ರಾಯಬಾಗ ತಾಲ್ಲೂಕಿನ 39 ಕೆರೆ ತುಂಬಿಸುವ ಮಹತ್ವಾಕಾಂಕ್ಷೆಯ ಯೋಜನೆ ಯಶಸ್ವಿ ಅನುಷ್ಠಾನ ಪ್ರಗತಿ - ಸತೀಶ್ ಜಾರಕಿಹೊಳಿ
ರೈತರ ಮುಖದಲ್ಲಿ ಹೊಸ ಭರವಸೆ ಮೂಡಿಸಿದ್ದು, ಸ್ಥಳೀಯರು ಸಚಿವರಿಗೆ ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ರೈತರು ತಮ್ಮ ಶ್ರಮದ ಪ್ರತೀಕವಾಗಿ ಬೆಳೆದ ಸೌತೆಕಾಯಿ ಬೆಳೆಯನ್ನು ಸಚಿವರಿಗೆ ಪ್ರೀತಿಪೂರ್ವಕವಾಗಿ ನೀಡಿ ತಮ್ಮ ಗೌರವವನ್ನು ವ್ಯಕ್ತಪಡಿಸಿದರು
ಅಸ್ಮಿತೆ ವರದಿ, ಅ.01: ರಾಯಬಾಗ ತಾಲೂಕಿನ ಬಾವನಸೌಂದತ್ತಿ ಗ್ರಾಮದ ಸಮೀಪದ ಕೃಷ್ಣಾ ನದಿಯಿಂದ ರಾಯಬಾಗ ತಾಲೂಕಿನ 39 ಕೆರೆಗಳಿಗೆ ನೀರು ತುಂಬುವ ಮಹತ್ವಾಕಾಂಕ್ಷಿ ಹಾಗೂ ದೂರದೃಷ್ಟಿಯ ಯೋಜನೆ ಭರದ ರೂಪದಲ್ಲಿ ಕಾಮಗಾರಿ ಪ್ರಗತಿಯಾಗುತ್ತಿದೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.
ಯೋಜನೆಯ ಅನುಷ್ಠಾನದ ಹಿನ್ನೆಲೆಯಲ್ಲಿ ಇಂದು ರಾಯಬಾಗ ತಾಲ್ಲೂಕಿನ ಹುಬ್ಬರವಾಡಿ, ಮೇಖಳಿ, ದೇವನಕಟ್ಟಿ ಹಾಗೂ ಮಾವಿನಹೊಂಡ ಕೆರೆಗಳಿಗೆ ಭೇಟಿ ನೀಡಿ ಕಾಮಗಾರಿ ಹಾಗೂ ನೀರು ತುಂಬುವ ಪ್ರಗತಿಯನ್ನು ಪರಿಶೀಲಿಸಿ ಮಾಧ್ಯಮಕ್ಕೆ ಮಾಹಿತಿ ನೀಡಿದರು.
ಈ ಹಿಂದೆ ಸಿದ್ಧರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾಗ ಯೋಜನೆಗೆ ಮಂಜೂರಾತಿ ದೊರೆತಿತ್ತು. ಅನೇಕ ಅಡೆತಡೆಗಳಿಂದಾಗಿ ಯೋಜನೆಯ ಅನುಷ್ಠಾನ ವಿಳಂಭವಾಗಿತ್ತು. ಪ್ರಸ್ತುತ ಮತ್ತೇ ಚಾಲನೆ ನೀಡಲಾಗಿದೆ.ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸಿದರೆ ಸುತ್ತಲಿನ ಹಳ್ಳಿಗಳ ದನ ಜಾನುವಾರ ಹಾಗೂ ಕೃಷಿ ಕಾರ್ಯಕ್ಕೆ ಹೆಚ್ಚು ಅನುಕೂಲವಾಗಲಿದೆ. ಜೊತೆಗೆ ಅಂತರ್ಜಲದ ಮಟ್ಟವೂ ಹೆಚ್ಚಾಗಲಿದೆ ಎಂದು ತಿಳಿಸಿದರು.

ಸಚಿವರ ವಿಶೇಷ ಕಾಳಜಿಯಿಂದಾಗಿ ಯೋಜನೆ ಯಶಸ್ಸು ಸಾಧಿಸಿ ಕೆರೆಗಳು ನೀರಿನಿಂದ ಭರ್ತಿಯಾಗುತ್ತಿರುವುದು ರೈತರ ಮುಖದಲ್ಲಿ ಹೊಸ ಭರವಸೆ ಮೂಡಿಸಿದ್ದು, ಸ್ಥಳೀಯರು ಸಚಿವರಿಗೆ ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ರೈತರು ತಮ್ಮ ಶ್ರಮದ ಪ್ರತೀಕವಾಗಿ ಬೆಳೆದ ಸೌತೆಕಾಯಿ ಬೆಳೆಯನ್ನು ಸಚಿವರಿಗೆ ಪ್ರೀತಿಪೂರ್ವಕವಾಗಿ ನೀಡಿ ತಮ್ಮ ಗೌರವವನ್ನು ವ್ಯಕ್ತಪಡಿಸಿದರು.
ರೈತರ ಸಮೃದ್ಧಿ, ನೀರಿನ ಭದ್ರತೆ ಮತ್ತು ಶಾಶ್ವತ ಅಭಿವೃದ್ಧಿಯತ್ತ ನಮ್ಮ ಬದ್ಧತೆ ನಿರಂತರವಾಗಿರಲಿದೆ ಎಂದು ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.
***
ಈ ಲೇಖನ ಹಂಚಿಕೊಳ್ಳಿ