ಬ್ರೇಕಿಂಗ್
ಗುಜರಾತ: ಸಮುದ್ರದ ಅಲೆಯಂತೆ ಜೋಲಿ ಹೊಡೆಯುತ್ತ ಕುತೂಹಲ ಕೆರಳಿಸಿರುವ ಬಾವಿ ನೀರು ಅಂಚೆ ಇಲಾಖೆಯಿಂದ ಡೆಲಿವರಿ ಪಾಲುದಾರರಿಗಾಗಿ ಆನ್ಲೈನ್ ಅರ್ಜಿ ಆಹ್ವಾನ  ರಾಷ್ಟ್ರೀಯ ಜೂನಿಯರ್ ಚಾಂಪಿಯನ್ ಶಿಪ್ ಈಜು ಸ್ಪರ್ಧೆಗೆ ಬೆಳಗಾವಿ ಅಮನ್ ಸುಣಗಾರ ಆಯ್ಕೆ ಕೆಪಿಸಿಸಿ ಎಸ್‌ಸಿ ವಿಭಾಗದ ರಾಜ್ಯ ನಿರ್ದೇಶಕರಾಗಿ ಮಲ್ಲೇಶ ಚೌಗುಲೆ ನೇಮಕ ಬೆಳಗಾವಿ ಜಿಲ್ಲೆಯಲ್ಲಿ ಶೇ.95 ರಷ್ಟು ಬಿತ್ತನೆ : ಜಿಪಂ ಸಿಇಒ ರಾಹುಲ್ ಶಿಂಧೆ ನೀರು ವ್ಯರ್ಥವಾಗದಂತೆ ಕಾಲುವೆಗಳ ತ್ವರಿತ ನಿರ್ವಹಣೆಗೆ ಸತೀಶ್ ಜಾರಕಿಹೊಳಿ ಸೂಚನೆ ಬೆಳಗಾವಿ : ಪೊಲೀಸ್‌ ಪೇದೆ ನೇಮಕಾತಿ ಪರೀಕ್ಷೆಗೆ ೬೧ ಕೇಂದ್ರಗಳಲ್ಲಿ ೨೫ ಸಾವಿರಕ್ಕೂ ಅಧಿಕ ಸಂಖ್ಯೆ ಅಭ್ಯರ್ಥಿಗಳು ರಾಯಬಾಗ ತಾಲ್ಲೂಕಿನ 39 ಕೆರೆ ತುಂಬಿಸುವ ಮಹತ್ವಾಕಾಂಕ್ಷೆಯ ಯೋಜನೆ ಯಶಸ್ವಿ ಅನುಷ್ಠಾನ ಪ್ರಗತಿ - ಸತೀಶ್ ಜಾರಕಿಹೊಳಿ 10 ಜನ ಮಕ್ಕಳು, 50 ಜನ ಮೊಮ್ಮಕ್ಕಳ ಪ್ರೀತಿಯ ನಿಜಪ್ಪಜ್ಜ ಇನ್ನಿಲ್ಲ 70 ಸಾವಿರ ಹುದ್ದೆಗಳು, 35 ಲಕ್ಷ ಅರ್ಜಿ ನಿರೀಕ್ಷೆ: ಇಡೀ ದೇಶಕ್ಕೆ ಮಾದರಿಯಲ್ಲಿ ಅತ್ಯಂತ ಪಾರದರ್ಶಕ ನೇಮಕಾತಿ : ಸಿಎಮ್ ನಿರ್ಧಾರ ಗುಜರಾತ: ಸಮುದ್ರದ ಅಲೆಯಂತೆ ಜೋಲಿ ಹೊಡೆಯುತ್ತ ಕುತೂಹಲ ಕೆರಳಿಸಿರುವ ಬಾವಿ ನೀರು ಅಂಚೆ ಇಲಾಖೆಯಿಂದ ಡೆಲಿವರಿ ಪಾಲುದಾರರಿಗಾಗಿ ಆನ್ಲೈನ್ ಅರ್ಜಿ ಆಹ್ವಾನ  ರಾಷ್ಟ್ರೀಯ ಜೂನಿಯರ್ ಚಾಂಪಿಯನ್ ಶಿಪ್ ಈಜು ಸ್ಪರ್ಧೆಗೆ ಬೆಳಗಾವಿ ಅಮನ್ ಸುಣಗಾರ ಆಯ್ಕೆ ಕೆಪಿಸಿಸಿ ಎಸ್‌ಸಿ ವಿಭಾಗದ ರಾಜ್ಯ ನಿರ್ದೇಶಕರಾಗಿ ಮಲ್ಲೇಶ ಚೌಗುಲೆ ನೇಮಕ ಬೆಳಗಾವಿ ಜಿಲ್ಲೆಯಲ್ಲಿ ಶೇ.95 ರಷ್ಟು ಬಿತ್ತನೆ : ಜಿಪಂ ಸಿಇಒ ರಾಹುಲ್ ಶಿಂಧೆ ನೀರು ವ್ಯರ್ಥವಾಗದಂತೆ ಕಾಲುವೆಗಳ ತ್ವರಿತ ನಿರ್ವಹಣೆಗೆ ಸತೀಶ್ ಜಾರಕಿಹೊಳಿ ಸೂಚನೆ ಬೆಳಗಾವಿ : ಪೊಲೀಸ್‌ ಪೇದೆ ನೇಮಕಾತಿ ಪರೀಕ್ಷೆಗೆ ೬೧ ಕೇಂದ್ರಗಳಲ್ಲಿ ೨೫ ಸಾವಿರಕ್ಕೂ ಅಧಿಕ ಸಂಖ್ಯೆ ಅಭ್ಯರ್ಥಿಗಳು ರಾಯಬಾಗ ತಾಲ್ಲೂಕಿನ 39 ಕೆರೆ ತುಂಬಿಸುವ ಮಹತ್ವಾಕಾಂಕ್ಷೆಯ ಯೋಜನೆ ಯಶಸ್ವಿ ಅನುಷ್ಠಾನ ಪ್ರಗತಿ - ಸತೀಶ್ ಜಾರಕಿಹೊಳಿ 10 ಜನ ಮಕ್ಕಳು, 50 ಜನ ಮೊಮ್ಮಕ್ಕಳ ಪ್ರೀತಿಯ ನಿಜಪ್ಪಜ್ಜ ಇನ್ನಿಲ್ಲ 70 ಸಾವಿರ ಹುದ್ದೆಗಳು, 35 ಲಕ್ಷ ಅರ್ಜಿ ನಿರೀಕ್ಷೆ: ಇಡೀ ದೇಶಕ್ಕೆ ಮಾದರಿಯಲ್ಲಿ ಅತ್ಯಂತ ಪಾರದರ್ಶಕ ನೇಮಕಾತಿ : ಸಿಎಮ್ ನಿರ್ಧಾರ
07 ಆಗಸ್ಟ್ 2026
ಗುಜರಾತ: ಸಮುದ್ರದ ಅಲೆಯಂತೆ ಜೋಲಿ ಹೊಡೆಯುತ್ತ ಕುತೂಹಲ ಕೆರಳಿಸಿರುವ ಬಾವಿ ನೀರು
🔬 ವಿಜ್ಞಾನ - ತಂತ್ರಜ್ಞಾನ
Dr. K N Doddmani · · 94 ವೀಕ್ಷಣೆಗಳು

ಗುಜರಾತ: ಸಮುದ್ರದ ಅಲೆಯಂತೆ ಜೋಲಿ ಹೊಡೆಯುತ್ತ ಕುತೂಹಲ ಕೆರಳಿಸಿರುವ ಬಾವಿ ನೀರು

ಅಸ್ಮಿತೆ ವರದಿ, ಅ.07:  ಗುಜರಾತಿನ ಬಾವಿಯಲ್ಲಿನ ನೀರು ಸಮುದ್ರದ ಅಲೆಗಳಂತೆ ಅಲುಗಾಡುತ್ತಿರುವ ಘಟನೆ ಮೋರ್ಬಿ ಜಿಲ್ಲೆಯ ವಿರ್ಪಾರ್ಡಾ  ಗ್ರಾಮದಲ್ಲಿ ನಡೆದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ  ವೈರಲ್ ಆಗಿ, ಸಾರ್ವಜನಿಕರ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

ಇದು ಸಮುದ್ರದ ನೀರು ನೇರವಾಗಿ ಬಾವಿಗೆ ಬರುತ್ತಿದೆ ಎಂಬುದು ಇನ್ನೂ ದೃಢಪಟ್ಟಿಲ್ಲ. ಬಾವಿಯ ನೀರಿನಲ್ಲಿ ನಿರಂತರ ಅಲೆಗಳಂತೆ ಚಲನೆ ಕಂಡುಬಂದಿದ್ದು, ಕಾರಣವನ್ನು ತಜ್ಞರು ಪರಿಶೀಲಿಸುತ್ತಿದ್ದಾರೆ. ಬಾವಿ ನೀರು ಅಲೆಗಳಂತೆ ಚಲಿಸುತ್ತಿರುವ ಬಗ್ಗೆ ಜಿಲ್ಲಾಧಿಕಾರಿ ತನಿಖೆಗೆ ಸೂಚಿಸಿದ್ದಾರೆ.

ಜಿಲ್ಲಾಧಿಕಾರಿಗಳ ಸೂಚನೆಯಂತೆ Groundwater Research Institute (GWRI) ತಂಡವು ಬಾವಿಯನ್ನು ಪರಿಶೀಲಿಸಿ, ಈ ಅಸಹಜ ನೀರಿನ ಚಲನೆಗೆ ಭೂಗರ್ಭದ ನೀರಿನ ಒತ್ತಡ, ಭೂವೈಜ್ಞಾನಿಕ ಕಾರಣ ಅಥವಾ ಇತರ ಪರಿಸರ ಕಾರಣವಿದೆಯೇ ಎಂಬುದನ್ನು ಪತ್ತೆಹಚ್ಚಲಿದೆ ಎಂದಿದ್ದಾರೆ.

ಈವರೆಗೆ ನಿಖರ ಕಾರಣವನ್ನು ಅಧಿಕೃತವಾಗಿ ಘೋಷಿಸಲಾಗಿಲ್ಲ. ಅಲ್ಲದೆ, ಆ ಪ್ರದೇಶದಲ್ಲಿ ಇತ್ತೀಚಿನ ಭೂಕಂಪನದ ದಾಖಲೆ ಇಲ್ಲ ಎಂದು ವರದಿಯಾಗಿದೆ.

 ಗುಜರಾತಿನ ಆ ಬಾವಿಯಲ್ಲಿ ಸಮುದ್ರದ ಅಲೆಗಳಂತೆ ನೀರು ಅಲುಗಾಡಲು ಸಾಧ್ಯವಿರುವ ಸಾಮಾನ್ಯ ಕಾರಣಗಳನ್ನು ಹೇಳಲಾಗುತ್ತದೆ.

ಭೂಗರ್ಭದ ನೀರಿನ ಚಲನೆ: ಬಾವಿಯ ಕೆಳಭಾಗದಲ್ಲಿ ನೀರು ಹರಿಯುತ್ತಿದ್ದರೆ ಮೇಲ್ಮೈಯಲ್ಲಿ ಅಲೆಗಳಂತೆ ಕಾಣಬಹುದು.

ಭೂಗರ್ಭದ ಒತ್ತಡ : ಕೆಳಗಿನ ನೀರಿನ ಒತ್ತಡದಲ್ಲಿ ಬದಲಾವಣೆ ಉಂಟಾದರೆ ನೀರು ಮೇಲಕ್ಕೆ-ಕೆಳಕ್ಕೆ ಚಲಿಸಬಹುದು.

ಜ್ವಾರಭಾಟೆಯ ಪ್ರಭಾವ: ಕರಾವಳಿ ಪ್ರದೇಶಗಳಲ್ಲಿ ಸಮುದ್ರದ ಜ್ವಾರಭಾಟೆ ಅಂತರ್ಜಲದ ಮಟ್ಟದ ಮೇಲೆ ಪರಿಣಾಮ ಬೀರಬಹುದು.

ಭೂಗರ್ಭದ ಬಿರುಕುಗಳು/ಗುಹೆಗಳು: ಬಾವಿ ಭೂಗರ್ಭದ ನೀರಿನ ಮಾರ್ಗಕ್ಕೆ ಸಂಪರ್ಕ ಹೊಂದಿದ್ದರೆ ನೀರಿನ ಚಲನೆ ಹೆಚ್ಚಾಗಿ ಕಾಣಬಹುದು.

ಸಣ್ಣ ಭೂಕಂಪನ ಅಥವಾ ಭೂಗರ್ಭದ ಕಂಪನ: ನಮಗೆ ಅನುಭವವಾಗದಷ್ಟು ಸಣ್ಣ ಕಂಪನವೂ ನೀರಿನಲ್ಲಿ ಅಲೆಗಳನ್ನು ಉಂಟುಮಾಡಬಹುದು.

ಗಾಳಿ ಅಥವಾ ಬಾವಿಯೊಳಗಿನ ಅನಿಲದ ಚಲನೆ: ಕೆಲ ಸಂದರ್ಭಗಳಲ್ಲಿ ಇವು ಕೂಡ ನೀರಿನ ಮೇಲ್ಮೈಯಲ್ಲಿ ಅಲೆಗಳನ್ನು ಉಂಟುಮಾಡಬಹುದು.

ಮುಖ್ಯವಾಗಿ: ನೀರು ಅಲೆಗಳಂತೆ ಕಾಣುತ್ತಿದೆ ಎಂದ ಮಾತ್ರಕ್ಕೆ ಸಮುದ್ರದ ನೀರು ಬಾವಿಗೆ ನೇರವಾಗಿ ಬರುತ್ತಿದೆ ಎಂದು ಹೇಳಲಾಗುವುದಿಲ್ಲ. ತಜ್ಞರ ಪರಿಶೀಲನೆಯ ನಂತರವೇ ನಿಖರ ಕಾರಣ ತಿಳಿಯುತ್ತದೆ.

**

ಈ ಲೇಖನ ಹಂಚಿಕೊಳ್ಳಿ

ಇನ್ನಷ್ಟು ಓದಿ

ಭಾರತದ ಮೊದಲ ಸರ್ಕಾರಿ ಪ್ರಾಯೋಜಿತ ಕೃತಕ ಬುದ್ಧಿಮತ್ತೆ (AI) ವಿಶ್ವವಿದ್ಯಾಲಯ ಘೋಷಿಸಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿಜ್ಞಾನ - ತಂತ್ರಜ್ಞಾನ

ಭಾರತದ ಮೊದಲ ಸರ್ಕಾರಿ ಪ್ರಾಯೋಜಿತ ಕೃತಕ ಬುದ್ಧಿಮತ್ತೆ (AI) ವಿಶ್ವವಿದ್ಯಾಲಯ ಘೋಷಿಸಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್

ಭಾರತದ ಮೊದಲ ಸರ್ಕಾರಿ AI ವಿಶ್ವವಿದ್ಯಾಲಯ. ಜಾಗತಿಕ ಮಟ್ಟದ AI ಪ್ರತಿಭೆಗಳನ್ನು ರೂಪಿಸಲು, ಸುಧಾರಿತ ಸಂಶೋಧನೆಗಳನ್ನು ಉತ್ತೇಜಿಸಲು ಮತ್ತು ಶಿಕ್ಷಣ ಸಂಸ್ಥೆಗಳು, ಉದ್ಯಮ ಹಾಗೂ ಸರ್ಕಾರದ ನಡುವೆ ಬಲವಾದ ಸಮನ್ವಯ ಸಾಧಿಸಲು ಈ ವಿಶ್ವವಿದ್ಯಾಲಯವನ್ನು ಸ್ಥಾಪಿಸಲಾಗುವುದು.

Admin