ರಕ್ಷಣಾ ಭದ್ರತಾ ದಳಕ್ಕೆ (ಡಿಎಸ್‌ಸಿ) ಮಾಜಿ ಸೈನಿಕರ ನೇಮಕಾತಿ
ಬೆಳಗಾವಿಯ ಮರಾಠಾ ಲಘು ಪದಾತಿ ದಳದ ಮಾಜಿ ಸೈನಿಕರ ರಕ್ಷಣಾ ಭದ್ರತಾ ದಳ (ಡಿಎಸ್‌ಸಿ) ನೇಮಕಾತಿ ರ್ಯಾಲಿ ಪೂರ್ಣ
ಬೆಳಗಾವಿಯ ಮರಾಠಾ ಲಘು ಪದಾತಿ ದಳದ ರೆಜಿಮೆಂಟಲ್ ಸೆಂಟರ್ (ಎಮ್ ಎಲ್‌ಐಆರ್‌ಸಿ) ನಲ್ಲಿ ಇದೇ ದಿ. 15 ಮತ್ತು 16 ರಂದು ನಡೆದ ಮಾಜಿ ಸೈನಿಕರ ರಕ್ಷಣಾ ಭದ್ರತಾ ದಳ (ಡಿಎಸ್‌ಸಿ) ನೇಮಕಾತಿ ರ್ಯಾಲಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ ಎಮ್.ಎಲ್.ಐ.ಆರ್.ಸಿ ತಿಳಿಸಿದೆ.
ಮಾಜಿ ಸೈನಿಕರಿಗೆ ರಕ್ಷಣಾ ಭದ್ರತಾ ದಳಕ್ಕೆ ಮರು ನೋಂದಣಿ ಮೂಲಕ ರ ಸೇವೆ ಮುಂದುವರಿಸಲು ಅವಕಾಶ ಕಲ್ಪಿಸಲಾಗಿತ್ತು. ನಿಗದಿತ ಅರ್ಹತಾ ಮಾನದಂಡಗಳು ಮತ್ತು ಕಾರ್ಯವಿಧಾನಗಳಿಗೆ ಅನುಗುಣವಾಗಿ ನೇಮಕಾತಿ ಪ್ರಕ್ರಿಯೆಯನ್ನು ನಡೆಸಲಾಗಿದೆ.

ಆಯ್ಕೆಯಾದ ಅಭ್ಯರ್ಥಿಗಳು ಕಣ್ಣೂರಿನ ರಕ್ಷಣಾ ಭದ್ರತಾ ದಳದ ಕೇಂದ್ರದಲ್ಲಿ ನಾಲ್ಕು ವಾರಗಳ ತರಬೇತಿ ನೀಡಿ ಸೇವಾ ಸಿದ್ಧತೆಗೊಳಿಸಲಾಗುತ್ತದೆ. ನಂತರ, ಅವರನ್ನು ದೇಶಾದ್ಯಂತ ಸಶಸ್ತ್ರ ಪಡೆಗಳ ವಿವಿಧ ಕೇಂದ್ರಗಳಿಗೆ ನಿಯೋಜಿಸಲಾಗುತ್ತದೆ, ಪ್ರತಿ ಕೇಂದ್ರದಲ್ಲಿ ಎರಡು ವರ್ಷಗಳ ವರೆಗೆ ಸೇವಾವಧಿ ನಿಗಧಿಯಾಗಿರುತ್ತದೆ.
ರಕ್ಷಣಾ ಭದ್ರತಾ ದಳಕ್ಕೆ ಮರು ನೇಮಕ ಮಾಜಿ ಸೈನಿಕರಿಗೆ ವರ್ಧಿತ ಆರ್ಥಿಕ ಭದ್ರತೆ, ವೃತ್ತಿ ಪ್ರಗತಿಗೆ ಅವಕಾಶಗಳು, ಬಡ್ತಿಗಳಿಗೆ ಅರ್ಹತೆ ಮತ್ತು MACP ಪ್ರಯೋಜನಗಳು, ಜೊತೆಗೆ ಸೇವೆಯಿಂದ ನಿವೃತ್ತಿಯಾದಾಗ ದ್ವಿ ಪಿಂಚಣಿಯ ಪ್ರಯೋಜನ ಸೇರಿದಂತೆ ಹಲವಾರು ಪ್ರಯೋಜನಗಳನ್ನು ನೀಡಲಾಗುತ್ತದೆ. ಸ್ವಯಂ ಮತ್ತು ಅವಲಂಬಿತ ಕುಟುಂಬ ವರ್ಗಕ್ಕೆ ವೈದ್ಯಕೀಯ ಸೌಲಭ್ಯಗಳು, ರಜೆ ಅರ್ಹತೆಗಳು, ಪ್ರಯಾಣ ರಿಯಾಯಿತಿಗಳು, ವಸತಿ ಮತ್ತು ಪಡಿತರ ಭತ್ಯೆಗಳು, ಮಕ್ಕಳ ಶಿಕ್ಷಣ ಪ್ರಯೋಜನಗಳು, ವಿಮಾ ರಕ್ಷಣೆ ಮತ್ತು ಶಾಶ್ವತ ಆಯೋಗಕ್ಕೆ (ವಿಶೇಷ ಪಟ್ಟಿ) ಆಯ್ಕೆ ಸೇರಿದಂತೆ ಸೇವಾ ಪ್ರಯೋಜನ ಮತ್ತು ಇತರೆ ಅವಕಾಶಗಳನ್ನು ಕಲ್ಪಿಸಲಾಗುತ್ತದೆ ಎಂದು ಎಮ್ಎಲ್ ಐಆರ್ ಸಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
***
ಈ ಲೇಖನ ಹಂಚಿಕೊಳ್ಳಿ