಡುವ ತಯಾರಿಯಲ್ಲಿದ್ದ ವಿಷಯ ತಿಳಿದ ಈ ಗುಂಪು ಜಿಲ್ಲಾಧಿಕಾರಿಯಲ್ಲಿ‌ಮನವಿ ಮಾಡಿಕೊಂಡು ಸ್ವಂತ ಖರ್ಚಿನಲ್ಲಿ ಪ್ರಭುನಗರ ಕೆರೆ ಪುನರುಜ್ಜೀವನಗೊಳಿಸುವುದಾಗಿ ತಿಳಿಸಿದರು. ಜಿಲ್ಲಾಧಿಕಾರಿ ಅನುಮತಿ ನೀಡಿದ್ದೇ ತಡ ಪ್ರಭುನಗರದ ಕೆರೆಯ ಹೂಳೆತ್ತಿ ನೀರು ತುಂಬಿಕೊಳ್ಳುವಂತೆ ಮಾಡಿ ಆ ಪ್ರದೇಶ ನೀರಿನ ಶಾಶ್ವತ ಪರಿಹಾರ ಕಂಡುಕೊಂಡರು.

pyaas team

ಪ್ರಭುನಗರ ಕೆರೆಯ ಪುನರುಜ್ಜೀವನ ಸೇವೆಯಿಂದ ಉಲ್ಲಾಸಗೊಂಡ ಎಲ್ಲರೂ ನೀರಿನ ಶಾಶ್ವತ ಪರಿಹಾರ ಕಲ್ಪಿಸುವ ಕ್ರಾಂತಿ ಆರಂಭಿಸಿ ಪ್ಯಾಸ್ ಫೌಂಡೇಶನ್ ಎಂಬ ಹೆಸರಿನಲ್ಲಿ ಸಂಘಟನೆ ನಿರ್ಮಿಸಿ ನಿರಂತರ ಕೆಲಸ ಮಾಡುತ್ತಾ ಬಂದಿದ್ದಾರೆ.

ಇದುವರೆಗೆ ಪ್ಯಾಸ್ ಫೌಂಡೇಷನ್ ಬೆಳಗಾವಿ ನಗರ ಸೇರಿದಂತೆ ಸುತ್ತಲಿನ ಪ್ರದೇಶಗಳಲ್ಲಿ ಸ್ವಂತ ಖರ್ಚಿನಿಂದ 1 5 ಬೃಹತ್ ಕೆರೆಗಳನ್ನು ಗುರುತಿಸಿ ಪುನರುಜ್ಜೀವನ ಮಾಡಿ ಯಾವತ್ತೂ ನೀರು ತುಂಬಿಕೊಳ್ಳುವಂತೆ ಮಾಡಿದ್ದಾರೆ. ಜೊತೆಗೆ ಬೆಳಗಾವಿಯಲ್ಲಿ ಬಾವಿಗಳ ಸಂಖ್ಯೆ ಜಾಸ್ತಿಯಿದ್ದು, ಹಾಳುಬಿದ್ದ 5 ಬೃಹತ್ತಾದ ಬಾವಿಗಳನ್ನು ಗುರುತಿಸಿ ಹೂಳೆತ್ತಿ ಯಾವತ್ತೂ ನೀರು ತುಂಬಿಕೊಳ್ಳುವಂತೆ ಮಾಡಿದ್ದಾರೆ.

ಈ ಕೆಲಸಕ್ಕೆ ಸರ್ಕಾರದಿಂದ ಯಾವುದೇ ಹಣಕಾಸಿನ ನೆರವು ಪಡೆಯದೆ, ತಮ್ಮ ಸ್ವಂತ ಹಣ ಹಾಗೂ ಸಿಎಸ್ ಆರ್ ಸಂಸ್ಥೆಯಿಂದ ನೆರವು ಪಡೆದು ಇಂದಿಗೂ ಕೆರೆ ಬಾವಿಗಳ ಪುನರುಜ್ಜೀವನಗೊಳಿಸುವ ಪುಣ್ಯದ ಕೆಲಸ ಮುಂದುವರಿಸಿ ನೀರಿನ ಸಮಸ್ಯೆ ನೀವಾರಿಸುತ್ತ ಬಂದಿದ್ದಾರೆ.

ಇವರ ನೀರು ಪೂರೈಕೆಯ ಕ್ರಾಂತಿಕಾರಿ ಕೆಲಸವನ್ನು ಸಾಮಾಜಿಕ ಕಾರ್ಯಕರ್ತ ಅಣ್ಣಾಹಜಾರೆ, ವಿಜಯಪುರದ ದಿವಂಗತ ಸಿದ್ದೇಶ್ವರ ಸ್ವಾಮೀಜಿಯವರ ಸ್ವತಃ ಭೆಟ್ಟಿ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸಾರ್ವಜನಿಕರ ಅಪಾರ ಮೆಚ್ಚುಗೆಗೆ ಪಾತ್ರವಾಗಿರುವ ಪ್ಯಾಸ್ ಫೌಂಡೇಷನ್ 9 ಜನ ಸದಸ್ಯರಿದ್ದು ಹೆಸರಾಂತ ವೈದ್ಯ ಡಾ. ಮಾಧವ ಪ್ರಭು ಇದರ ಅಧ್ಯಕ್ಷರಾಗಿದ್ದು, ಫೌಂಡೇಶನ್ ಪ್ರಮುಖ ಪಾತ್ರಧಾರಿಯಾಗಿ ಕೆಲಸ ಮಾಡುತ್ತಿದ್ದಾರೆ. ಇವರೊಂದಿಗೆ ಇತರ ಕಾರ್ಯದರ್ಶಿಯಾಗಿ ಪ್ರೀತಿ ಕೋರೆ ಸಾಥ್ ನೀಡುತ್ತಿದ್ದಾರೆ. ಇವರೊಟ್ಟಿಗೆ ಇತರೆ ಉಪಾಧ್ಯಕ್ಷರಾಗಿ ಅಭಿಮನ್ಯು ಡಾಗೆ ಹಾಗೂ ರೋಹಣ ಕುಲಕರ್ಣಿ, ದೀಪಕ ಓಲ್ಕಾರ್, ಸೂರ್ಯಕಾಂತ, ಅವಧೂತ್, ಲಕ್ಷ್ಮೀಕಾಂತ ಹಾಗೂ ಅಜಯ ಸೇರಿ ನಿರಂತರ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ.

ಸಾಮಾಜಿಕ ಸೇವೆಯಲ್ಲಿ ‌ಪ್ರಾಮಾಣಿಕವಾಗಿ ತೊಡಗಿಸಿಕೊಂಡಿರುವ ಪ್ಯಾಸ್ ಫೌಂಡೇಷನ್ ಇದೀಗ, ಬೆಳಗಾವಿ ಹೊರವಲಯದ ಮುತಗಾ ಗ್ರಾಮದ ಕಂಚವೀರ ನಗರದ ಸುಮಾರು ಮುನ್ನೂರು ವರ್ಷ ಹಳೆಯದಾದ ಐತಿಹಾಸಿಕ‌ ಬಾವಿಗೆ ಮರುಜೀವ ಕಲ್ಪಿಸುವ ಕೆಲಸ ಮಾಡುತ್ತಿದೆ. ಪ್ಯಾಸ್ ಫೌಂಡೇಷನ್ ‌ಜೊತೆಗೆ ‘ಆಪ್ಲೆ ಸೇವಕರಿ ಸಂಘಟನೆ' ಕೈಜೋಡಿಸಿದೆ.

ಮುತಗಾ ಗ್ರಾಮದ ಬಾವಿಯ ಕೆಳಭಾಗದವರಿಗೆ ಅಗಲವಾದ ಮೆಟ್ಟಿಲುಗಳನ್ನು ನಿರ್ಮಿಸಲಾಗಿದ್ದು, ಸುತ್ತಲು ಕಲ್ಲುಗಳಿಂದ ಗಟ್ಟಿಯಾದ ಮತ್ತು ಸುಂದರವಾಗಿ ಗೋಡೆಗಳನ್ನು ಕಟ್ಟಲಾಗಿದೆ. ಕೆಳಗೆ ಬಾವಿ ಸಮೀಪಿಸುತ್ತಿದ್ದಂತೆ ಆಕರ್ಷಕ ಕಮಾನ ನಿರ್ಮಿಸಲಾಗಿದೆ. ಕಮಾನದ ಹತ್ತಿರ ತುಂಬಿತುಳುಕುವ ಸುಮಾರು 60 ಅಡಿ ಆಳವಾದ ಬಾವಿ ನಿರ್ಮಿಸಲಾಗಿದೆ.

ಇಂದಿನ ಸಾರಿಗೆ ವ್ಯವಸ್ಥೆಗೆ ಪೆಟ್ರೋಲ್ ಬಂಕ್ ನಿರ್ಮಿಸಿರುವಂತೆ ಅಂದಿನ ರಾಜ ಮಹಾರಾಜರ ಕಾಲದಲ್ಲಿ ರಾಜರ ಮತ್ತು ಸೈನಿಕರ ಕುದುರೆ ಸವಾರಿ ಸಾಗುವಾಗ ಮಧ್ಯದಲ್ಲಿ ವಿಶೇಷವಾಗಿ ಕುದುರೆ ಹಾಗೂ ಸೈನಿಕರಿಗೆ ಕುಡಿಯುವ ನೀರಿನ ಅನುಕೂಲತೆಗೆ ಇಂಥ ಬಾವಿಗಳನ್ನು ಮೊವತ್ತು ಮೈಲು ಅಂತರದಲ್ಲಿ ನಿರ್ಮಿಸಲಾಗುತ್ತಿತ್ತು. ಮೆಟ್ಟಿಲುಗಳ ಮೂಲಕ ಬಾವಿವರೆಗೆ ಕುದುರೆಗಳು ಇಳಿದು ತುಂಬಿದ ಬಾವಿಯಿಂದ ನಿಂತು ನೀರು ಸೇವಿಸಲು ಅನುಕೂಲ ಮಾಡಿಕೊಡಲಾಗಿದೆ.

ಇಂತಹ ಐತಿಹಾಸಿಕ, ವಿಶಿಷ್ಟ ವಿನ್ಯಾಸದ ಸಮೃದ್ದವಾದ ಬಾವಿ ನಿರುಪಯುಕ್ತವಾಗಿ, ಹೂಳು, ಕಸಕಡ್ಡಿಗಳಿಂದ ಮುಚ್ಚಿಹೋಗಿದೆ. ಮುತಗಾ ಗ್ರಾಮಸ್ಥರು ಪ್ಯಾಸ್ ಫೌಂಡೇಷನ್ ಗಮನಕ್ಕೆ ತಂದಾಗ ತಕ್ಚಣ ಕಾರ್ಯಪ್ರವೃತ್ತರಾಗಿ ಹೂಳು ತೆಗೆದು ಬಾವಿಯನ್ನು ಬಯಗೊಳಿಸಿದ್ದಾರೆ. ಇನ್ನೊಂದು ವಾರದೊಳಗೆ ಬಾವಿಯ ಮೂಲಸ್ಥಿತಿಗೆ ತರಲಿದ್ದಾರೆ. ಇದರಿಂದ ಮುತಗಾ ಹಾಗೂ ಸುತ್ತಲಿನ ಪ್ರದೇಶಕ್ಕೆ ಈ ಬಾವಿಯಿಂದ ಶುದ್ಧ ಮತ್ತು ಸಮೃದ್ಧವಾದ ಕುಡಿಯುವ ನೀರು ದೊರಕಲಿದೆ.

ಡಾ. ಮಾಧವ ಪ್ರಭು ಕಳೆದ 10. ವರ್ಷಗಳಲ್ಲಿ 15 ಕೆರೆ ಹಾಗೂ 5 ಬಾವಿಗಳನ್ನು ಪುನರುಜ್ಜೀವನಗೊಳಿಸಲಾಗಿದೆ. ಪ್ರಸ್ತುತ ಮುತಗಾ ಗ್ರಾಮದ ಬೃಹತ್ ಗಾತ್ರದ ಬಾವಿ ಸುಧಾರಿಸುವ ಕೆಲಸ ಪ್ರಾರಂಭಿಸಲಾಗಿದೆ. ಸಂಸ್ಥೆಯ ಸದಸ್ಯರು ಸ್ವಯಂ ಶ್ರಮಧಾನಲ್ಲೂ ತೊಡಗಿ, ಸ್ವತಂತ್ರವಾಗಿ ಕೆಲಸ ಮಾಡುತ್ತಿರುವುದಾಗಿ ತಿಳಿಸಿದ್ದಾರೆ.

ಪ್ಯಾಸ್ ಫೌಂಡೇಷನ್ ಉಪಾಧ್ಯಕ್ಷ ಅಭಿಮನ್ಯು ಡಾಗಾ, ಐತಿಹಾಸಿಕ ವಿಶೇಷತೆ ಹೊಂದಿರುವ ಮುತಗಾ ಗ್ರಾಮದ ಬಾವಿ ಪುನರುಜ್ಜೀವನ ಮಾಡಿದರೆ ಜನರಿಗೆ‌ಹೆಚ್ಚು ಅನುಕೂಲವಾಗಲಿದೆ ಎಂದಿದ್ದಾರೆ.

ಮುತಗಾ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಉಮೇಶ್ ಪುರಿ, ಪ್ಯಾಸ್ ಫೌಂಡೇಷನ್ ಒಳ್ಳೆಯ ಕೆಲಸ ಕೈಗೆತ್ತಿಕೊಂಡಿದೆ.ಗ್ರಾಮದಲ್ಲಿ ನೀರಿನ ಕೊರತೆಯಿದೆ. ಬಾವಿಯಿಂದ ಸುತ್ತಲಿನ ಪ್ರದೇಶದ ನೀರಿನ ಕೊರತೆ‌ ನೀಗಲಿದೆ ಎಂದು ತಿಳಿಸಿದ್ದಾರೆ.

ಪ್ಯಾಸ್ ಫೌಂಡೇಷನ್ ಎಲ್ಲರೂ ಆರ್ಥಿಕವಾಗಿ ಅನುಕೂಲಸ್ಥರು. ಡಾ. ಮಾಧವಪ್ರಭು ಅನುಭವಿ ಹಿರಿಯ ವೈದ್ಯರು. ಪ್ರೀತಿ ಕೋರೆ ಹೆಸರಾತ ರಾಜಕಾರಣಿ ಪ್ರಭಾಕರ ಕೋರೆ ಅವರ ಮಗಳು. ಅಭಿಮನ್ಯು ವ್ಯವಹಾರಸ್ಥರು. ಉಳಿದವರೂ ತಮ್ಮ ಅರ್ಥಿಕ‌ ಇತಿಮಿತಿಯಲ್ಲಿ ವ್ಯವಹಾರ ನಡೆಸುತ್ತಿರುವವರು. ಸಾಮಾನ್ಯವಾಗಿ ಆರ್ಥಿಕವಾಗಿ ಅನುಕೂಲಸ್ಥರಿಗೆ ಸಾಮಾಜಿಕ ಸೇವೆ ಎನ್ನುವುದು ತೋರಿಕೆಯ ಪ್ಯಾಶನ್ ಆಗಿರುತ್ತದೆ. ಆದರೆ, ಪ್ಯಾಸ್ ಫೌಂಡೇಷನ್ ಸಾಮಾಜಿಕ ಸೇವಕರಲ್ಲಿ ಇದಕ್ಕೆ ಅವಕಾಶವಿಲ್ಲ. ಅವರಲ್ಲಿ ಪ್ರಾಮಾಣಿಕವಾದ ಸಾಮಾಜಿಕ ಕಾಳಜಿ ಇರುವುದರಿಂದ ತಮ್ಮ ಸ್ಥಾನ ಮಾನಗಳನ್ನು ಬದಿಗಿಟ್ಟು ಮಣ್ಣು ಹೂರುವ ಕೆಲಸವನ್ನು ಮಾಡುವಲ್ಲಿ ಹಿಂಜರಿಕೆ ಇಲ್ಲ. ತುಂಬಾ ಸಂತೋಷದಿಂದ ಮತ್ತು ಉಲ್ಲಾಸದಿಂದ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಸಮಾಜ, ಸರ್ಕಾರಗಳು ನಮ್ಮನ್ನು ಗುರುತಿಸುತ್ತವೆಯೋ ಇಲ್ಲೋ ಗೊತ್ತಿಲ್ಲ. ನಮ್ಮ ಸೇವೆ ನಿರಂತರ ಎಂದು ಗಟ್ಟಿಯಾದ ನಿಲುವಿನಲ್ಲಿ ಸೇವೆಯ ರಂಗಕ್ಕೆ ಇಳಿದಿದ್ದಾರೆ. ಇಂಥವರನ್ನು ಸಮಾಜ, ಸರ್ಕಾರ ಪ್ರೀತಿಯಿಂದ ಮನ್ನಿಸಿ ಉತ್ತೇಜನ ನೀಡುವುದು ಮಾನವೀಯ ಕಳಕಳಿಯಾಗುತ್ತದೆ.

-ಡಾ. ಕೆ. ಎನ್. ದೊಡ್ಡಮನಿ.

ಈ ಲೇಖನ ಹಂಚಿಕೊಳ್ಳಿ