ಬಸವ ಕಾಯಕಜೀವಿಗಳ ಸಂಘದಿಂದ ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗ್, ಪುಸ್ತಕ ವಿತರಣೆ
ಅಸ್ಮಿತೆ ವರದಿ, ಜು.13: ಬೆಳಗಾವಿಯಲ್ಲಿ ಸಾಮಾಜಿಕ ಕೆಲಸಗಳ ಮೂಲಕ ಗುರುತಿಸಿಕೊಂಡಿರುವ, ಬಸವ ಕಾಯಕ ಜೀವಿಗಳ ಸಂಘವು ಬೆಳಗಾವಿ ತಾಲೂಕಿನ ಚಂದನ ಹೊಸೂರು ಗ್ರಾಮದಲ್ಲಿ ಸೋಮವಾರ ವಿದ್ಯಾರ್ಥಿಗಳಿಗೆ ಪುಸ್ತಕ, ಬ್ಯಾಗ್, ಪೆನ್ ಸೇರಿ ಶೈಕ್ಷಣಿಕ ಸಾಮಗ್ರಿಗಳನ್ನು ವಿತರಣೆ ಮಾಡಿದರು. ಇವರ ಕಾರ್ಯಕ್ಕೆ ಪೋಷಕರು ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ವೇಳೆ ಮಾತನಾಡಿದ ರಾಷ್ಟ್ರೀಯ ಬಸವದಾಳದ ಕಾರ್ಯದರ್ಶಿ ಆನಂದ್ ಗುಡಸ ಇಂದಿನ ಮಕ್ಕಳೇ ಮುಂದಿನ ನಾಯಕರು. ಮಕ್ಕಳ ಕಲಿಕೆಗೆ ಅನುಕೂಲ ಆಗುವ ನಿಟ್ಟಿನಲ್ಲಿ ಬಸವಕಾಯಕ ಜೀವಿಗಳ ಸಂಘದಿಂದ ಕಲಿಕಾ ಸಾಮಗ್ರಿಗಳನ್ನು ವಿತರಣೆ ಮಾಡಲಾಗಿದೆ. ಇವುಗಳ ಸದುಪಯೋಗ ಪಡೆದುಕೊಂಡು, ಒಳ್ಳೆಯ ಶೈಕ್ಷಣಿಕ ಸಾಧನೆ ಮಾಡಬೇಕು. ಭವಿಷ್ಯದಲ್ಲಿ ಉತ್ತಮ ಪ್ರಜೆಗಳಾಗಿ, ಸಮಾಜಕ್ಕೆ ಬೆಳಕಾಗಬೇಕು ಎಂದು ಆಶಿಸಿದರು.
ಬಸವ ಕಾಯಕ ಜೀವಿಗಳ ಸಂಘವು ಸ್ಮಶಾನ ಸ್ವಚ್ಛತೆ, ಆರೋಗ್ಯ ತಪಾಸಣೆ, ಮುಕ್ತಿವಾಹನ (ಶವ ವಾಹನ) ಸೌಲಭ್ಯ ಸೇರಿದಂತೆ ಹಲವು ಸಮಾಜಸೇವೆಯಲ್ಲಿ ಗುರುತಿಸಿಕೊಂಡಿದೆ. ಇತ್ತಿಚೆಗೆ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ ರಕ್ತದಾನ ಮಾಡಿದ 132 ಜನರಿಗೆ 1 ಲಕ್ಷ ರೂಪಾಯಿವರೆಗಿನ ಉಚಿತ ಆರೋಗ್ಯ ವಿಮೆಯನ್ನು ನೀಡಲಾಗಿದೆ. ಹೀಗೆ ಸಾಮಾಜಿಕ ಕಾರ್ಯಗಳು ಮುಂದುವರಿಯಲಿವೆ ಎಂದು ಆನಂದ ಗುಡಸ ತಿಳಿಸಿದರು.

ಇವೆಂಟ್ ಮ್ಯಾನೇಜರ್ ಗಳಾದ ಬಸವರಾಜ ಹಂಪಣ್ಣವರ, ಶ್ಯಾಮ್ ಗೌಡರ, ಬಸವ ಕಾಯಕ ಜೀವಿಗಳ ಸಂಘದ ಅಧ್ಯಕ್ಷ ಸೂರ್ಯಕಾಂತ ಭಾಂವಿ, ರಾಷ್ಟ್ರೀಯ ಬಸವದಳ ಬೆಳಗಾವಿ ಜಿಲ್ಲಾಧ್ಯಕ್ಷ ಅಶೋಕ್ ಬೆಂಡಿಗೇರಿ, ಪದಾಧಿಕಾರಿಗಳಾದ ಸಂತೋಷ ಗುಡಸ, ಕೆ. ಶರಣ ಪ್ರಸಾದ್, ಮಹಾಂತೇಶ ಗುಡಸ, ಬಸವರಾಜ ಗುಡಸ, ಸಿದ್ದಾರ್ಥ್ ಗುಡಸ, ಮಲ್ಲಿಕಾರ್ಜುನ ಆಡಿನ್, ವೀರೇಶ್ ಉಳವಿ, ಶ್ರೀರಾಜ್ ಹಾವನ್ನವರ, ನೀತಿನ್ ಗುಡಸ, ಶರಣು ಲಿಂಗಾಯತ, ಸಂಕಲ್ಪ ಗುಡಸ, ಶಿವರಾಜ್ ಎಸ್, ನಂದ ಕುಮಾರ್ ಕೆ, ಶಾಲೆಯ ಮುಖ್ಯೋಪಾಧ್ಯಾಯರಾದ ಆಶಾ ಹೊತ್ತಗಿಮಠ, ನಿವೃತ್ತ ಶಿಕ್ಷಕಿ ಶ್ರೀದೇವಿ ನರಗುಂದ, ಸದೆಪ್ಪ ತಾನ್ಸಿ, ಯಲ್ಲಪ್ಪ ಪಾಟೀಲ, ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
**
ಈ ಲೇಖನ ಹಂಚಿಕೊಳ್ಳಿ