ಬ್ರೇಕಿಂಗ್
ನಾಡಗೀತೆಯಲ್ಲಿ ಬೌದ್ಧ ಧರ್ಮದ ಹೆಸರು ಸೇರಿಸಲು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸರ್ಕಾರಕ್ಕೆ ಮನವಿ ಹಕ್ಕಿ-ಪಿಕ್ಕಿ ಸಮುದಾಯದ ಮೂಲಭೂತ ಸಮಸ್ಯೆಗಳ ಶಾಶ್ವತ ಪರಿಹಾರಕ್ಕಾಗಿ ಸರ್ಕಾರ ಮಟ್ಟದಲ್ಲಿ ಕ್ರಮ - ಸಿಇಓ ಬೆಳಗಾವಿ ಪಾಲಿಕೆಗೆ ಅನುದಾನ ಬಿಡುಗಡೆ ಮಾಡದಂತೆ ಗಡಿ ಕನ್ನಡ ಸೇನೆ ಆಗ್ರಹ ಭಾರತದ ಮೊದಲ ಸರ್ಕಾರಿ ಪ್ರಾಯೋಜಿತ ಕೃತಕ ಬುದ್ಧಿಮತ್ತೆ (AI) ವಿಶ್ವವಿದ್ಯಾಲಯ ಘೋಷಿಸಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅನ್ಯರಿಗೆ ಶಾಶ್ವತ ನಿವಾಸ ಪ್ರಮಾಣಪತ್ರ ನೀಡುವುದು ಸಾಂವಿಧಾನಿಕ ಚೌಕಟ್ಟಿಗೆ ವಿರುದ್ಧವಾಗಿದೆ : ಬಿಜೆಪಿ ಬಸವ ಕಾಯಕಜೀವಿಗಳ ಸಂಘದಿಂದ ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗ್, ಪುಸ್ತಕ ವಿತರಣೆ ಪಾಲಿಕೆಗೆ 250 ಕೋಟಿ ವಿಶೇಷ ಅನುದಾನ ಕೋರಿ ಸಿಎಂ ಗೆ ಮೇಯರ್, ಉಪಮೇಯರ್ ಮನವಿ ಮೂರು ದಿನಗಳ RSS ಬೈಟಕ್ ಮುಕ್ತಾಯ: ಶ್ರೀರಾಮ ಜನ್ಮಭೂಮಿ ಮಂದಿರದ ದಾನ ಪೆಟ್ಟಿಗೆಯ ಕಾಣಿಕೆಯ ಅಕ್ರಮಕ್ಕೆ ಖೇದ ಎಸ್‌ಐಆರ್ (SIR) ನಮೂನೆಯನ್ನು ಭರ್ತಿ ಮಾಡಿ ಸಲ್ಲಿಸಿದೆ ಸಚಿವ ಸತೀಶ್ ಜಾರಕಿಹೊಳಿ ವೈಜ್ಞಾನಿಕತೆ ಶಿಕ್ಷಣದಲ್ಲಿ ಬರದೆ ಹೋದರೆ ಮೌಢ್ಯಗಳು ಹಾಗೆ ಮುಂದುವರಿಯುವಂತ ಕೆಲಸಗಳು ನಡೆಯುತ್ತದೆ - ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ನಾಡಗೀತೆಯಲ್ಲಿ ಬೌದ್ಧ ಧರ್ಮದ ಹೆಸರು ಸೇರಿಸಲು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸರ್ಕಾರಕ್ಕೆ ಮನವಿ ಹಕ್ಕಿ-ಪಿಕ್ಕಿ ಸಮುದಾಯದ ಮೂಲಭೂತ ಸಮಸ್ಯೆಗಳ ಶಾಶ್ವತ ಪರಿಹಾರಕ್ಕಾಗಿ ಸರ್ಕಾರ ಮಟ್ಟದಲ್ಲಿ ಕ್ರಮ - ಸಿಇಓ ಬೆಳಗಾವಿ ಪಾಲಿಕೆಗೆ ಅನುದಾನ ಬಿಡುಗಡೆ ಮಾಡದಂತೆ ಗಡಿ ಕನ್ನಡ ಸೇನೆ ಆಗ್ರಹ ಭಾರತದ ಮೊದಲ ಸರ್ಕಾರಿ ಪ್ರಾಯೋಜಿತ ಕೃತಕ ಬುದ್ಧಿಮತ್ತೆ (AI) ವಿಶ್ವವಿದ್ಯಾಲಯ ಘೋಷಿಸಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅನ್ಯರಿಗೆ ಶಾಶ್ವತ ನಿವಾಸ ಪ್ರಮಾಣಪತ್ರ ನೀಡುವುದು ಸಾಂವಿಧಾನಿಕ ಚೌಕಟ್ಟಿಗೆ ವಿರುದ್ಧವಾಗಿದೆ : ಬಿಜೆಪಿ ಬಸವ ಕಾಯಕಜೀವಿಗಳ ಸಂಘದಿಂದ ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗ್, ಪುಸ್ತಕ ವಿತರಣೆ ಪಾಲಿಕೆಗೆ 250 ಕೋಟಿ ವಿಶೇಷ ಅನುದಾನ ಕೋರಿ ಸಿಎಂ ಗೆ ಮೇಯರ್, ಉಪಮೇಯರ್ ಮನವಿ ಮೂರು ದಿನಗಳ RSS ಬೈಟಕ್ ಮುಕ್ತಾಯ: ಶ್ರೀರಾಮ ಜನ್ಮಭೂಮಿ ಮಂದಿರದ ದಾನ ಪೆಟ್ಟಿಗೆಯ ಕಾಣಿಕೆಯ ಅಕ್ರಮಕ್ಕೆ ಖೇದ ಎಸ್‌ಐಆರ್ (SIR) ನಮೂನೆಯನ್ನು ಭರ್ತಿ ಮಾಡಿ ಸಲ್ಲಿಸಿದೆ ಸಚಿವ ಸತೀಶ್ ಜಾರಕಿಹೊಳಿ ವೈಜ್ಞಾನಿಕತೆ ಶಿಕ್ಷಣದಲ್ಲಿ ಬರದೆ ಹೋದರೆ ಮೌಢ್ಯಗಳು ಹಾಗೆ ಮುಂದುವರಿಯುವಂತ ಕೆಲಸಗಳು ನಡೆಯುತ್ತದೆ - ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ
16 ಜುಲೈ 2026
ಬೆಳಗಾವಿ ಅರಣ್ಯ ವಲಯದ 7 ಜಲಪಾತ ವೀಕ್ಷಣೆಗೆ  ಇನ್ನೊಂದು ತಿಂಗಳಲ್ಲಿ ಪರಿಸರ ಸ್ನೇಹಿ ಇಕೋ ಟೂರಿಸಂ ಅವಕಾಶ : ಜಿಲ್ಲಾಧಿಕಾರಿ ಮೊಹಮ್ಮದ ರೋಷನ್‌   
🎭 ಸಾಂಸ್ಕೃತಿಕ
Dr. K N Doddmani · · 132 ವೀಕ್ಷಣೆಗಳು

ಬೆಳಗಾವಿ ಅರಣ್ಯ ವಲಯದ 7 ಜಲಪಾತ ವೀಕ್ಷಣೆಗೆ  ಇನ್ನೊಂದು ತಿಂಗಳಲ್ಲಿ ಪರಿಸರ ಸ್ನೇಹಿ ಇಕೋ ಟೂರಿಸಂ ಅವಕಾಶ : ಜಿಲ್ಲಾಧಿಕಾರಿ ಮೊಹಮ್ಮದ ರೋಷನ್‌  

ಅಸ್ಮಿತೆ ವರದಿ, ಜು.08: ವಿಶ್ವವಿಖ್ಯಾತ ಗೋಕಾಕ ಜಲಪಾತ, ಗೊಡಚಿನಮಲ್ಕಿ, ಖಾನಾಪೂರ ತಾಲೂಕಿನಲ್ಲಿ ಕಳಸಾ ಬಂಡೂರಿ ನಾಲಾ ವ್ಯಾಪ್ತಿಯ ಚಿಕಲೆ, ಭೀಮಗಡ ಜಲಪಾತಗಳು ಸೇರಿದಂತೆ  ಗಡಿಭಾಗದಲ್ಲಿನ ಮಹಾರಾಷ್ಟ್ರದಲ್ಲಿರುವ ಜಲಪಾತಗಳು ಸೇರಿದಂತೆ 7 ಜಲಪಾತಗಳ ವೀಕ್ಷಣೆಗೆ  ಇನ್ನು ಒಂದು ತಿಂಗಳಲ್ಲಿ ಪರಿಸರ ಸ್ನೇಹಿ ಇಕೋ ಟೂರಿಸಂ ಅನುಕೂಲತೆಯನ್ನು ಜಾರಿಗೊಳಿಸಲಾಗುವುದು ಎಂದು ಬೆಳಗಾವಿ ಜಿಲ್ಲಾ ಪ್ರವಾಸೋದ್ಯಮ ಪ್ರಾಧಿಕಾರದ ಅಧ್ಯಕ್ಷರೂ ಆದ  ಜಿಲ್ಲಾಧಿಕಾರಿ ಮೊಹಮ್ಮದ ರೋಷನ್‌ ತಿಳಿಸಿದ್ದಾರೆ.

ದೂರದರ್ಶನ ಹಾಗೂ ಆಕಾಶವಾಣಿಗೆ ಈ ಬಗ್ಗೆ ಮಾಹಿತಿ ನೀಡಿರುವ ಅವರು, ಪ್ರತಿ ಮಳೆಗಾಲದಲ್ಲಿ ಪ್ರವಾಸಿಗರ ಸುರಕ್ಷತೆ ಹಾಗೂ ಪರಿಸರ ಹಿತರಕ್ಷಣೆಯ ದೃಷ್ಟಿಯಿಂದ ಬೆಳಗಾವಿ ಅರಣ್ಯ  ಪ್ರವೇಶ ಹಾಗೂ  ಜಲಪಾತಗಳಿಗೆ  ತೆರಳುವುದನ್ನು ನಿಷೇಧಿಸಲಾಗುತ್ತದೆ. ಆದರೆ, ಪಶ್ಚಿಮ ಘಟ್ಟ ಪ್ರಾಕೃತಿಕ ರಮ್ಯೆತೆ ಹಾಗೂ ಜಲಪಾತಗಳ ಮನಮೋಹಕತೆಯನ್ನು ಪ್ರವಾಸಿಗರು ಮಳೆಗಾಲದಲ್ಲಿಯೇ ವೀಕ್ಷಿಸಬೇಕಾಗುತ್ತದೆ. ಪ್ರವಾಸಿಗರ ಈ ಅಭಿಲಾಷೆಯನ್ನು ಈಡೇರಿಸುವ ಉದ್ಧೇಶದಿಂದ ಇಕೋ ಟೂರಿಸಂ ಜಾರಿಗೊಳಿಸಿ ನಿರ್ಧಿಷ್ಟ ಸಂಖ್ಯೆಯ ವೀಕ್ಷಕರ ಗುಂಪುಗಳ ಮೂಲಕ ಅವಕಾಶ ಕಲ್ಪಿಸಲು ಉದ್ದೇಶಿಸಲಾಗಿದೆ.  ಸದ್ಯದಲ್ಲಿಯೇ ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳು ಹಾಗೂ ಇತರ ಸದಸ್ಯರೊಂದಿಗೆ ಸಭೆ ನಡೆಸಿ  ಸೂಕ್ತ ಮಾರ್ಗ ಸೂಚಿ (ರೋಡ್‌ ಮ್ಯಾಪ್‌ ) ಸಿದ್ಧಗೊಳಿಸಲಾಗುವುದು.  ನಾಳೆ ಬೆಳಗಾವಿಗೆ ಆಗಮಿಸಲಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರ ಗಮನಕ್ಕೆ ತಂದು ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

ಪ್ರಾಕೃತಿ ಸೌಂದರ್ಯ: ಪಶ್ಚಿಮ ಘಟ್ಟದ ಸೆರಗಿನ ಅಂಚಿನಲ್ಲಿರುವ ಬೆಳಗಾವಿ ಹಾಗೂ ನಾಡಿನ ಪ್ರವಾಸಿಗರಿಗೆ ಒಂದು ಸುಂದರವಾದ ಪ್ರಾಕೃತಿಕ ತಾಣವಾಗಿದೆ. ಬೆಳಗಾವಿ ಹಾಗೂ ಖಾನಾಪೂರ ಅರಣ್ಯ ವಲಯ ವೈವಿದ್ಯಮಯ ನಿಸರ್ಗ ಸೌಂದರ್ಯವಿದ್ದು, ಅನೇಕ ಜಲಪಾತಗಳು ಇದಕ್ಕೆ ಕಳಸವಿಟ್ಟಂತೆ ಇವೆ. ಆದರೆ, ವೀಕ್ಷಣೆಗೆ ಹೇಳಿಕೊಳ್ಳುವ ಅನುಕೂಲತೆ ಹಾಗೂ ಸುರಕ್ಷತೆಯ ಕೊರತೆಯಿಂದ ವೀಕ್ಷಣೆಗೆ ಸಾಧ್ಯವಾಗುತ್ತಿಲ್ಲ. ಪ್ರಸ್ತುತ ಜಿಲ್ಲಾಧಿಕಾರಿ ಮೊಹಮ್ಮದ ರೋಷನ್‌ ಅವರ ಮಹತ್ವಾಕಾಂಕ್ಷೆಯ ಯೋಜನೆ ಪರಿಣಾಮಕಾರಿಯಾಗಿ ಜಾರಿಗೊಂಡರೆ ನಿಸರ್ಗ ಪ್ರಿಯ ಪ್ರವಾಸಿಗರಿಗೆ ಉತ್ತಮ ಅವಕಾಶ ದೊರೆತಂತಾಗುತ್ತದೆ.

ಈ ಲೇಖನ ಹಂಚಿಕೊಳ್ಳಿ

ಇನ್ನಷ್ಟು ಓದಿ

ನಾಡಗೀತೆಯಲ್ಲಿ ಬೌದ್ಧ ಧರ್ಮದ ಹೆಸರು ಸೇರಿಸಲು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸರ್ಕಾರಕ್ಕೆ ಮನವಿ ಸಾಂಸ್ಕೃತಿಕ

ನಾಡಗೀತೆಯಲ್ಲಿ ಬೌದ್ಧ ಧರ್ಮದ ಹೆಸರು ಸೇರಿಸಲು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸರ್ಕಾರಕ್ಕೆ ಮನವಿ

ಈ ಬಗ್ಗೆ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಅವರು ಆಕಾಶವಾಣಿಯೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ.

Admin
ಡಾ. ರಾಜಕುಮಾರ ಸಾಂ‍ಸ್ಕೃತಿಕ ವ್ಯಕ್ತಿತ್ವ ಬಿಂಬಿಸಿದ TV5 ವಾಹಿನಿ ಸಾಂಸ್ಕೃತಿಕ

ಡಾ. ರಾಜಕುಮಾರ ಸಾಂ‍ಸ್ಕೃತಿಕ ವ್ಯಕ್ತಿತ್ವ ಬಿಂಬಿಸಿದ TV5 ವಾಹಿನಿ

ಅಕ್ಷರ ಜಗತ್ತು, ಬುದ್ಧಿವಂತರ ವಲಯ ವಿರೋಧಿಸುತ್ತ ರಾಜ್‌ ಸಿನಿಮಾಗಳನ್ನು ವಿರೋಧಿಸುವುದರ ಮೂಲಕ ಅವರು ಕಟ್ಟಿಕೊಟ್ಟ ಸಾಂಸ್ಕೃತಿಕ ಚೇತನವನ್ನು ಕುಂದಿಸಲು ಪ್ರಯತ್ನಿಸಿದರೂ ಅದು ಸಾಧ್ಯವಾಗದೇ  ನಿಜವಾದ ಪ್ರಜ್ಞಾವಂತ ಅಕ್ಷರ ಸಂಸ್ಕೃತಿ ಅವರ ಸಾಂಸ್ಕೃತಿಕ ಶಕ್ತಿಯವನ್ನು ಒಪ್ಪಿ ಅಪ್ಪಿಕೊಳ್ಳುವುದರ ಮೂಲಕ ಸುಮಾರು ೮೦ ಹೆಚ್ಚು ಅವರ ಕುರಿತು ಕೃತಿಗಳನ್ನು ನೀಡಿದೆ. ಇಷ್ಟೊಂದು ಕೃತಿಗಳು ಯಾವ ಕಲಾವಿದನಿಗೂ ಸಾಧ್ಯವಾಗಿಲ್ಲ.

Admin