ರಾಷ್ಟ್ರಪತಿಗೆ ರಾಖಿ ಅರ್ಪಿಸಿದ ಜೆಜಿಐ ಸಂಸ್ಥೆಯ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು
ಅಸ್ಮಿತೆ ವರದಿ, ೨೮: ರಕ್ಷಾ ಬಂಧನದ ಪವಿತ್ರದ ದಿನವಾದ ಇಂದು ಬೆಳಗಾವಿಯ ಜೈನ ಗ್ರುಪ್ ಆಫ್ ಇನಸ್ಟಿಟ್ಯೂಟ್ ನ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ರಾಖಿ ಅರ್ಪಿಸಿದರು.

ಪೌರಾಣಿಕ ಪಾತ್ರಗಳಾದ ಕೃಷ್ಣ ಮತ್ತು ದ್ರೌಪದಿ, ಬಾಲಿ ಮತ್ತು ಲಕ್ಷ್ಮಿಯನ್ನು ವೇಷ ಧಾರಣೆಯಲ್ಲಿ ರಾಷ್ಟ್ರಪತಿಯವರನ್ನು ಕಂಡು ರಾಖಿ ಅರ್ಪಿಸಿ ಪೌರಾಣಿಕ ಪಾತ್ರಗಳ ವೇಷಧಾರಣೆಯ ವಿಶೇಷತೆಯ ಬಗ್ಗೆ ವಿವರಿಸಿದರು. ವರುಣಿ, ಓಜಾಸ್, ಯಜಸ್, ಪರಿ ಮತ್ತು ಸಿರಿ ರಾಷ್ಟ್ರಪತಿಯನ್ನು ಭೆಟ್ಟಿಯಾದ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು.
ನಂತರ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಕರ್ನಾಟಕದ ಪ್ರತಿನಿಧಿಸಿ ಯಕ್ಷಗಾನ ನೃತ್ಯ ಪ್ರದರ್ಶಿಸಿ ಮೆಚ್ಚುಗೆ ಪಡೆದರು.
ನಂತರ ನಡೆದ ಸಂವಾದದಲ್ಲಿ ಕೇಳಿದ ಪ್ರಶ್ನೆಗಳಿಗೆ ಪರಿ ಚೋಟ್ಟಾನಿ ಅರ್ಥಪೂರ್ಣ ಉತ್ತರ ನೀಡಿದಕ್ಕೆ ರಾಷ್ಟ್ರಪತಿ ಬ್ಯಾಚ್ ನೀಡಿ ಗೌರವಿಸಲಾಯಿತು. ನಂತರ ರಾಷ್ಟ್ರಪತಿಯವರು ವಿದ್ಯಾರ್ಥಿಗಳಿಗೆ ರಕ್ಷಾ ಬಂಧನದ ಸುಂದರವಾದ ಉಡುಗೊರೆ ನೀಡಿ ಗೌರವಿಸಿದರು.
ಸ್ಕೌಟ್ಸ್ ಮತ್ತು ಗೈಡ್ಸ್ ನಿರ್ದೇಶಕಿ ಪಲ್ಲವಿ ನಾಡಕರ್ಣಿ ಮಕ್ಕಳಿಗೆ ಮಾರ್ಗದರ್ಶನ ನೀಡಿದ್ದರು.
***
ಈ ಲೇಖನ ಹಂಚಿಕೊಳ್ಳಿ