ಬ್ರೇಕಿಂಗ್
ಅಂಚೆ ಇಲಾಖೆಯಿಂದ ಡೆಲಿವರಿ ಪಾಲುದಾರರಿಗಾಗಿ ಆನ್ಲೈನ್ ಅರ್ಜಿ ಆಹ್ವಾನ  ರಾಷ್ಟ್ರೀಯ ಜೂನಿಯರ್ ಚಾಂಪಿಯನ್ ಶಿಪ್ ಈಜು ಸ್ಪರ್ಧೆಗೆ ಬೆಳಗಾವಿ ಅಮನ್ ಸುಣಗಾರ ಆಯ್ಕೆ ಕೆಪಿಸಿಸಿ ಎಸ್‌ಸಿ ವಿಭಾಗದ ರಾಜ್ಯ ನಿರ್ದೇಶಕರಾಗಿ ಮಲ್ಲೇಶ ಚೌಗುಲೆ ನೇಮಕ ಬೆಳಗಾವಿ ಜಿಲ್ಲೆಯಲ್ಲಿ ಶೇ.95 ರಷ್ಟು ಬಿತ್ತನೆ : ಜಿಪಂ ಸಿಇಒ ರಾಹುಲ್ ಶಿಂಧೆ ನೀರು ವ್ಯರ್ಥವಾಗದಂತೆ ಕಾಲುವೆಗಳ ತ್ವರಿತ ನಿರ್ವಹಣೆಗೆ ಸತೀಶ್ ಜಾರಕಿಹೊಳಿ ಸೂಚನೆ ಬೆಳಗಾವಿ : ಪೊಲೀಸ್‌ ಪೇದೆ ನೇಮಕಾತಿ ಪರೀಕ್ಷೆಗೆ ೬೧ ಕೇಂದ್ರಗಳಲ್ಲಿ ೨೫ ಸಾವಿರಕ್ಕೂ ಅಧಿಕ ಸಂಖ್ಯೆ ಅಭ್ಯರ್ಥಿಗಳು ರಾಯಬಾಗ ತಾಲ್ಲೂಕಿನ 39 ಕೆರೆ ತುಂಬಿಸುವ ಮಹತ್ವಾಕಾಂಕ್ಷೆಯ ಯೋಜನೆ ಯಶಸ್ವಿ ಅನುಷ್ಠಾನ ಪ್ರಗತಿ - ಸತೀಶ್ ಜಾರಕಿಹೊಳಿ 10 ಜನ ಮಕ್ಕಳು, 50 ಜನ ಮೊಮ್ಮಕ್ಕಳ ಪ್ರೀತಿಯ ನಿಜಪ್ಪಜ್ಜ ಇನ್ನಿಲ್ಲ 70 ಸಾವಿರ ಹುದ್ದೆಗಳು, 35 ಲಕ್ಷ ಅರ್ಜಿ ನಿರೀಕ್ಷೆ: ಇಡೀ ದೇಶಕ್ಕೆ ಮಾದರಿಯಲ್ಲಿ ಅತ್ಯಂತ ಪಾರದರ್ಶಕ ನೇಮಕಾತಿ : ಸಿಎಮ್ ನಿರ್ಧಾರ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ಬಸವ ಅಧ್ಯಯನ ಪೀಠ ಸ್ಥಾಪನೆ ಅಂಚೆ ಇಲಾಖೆಯಿಂದ ಡೆಲಿವರಿ ಪಾಲುದಾರರಿಗಾಗಿ ಆನ್ಲೈನ್ ಅರ್ಜಿ ಆಹ್ವಾನ  ರಾಷ್ಟ್ರೀಯ ಜೂನಿಯರ್ ಚಾಂಪಿಯನ್ ಶಿಪ್ ಈಜು ಸ್ಪರ್ಧೆಗೆ ಬೆಳಗಾವಿ ಅಮನ್ ಸುಣಗಾರ ಆಯ್ಕೆ ಕೆಪಿಸಿಸಿ ಎಸ್‌ಸಿ ವಿಭಾಗದ ರಾಜ್ಯ ನಿರ್ದೇಶಕರಾಗಿ ಮಲ್ಲೇಶ ಚೌಗುಲೆ ನೇಮಕ ಬೆಳಗಾವಿ ಜಿಲ್ಲೆಯಲ್ಲಿ ಶೇ.95 ರಷ್ಟು ಬಿತ್ತನೆ : ಜಿಪಂ ಸಿಇಒ ರಾಹುಲ್ ಶಿಂಧೆ ನೀರು ವ್ಯರ್ಥವಾಗದಂತೆ ಕಾಲುವೆಗಳ ತ್ವರಿತ ನಿರ್ವಹಣೆಗೆ ಸತೀಶ್ ಜಾರಕಿಹೊಳಿ ಸೂಚನೆ ಬೆಳಗಾವಿ : ಪೊಲೀಸ್‌ ಪೇದೆ ನೇಮಕಾತಿ ಪರೀಕ್ಷೆಗೆ ೬೧ ಕೇಂದ್ರಗಳಲ್ಲಿ ೨೫ ಸಾವಿರಕ್ಕೂ ಅಧಿಕ ಸಂಖ್ಯೆ ಅಭ್ಯರ್ಥಿಗಳು ರಾಯಬಾಗ ತಾಲ್ಲೂಕಿನ 39 ಕೆರೆ ತುಂಬಿಸುವ ಮಹತ್ವಾಕಾಂಕ್ಷೆಯ ಯೋಜನೆ ಯಶಸ್ವಿ ಅನುಷ್ಠಾನ ಪ್ರಗತಿ - ಸತೀಶ್ ಜಾರಕಿಹೊಳಿ 10 ಜನ ಮಕ್ಕಳು, 50 ಜನ ಮೊಮ್ಮಕ್ಕಳ ಪ್ರೀತಿಯ ನಿಜಪ್ಪಜ್ಜ ಇನ್ನಿಲ್ಲ 70 ಸಾವಿರ ಹುದ್ದೆಗಳು, 35 ಲಕ್ಷ ಅರ್ಜಿ ನಿರೀಕ್ಷೆ: ಇಡೀ ದೇಶಕ್ಕೆ ಮಾದರಿಯಲ್ಲಿ ಅತ್ಯಂತ ಪಾರದರ್ಶಕ ನೇಮಕಾತಿ : ಸಿಎಮ್ ನಿರ್ಧಾರ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ಬಸವ ಅಧ್ಯಯನ ಪೀಠ ಸ್ಥಾಪನೆ
06 ಆಗಸ್ಟ್ 2026
ಡಿಕೆಸಿ ಮುಖ್ಯಮಂತ್ರಿ‌ ಕುರ್ಚಿ ರಾಜಕೀಯ ಹೊಸ ಶೆಕೆಯ ಸಂಕೇತ?
🏛️ ರಾಜಕೀಯ - ಆಡಳಿತ
Dr. K N Doddmani · · 123 ವೀಕ್ಷಣೆಗಳು

ಡಿಕೆಸಿ ಮುಖ್ಯಮಂತ್ರಿ‌ ಕುರ್ಚಿ ರಾಜಕೀಯ ಹೊಸ ಶೆಕೆಯ ಸಂಕೇತ?

ಮುಖ್ಯಮಂತ್ರಿ ಕುರ್ಚಿ ಬಿಟ್ಡುಕೊಡುವಲ್ಲಿ ಸಿದ್ಧರಾಮಯ್ಯನವರು ತೋರಿದ ಸಂಯಮತೆ; ಸ್ಥಾನ ಪಡೆದುಕೊಳ್ಳುವಲ್ಲಿ ಡಿ.ಕೆ. ಶಿವಕುಮಾರ ಅವರು ತೋರಿದ ವಿನಿತ್ವ ರಾಜಕೀಯ ಹೊಸ ಶೆಕೆಗೆ ಮುನ್ನುಡಿಯಾಗುವ ಲೆಕ್ಕಾಚಾರ

ಡಿಕೆಶಿ ಅವರ ರಾಜಕೀಯ ಸಂಘರ್ಷದ ಹೊಸ ಮಾರ್ಗದ ಆರಂಭವೇ?

**

ಕಳೆದ ಸರಿ ಸುಮಾರು ಒಂದು ವರ್ಷದಿಂದ ನಡೆಯುತ್ತಿದ್ದ ಮುಖ್ಯಮಂತ್ರಿ ಕುರ್ಚಿಯ ಮುಸಕಿನ ಗುದ್ದಾಟ, ವಾದ - ಪ್ರತಿವಾದ, ಅಸಮಾಧಾನ- ಸಮಾಧಾನ, ಒಳಗುದಿಗಳಿಗೆಲ್ಲ ಸಿದ್ಧರಾಮಯ್ಯನವರ ರಾಜೀನಾಮೆಯೊಂದಿಗೆ‌ ಕೊನೆಗೊಂಡಿದೆ.

ಅದನ್ನೇ ಇನ್ನೊಂದು ರೀತಿ ಹೇಳುವುದಾದರೆ, ಡಿ.ಕೆ. ಶಿವಕುಮಾರ ಅವರು ಮುಖ್ಯಮಂತ್ರಿ ಸ್ಥಾನ ಅಲಂಕರಿಸುವುದರ ಮೂಲಕ ರಾಜ್ಯದ ರಾಜಕೀಯ ದಿಕ್ಕು ದೆಸೆ ಬದಲಾವಣೆ ದೃವೀಕರಣ ಹೊಸ ಮಾರ್ಗದ ಸೃಷ್ಟಿಯ ಆರಂಭ ಎಂದೂ ಗುರುತಿಸಬಹುದಾಗಿದೆ. ಈ ಬದಲಾವಣೆಗೆ

ಈ ಮಧ್ಯ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡುವ ಮುನ್ನಾದಿನ  ಸಿದ್ದರಾಮಯ್ಯ ಅವರು ರಾಜ್ಯ ಹಿಂದುಳಿದ ವರ್ಗಗಳ‌ ಆಯೋಗ ಸಿದ್ದಪಡಿಸಿದ

"ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ವರದಿ" ಯನ್ನು ವಿಧಾನಸೌಧದ ತಮ್ಮ ಕಚೇರಿಯಲ್ಲಿ ಸ್ವೀಕರಿಸಿದರ ಮೂಲಕ ರಾಜ್ಯದ ಸಾಮಾಜಿಕ ಹಾಗೂ ರಾಜಕೀಯ ಬೆಳವಣಿಗೆಗೆ ತಲೆಬರಹ ನೀಡಿದ್ದಾರೆ.

ಮುಖ್ಯಮಂತ್ರಿ ಕುರ್ಚಿ ಬದಲಾವಣೆಯಲ್ಲಿ ಭಿನ್ನಮತ ಸ್ಪೋಟಗೊಂಡು ರಾಜಕೀಯ ಕ್ಷೀಪ್ರತೆ ಬೇರೆಯದೇ ದಾರಿ ಹಿಡಿಯಬಹುದು ಎಂಬ ವಾತಾವರಣ ಸೃಷ್ಟಿಯಾಗಿತ್ತು. ಸಿದ್ಧರಾಮಯ್ಯ ಅವರು ರಾಜೀನಾಮೆ ಕೊಡುವುದು ಖಚಿತವಾಗುತ್ತಿದ್ದಂತೆ ಅವರ ಬೆಂಬಲಿಗ ರಾಜಕೀಯ ನಾಯಕರುಗಳ ಮತ್ತು ಹಿಂದುಳಿದ ವರ್ಗದವರ  ತಳಮಳ, ಆತಂಕ, ಕಣ್ಣೀರು, ಅಸಮಾಧಾನದ ಹೊಗೆಯೊಂದಿಗೆ, ಇನ್ನೊಂದೆಡೆ ಡಿ.ಕೆ. ಶಿವಕುಮಾರ ಡಿ.ಕೆ. ಶಿವಕುಮಾರ ಅವರ ಬೆಂಬಲಿಗರ ಹರ್ಷೋದ್ಘಾರ ಬೆಂಕಿಗೆ ತುಪ್ಪಾ ಸುರಿದಂತೆ ಕಾಣಿಸುತ್ತಿತ್ತು. ಇದು ಅತೀಯಾಗುವುದನ್ನು ಅರಿತ ಡಿ.ಕೆ. ಶಿವಕುಮಾರ ಅವರು ಅದನ್ನು ನಿಯಂತ್ರಿಸುವ ಪ್ರಯತ್ನ ನಡೆಸಿದರು.

ಈ ಮಧ್ಯ ದೀರ್ಘಾವಧಿಯ ರಾಜಕೀಯ ಅಧಿಕಾರದ ಅನುಭವದ ಕುರ್ಚಿ ಬಿಟ್ಟುಕೊಡುವ ಆತಂಕವನ್ನು ತುಂಬಾ ಸಂಯಮದಿಂದ ಸಿದ್ಧರಾಮಯ್ಯನವರು ನಿಭಾಯಿಸುವಲ್ಲಿ ಯಶಸ್ಸು ಸಾಧಿಸಿದ್ದಾರೆ. ಕುರ್ಚಿ ಕಳೆದುಕೊಳ್ಳುವ ಆತಂಕ ಹಾಗೂ ಕುರ್ಚಿ ಪಡೆದುಕೊಳ್ಳುವ ಸಂಭ್ರಮದ ಮಧ್ಯ ಪ್ರೀತಿ - ವಿಶ್ವಾಸದ ದ್ಯುತಕವಾಗಿ ಇಬ್ಬರೂ ನಾಯಕರು ಬಿಗಿದಪ್ಪಿಕೊಂಡಿದ್ದಾರೆ. ಡಿ.ಕೆ. ಶಿವಕುಮಾರ ಅವರು ಒಂದು ಹೆಜ್ಜೆ ಮುಂದೆಯಿಟ್ಟು ಸಿದ್ಧರಾಮಯ್ಯನವರ ಕಾಲಿಗೆಬಿದ್ದು ನಮಸ್ಕರಿಸಿ ಆಶೀರ್ವಾದ ಪಡೆದುಕೊಂಡಿದ್ದಾರೆ. ಅವರಾದರೂ ಅಷ್ಟೇ ಪ್ರೀತಿ - ಸಂಯಮದಿಂದ ಹಸ್ತವಿಟ್ಟು ಹಾರೈಯಿಸಿದ್ದಾರೆ. ಇವರಿಬ್ಬರ ಆಲಿಂಗನ ಮತ್ತು ಆಶೀರ್ವಾದದ ವಿಶೇಷವಾದ ನಡೆ ಇವರ ಬೆಂಬಲಗರಿಂದ ನಡೆಯುತ್ತಿದ್ದ ಬೆಂಕಿ ಮತ್ತು ಹೊಗೆ ಸದ್ಯ ತಣ್ಣಗಾಗಿದೆ. ಹಾಗಂತ ಬೆಂಕಿ ಆರಿಲದೆಯಂತಲ್ಲ; ಅದು ಯಾವಾಗ ಹೊಗೆ ಎಬ್ಬಿಸಿ ಉರಿನಾಲಿಗೆ ಚಾಚುತ್ತದೆ ಹೇಳಿಕ್ಕಾಗದು. ಬೆಂಕಿಯ ಮೇಲೆ ಎಣ್ಣೆ ಸುರಿದು ಹೊಗೆ ಎಬ್ಬಿಸುವವರೂ ಸುಮ್ಮನೆ ಇರುವುದಿಲ್ಲ. ಈ ಇಬ್ಬರೂ ನಾಯಕರು ತಮ್ಮ ಸಂಘರ್ಷಮಯ ರಾಜಕೀಯ ಅನುಭವದಿಂದ ಅರಿತವರೂ ಹೌದು.

ಈ ಇಬ್ಬರ ಅನುಭವವೇ ರಾಜ್ಯ ರಾಜಕೀಯ ಬದಲಾವಣೆಯ ಹೊಸ ಮಾರ್ಗದ ಸೃಷ್ಟಿಯ ಗುಟ್ಡು ಅಡಗಿದೆ ಎಂಬುದು ಕೆಲ ರಾಜಕೀಯ ತಜ್ಞರ ಅಭಿಮತವಾಗಿದೆ.

ಸದ್ಯ ಉದ್ಭವಿಸುವ ಸಚಿವ ಸ್ಥಾನ ಪಡೆದುಕೊಳ್ಳುವ ಗುದ್ದಾಟವನ್ನು ಹೆಗಲು ಕೊಟ್ಟಿರುವ ಡಿ.ಕೆ. ಶಿವಕುಮಾರ ಅವರು ಹೇಗೆ‌ ನಿಭಾಯಿಸುತ್ತಾರೆ ಎಂಬುದು ಮುಂದಿನ ರಾಜಕೀಯ ಬೆಳವಣಿಗೆಯ ಮುನ್ನುಡಿಯಾಗುತ್ತದೆ.

ಈ ಮಧ್ಯ, ಮುಖ್ಯಮಂತ್ರಿ ಕುರ್ಚಿಯ ಬದಲಾವಣೆಯ ಬಗ್ಗೆ ಕಾಂಗ್ರೆಸ್ ಪಕ್ಷದವರಿಗಿಂತ ಬಿಜೆಪಿಯವರು ಹೆಚ್ಚು ಗಂಭೀರವಾಗಿ ತೆಗೆದುಕೊಂಡು ಒದ್ದು ಪಡೆದುಕೊಳ್ಳಬೇಕೆಂದು ಹುಮ್ಮಸ್ಸು ನೀಡುತ್ತದ್ದವರು ಇದ್ದಕ್ಕಿಂದ್ದಂತೆ ಹಿಂದುಳಿದ ವರ್ಗದವರಿಗೆ ಕಾಂಗ್ರೆಸ್ ‌ಪಕ್ಷ ಅನ್ಯಾಯ ಮಾಡಿದೆ ಎಂದು ಸಿದ್ಧರಾಮಯ್ಯನವರ ಪರವಾಗಿ ಬ್ಯಾಟಿಂಗ್ ಮಾಡುತ್ತಿರುವ ಒಳಬೇಗುದಿ ಏನಿರಬಹುದು? ಎಂಬ ಪ್ರಶ್ನೆ ಉದ್ಭವವಾಗಿದೆ.

- ಡಾ. ಕೆ. ಎನ್. ದೊಡ್ಡಮನಿ,

ಈ ಲೇಖನ ಹಂಚಿಕೊಳ್ಳಿ

ಇನ್ನಷ್ಟು ಓದಿ

 ಅನ್ಯರಿಗೆ ಶಾಶ್ವತ ನಿವಾಸ ಪ್ರಮಾಣಪತ್ರ ನೀಡುವುದು ಸಾಂವಿಧಾನಿಕ ಚೌಕಟ್ಟಿಗೆ ವಿರುದ್ಧವಾಗಿದೆ : ಬಿಜೆಪಿ ರಾಜಕೀಯ - ಆಡಳಿತ

ಅನ್ಯರಿಗೆ ಶಾಶ್ವತ ನಿವಾಸ ಪ್ರಮಾಣಪತ್ರ ನೀಡುವುದು ಸಾಂವಿಧಾನಿಕ ಚೌಕಟ್ಟಿಗೆ ವಿರುದ್ಧವಾಗಿದೆ : ಬಿಜೆಪಿ

ವಿವಿಧ ರಾಜ್ಯ ಪ್ರಯೋಜನಗಳು, ಸರ್ಕಾರಿ ದಾಖಲೆಗಳು, ಶೈಕ್ಷಣಿಕ ಪ್ರವೇಶಗಳು, ಉದ್ಯೋಗಾವಕಾಶಗಳು ಮತ್ತು ಇತರ ಅರ್ಹತೆಗಳನ್ನು ಪಡೆಯಲು ಇದನ್ನು ಅವಲಂಬಿಸುವ ಅಪಾಯವಿದೆ -ಎ ಕಳವಳ

Admin
ಶರಣರ ಅನುಭವ ಮಂಟಪಕ್ಕೆ ಭೆಟ್ಟಿ ನೀಡಿದ  AI ರೇಖಾ ಚಿತ್ರಗಳನ್ನು ಹಂಚಿಕೊಂಡ   ಮುಖ್ಯಮಂತ್ರಿ ರಾಜಕೀಯ - ಆಡಳಿತ

ಶರಣರ ಅನುಭವ ಮಂಟಪಕ್ಕೆ ಭೆಟ್ಟಿ ನೀಡಿದ AI ರೇಖಾ ಚಿತ್ರಗಳನ್ನು ಹಂಚಿಕೊಂಡ ಮುಖ್ಯಮಂತ್ರಿ

ಜಗತ್ತಿನ ಪ್ರಪ್ರಥಮ ಆಧ್ಯಾತ್ಮಿಕ ಸಂಸತ್ತು ಅನುಭವ ಮಂಟಪದ ದಿವ್ಯ ಸನ್ನಿಧಿಗೆ ನಿನ್ನೆ ನಾನು ಭೇಟಿ ನೀಡಿದ್ದಾಗ ಮೂಡಿಬಂದ ಕಲ್ಪನಾ ಲೋಕದ ಸುಂದರ AI ಆಧಾರಿತ ರೇಖಾಚಿತ್ರಗಳು ಇಲ್ಲಿವೆ.

Admin