ಅಭಿವೃದ್ಧಿಯ ಸ್ಪಷ್ಟವಾದ ಗುರಿಯೊಂದಿಗೆ ನರೇಂದ್ರ ಮೋದಿ ಸರ್ಕಾರ ಸಾಧನೆ : ಕೇಂದ್ರ ಸಚಿವ ಭೂಪತಿರಾಜ್ ಶ್ರೀನಿವಾಸ ವರ್ಮಾ
ಬೆಳಗಾವಿ : ವಿಕಸಿ ಭಾರತ ಸಂಕಲ್ಪ ಸಮಾವೇಶ
ಅಭಿವೃದ್ಧಿಯ ಸ್ಪಷ್ಟವಾದ ಗುರಿಯೊಂದಿಗೆ ನರೇಂದ್ರ ಮೋದಿ ಸರ್ಕಾರ ಸಾಧನೆ : ಕೇಂದ್ರ ಸಚಿವ ಭೂಪತಿರಾಜು
ಬೆಳಗಾವಿಯಲ್ಲಿ ಇಂದು ಆಯೋಜಿಸಲಾದ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ಯಶಸ್ವಿಯಾಗಿ ೧೨ ವರ್ಷಗಳನ್ನು ಪೂರೈಯಿಸಿ ಸಾಧಿಸಿ ಪ್ರಗತಿಯನ್ನು ಪರಿಚಯಿಸುವ ವಿಕಸಿತ ಭಾರತ ಸಂಕಲ್ಪ ಸಮಾವೇಶವನ್ನು ಕೇಂದ್ರದ ಉಕ್ಕು ಮತ್ತು ಭಾರೀ ಕೈಗಾರಿಕೆಗಳ ರಾಜ್ಯ ಸಚಿವ ಭೂಪತಿರಾಜು ಶ್ರೀನಿವಾಸ ವರ್ಮಾ ಉದ್ಘಾಟಿಸಿದರು.
ಸಂಸದ ಜಗದೀಶ ಶೆಟ್ಟರ, ಶಾಸಕ ಅಭಯ ಪಾಟೀಲ, ಬೆಳಗಾವಿ ನಗರ ಬಿಜೆಪಿ ಅಧ್ಯಕ್ಷೆ ಗೀತಾ ಸುತಾರ, ಬಿಜೆಪಿಯ ಗ್ರಾಮೀಣ ಪ್ರದೇಶ ಅಧ್ಯಕ್ಷ ಸುಭಾಷ ಪಾಟೀಲ, ಮಹಾಪೌರ ಪ್ರೀತಿ ಕಾಮ್ಕರ, ಉಪ ಮಹಾಪೌರ ಹಣುಮಂತ ಕೊಂಗಾಲಿ, ಮಾಜಿ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ, ಮಾಜಿ ಶಾಸಕರಾದ ಅನಿಲ ಬೆನಕೆ, ಸಂಜಯ ಪಾಟೀಲ ಸೇರಿದಂತೆ ಪಕ್ಷದ ಹಿರಿಯ ಪ್ರದಾಧಿಕಾರಿಗಳು, ಕಾರ್ಯಕರ್ತರು, ಹಿರಿಯ ನಾಗರಿಕರು ಪಾಲ್ಗೊಂಡಿದ್ದರು.
ಭಾರತದ ಪ್ರಜಾತಂತ್ರ ವ್ಯವಸ್ಥೆಯಿಂದ ಚುನಾಯಿತರಾಗಿ ಪ್ರಧಾನ ಮಂತ್ರಿಯಾಗಿ ನರೇಂದ್ರ ಮೋದಿ ಅವರು ನಿರಂತರ ಹನ್ನೆರಡು ವರ್ಷಗಳ ವರೆಗೆ ದೇಶದ ಸಮಗ್ರ ಅಭಿವೃದ್ಧಿ ಗುರಿಯಾಗಿರಿಸಿಕೊಂಡು ಅಧಿಕಾರವಧಿ ಪೂರೈಯಿಸಿ ಐತಿಹಾಸಿಕ ದಾಖಲೆ ನಿರ್ಮಿಸಿದ್ದಾರೆ ಎಂದು ಕೇಂದ್ರದ ಉಕ್ಕು ಮತ್ತು ಭಾರೀ ಕೈಗಾರಿಕೆಗಳ ರಾಜ್ಯ ಸಚಿವ ಭೂಪತಿರಾಜು ಶ್ರೀನಿವಾಸ ವರ್ಮಾ ತಿಳಿಸಿದ್ದಾರೆ.
ಕಳೆದ ೧೨ ವರ್ಷಗಳ ವರೆಗೆ ಆಡಳಿತ ನಡೆಸಿದ ನರೇಂದ್ರ ಮೋದಿ ಸರ್ಕಾರಕ್ಕೆ ದೇಶದ ಸಮಗ್ರ ಪ್ರಗತಿಯೊಂದಿಗೆ ಜಾಗತಿಕ ಮಟ್ಟದಲ್ಲಿ ಎತ್ತರಕ್ಕೆ ತೆಗೆದುಕೊಂಡು ಹೋಗುವ ಸ್ಪಷ್ಟವಾದ ಗುರಿ ಮತ್ತು ಯೋಜನೆಗಳೊಂದಿಗೆ ಕಾರ್ಯ ಸಾಧನೆ ಮಾಡುತ್ತ ಬಂದಿದೆ. ಕೇಂದ್ರದ ಪ್ರತಿಯೊಂದೂ ಜನಪರ ಯೋಜನೆಯು ಪ್ರತಿಯೊಬ್ಬ ನಾಗರಿಕನಿಗೆ, ಪ್ರತಿಯೊಂದು ಮನೆಗೆ ಮತ್ತು ಪ್ರದೇಶಕ್ಕೆ ಮುಟ್ಟಿಸುವ ಕೆಲಸ ಮಾಡುತ್ತ ಬಂದಿದೆ. ದೇಶದಲ್ಲಿ ಆಗಿರವು ರಸ್ತೆ ಅಭಿವೃದ್ಧಿಗಳು, ವಿಮಾನ ನಿಲ್ದಾಣಗಳ ಆಧುನಿಕ ಪ್ರಗತಿ, ರೈಲು ಸೇವೆಯಲ್ಲಿನ ಪ್ರಮುಖ ಸಾಧನೆಗಳು ಸ್ಪಷ್ಟವಾದ ನಿರ್ದಶನಗಳಾಗಿವೆ.
ಕೇಂದ್ರದ ಜನಪರ ಪ್ರಗತಿಗೆ ಕರ್ನಾಟಕ ಒಂದು ಉತ್ತಮ ನಿರ್ದಶನವಾಗಿದ್ದು, ಪ್ರಸ್ತುತ ೮ ವಂದೇ ಭಾರತ ರೈಲುಗಳು ಬೆಂಗಳೂರು ಕೇಂದ್ರದಿAದ ರಾಜ್ಯದ ವಿವಿಧೆಡೆ ಸಂಚರಿಸುತ್ತಿವೆ. ಬೆಳಗಾವಿ ವಿಮಾನ ನಿಲ್ದಾಣ ಆಧುನಿಕ ಸೌಕರ್ಯಗಳೊಂದಿಗೆ ಅಭಿವೃದ್ಧಿ ಸಾಧಿಸಲಾಗಿದ್ದು, ೨೫೦ ಕೋಟಿ ರೂಪಾಯಿಗಳ ವೆಚ್ಚದಲ್ಲಿ ನೂತನ ಟರ್ಮಿನಲ್ ಕಟ್ಟಡವನ್ನು ನಿರ್ಮಿಸಲಾಗಿದೆ. ಈ ಸೌಕರ್ಯದಿಂದ ವರ್ಷಕ್ಕೆ ೩೬ ಲಕ್ಷ ಪ್ರಯಾಣಿಕರು ಇಲ್ಲಿಂದ ಪ್ರಯಾಣಿಸಲಿದ್ದಾರೆ. ಇದರಿಂದ ಈ ಭಾಗದ ಆರ್ಥಿಕ ಪ್ರಗತಿಗೆ ಬೃಹತ್ ಪ್ರಮಾಣದ ಉತ್ತೇಜನ ದೊರಕಲಿದೆ ಎಂದು ತಿಳಿಸಿದರು.
ಸಂಸದ ಜಗದೀಶ ಶೆಟ್ಟರ, ನರೇಂದ್ರ ಮೋದಿ ಅವರು ಹಲವಾರು ಅಭಿವೃದ್ಧಿ ಯೋಜನೆಗಳನ್ನು ಯಶಸ್ವಿಗಾಗಿ ಅನುಷ್ಠಾನಗೊಳಿಸುವುದರ ಮೂಲಕ ಭಾರತವನ್ನು ಜಾಗತಿಕ ಮಟ್ಟದಲ್ಲಿ ಗುರುತಿಸುವಂತೆ ಮಾಡಿದರು. ಕಳೆದ ೧೨ ವರ್ಷದಲ್ಲಿ ದೇಶದ ಆರ್ಥಿಕ ಪರಿಸ್ಥಿತಿ ಗಮನಾರ್ಹ ಸಾಧನೆ ಸಾಧಿಸಿದ್ದು ಜಿಡಿಪಿ ಸಾಧನೆಯಲ್ಲಿ ನಾಲ್ಕನೆ ಸ್ಥಾನ ಪಡೆದುಕೊಂಡಿದೆ. ಪ್ರಸ್ತುತ ಅಮೆರಿಕಾ ಇರಾನ ಯುದ್ಧದ ಸಂದಿಗ್ಧ ಸಂದರ್ಭದಲ್ಲಿ ಬೇರೆ ರಾಷ್ಟçಗಳ ತೈಲ ಬೆಲೆ ಸಾಕಷ್ಟು ಹೆಚ್ಚಾಗಿದ್ದರೂ ಭಾರತದಲ್ಲಿ ನಿಯಂತ್ರಣ ಸಾಧಿಸಿ ಕಡಿಮೆ ಬೆಲೆಯಲ್ಲಿ ಪೂರೈಕೆ ಮಾಡಿ ಆರ್ಥಿಕ ನಿಯಂತ್ರಣ ಸಾಧಿಸಲಾಗಿದೆ ಎಂದು ತಿಳಿಸಿದರು.
ಶಾಸಕ ಅಭಯ ಪಾಟೀಲ, ದೇಶ ಇಂದು ಡಿಜಿಟಲ್ ಕ್ಷೇತ್ರದಲ್ಲಿ ಗಮನಾರ್ಹ ಪ್ರಗತಿ ಸಾಧಿಸಿ ಅನುಕೂಲತೆ ಒದಗಿಸಲಾಗಿದೆ. ದೇಶ ಇನ್ನೂ ಹೆಚ್ಚಿನ ಪ್ರಗತಿ ಸಾಧಿಸಿ ಅಭಿವೃದ್ಧಿ ಕೆಲಸಗಳು ಸಾಕಾರಗೊಳ್ಳಬೇಕಾದರೆ ಪ್ರಧಾನಿ ನರೇಂದ್ರ ಮೋದಿ ಅವರ ಕೈಬಲಪಡಿಸುವ ಅಗ್ಯವಿದೆ ಎಂದು ತಿಳಿಸಿದರು
***
ಈ ಲೇಖನ ಹಂಚಿಕೊಳ್ಳಿ