ಬ್ರೇಕಿಂಗ್
ಗಿರೀಶ್ ಕಾರ್ನಾಡರ 'ತುಘಲಕ್' ನಾಟಕದ ಓದು: "ವೇದಿಕೆಯ ಸಿದ್ಧತೆಗೆ ಓದು ಮೊದಲ ಹೆಜ್ಜೆ; ಕಾರ್ನಾಡ್ ರ ನಾಟಕ ಸಮಕಾಲೀನ ವೈರುದ್ಯಗಳ ಪ್ರತಿಬಿಂಬ" ವಿನೋಧ ಜಾಧವ ಅವರಿಗೆ ಪಿಎಚ್.ಡಿ. ಡಾಕ್ಟರೇಟ್ ಬೆಳಗಾವಿಯ ICMR ದಲ್ಲಿ ರಾಷ್ಟ್ರೀಯ ಉನ್ನತ ಮಟ್ಟದ ಸಭೆ - ಆಯುಷ್ - ಆಧುನಿಕ‌ ಔಷಧಿ ಹೊಸ ಪ್ರಯೋಗ ಶಿಕ್ಷಕಿ ಶುಭಾ ಹೆಗಡೆಗೆ ಬೇಲಾ ಟೀಚರ್ಸ್ ಅವಾರ್ಡ್ ಮರಾಠಾ ಎಲ್‌ಐಆರ್‌ಸಿ ಕೇಂದ್ರದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ 'ಛಾತ್ರೋಂ ಕಿ ಗೂಂಜ್' -'ವಿದ್ಯಾರ್ಥಿಗಳ ಪ್ರತಿಧ್ವನಿ' ಅಭಿಯಾನದ ಮೂಲಕ ಶೈಕ್ಷಣಿಕ ಬದಲಾವಣೆಗೆ ಸರ್ಕಾರ ನಿರ್ಧಾರ ಸ್ವಯಂ ಪ್ರೇರಿತ ರಕ್ತದಾನ : 4634 ಯುನಿಟ್ ದಾಖಲಾರ್ಹ ರಕ್ತ ಸಂಗ್ರಹಣೆ ದಲಿತರು ಆರ್ಥಿಕತೆ ಸಬಲತೆಗೆ ಆಧ್ಯತೆ ನೀಡಬೇಕು - ಎಸ್. ಪಿ. ತಳವಾರ ಜನರನ್ನು ವಿಭಜಿಸುವ  ವಿಷಾದನೀಯ ಬೆಳವಣಿಗೆ : ಎಚ್.ಬಿ. ರಾಜಶೇಖರ ಕೂಲಿ ನೇಕಾರ ಕಾರ್ಮಿಕ ಕಲ್ಯಾಣ ಮಂಡಳಿ ಸ್ಥಾಪನೆಗೆ ಕಾರ್ಮಿಕರ  ಸಂಘಟಿತ ಹೋರಾಟ ಗಿರೀಶ್ ಕಾರ್ನಾಡರ 'ತುಘಲಕ್' ನಾಟಕದ ಓದು: "ವೇದಿಕೆಯ ಸಿದ್ಧತೆಗೆ ಓದು ಮೊದಲ ಹೆಜ್ಜೆ; ಕಾರ್ನಾಡ್ ರ ನಾಟಕ ಸಮಕಾಲೀನ ವೈರುದ್ಯಗಳ ಪ್ರತಿಬಿಂಬ" ವಿನೋಧ ಜಾಧವ ಅವರಿಗೆ ಪಿಎಚ್.ಡಿ. ಡಾಕ್ಟರೇಟ್ ಬೆಳಗಾವಿಯ ICMR ದಲ್ಲಿ ರಾಷ್ಟ್ರೀಯ ಉನ್ನತ ಮಟ್ಟದ ಸಭೆ - ಆಯುಷ್ - ಆಧುನಿಕ‌ ಔಷಧಿ ಹೊಸ ಪ್ರಯೋಗ ಶಿಕ್ಷಕಿ ಶುಭಾ ಹೆಗಡೆಗೆ ಬೇಲಾ ಟೀಚರ್ಸ್ ಅವಾರ್ಡ್ ಮರಾಠಾ ಎಲ್‌ಐಆರ್‌ಸಿ ಕೇಂದ್ರದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ 'ಛಾತ್ರೋಂ ಕಿ ಗೂಂಜ್' -'ವಿದ್ಯಾರ್ಥಿಗಳ ಪ್ರತಿಧ್ವನಿ' ಅಭಿಯಾನದ ಮೂಲಕ ಶೈಕ್ಷಣಿಕ ಬದಲಾವಣೆಗೆ ಸರ್ಕಾರ ನಿರ್ಧಾರ ಸ್ವಯಂ ಪ್ರೇರಿತ ರಕ್ತದಾನ : 4634 ಯುನಿಟ್ ದಾಖಲಾರ್ಹ ರಕ್ತ ಸಂಗ್ರಹಣೆ ದಲಿತರು ಆರ್ಥಿಕತೆ ಸಬಲತೆಗೆ ಆಧ್ಯತೆ ನೀಡಬೇಕು - ಎಸ್. ಪಿ. ತಳವಾರ ಜನರನ್ನು ವಿಭಜಿಸುವ  ವಿಷಾದನೀಯ ಬೆಳವಣಿಗೆ : ಎಚ್.ಬಿ. ರಾಜಶೇಖರ ಕೂಲಿ ನೇಕಾರ ಕಾರ್ಮಿಕ ಕಲ್ಯಾಣ ಮಂಡಳಿ ಸ್ಥಾಪನೆಗೆ ಕಾರ್ಮಿಕರ  ಸಂಘಟಿತ ಹೋರಾಟ
19 ಸೆಪ್ಟೆಂ 2026
ಬೆಳಗಾವಿಯ ICMR ದಲ್ಲಿ ರಾಷ್ಟ್ರೀಯ ಉನ್ನತ ಮಟ್ಟದ ಸಭೆ - ಆಯುಷ್ - ಆಧುನಿಕ‌ ಔಷಧಿ ಹೊಸ ಪ್ರಯೋಗ
📄 ರಾಷ್ಟ್ರೀಯ ಸುದ್ದಿ
Dr. K N Doddmani · · 63 ವೀಕ್ಷಣೆಗಳು

ಬೆಳಗಾವಿಯ ICMR ದಲ್ಲಿ ರಾಷ್ಟ್ರೀಯ ಉನ್ನತ ಮಟ್ಟದ ಸಭೆ - ಆಯುಷ್ - ಆಧುನಿಕ‌ ಔಷಧಿ ಹೊಸ ಪ್ರಯೋಗ

ಬೆಳಗಾವಿಯ ICMR ದಲ್ಲಿ ರಾಷ್ಟ್ರೀಯ ಉನ್ನತ ಮಟ್ಟದ ಸಭೆ

ಅಸ್ಮಿತೆ ವರದಿ, ಸೆ.೦೬: ಬೆಳಗಾವಿಯ ರಾಷ್ಟ್ರೀಯ ಸಾಂಪ್ರದಾಯಿಕ ಔಷಧ ಸಂಸ್ಥೆ - ICMR ಮತ್ತು ಆಯುಷ್ ಇಲಾಖೆಯ ಸಹಯೋಗದಲ್ಲಿ ಇಂದು ಸಾಂಪ್ರದಾಯಿಕ ಔಷಧಿ ‌ಹಾಗೂ ಆಧುನಿಕ ಔಷಧೀಯ ಸಂಯೋಗದ ಪ್ರಾಯೋಗಿಕ ಅನುಷ್ಠಾನದ ವೈಜ್ಞಾನಿಕ ಕ್ರಮ ಹಾಗೂ ಸಂಶೋಧನಾ ನೀತಿಗಳ ಬಲವರ್ಧನೆ  ಕುರಿತು ಬೆಳಗಾವಿಯ ICMR ದಲ್ಲಿ  ಇಂದು ರಾಷ್ಟ್ರೀಯ ಉನ್ನತ ಮಟ್ಟದ ಸಭೆ ನಡೆಸಲಾಯಿತು.

ಕೇಂದ್ರ ಆರೋಗ್ಯ ಸಂಶೋಧನಾ ಇಲಾಖೆಯ ಕಾರ್ಯದರ್ಶಿ ಹಾಗೂ  ICMR ಮಹಾನಿರ್ದೇಶಕ ಡಾ. ರಾಜೀವ್ ಬಹಲ್ ಮತ್ತು ಆಯುಷ್ ಸಚಿವಾಲಯದ ಕಾರ್ಯದರ್ಶಿ  ರಾಜೇಶ್ ಕೋಟೆಚಾ ಹಾಗೂ ಆಯುಷ್ ಸಚಿವಾಲಯ ಮತ್ತು ICMR ಸಂಸ್ಥೆಯ ಹಿರಿಯ ಅಧಿಕಾರಿಗಳು, ದೆಹಲಿ, ಚೆನೈ, ಪುಣೆ, ಗೋವಾ ಹಾಗೂ ಸ್ಥಳೀಯ ತಜ್ಞ ವೈದ್ಯರು ಪಾಲ್ಗೊಂಡಿದ್ದರು.

ಆಯುಷ್ ಮತ್ತು ಆಧುನಿಕ ಔಷಧೀಯ ಸಂಯೋಗದ ಪ್ರಾಯೋಗಿಕ ಬೆಳವಣಿಗೆ ಹಾಗೂ ಮುಂಬರುವ ದಿನಗಳಲ್ಲಿ  ಸಮಗ್ರ ಔಷಧದ ಮಾದರಿಗಳ ಅಭಿವೃದ್ಧಿಪಡಿಸಲು ಕೊಡಬೇಕಾದ ಆದ್ಯತೆ ಹಾಗೂ ಈ ಹಿನ್ನೆಲೆಯಲ್ಲಿ ಕೈಗೊಳ್ಳುವ ಸಂಶೋಧನೆಯ ಸಾಧ್ಯತೆಗಳ ಇಡೀ ದಿನದ ಕಾರ್ಯಾಗಾರದಲ್ಲಿ ಚರ್ಚಿಸಲಾಯಿತು.  ವಿಶೇಷವಾಗಿ ದೀರ್ಘಕಾಲದ ಕಾಯಿಲೆಗಳು, ಚಯಾಪಚಯ ಅಸ್ವಸ್ಥತೆಗಳು, ಮಸ್ಕ್ಯುಲೋಸ್ಕೆಲಿಟಲ್ ಅಸ್ವಸ್ಥತೆಗಳಿಗೆ  ಸಾಂಪ್ರದಾಯಿಕ ಮತ್ತು ಆಧುನಿಕ ಔಷಧದಿಂದ ಕಂಡುಕೊಳ್ಳುಬಹುದಾದ  ಪರಿಹಾರಗಳ ಬಗ್ಗೆ ಗಮನಹರಿಸಲಾಯಿತು.

ಇದಕ್ಕೆ ಪೂರಕವಾದ ಎರಡು ಯಾಪ್ ಗಳ ಬಿಡುಗಡೆ ಹಾಗೂ ಕೆಲ ಒಪ್ಪಂದದ ಒಡಬಂಡಿಕೆಗಳಿಗೆ ಪರಸ್ಪರ ಸಹಿ ಹಾಕಲಾಯಿತು.

ICMR ಮಹಾನಿರ್ದೇಶಕ ಡಾ. ರಾಜೀವ್ ಬಹಲ್ , ದೂರದರ್ಶನಕ್ಕೆ, ICMR ಸಹಯೋಗದಲ್ಲಿ ಕಳೆದ ಮೂರು ವರ್ಷಗಳಿಂದ ಆಯುಷ್ ಮತ್ತು ಆಧುನಿಕ ಔಷದೀಗಳ ಸಂಯೋಜಿತ ಪ್ರಾಯೋಗಿಕ ಯಶಸ್ವಿ ಪ್ರಕ್ರಿಯೆ ಪರಿಶೀಲನೆ ಹಾಗೂ ಔಷಧೀಯ ಕ್ಷೇತ್ರದಲ್ಲಿನ ಹೊಸ ಬೆಳವಣಿಗೆ ಹಿನ್ನೆಲೆಯಲ್ಲಿ ಕೈಗೊಳ್ಳಬೇಕಾದ ಕ್ರಮ ಮತ್ತು ಸಂಶೋಧನಾ ವಿಧಾನಗಳ ಬಗ್ಗೆ ಗಂಭೀರವಾಗಿ ಇಂದು ಚರ್ಚಿಸಲಾಗಿದೆ. ಆರೋಗ್ಯ ಕಾಪಾಡುವಲ್ಲಿ ಆಯುಷ್ ಮತ್ತು ಆಧುನಿಕ ಔಷಧೀಯ ಪ್ರಾಯೋಗಿಕ ಪುರಾವೆಗಳ ಬಗ್ಗೆ ಪರಿಶೀಲಿಸಿ ಮುಂದಿನ ಮಾರ್ಗಗಳ ಬಗ್ಗೆ ಗಮನ ಹರಿಸಲಾಗಿದೆ ಎಂದು ತಿಳಿಸಿದರು.

ಆಯುಷ್ ಸಚಿವಾಲಯದ ಕಾರ್ಯದರ್ಶಿ  ರಾಜೇಶ್ ಕೋಟೆಚಾ ಅವರು, ಸಾಂಪ್ರದಾಯಿಕ ಔಷಧಿ ಮತ್ತು ಆಧುನಿಕ ಔಷಧೀಯ ಪ್ರಾಯೋಗಿಕ ಯಶಸ್ವಿಯನ್ನು ಭಾರತದಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಳಿಸುವುದರ ಜೊತೆಗೆ 2030ರ ವೇಳೆಗೆ ಜಾಗತಿಕ ಮಟ್ಟದಲ್ಲಿ ತೆಗೆದುಕೊಂಡು ಹೋಗಲಾಗುವುದು. ಶುಂಠಿ, ಬ್ರಾಹ್ಮೀ, ಮೆಂತಿಕಾಳದಂತಹವುಗಳಿಂದ ಸಿದ್ಧಪಡೆಸಲಾದ ಸಾಂಪ್ರದಾಯಿಕ ಔಷಧಿ ಜಾಗತಿಕ ಆರೋಗ್ಯ ಕಾಪಾಡುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಈ ಹಿನ್ನೆಲೆಯ ಪ್ರಯೊಗ ಹಾಗೂ ಸಂಶೋಧನೆ ಹೊಸ ಭರವಸೆ ಮೂಡಿಸಿದೆ ಎಂದು ತಿಳಿಸಿದರು.

***

ಈ ಲೇಖನ ಹಂಚಿಕೊಳ್ಳಿ

ಇನ್ನಷ್ಟು ಓದಿ

ಸಾಂಪ್ರದಾಯಿಕ ಆಯುಷ್ ಔಷಧಿ ಗುಣಮಟ್ಟದ  ಸುಧಾರಣೆಗಾಗಿ ICMR ದಲ್ಲಿ ‌ತಜ್ಞರ ಕಾರ್ಯಾಗಾರ ರಾಷ್ಟ್ರೀಯ ಸುದ್ದಿ

ಸಾಂಪ್ರದಾಯಿಕ ಆಯುಷ್ ಔಷಧಿ ಗುಣಮಟ್ಟದ ಸುಧಾರಣೆಗಾಗಿ ICMR ದಲ್ಲಿ ‌ತಜ್ಞರ ಕಾರ್ಯಾಗಾರ

ದಿನವಿಡೀ ನಡೆದ ಕಾರ್ಯಾಗಾರದಲ್ಲಿ ಸಾಂಪ್ರದಾಯಿಕ  ಔಷಧಿಗಳ ಗುಣಮಟ್ಟ ಹಾಗೂ  ಪರಿಸರ ವ್ಯವಸ್ಥೆಯನ್ನು ಬಲಪಡಿಸುವ ಕುರಿತು ಚರ್ಚಿಸಲಾಯಿತು. 20 ಕ್ಕೂ ಅಧಿಕ ತಜ್ಞರು ಭಾಗವಹಿಸಿದ್ದರು

Admin
ಮೂರು ದಿನಗಳ RSS ಬೈಟಕ್ ಮುಕ್ತಾಯ: ಶ್ರೀರಾಮ ಜನ್ಮಭೂಮಿ ಮಂದಿರದ ದಾನ ಪೆಟ್ಟಿಗೆಯ ಕಾಣಿಕೆಯ  ಅಕ್ರಮಕ್ಕೆ ಖೇದ ರಾಷ್ಟ್ರೀಯ ಸುದ್ದಿ

ಮೂರು ದಿನಗಳ RSS ಬೈಟಕ್ ಮುಕ್ತಾಯ: ಶ್ರೀರಾಮ ಜನ್ಮಭೂಮಿ ಮಂದಿರದ ದಾನ ಪೆಟ್ಟಿಗೆಯ ಕಾಣಿಕೆಯ ಅಕ್ರಮಕ್ಕೆ ಖೇದ

ಭವಿಷ್ಯದಲ್ಲಿ ಇಂಥ ಘಟನೆಗಳು ಮರುಕಳಿಸದಂತೆ ತೀರ್ಥಕ್ಷೇತ್ರ ನ್ಯಾಸ ಖಚಿತಪಡಿಸಿಕೊಳ್ಳಬೇಕು. ಇದರಿಂದ ಸಮಸ್ತ ರಾಮಭಕ್ತರು ರಾಮ ಮಂದಿರದ ಮೇಲೆ ಹೊಂದಿರುವ ಶ್ರದ್ಧೆ ಮತ್ತು ಆಳವಾದ ನಂಬಿಕೆಗೆ ಧಕ್ಕೆಯಾಗಬಾರದು ಎಂದು ಸೂಚನೆ

Admin