ಬ್ರೇಕಿಂಗ್
ಗಿರೀಶ್ ಕಾರ್ನಾಡರ 'ತುಘಲಕ್' ನಾಟಕದ ಓದು: "ವೇದಿಕೆಯ ಸಿದ್ಧತೆಗೆ ಓದು ಮೊದಲ ಹೆಜ್ಜೆ; ಕಾರ್ನಾಡ್ ರ ನಾಟಕ ಸಮಕಾಲೀನ ವೈರುದ್ಯಗಳ ಪ್ರತಿಬಿಂಬ" ವಿನೋಧ ಜಾಧವ ಅವರಿಗೆ ಪಿಎಚ್.ಡಿ. ಡಾಕ್ಟರೇಟ್ ಬೆಳಗಾವಿಯ ICMR ದಲ್ಲಿ ರಾಷ್ಟ್ರೀಯ ಉನ್ನತ ಮಟ್ಟದ ಸಭೆ - ಆಯುಷ್ - ಆಧುನಿಕ‌ ಔಷಧಿ ಹೊಸ ಪ್ರಯೋಗ ಶಿಕ್ಷಕಿ ಶುಭಾ ಹೆಗಡೆಗೆ ಬೇಲಾ ಟೀಚರ್ಸ್ ಅವಾರ್ಡ್ ಮರಾಠಾ ಎಲ್‌ಐಆರ್‌ಸಿ ಕೇಂದ್ರದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ 'ಛಾತ್ರೋಂ ಕಿ ಗೂಂಜ್' -'ವಿದ್ಯಾರ್ಥಿಗಳ ಪ್ರತಿಧ್ವನಿ' ಅಭಿಯಾನದ ಮೂಲಕ ಶೈಕ್ಷಣಿಕ ಬದಲಾವಣೆಗೆ ಸರ್ಕಾರ ನಿರ್ಧಾರ ಸ್ವಯಂ ಪ್ರೇರಿತ ರಕ್ತದಾನ : 4634 ಯುನಿಟ್ ದಾಖಲಾರ್ಹ ರಕ್ತ ಸಂಗ್ರಹಣೆ ದಲಿತರು ಆರ್ಥಿಕತೆ ಸಬಲತೆಗೆ ಆಧ್ಯತೆ ನೀಡಬೇಕು - ಎಸ್. ಪಿ. ತಳವಾರ ಜನರನ್ನು ವಿಭಜಿಸುವ  ವಿಷಾದನೀಯ ಬೆಳವಣಿಗೆ : ಎಚ್.ಬಿ. ರಾಜಶೇಖರ ಕೂಲಿ ನೇಕಾರ ಕಾರ್ಮಿಕ ಕಲ್ಯಾಣ ಮಂಡಳಿ ಸ್ಥಾಪನೆಗೆ ಕಾರ್ಮಿಕರ  ಸಂಘಟಿತ ಹೋರಾಟ ಗಿರೀಶ್ ಕಾರ್ನಾಡರ 'ತುಘಲಕ್' ನಾಟಕದ ಓದು: "ವೇದಿಕೆಯ ಸಿದ್ಧತೆಗೆ ಓದು ಮೊದಲ ಹೆಜ್ಜೆ; ಕಾರ್ನಾಡ್ ರ ನಾಟಕ ಸಮಕಾಲೀನ ವೈರುದ್ಯಗಳ ಪ್ರತಿಬಿಂಬ" ವಿನೋಧ ಜಾಧವ ಅವರಿಗೆ ಪಿಎಚ್.ಡಿ. ಡಾಕ್ಟರೇಟ್ ಬೆಳಗಾವಿಯ ICMR ದಲ್ಲಿ ರಾಷ್ಟ್ರೀಯ ಉನ್ನತ ಮಟ್ಟದ ಸಭೆ - ಆಯುಷ್ - ಆಧುನಿಕ‌ ಔಷಧಿ ಹೊಸ ಪ್ರಯೋಗ ಶಿಕ್ಷಕಿ ಶುಭಾ ಹೆಗಡೆಗೆ ಬೇಲಾ ಟೀಚರ್ಸ್ ಅವಾರ್ಡ್ ಮರಾಠಾ ಎಲ್‌ಐಆರ್‌ಸಿ ಕೇಂದ್ರದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ 'ಛಾತ್ರೋಂ ಕಿ ಗೂಂಜ್' -'ವಿದ್ಯಾರ್ಥಿಗಳ ಪ್ರತಿಧ್ವನಿ' ಅಭಿಯಾನದ ಮೂಲಕ ಶೈಕ್ಷಣಿಕ ಬದಲಾವಣೆಗೆ ಸರ್ಕಾರ ನಿರ್ಧಾರ ಸ್ವಯಂ ಪ್ರೇರಿತ ರಕ್ತದಾನ : 4634 ಯುನಿಟ್ ದಾಖಲಾರ್ಹ ರಕ್ತ ಸಂಗ್ರಹಣೆ ದಲಿತರು ಆರ್ಥಿಕತೆ ಸಬಲತೆಗೆ ಆಧ್ಯತೆ ನೀಡಬೇಕು - ಎಸ್. ಪಿ. ತಳವಾರ ಜನರನ್ನು ವಿಭಜಿಸುವ  ವಿಷಾದನೀಯ ಬೆಳವಣಿಗೆ : ಎಚ್.ಬಿ. ರಾಜಶೇಖರ ಕೂಲಿ ನೇಕಾರ ಕಾರ್ಮಿಕ ಕಲ್ಯಾಣ ಮಂಡಳಿ ಸ್ಥಾಪನೆಗೆ ಕಾರ್ಮಿಕರ  ಸಂಘಟಿತ ಹೋರಾಟ
19 ಸೆಪ್ಟೆಂ 2026
ಕೆಪಿಸಿಸಿ ಎಸ್‌ಸಿ ವಿಭಾಗದ ರಾಜ್ಯ ನಿರ್ದೇಶಕರಾಗಿ  ಮಲ್ಲೇಶ ಚೌಗುಲೆ ನೇಮಕ
🏛️ ರಾಜಕೀಯ - ಆಡಳಿತ
Dr. K N Doddmani · · 59 ವೀಕ್ಷಣೆಗಳು

ಕೆಪಿಸಿಸಿ ಎಸ್‌ಸಿ ವಿಭಾಗದ ರಾಜ್ಯ ನಿರ್ದೇಶಕರಾಗಿ ಮಲ್ಲೇಶ ಚೌಗುಲೆ ನೇಮಕ

ಅಸ್ಮಿತೆ ವರದಿ, ಅ.04: ಬೆಳಗಾವಿ ಜಿಲ್ಲೆಯ ಹಿರಿಯ ದಲಿತ ನಾಯಕ, ಸಮಾಜಸೇವಕ ಹಾಗೂ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಮಲ್ಲೇಶ ಚೌಗುಲೆ ಅವರನ್ನು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಎಸ್‌ಸಿ ವಿಭಾಗದ ರಾಜ್ಯ ನಿರ್ದೇಶಕರಾಗಿ ನೇಮಕ ಮಾಡಲಾಗಿದ್ದು,. ಈ ಕುರಿತು ಕೆಪಿಸಿಸಿ ಎಸ್‌ಸಿ ವಿಭಾಗದ ರಾಜ್ಯಾಧ್ಯಕ್ಷ ಧರ್ಮಸೇನ ನೇಮಕಾತಿ ಆದೇಶ ಹೊರಡಿಸಿದ್ದಾರೆ.

ಮಲ್ಲೇಶ ಚೌಗುಲೆ ಅವರು ಹಲವು ವರ್ಷಗಳಿಂದ ಕಾಂಗ್ರೆಸ್ ಪಕ್ಷದ ಸಂಘಟನೆ ಬಲಪಡಿಸುವ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು, ವಿವಿಧ ಚುನಾವಣೆಗಳಲ್ಲಿ ಪಕ್ಷದ ಅಭ್ಯರ್ಥಿಗಳ ಪರವಾಗಿ ಕಾರ್ಯನಿರ್ವಹಿಸಿ ಸಂಘಟನೆ ವಿಸ್ತರಣೆಗೆ ಮಹತ್ವದ ಕೊಡುಗೆ ನೀಡಿದ್ದಾರೆ. ಈ ಹಿಂದೆ ಅವರು ಕಾಂಗ್ರೆಸ್ ಸೇವಾದಳ ಹಾಗೂ ಕಾಂಗ್ರೆಸ್ ಎಸ್‌ಸಿ–ಎಸ್‌ಟಿ ವಿಭಾಗದ ಜಿಲ್ಲಾ ಅಧ್ಯಕ್ಷರಾಗಿ ಜವಾಬ್ದಾರಿ ನಿರ್ವಹಿಸಿದ್ದರು.

ಸಾಮಾಜಿಕ ಕ್ಷೇತ್ರದಲ್ಲಿಯೂ ಚೌಗುಲೆ ಅವರ ಸೇವೆ ಗಮನಾರ್ಹವಾಗಿದೆ. ದಲಿತ ಸಮುದಾಯದ ಹಕ್ಕುಗಳು, ಸಮಸ್ಯೆಗಳ ಪರಿಹಾರ ಹಾಗೂ ಸಾಮಾಜಿಕ ನ್ಯಾಯಕ್ಕಾಗಿ ಅವರು ನಿರಂತರವಾಗಿ ಹೋರಾಟ ನಡೆಸಿದ್ದು, ಯುವಜನರನ್ನು ಸಂಘಟಿಸುವ ಕೆಲಸದಲ್ಲಿಯೂ ಸಕ್ರಿಯ ಪಾತ್ರ ವಹಿಸಿದ್ದಾರೆ.

ಪ್ರಸ್ತುತ ಅವರು ಅಖಿಲ ಭಾರತೀಯ ದಲಿತ ಯುವ ಸಂಘಟನೆ, ನವದೆಹಲಿ ಇದರ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದು, ಕರ್ನಾಟಕ ಸರ್ಕಾರದ ವಿವಿಧ ಸರ್ಕಾರಿ ಸಮಿತಿಗಳ ಸದಸ್ಯರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.

ಮಲ್ಲೇಶ ಚೌಗುಲೆ ಅವರ ನೇಮಕಕ್ಕೆ ರಾಜಕೀಯ, ಸಾಮಾಜಿಕ ಹಾಗೂ ವಿವಿಧ ಕ್ಷೇತ್ರಗಳ ಗಣ್ಯರು ಮತ್ತು ಕಾಂಗ್ರೆಸ್ ಕಾರ್ಯಕರ್ತರು ಹರ್ಷ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ.

ಈ ಲೇಖನ ಹಂಚಿಕೊಳ್ಳಿ

ಇನ್ನಷ್ಟು ಓದಿ

 ಅನ್ಯರಿಗೆ ಶಾಶ್ವತ ನಿವಾಸ ಪ್ರಮಾಣಪತ್ರ ನೀಡುವುದು ಸಾಂವಿಧಾನಿಕ ಚೌಕಟ್ಟಿಗೆ ವಿರುದ್ಧವಾಗಿದೆ : ಬಿಜೆಪಿ ರಾಜಕೀಯ - ಆಡಳಿತ

ಅನ್ಯರಿಗೆ ಶಾಶ್ವತ ನಿವಾಸ ಪ್ರಮಾಣಪತ್ರ ನೀಡುವುದು ಸಾಂವಿಧಾನಿಕ ಚೌಕಟ್ಟಿಗೆ ವಿರುದ್ಧವಾಗಿದೆ : ಬಿಜೆಪಿ

ವಿವಿಧ ರಾಜ್ಯ ಪ್ರಯೋಜನಗಳು, ಸರ್ಕಾರಿ ದಾಖಲೆಗಳು, ಶೈಕ್ಷಣಿಕ ಪ್ರವೇಶಗಳು, ಉದ್ಯೋಗಾವಕಾಶಗಳು ಮತ್ತು ಇತರ ಅರ್ಹತೆಗಳನ್ನು ಪಡೆಯಲು ಇದನ್ನು ಅವಲಂಬಿಸುವ ಅಪಾಯವಿದೆ -ಎ ಕಳವಳ

Admin
ಶರಣರ ಅನುಭವ ಮಂಟಪಕ್ಕೆ ಭೆಟ್ಟಿ ನೀಡಿದ  AI ರೇಖಾ ಚಿತ್ರಗಳನ್ನು ಹಂಚಿಕೊಂಡ   ಮುಖ್ಯಮಂತ್ರಿ ರಾಜಕೀಯ - ಆಡಳಿತ

ಶರಣರ ಅನುಭವ ಮಂಟಪಕ್ಕೆ ಭೆಟ್ಟಿ ನೀಡಿದ AI ರೇಖಾ ಚಿತ್ರಗಳನ್ನು ಹಂಚಿಕೊಂಡ ಮುಖ್ಯಮಂತ್ರಿ

ಜಗತ್ತಿನ ಪ್ರಪ್ರಥಮ ಆಧ್ಯಾತ್ಮಿಕ ಸಂಸತ್ತು ಅನುಭವ ಮಂಟಪದ ದಿವ್ಯ ಸನ್ನಿಧಿಗೆ ನಿನ್ನೆ ನಾನು ಭೇಟಿ ನೀಡಿದ್ದಾಗ ಮೂಡಿಬಂದ ಕಲ್ಪನಾ ಲೋಕದ ಸುಂದರ AI ಆಧಾರಿತ ರೇಖಾಚಿತ್ರಗಳು ಇಲ್ಲಿವೆ.

Admin