ಅಂಚೆ ಇಲಾಖೆಯಿಂದ ಡೆಲಿವರಿ ಪಾಲುದಾರರಿಗಾಗಿ ಆನ್ಲೈನ್ ಅರ್ಜಿ ಆಹ್ವಾನ
ಅಸ್ಮಿತೆ ವರದಿ, ಅ.05: ಅಡ್ವಾನ್ಸ್ ಪೋಸ್ಟಲ್ ಟೆಕ್ನಾಲಜಿ ೨.೦ ವ್ಯವಸ್ಥೆಯಡಿಯಲ್ಲಿ ಕೊರಿಯರ್, ಎಕ್ಸ್ ಪ್ರೆಸ್ ಮತ್ತು ಪಾರ್ಸೆಲ್ ಜಾಲವನ್ನು ಬಲಪಡಿಸಲು ಮತ್ತು ಸಾರ್ವಜನಿಕರಿಗೆ ಸೇವೆಗಳನ್ನು ಇನ್ನಷ್ಟು ಸುಲಭವಾಗಿ ತಲುಪಿಸಲು ಭಾರತೀಯ ಅಂಚೆ ಇಲಾಖೆಯು ಹೊಸ ಫ್ರಾಂಚೈಸಿ ಯೋಜನೆ ೨.೦ ಪ್ರಾರಂಭಿಸಿದೆ. ಯೋಜನೆಯು ಸ್ಥಳೀಯ ಅಂಗಡಿಕಾರರು, ಸಣ್ಣ ಉದ್ಯಮಿಗಳು, ಲಾಜಿಸ್ಟಿಕ್ ಸಂಸ್ಥೆಗಳು, ಅಗ್ರಿಗೇಟರ್ ಗಳು ಮತ್ತು ಯುವಕರಿಗೆ ಭಾರತೀಯ ಅಂಚೆಯೊಂದಿಗೆ ಬುಕ್ಕಿಂಗ್, ಪಾರ್ಸೆಲ್ ಡೆಲಿವರಿ ಮತ್ತು ಮನೆಬಾಗಿಲ ಸಂಗ್ರಹಣೆ(Doorstep Collection) ಸೇವೆಗಳನ್ನು ಒದಗಿಸಲು ಅತ್ಯುತ್ತಮ ಸ್ವಯಂ ಉದ್ಯೋಗದ ಹಾಗೂ ಉದ್ಯಮಶೀಲತೆಯ ಅವಕಾಶವನ್ನು ಕಲ್ಪಿಸುತ್ತಿದೆ.
ಆಸಕ್ತ ಅಭ್ಯರ್ಥಿಗಳು ಭಾರತೀಯ ಅಂಚೆಯ ಅಧಿಕೃತ ವೆಬ್ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿಗಳನ್ನು ಪರಿಶೀಲಿಸಿ, ಆಯ್ಕೆಯಾದ ಅಭ್ಯರ್ಥಿಗಳಿಗೆ ೧೫ ದಿನಗಳ ಒಳಗೆ ನಿಶ್ಚಿತಾರ್ಥ ಪತ್ರ (Appointment Letter) ನೀಡಲಾಗುವುದು.
ಹೆಚ್ಚಿನ ವಿವರಗಳಿಗಾಗಿ, ಮಾರ್ಗಸೂಚಿಗಳಿಗಾಗಿ ಹತ್ತಿರದ ಅಂಚೆ ಕಚೇರಿ ಹಾಗೂ ಹಿರಿಯ ಅಂಚೆ ಅಧೀಕ್ಷಕರ ಕಾರ್ಯಾಲಯ, ಬೆಳಗಾವಿ ದೂ.ಸಂ: ೦೮೩೧-೨೪೩೧೮೬೦, ೨೧೬೧೧೨೮ ನ್ನು ಸಂಪರ್ಕಿಸಬಹುದು ಅಥವಾ www.indiapost.gov.in ಜಾಲತಾಣಕ್ಕೆ ಭೇಟಿ ನೀಡಬಹುದು ಎಂದು ಬೆಳಗಾವಿ ಅಂಚೆ ವಿಭಾಗದ ಹಿರಿಯ ಅಂಚೆ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
****
ಈ ಲೇಖನ ಹಂಚಿಕೊಳ್ಳಿ