ಬ್ರೇಕಿಂಗ್
ಗಿರೀಶ್ ಕಾರ್ನಾಡರ 'ತುಘಲಕ್' ನಾಟಕದ ಓದು: "ವೇದಿಕೆಯ ಸಿದ್ಧತೆಗೆ ಓದು ಮೊದಲ ಹೆಜ್ಜೆ; ಕಾರ್ನಾಡ್ ರ ನಾಟಕ ಸಮಕಾಲೀನ ವೈರುದ್ಯಗಳ ಪ್ರತಿಬಿಂಬ" ವಿನೋಧ ಜಾಧವ ಅವರಿಗೆ ಪಿಎಚ್.ಡಿ. ಡಾಕ್ಟರೇಟ್ ಬೆಳಗಾವಿಯ ICMR ದಲ್ಲಿ ರಾಷ್ಟ್ರೀಯ ಉನ್ನತ ಮಟ್ಟದ ಸಭೆ - ಆಯುಷ್ - ಆಧುನಿಕ‌ ಔಷಧಿ ಹೊಸ ಪ್ರಯೋಗ ಶಿಕ್ಷಕಿ ಶುಭಾ ಹೆಗಡೆಗೆ ಬೇಲಾ ಟೀಚರ್ಸ್ ಅವಾರ್ಡ್ ಮರಾಠಾ ಎಲ್‌ಐಆರ್‌ಸಿ ಕೇಂದ್ರದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ 'ಛಾತ್ರೋಂ ಕಿ ಗೂಂಜ್' -'ವಿದ್ಯಾರ್ಥಿಗಳ ಪ್ರತಿಧ್ವನಿ' ಅಭಿಯಾನದ ಮೂಲಕ ಶೈಕ್ಷಣಿಕ ಬದಲಾವಣೆಗೆ ಸರ್ಕಾರ ನಿರ್ಧಾರ ಸ್ವಯಂ ಪ್ರೇರಿತ ರಕ್ತದಾನ : 4634 ಯುನಿಟ್ ದಾಖಲಾರ್ಹ ರಕ್ತ ಸಂಗ್ರಹಣೆ ದಲಿತರು ಆರ್ಥಿಕತೆ ಸಬಲತೆಗೆ ಆಧ್ಯತೆ ನೀಡಬೇಕು - ಎಸ್. ಪಿ. ತಳವಾರ ಜನರನ್ನು ವಿಭಜಿಸುವ  ವಿಷಾದನೀಯ ಬೆಳವಣಿಗೆ : ಎಚ್.ಬಿ. ರಾಜಶೇಖರ ಕೂಲಿ ನೇಕಾರ ಕಾರ್ಮಿಕ ಕಲ್ಯಾಣ ಮಂಡಳಿ ಸ್ಥಾಪನೆಗೆ ಕಾರ್ಮಿಕರ  ಸಂಘಟಿತ ಹೋರಾಟ ಗಿರೀಶ್ ಕಾರ್ನಾಡರ 'ತುಘಲಕ್' ನಾಟಕದ ಓದು: "ವೇದಿಕೆಯ ಸಿದ್ಧತೆಗೆ ಓದು ಮೊದಲ ಹೆಜ್ಜೆ; ಕಾರ್ನಾಡ್ ರ ನಾಟಕ ಸಮಕಾಲೀನ ವೈರುದ್ಯಗಳ ಪ್ರತಿಬಿಂಬ" ವಿನೋಧ ಜಾಧವ ಅವರಿಗೆ ಪಿಎಚ್.ಡಿ. ಡಾಕ್ಟರೇಟ್ ಬೆಳಗಾವಿಯ ICMR ದಲ್ಲಿ ರಾಷ್ಟ್ರೀಯ ಉನ್ನತ ಮಟ್ಟದ ಸಭೆ - ಆಯುಷ್ - ಆಧುನಿಕ‌ ಔಷಧಿ ಹೊಸ ಪ್ರಯೋಗ ಶಿಕ್ಷಕಿ ಶುಭಾ ಹೆಗಡೆಗೆ ಬೇಲಾ ಟೀಚರ್ಸ್ ಅವಾರ್ಡ್ ಮರಾಠಾ ಎಲ್‌ಐಆರ್‌ಸಿ ಕೇಂದ್ರದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ 'ಛಾತ್ರೋಂ ಕಿ ಗೂಂಜ್' -'ವಿದ್ಯಾರ್ಥಿಗಳ ಪ್ರತಿಧ್ವನಿ' ಅಭಿಯಾನದ ಮೂಲಕ ಶೈಕ್ಷಣಿಕ ಬದಲಾವಣೆಗೆ ಸರ್ಕಾರ ನಿರ್ಧಾರ ಸ್ವಯಂ ಪ್ರೇರಿತ ರಕ್ತದಾನ : 4634 ಯುನಿಟ್ ದಾಖಲಾರ್ಹ ರಕ್ತ ಸಂಗ್ರಹಣೆ ದಲಿತರು ಆರ್ಥಿಕತೆ ಸಬಲತೆಗೆ ಆಧ್ಯತೆ ನೀಡಬೇಕು - ಎಸ್. ಪಿ. ತಳವಾರ ಜನರನ್ನು ವಿಭಜಿಸುವ  ವಿಷಾದನೀಯ ಬೆಳವಣಿಗೆ : ಎಚ್.ಬಿ. ರಾಜಶೇಖರ ಕೂಲಿ ನೇಕಾರ ಕಾರ್ಮಿಕ ಕಲ್ಯಾಣ ಮಂಡಳಿ ಸ್ಥಾಪನೆಗೆ ಕಾರ್ಮಿಕರ  ಸಂಘಟಿತ ಹೋರಾಟ
19 ಸೆಪ್ಟೆಂ 2026
10 ಜನ ಮಕ್ಕಳು, 50 ಜನ ಮೊಮ್ಮಕ್ಕಳ ಪ್ರೀತಿಯ   ನಿಜಪ್ಪಜ್ಜ ಇನ್ನಿಲ್ಲ
📄 ಬೆಳಗಾವಿ ಜಿಲ್ಲೆಯ ಸುದ್ದಿ
Dr. K N Doddmani · · 134 ವೀಕ್ಷಣೆಗಳು

10 ಜನ ಮಕ್ಕಳು, 50 ಜನ ಮೊಮ್ಮಕ್ಕಳ ಪ್ರೀತಿಯ ನಿಜಪ್ಪಜ್ಜ ಇನ್ನಿಲ್ಲ

ಅಸ್ಮಿತೆ ವರದಿ, ಅ.01: ಹತ್ತು ಮಕ್ಕಳ ತಂದೆಯಾಗಿ, 50 ಜನ ಮೊಮ್ಮಕ್ಕಳನ್ನು ಮಡಿಲಲ್ಲಿ ಆಡಿಸಿದ ಹುಕ್ಕೇರಿ ತಾಲೂಕಿನ ಬಾಡ ಗ್ರಾಮದ ಪ್ರೀತಿಯ ಅಜ್ಜ ನಿಜಪ್ಪ ಶಿವಲಿಂಗ ಜಾಡರ್ ಶುಕ್ರವಾರ ದಿ.31ರಂದು ಬೆಳಗಿನ ಜಾವಾ ಸ್ವಗ್ರಹದಲ್ಲಿ ವಯೋ ಸಹಜ ನಿಧನರಾಗಿದ್ದಾರೆ.

ತುಂಬು ಕುಟುಂಬ, ಅಪಾರ ಬಂಧು - ಬಳಗದ ಶೋಕದ ಮಧ್ಯ ಶುಕ್ರವಾರ ಸಂಜೆ ಸ್ವಗ್ರಾಮದಲ್ಲಿ ಅಜ್ಜನ ಅಂತ್ಯಕ್ರಿಯೆ ನೆರವೇರಿಸಲಾಯಿತು.

ನಿಜಪ್ಪಜ್ಜ 107 ವರ್ಷದ ವರೆಗೆ ಹೆಸರಿಗೆ ತಕ್ಕಂತೆ ನಿಜ ಜೀವನ ನಡೆಸಿ, ಬಾಡ ಗ್ರಾಮ ಹಾಗೂ ಸುತ್ತಲಿನ ಹಳ್ಳಿಗಳಲ್ಲಿ ಹೆಸರುವಾಸಿಯಾಗಿದ್ದರು. ಕೃಷಿ ನಂಬಿ ಬದುಕಿದ ನಿಜಪ್ಪಜ್ಜ ಮಕ್ಕಳಿಗೆ ಮೊಮ್ಮಕ್ಕಳಿಗೆ ಮಣ್ಣಿನ ವಾಸನೆಯ ಬದುಕಿನ ಕ್ರಮ ಬೋಧನೆ ಮಾಡಿಸಿದಾತ. ತುಂಬು ಕುಟುಂಬದ ಘನತೆ ಗೌರವದ ಜೀವನ ವಿಧಾನಕ್ಕೆ ಸುಂದರ ಮಾರ್ಗ ಹಾಕಿಟಿದ್ದನ್ನು ಮೊಮ್ಮಕ್ಕಳು ಬಾಯ್ತುಂಬ ನೆನಪಿಸಿಕೊಳ್ಳುತ್ತಿವೆ.

ಕಡುಬಡತನದಲ್ಲಿ ಜೀವನ ಸವೆಸಿದ ಅಜ್ಜ, ಕುಟುಂಬ ನಿರ್ವಹಣೆಗೆ ಅಂದು ಹರಗಾಪುರದಲ್ಲಿ ಜೀತದಾಳಾಗಿ ಕಷ್ಟದ ದಿನಗಳನ್ನು ಕಳೆದವರು. ಹುಕ್ಕೇರಿ, ಸಂಕೇಶ್ವರ ಸುತ್ತಲಿನ ಪ್ರದೇಶದಲ್ಲಿ ವೀಳ್ಯದೆಲೆ, ತಂಬಾಕು ದೂರದವರೆಗೆ ಹೊತ್ತು ಸಾಗಿ ಮಾರಾಟ ಮಾಡಿದ ಶ್ರಮಜೀವಿ. ಬಾವಿ ತೋಡುವುದನ್ನು ಕಲಿತಿದ್ದ ಅಜ್ಜ ಕೋಣಗಳ ಹೂಡಿ ಮಟ್ಟಿ ನೀರು ಹಾಯಿಸಿ ಬೆಳೆ ಬೆಳೆದಾತ.

ನೆಲ ನಂಬಿ ಬದುಕಿದ ನಿಜಪ್ಪಜ್ಜ ತನ್ನ ನಿರಂತರ ಶ್ರಮದ ಬೆವರಿನಿಂದ ಎರಡುವರೆ ಎಕರೆ ಕೃಷಿಭೂಮಿ ಖರೀದಿಸಿ ಕುಟುಂಬ ಜೀವನ ಗಟ್ಟಿಗೊಳಿಸಿದವರು. ಅಜ್ಜನ ಬೆವರಿನ ಪ್ರತಿಫಲದ ಪರಿಣಾಮ ಇಡೀ ಕುಟುಂಬ ಅನನ್ಯತೆ ಪಡೆದುಕೊಳ್ಳಲು ಸಾಧ್ಯವಾಗಿದೆ.

ಮಕ್ಕಳು ಹೊಲಮನಿ ಮುಂದುವರೆಸಿದರೆ ಮೊಮ್ಮಕ್ಕಳು ಸರ್ಕಾರದ ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ನಿಜಪ್ಪಜ್ಜ ಬೆಳಗಾವಿಯ ಪತ್ರಿಕಾ ಛಾಯಾ ಗ್ರಾಹಕ ಸದಾಶಿವ ಸಂಕಪ್ಪಗೋಳ ಅವರ ತಾಯಿಯ ತಂದೆಯಾಗಿದ್ದು, ಸದಾಶಿವ ಅಜ್ಜನ ಮಮಕಾರದ ಮಡಿಲಿನಲ್ಲಿ ಬೆಳೆದವರು.

ಅಂದು ಸಂಕೇಶ್ವರ , ಹರಗಾಪುರ ಪ್ರದೇಶದಲ್ಲಿ ಅಪ್ಪಣ್ಣಗೌಡ ಪಾಟೀಲ ಹಾಗೂ ಇತರರು ಮುಂದಾಳತ್ವ ವಹಿಸಿ ದೇಶದ ಸ್ವಾತಂತ್ರ್ಯ ಹೋರಾಟ ನಡೆಸುತ್ತಿದ್ದರು. ಈ ಹೋರಾಟದ ಗುಂಪಿನೊಡಗೂಡಿ ಇದ್ದ ನಿಜಪ್ಪಜ್ಜ ಸ್ವಾತಂತ್ರ್ಯಕ್ಕಾಗಿ ಹೊರಾಟ ನಡೆಸಿದ್ದು ವಿಶೇಷ.

ಕಡುಬಡತನದೊಂದಿಗೆ ಸ್ವಾಭಿಮಾನ, ಶ್ರಮ, ಆದರ್ಶಗಳನ್ನು ಕಟ್ಟಿಕೊಂಡು 107 ವರ್ಷಗಳ ವರೆಗೆ ಮೆಚ್ಚುಗೆ ಜೀವನ ನಡೆಸಿದ ನಿಜಪ್ಪಜ್ಜನ ಸಾಹಸದ ಬದುಕು ತಳ ಸಮುದಾಯಕ್ಕೆ ಒಂದು ಮಾದರಿಯಾಗಿದೆ. ಇಂಥ ಹಿರಿಯ ಜೀವಿಯೊಬ್ಬನನ್ನು ಕಳೆದುಕೊಂಡ ಬಾಡ ಊರು ಬಡವಾಗಿದೆ ಎಂದು ಹಿರಿಯರು, ಬಂಧು ಬಳಗ ಕಂಬನಿ ಮಿಡಿದಿದೆ

***

ಈ ಲೇಖನ ಹಂಚಿಕೊಳ್ಳಿ

ಇನ್ನಷ್ಟು ಓದಿ