ಬ್ರೇಕಿಂಗ್
ಗಿರೀಶ್ ಕಾರ್ನಾಡರ 'ತುಘಲಕ್' ನಾಟಕದ ಓದು: "ವೇದಿಕೆಯ ಸಿದ್ಧತೆಗೆ ಓದು ಮೊದಲ ಹೆಜ್ಜೆ; ಕಾರ್ನಾಡ್ ರ ನಾಟಕ ಸಮಕಾಲೀನ ವೈರುದ್ಯಗಳ ಪ್ರತಿಬಿಂಬ" ವಿನೋಧ ಜಾಧವ ಅವರಿಗೆ ಪಿಎಚ್.ಡಿ. ಡಾಕ್ಟರೇಟ್ ಬೆಳಗಾವಿಯ ICMR ದಲ್ಲಿ ರಾಷ್ಟ್ರೀಯ ಉನ್ನತ ಮಟ್ಟದ ಸಭೆ - ಆಯುಷ್ - ಆಧುನಿಕ‌ ಔಷಧಿ ಹೊಸ ಪ್ರಯೋಗ ಶಿಕ್ಷಕಿ ಶುಭಾ ಹೆಗಡೆಗೆ ಬೇಲಾ ಟೀಚರ್ಸ್ ಅವಾರ್ಡ್ ಮರಾಠಾ ಎಲ್‌ಐಆರ್‌ಸಿ ಕೇಂದ್ರದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ 'ಛಾತ್ರೋಂ ಕಿ ಗೂಂಜ್' -'ವಿದ್ಯಾರ್ಥಿಗಳ ಪ್ರತಿಧ್ವನಿ' ಅಭಿಯಾನದ ಮೂಲಕ ಶೈಕ್ಷಣಿಕ ಬದಲಾವಣೆಗೆ ಸರ್ಕಾರ ನಿರ್ಧಾರ ಸ್ವಯಂ ಪ್ರೇರಿತ ರಕ್ತದಾನ : 4634 ಯುನಿಟ್ ದಾಖಲಾರ್ಹ ರಕ್ತ ಸಂಗ್ರಹಣೆ ದಲಿತರು ಆರ್ಥಿಕತೆ ಸಬಲತೆಗೆ ಆಧ್ಯತೆ ನೀಡಬೇಕು - ಎಸ್. ಪಿ. ತಳವಾರ ಜನರನ್ನು ವಿಭಜಿಸುವ  ವಿಷಾದನೀಯ ಬೆಳವಣಿಗೆ : ಎಚ್.ಬಿ. ರಾಜಶೇಖರ ಕೂಲಿ ನೇಕಾರ ಕಾರ್ಮಿಕ ಕಲ್ಯಾಣ ಮಂಡಳಿ ಸ್ಥಾಪನೆಗೆ ಕಾರ್ಮಿಕರ  ಸಂಘಟಿತ ಹೋರಾಟ ಗಿರೀಶ್ ಕಾರ್ನಾಡರ 'ತುಘಲಕ್' ನಾಟಕದ ಓದು: "ವೇದಿಕೆಯ ಸಿದ್ಧತೆಗೆ ಓದು ಮೊದಲ ಹೆಜ್ಜೆ; ಕಾರ್ನಾಡ್ ರ ನಾಟಕ ಸಮಕಾಲೀನ ವೈರುದ್ಯಗಳ ಪ್ರತಿಬಿಂಬ" ವಿನೋಧ ಜಾಧವ ಅವರಿಗೆ ಪಿಎಚ್.ಡಿ. ಡಾಕ್ಟರೇಟ್ ಬೆಳಗಾವಿಯ ICMR ದಲ್ಲಿ ರಾಷ್ಟ್ರೀಯ ಉನ್ನತ ಮಟ್ಟದ ಸಭೆ - ಆಯುಷ್ - ಆಧುನಿಕ‌ ಔಷಧಿ ಹೊಸ ಪ್ರಯೋಗ ಶಿಕ್ಷಕಿ ಶುಭಾ ಹೆಗಡೆಗೆ ಬೇಲಾ ಟೀಚರ್ಸ್ ಅವಾರ್ಡ್ ಮರಾಠಾ ಎಲ್‌ಐಆರ್‌ಸಿ ಕೇಂದ್ರದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ 'ಛಾತ್ರೋಂ ಕಿ ಗೂಂಜ್' -'ವಿದ್ಯಾರ್ಥಿಗಳ ಪ್ರತಿಧ್ವನಿ' ಅಭಿಯಾನದ ಮೂಲಕ ಶೈಕ್ಷಣಿಕ ಬದಲಾವಣೆಗೆ ಸರ್ಕಾರ ನಿರ್ಧಾರ ಸ್ವಯಂ ಪ್ರೇರಿತ ರಕ್ತದಾನ : 4634 ಯುನಿಟ್ ದಾಖಲಾರ್ಹ ರಕ್ತ ಸಂಗ್ರಹಣೆ ದಲಿತರು ಆರ್ಥಿಕತೆ ಸಬಲತೆಗೆ ಆಧ್ಯತೆ ನೀಡಬೇಕು - ಎಸ್. ಪಿ. ತಳವಾರ ಜನರನ್ನು ವಿಭಜಿಸುವ  ವಿಷಾದನೀಯ ಬೆಳವಣಿಗೆ : ಎಚ್.ಬಿ. ರಾಜಶೇಖರ ಕೂಲಿ ನೇಕಾರ ಕಾರ್ಮಿಕ ಕಲ್ಯಾಣ ಮಂಡಳಿ ಸ್ಥಾಪನೆಗೆ ಕಾರ್ಮಿಕರ  ಸಂಘಟಿತ ಹೋರಾಟ
19 ಸೆಪ್ಟೆಂ 2026
ಮರಾಠಾ ಎಲ್‌ಐಆರ್‌ಸಿಯಲ್ಲಿ ಸಮಾಜ ಮತ್ತು ಸೈನಿಕರ ಸಂಬಂಧ ಬಲ ಪಡಿಸಿದ ರಕ್ಷಾ ಬಂಧನ
🎭 ಸಾಂಸ್ಕೃತಿಕ
Dr. K N Doddmani · · 35 ವೀಕ್ಷಣೆಗಳು

ಮರಾಠಾ ಎಲ್‌ಐಆರ್‌ಸಿಯಲ್ಲಿ ಸಮಾಜ ಮತ್ತು ಸೈನಿಕರ ಸಂಬಂಧ ಬಲ ಪಡಿಸಿದ ರಕ್ಷಾ ಬಂಧನ

ಅಸ್ಮಿತೆ ವರದಿ, ಅ.೨೮: ಬೆಳಗಾವಿಯ ಮರಾಠಾ ಲೈಟ್ ಇನ್‌ಫೆಂಟ್ರಿ ರೆಜಿಮೆಂಟಲ್ ಸೆಂಟರ್ -ಮರಾಠಾ ಲಘ ಪದಾತಿದಳ ರಕ್ಷಾ ಬಂಧನವನ್ನು ಗುರುವಾರದಂದು ಸಡಗರ ಸಂಭ್ರಮದಿಂದ ಆಚರಿಸಲಾಯಿತು.

ಸಶಸ್ತ್ರ ಪಡೆಯ ಯೋಧರು ದೇಶದ ಭದ್ರತೆ ಸಲ್ಲಿಸುವ ಅನುಪಮ ಸೇವೆಯನ್ನು ಮನ್ನಿಸಿ, ಸಮಾಜದ ಹಾಗೂ ಸೈನಿಕರ  ಮಧ್ಯದ ಪರಸ್ಪರ ನಂಬಿಕೆ, ವಾತ್ಸಲ್ಯ ಮತ್ತು ಗೌರವದ ಶಾಶ್ವತ ಬಂಧನಕ್ಕೆ ವರ್ಣರಂಜಿತ ಸಮಾರಂಭ ಸಾಕ್ಷಿಯಾಯಿತು.

ಮರಾಠಾ ಎಲ್‌ಐಆರ್‌ಸಿಯ ಕಮಾಂಡೆಂಟ್ ಬ್ರಿಗೇಡಿಯರ್ ಗಿರೀಶ್ ಉಪಾಧ್ಯ, ಎಸ್‌ಎಂ, ವಿಎಸ್‌ಎಂ, ಕುಟುಂಬ ಕಲ್ಯಾಣ ಸಂಸ್ಥೆಯ ಅಧ್ಯಕ್ಷೆ  ವೇದಾ ಉಪಾಧ್ಯ ಸೇರಿದಂತೆ ಕಲ್ಯಾಣ ಸಂಸ್ಥೆಯ ಪದಾಧಿಕಾರಿಗಳು, ಮರಾಠಾ ಲಘು ಪದಾತಿದಳದ ಹಿರಿಯ ಅಧಿಕಾರಿಗಳು ಹಾಗೂ  ಧರ್ಮ ಪತ್ನಿಯರು ತಮ್ಮ  ಕುಟುಂಬದ ಸದಸ್ಯರೊಂದಿಗೆ ಸಕ್ರಿಯವಾಗಿ ಪಾಲ್ಗೊಂಡು ಪರಸ್ಪರ ಅನುಬಂಧ ಹಂಚಿಕೊಂಡರು.

 ಈ ಸಂದರ್ಭದಲ್ಲಿ ಬೆಳಗಾವಿ ಮತ್ತು ಸುತ್ತಮುತ್ತಲಿನ 10 ಕ್ಕೂ ಹೆಚ್ಚು ಶಾಲೆಗಳು ಮತ್ತು ಶಿಕ್ಷಣ ಸಂಸ್ಥೆಗಳ 238 ವಿದ್ಯಾರ್ಥಿನಿಯರು ಮತ್ತು ಮಹಿಳಾ ಶಿಕ್ಷಕರು, ಎನ್‌ಜಿಒಗಳ ಪ್ರತಿನಿಧಿಗಳು  ಉಪಸ್ಥಿತರಿದ್ದು, ಸೈನಿಕರಿಗೆ ರಾಖಿ ಕಟ್ಟುವುದರ ಮೂಲಕ ಗೌರವ ಸಮರ್ಪಿಸಿದರು.

ರಾಷ್ಟ್ರದ ರಕ್ಷಣೆಯ ಅಚಲ ಬದ್ಧತೆಗೆ ಪ್ರತಿಕವಾದ ಸಮಾರಂಭ, ಭಾರತೀಯ ಸೈನ್ಯದ ಧೈರ್ಯ, ತ್ಯಾಗ, ಸೇವೆ ಮತ್ತು ದೇಶಭಕ್ತಿಯ ಮೌಲ್ಯಗಳ ಕುರಿತು ವಿದ್ಯಾರ್ಥಿಗಳು ಒಳಗೊಂಡಂತೆ ಎಲ್ಲರೊಂದಿಗೆ ಪರಸ್ಪರ ಸಂವಾದ ಸಮ್ಮೇಳನಕ್ಕೆ ಮೆರಗು ಕಲ್ಪಿಸಿತು.

***

ಈ ಲೇಖನ ಹಂಚಿಕೊಳ್ಳಿ

ಇನ್ನಷ್ಟು ಓದಿ