ಬ್ರೇಕಿಂಗ್
ವಿಜ್ಞಾನ, ಕಲೆ ಮತ್ತು ತಂತ್ರಜ್ಞಾನಗಳ ಸಂಕೀರ್ಣತೆಯನ್ನು ಒಟ್ಟುಗೂಡಿಸಿ ಆಕರ್ಷಕವಾಗಿಸಲು ಕ್ವಾಂಟಮ್ ಅದ್ಬುತ ನಿದರ್ಶನ : ಮುಖ್ಯಮಂತ್ರಿ ಪರಿಶಿಷ್ಟ ಸಮುದಾಯಗಳ ಹಕ್ಕುಗಳ ರಕ್ಷಣೆಗೆ‌ ಬದ್ಧ : ಮಲ್ಲೇಶ್ ಚೌಗಲೆ ಗುಜರಾತ: ಸಮುದ್ರದ ಅಲೆಯಂತೆ ಜೋಲಿ ಹೊಡೆಯುತ್ತ ಕುತೂಹಲ ಕೆರಳಿಸಿರುವ ಬಾವಿ ನೀರು ಅಂಚೆ ಇಲಾಖೆಯಿಂದ ಡೆಲಿವರಿ ಪಾಲುದಾರರಿಗಾಗಿ ಆನ್ಲೈನ್ ಅರ್ಜಿ ಆಹ್ವಾನ  ರಾಷ್ಟ್ರೀಯ ಜೂನಿಯರ್ ಚಾಂಪಿಯನ್ ಶಿಪ್ ಈಜು ಸ್ಪರ್ಧೆಗೆ ಬೆಳಗಾವಿ ಅಮನ್ ಸುಣಗಾರ ಆಯ್ಕೆ ಕೆಪಿಸಿಸಿ ಎಸ್‌ಸಿ ವಿಭಾಗದ ರಾಜ್ಯ ನಿರ್ದೇಶಕರಾಗಿ ಮಲ್ಲೇಶ ಚೌಗುಲೆ ನೇಮಕ ಬೆಳಗಾವಿ ಜಿಲ್ಲೆಯಲ್ಲಿ ಶೇ.95 ರಷ್ಟು ಬಿತ್ತನೆ : ಜಿಪಂ ಸಿಇಒ ರಾಹುಲ್ ಶಿಂಧೆ ನೀರು ವ್ಯರ್ಥವಾಗದಂತೆ ಕಾಲುವೆಗಳ ತ್ವರಿತ ನಿರ್ವಹಣೆಗೆ ಸತೀಶ್ ಜಾರಕಿಹೊಳಿ ಸೂಚನೆ ಬೆಳಗಾವಿ : ಪೊಲೀಸ್‌ ಪೇದೆ ನೇಮಕಾತಿ ಪರೀಕ್ಷೆಗೆ ೬೧ ಕೇಂದ್ರಗಳಲ್ಲಿ ೨೫ ಸಾವಿರಕ್ಕೂ ಅಧಿಕ ಸಂಖ್ಯೆ ಅಭ್ಯರ್ಥಿಗಳು ರಾಯಬಾಗ ತಾಲ್ಲೂಕಿನ 39 ಕೆರೆ ತುಂಬಿಸುವ ಮಹತ್ವಾಕಾಂಕ್ಷೆಯ ಯೋಜನೆ ಯಶಸ್ವಿ ಅನುಷ್ಠಾನ ಪ್ರಗತಿ - ಸತೀಶ್ ಜಾರಕಿಹೊಳಿ ವಿಜ್ಞಾನ, ಕಲೆ ಮತ್ತು ತಂತ್ರಜ್ಞಾನಗಳ ಸಂಕೀರ್ಣತೆಯನ್ನು ಒಟ್ಟುಗೂಡಿಸಿ ಆಕರ್ಷಕವಾಗಿಸಲು ಕ್ವಾಂಟಮ್ ಅದ್ಬುತ ನಿದರ್ಶನ : ಮುಖ್ಯಮಂತ್ರಿ ಪರಿಶಿಷ್ಟ ಸಮುದಾಯಗಳ ಹಕ್ಕುಗಳ ರಕ್ಷಣೆಗೆ‌ ಬದ್ಧ : ಮಲ್ಲೇಶ್ ಚೌಗಲೆ ಗುಜರಾತ: ಸಮುದ್ರದ ಅಲೆಯಂತೆ ಜೋಲಿ ಹೊಡೆಯುತ್ತ ಕುತೂಹಲ ಕೆರಳಿಸಿರುವ ಬಾವಿ ನೀರು ಅಂಚೆ ಇಲಾಖೆಯಿಂದ ಡೆಲಿವರಿ ಪಾಲುದಾರರಿಗಾಗಿ ಆನ್ಲೈನ್ ಅರ್ಜಿ ಆಹ್ವಾನ  ರಾಷ್ಟ್ರೀಯ ಜೂನಿಯರ್ ಚಾಂಪಿಯನ್ ಶಿಪ್ ಈಜು ಸ್ಪರ್ಧೆಗೆ ಬೆಳಗಾವಿ ಅಮನ್ ಸುಣಗಾರ ಆಯ್ಕೆ ಕೆಪಿಸಿಸಿ ಎಸ್‌ಸಿ ವಿಭಾಗದ ರಾಜ್ಯ ನಿರ್ದೇಶಕರಾಗಿ ಮಲ್ಲೇಶ ಚೌಗುಲೆ ನೇಮಕ ಬೆಳಗಾವಿ ಜಿಲ್ಲೆಯಲ್ಲಿ ಶೇ.95 ರಷ್ಟು ಬಿತ್ತನೆ : ಜಿಪಂ ಸಿಇಒ ರಾಹುಲ್ ಶಿಂಧೆ ನೀರು ವ್ಯರ್ಥವಾಗದಂತೆ ಕಾಲುವೆಗಳ ತ್ವರಿತ ನಿರ್ವಹಣೆಗೆ ಸತೀಶ್ ಜಾರಕಿಹೊಳಿ ಸೂಚನೆ ಬೆಳಗಾವಿ : ಪೊಲೀಸ್‌ ಪೇದೆ ನೇಮಕಾತಿ ಪರೀಕ್ಷೆಗೆ ೬೧ ಕೇಂದ್ರಗಳಲ್ಲಿ ೨೫ ಸಾವಿರಕ್ಕೂ ಅಧಿಕ ಸಂಖ್ಯೆ ಅಭ್ಯರ್ಥಿಗಳು ರಾಯಬಾಗ ತಾಲ್ಲೂಕಿನ 39 ಕೆರೆ ತುಂಬಿಸುವ ಮಹತ್ವಾಕಾಂಕ್ಷೆಯ ಯೋಜನೆ ಯಶಸ್ವಿ ಅನುಷ್ಠಾನ ಪ್ರಗತಿ - ಸತೀಶ್ ಜಾರಕಿಹೊಳಿ
07 ಆಗಸ್ಟ್ 2026
ಪರಿಶಿಷ್ಟ ಸಮುದಾಯಗಳ ಹಕ್ಕುಗಳ ರಕ್ಷಣೆಗೆ‌ ಬದ್ಧ : ಮಲ್ಲೇಶ್ ಚೌಗಲೆ
🏛️ ರಾಜಕೀಯ - ಆಡಳಿತ
Dr. K N Doddmani · · 17 ವೀಕ್ಷಣೆಗಳು

ಪರಿಶಿಷ್ಟ ಸಮುದಾಯಗಳ ಹಕ್ಕುಗಳ ರಕ್ಷಣೆಗೆ‌ ಬದ್ಧ : ಮಲ್ಲೇಶ್ ಚೌಗಲೆ

ಅಸ್ಮಿತೆ ವರದಿ, ಅ.8: ಮಲ್ಲೇಶ್ ಚೌಗುಲೆ, ಕಾಂಗ್ರೆಸ್ ಪಕ್ಷ ವಿಶ್ವಾಸವಿಟ್ಟು ರಾಜ್ಯ ಮಟ್ಟದ ಹೊಣೆಗಾರಿಕೆ ನೀಡಿದೆ. ಪಕ್ಷದ ಸಿದ್ಧಾಂತಗಳಿಗೆ ಬದ್ಧನಾಗಿ, ಪರಿಶಿಷ್ಟ ಸಮುದಾಯದ ಹಕ್ಕುಗಳ ರಕ್ಷಣೆ ಶ್ರಮಿಸುವುದಾಗಿ ಸಾಮಾಜಿಕ ಕಾರ್ಯಕರ್ತ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಪರಿಶಿಷ್ಟ ಜಾತಿ (ಎಸ್‌ಸಿ) ಸಮುದಾಯ ರಾಜ್ಯ ನಿರ್ದೇಶಕ ಮಲ್ಲೇಶ್ ಚೌಗಲೆ ಭರವಸೆ ನೀಡಿದ್ದಾರೆ.

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಪರಿಶಿಷ್ಟ ಜಾತಿ (ಎಸ್‌ಸಿ) ಇಲಾಖೆಯ ರಾಜ್ಯ ನಿರ್ದೇಶಕರಾಗಿ ನೇಮಕಾತಿ ಹಿನ್ನೆಲೆಯಲ್ಲಿ ಬೆಳಗಾವಿಯ ಕಾಂಗ್ರೆಸ್ ಭವನದಲ್ಲಿ ವಿವಿಧ ದಲಿತ ಸಂಘಟನೆಗಳಿಂದ ಆಯೋಜಿಸಲಾದ ಅಭಿನಂದನಾ ಸಮಾರಂಭದಲ್ಲಿ ಗೌರವ ಸ್ವೀಕರಿಸಿ ಅವರು ಮಾತನಾಡಿದರು.

ಯುವಕರಿಗೆ ಸಂಘಟನೆಯಲ್ಲಿ ಹೆಚ್ಚಿನ ಅವಕಾಶ ಕಲ್ಪಿಸುವುದು ಹಾಗೂ ಸಾಮಾಜಿಕ ನ್ಯಾಯದ ಪರವಾಗಿ ನಿರಂತರ ಕೆಲಸ ಮಾಡುವುದಾಗಿ ತಿಳಿಸಿದರು.

ಕೆಪಿಸಿಸಿ ಎಸ್‌ಸಿ ಇಲಾಖೆಯ ರಾಜ್ಯ ಉಪಾಧ್ಯಕ್ಷ ಲಕ್ಷ್ಮಣ್ ಲಗ್ಮಾಪ್‌ಗೋಳ್ ಅವರು ಮಲ್ಲೇಶ್ ಚೌಗುಲೆ ಅವರಿಗೆ ಶಾಲು ಹೊದಿಸಿ, ಹೂಗುಚ್ಛ ನೀಡಿ ಗೌರವಿಸಿದರು.

ಮಲ್ಲೇಶ್ ಚೌಗುಲೆ ಅವರಿಗೆ ಅಭಿನಂದನಾಪರ ಮಾತನಾಡಿದ ಸಮುದಾಯದ ಮುಖಂಡರು, ಚೌಗಲೆ ಅವರು, ಅನೇಕ ವರ್ಷಗಳಿಂದ ಕಾಂಗ್ರೆಸ್ ಸಂಘಟನೆಯಲ್ಲಿ ಹಾಗೂ ಸಮಾಜ ಸೇವೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದನ್ನು ಗುರುತಿಸಿ ಪಕ್ಷ ಜವಾಬ್ದಾರಿಯುತ ಅವಕಾಶ ಕಲ್ಪಿಸಿದೆ. ಚೌಗಲೆ ಅವರು, ಈ ಜವಾಬ್ದಾರಿಯನ್ನು ಪರಿಶಿಷ್ಟ ಜಾತಿ ಸಮುದಾಯದ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ಪರಿಣಾಮಕಾರಿಯಾಗಿ ತಲುಪಿಸುವುದರ ಜೊತೆಗೆ, ಸಂಘಟನೆಯನ್ನು ತಳಮಟ್ಟದಿಂದ ಮತ್ತಷ್ಟು ಬಲಪಡಿಸುವಲ್ಲಿ ಶ್ರಮಿಸುವರು ಎಂದು ವಿಶ್ವಾಸ ವ್ಯಕ್ತ ಪಡಿಸಿದರು.

ಕಾಂಗ್ರೆಸ್ ಮುಖಂಡ ಸದ್ದಾಂ ತಹಶೀಲ್ದಾರ್, ಕಾಂಗ್ರೆಸ್ ಯುವ ಬ್ರಿಗೇಡ್ ಬೆಳಗಾವಿ ದಕ್ಷಿಣ ಘಟಕದ ಸಿದ್ಧಾರ್ಥ್ ಚವಾಣ್, ಚಾರ್ಮ್ ಕುಶಾಲ್ ಧಾರ್ಮಿಕ ಸಂಘದ ಅಧ್ಯಕ್ಷ ಸಂತೋಷ್ ಹೊಂಗಲ್, ಸಂಗರ್ ಸಮಾಜದ ಮುಖಂಡ ಹಿರಾಲಾಲ್ ಚವಾಣ್, ಧೋರ್ ಸಮಾಜದ ಅಧ್ಯಕ್ಷ ವಿಠ್ಠಲ್ ಪೋಲ್, ಎಸ್‌ಸಿ-ಎಸ್‌ಟಿ ಸಮಾಜದ ಅಧ್ಯಕ್ಷ ಸಂದೀಪ್ ಕೋಲ್ಕರ್, ಮಾಜಿ ಕಾರ್ಪೊರೇಟರ್ ರಾಜೇಶ್ ತಿರ್ಕ್‌ನವರ್, ಸಂಗರ್ ಸಮಾಜದ ನಾಯಕ ಸಂಜಯ್ ಚೌಗುಲೆ, ಮಾಂಗ್ ಸಮಾಜದ ನಾಯಕ ಸುರೇಶ್ ಲೋಂಧೆ, ಸಂತೋಷ್ ಕಾಂಬ್ಳೆ, ಇರಪ್ಪ ಕಲೆಮಾನಿ ಸೇರಿದಂತೆ ವಿವಿಧ ಸಮಾಜಗಳ ಮುಖಂಡರು, ಪದಾಧಿಕಾರಿಗಳು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.

***

ಈ ಲೇಖನ ಹಂಚಿಕೊಳ್ಳಿ

ಇನ್ನಷ್ಟು ಓದಿ

 ಅನ್ಯರಿಗೆ ಶಾಶ್ವತ ನಿವಾಸ ಪ್ರಮಾಣಪತ್ರ ನೀಡುವುದು ಸಾಂವಿಧಾನಿಕ ಚೌಕಟ್ಟಿಗೆ ವಿರುದ್ಧವಾಗಿದೆ : ಬಿಜೆಪಿ ರಾಜಕೀಯ - ಆಡಳಿತ

ಅನ್ಯರಿಗೆ ಶಾಶ್ವತ ನಿವಾಸ ಪ್ರಮಾಣಪತ್ರ ನೀಡುವುದು ಸಾಂವಿಧಾನಿಕ ಚೌಕಟ್ಟಿಗೆ ವಿರುದ್ಧವಾಗಿದೆ : ಬಿಜೆಪಿ

ವಿವಿಧ ರಾಜ್ಯ ಪ್ರಯೋಜನಗಳು, ಸರ್ಕಾರಿ ದಾಖಲೆಗಳು, ಶೈಕ್ಷಣಿಕ ಪ್ರವೇಶಗಳು, ಉದ್ಯೋಗಾವಕಾಶಗಳು ಮತ್ತು ಇತರ ಅರ್ಹತೆಗಳನ್ನು ಪಡೆಯಲು ಇದನ್ನು ಅವಲಂಬಿಸುವ ಅಪಾಯವಿದೆ -ಎ ಕಳವಳ

Admin
ಶರಣರ ಅನುಭವ ಮಂಟಪಕ್ಕೆ ಭೆಟ್ಟಿ ನೀಡಿದ  AI ರೇಖಾ ಚಿತ್ರಗಳನ್ನು ಹಂಚಿಕೊಂಡ   ಮುಖ್ಯಮಂತ್ರಿ ರಾಜಕೀಯ - ಆಡಳಿತ

ಶರಣರ ಅನುಭವ ಮಂಟಪಕ್ಕೆ ಭೆಟ್ಟಿ ನೀಡಿದ AI ರೇಖಾ ಚಿತ್ರಗಳನ್ನು ಹಂಚಿಕೊಂಡ ಮುಖ್ಯಮಂತ್ರಿ

ಜಗತ್ತಿನ ಪ್ರಪ್ರಥಮ ಆಧ್ಯಾತ್ಮಿಕ ಸಂಸತ್ತು ಅನುಭವ ಮಂಟಪದ ದಿವ್ಯ ಸನ್ನಿಧಿಗೆ ನಿನ್ನೆ ನಾನು ಭೇಟಿ ನೀಡಿದ್ದಾಗ ಮೂಡಿಬಂದ ಕಲ್ಪನಾ ಲೋಕದ ಸುಂದರ AI ಆಧಾರಿತ ರೇಖಾಚಿತ್ರಗಳು ಇಲ್ಲಿವೆ.

Admin