ಅಂಚೆ ಚೀಟಿ ಸಂಗ್ರಹ ಹವ್ಯಾಸ ಉತ್ತೇಜನ : ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಆಹ್ವಾನ
ಈ ಯೋಜನೆಯಡಿ, ೨೦೨೫-೨೬ನೇ ಶೈಕ್ಷಣಿಕ ವರ್ಷದಲ್ಲಿ ೬೦% ಅಂಕಗಳನ್ನು ವಡೆದಿರುವ ೬ನೇ ತರಗತಿಯಿಂದ ೯ನೇ ತರಗತಿಯವರೆಗಿನ ವಿದ್ಯಾರ್ಥಿಗಳು, ಫಿಲಾಟೆಲಿ ಠೇವಣಿ ಖಾತೆ ಹೊಂದಿರುವವರು, ಫಿಲಾಟೆಲಿಕ್ ಕ್ಲಬ್‌ನ ಸದಸ್ಯರಾಗಿರುವವರು ಹಾಗೂ ಅಂಚೆ ಚೀಟಿ ಸಂಗ್ರಹಣೆಯನ್ನು ಹವ್ಯಾಸವಾಗಿ ಮುಂದುವರಿಸುತ್ತಿರುವವರು ವಾರ್ಷಿಕ ರೂ.೬,೦೦೦ ವಿದ್ಯಾರ್ಥಿ ವೇತನಕ್ಕೆ ಅರ್ಹರಾಗಿರುತ್ತಾರೆ.
ಅಸ್ಮಿತೆ ವರದಿ, ಅ.೧೯: ಭಾರತೀಯ ಅಂಚೆ ಇಲಾಖೆಯು ೬ನೇ ತರಗತಿಯಿಂದ ೯ನೇ ತರಗತಿಯವರೆಗೆ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಂದ ಶಾಲಾ ಮಕ್ಕಳಲ್ಲಿ ಅಂಚೆ ಚೀಟಿ ಸಂಗ್ರಹಣೆಯ ಹವ್ಯಾಸವನ್ನು ಉತ್ತೇಜಿಸುವ “ದೀನ ದಯಾಳ SPARSH ಯೋಜನೆ" ಅಡಿಯಲ್ಲಿ ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಿದೆ.
ಈ ಯೋಜನಯು ಅಂಚೆ ಚೀಟಿ ಸಂಗ್ರಹಣೆಯನ್ನು ಹವ್ಯಾಸವಾಗಿ ಬೆಳೆಸಲು ಆಸಕ್ತಿ ಮತ್ತು ಸಂಶೋಧನಾ ಮನೋಭಾವವನ್ನು ಉತ್ತೇಜಿಸುವ ಮಹತ್ವಕಾಂಕ್ಷೆಯನ್ನು ಹೊಂದಿದ್ದು, ಚಿಕ್ಕ ವಯಸ್ಸಿನಲ್ಲಿಯೇ ಅಂಚೆ ಚೀಟಿ ಸಂಗ್ರಹಣೆಯ ಹವ್ಯಾಸವನ್ನು ನಿರಂತರವಾಗಿ ಬೆಳೆಸುವುದು ಹಾಗೂ ಶೈಕ್ಷಣಿಕ ಪಠ್ಯಕ್ರಮಕ್ಕೆ ಪೂರಕವಾಗುವಂತೆ ಉತ್ತೇಜಿಸುವುದಾಗಿದೆ.
ಈ ಯೋಜನೆಯಡಿ, ೨೦೨೫-೨೬ನೇ ಶೈಕ್ಷಣಿಕ ವರ್ಷದಲ್ಲಿ ೬೦% ಅಂಕಗಳನ್ನು ವಡೆದಿರುವ ೬ನೇ ತರಗತಿಯಿಂದ ೯ನೇ ತರಗತಿಯವರೆಗಿನ ವಿದ್ಯಾರ್ಥಿಗಳು, ಫಿಲಾಟೆಲಿ ಠೇವಣಿ ಖಾತೆ ಹೊಂದಿರುವವರು, ಫಿಲಾಟೆಲಿಕ್ ಕ್ಲಬ್‌ನ ಸದಸ್ಯರಾಗಿರುವವರು ಹಾಗೂ ಅಂಚೆ ಚೀಟಿ ಸಂಗ್ರಹಣೆಯನ್ನು ಹವ್ಯಾಸವಾಗಿ ಮುಂದುವರಿಸುತ್ತಿರುವವರು ವಾರ್ಷಿಕ ರೂ.೬,೦೦೦ ವಿದ್ಯಾರ್ಥಿ ವೇತನಕ್ಕೆ ಅರ್ಹರಾಗಿರುತ್ತಾರೆ.
ವಿದ್ಯಾರ್ಥಿಗಳ ಆಯ್ಕೆಯನ್ನು ಫಿಲಾಟಲಿ ಕ್ವಿಜ್ ಆಧಾರದ ಮೇಲೆ ಮಾಡಲಾಗುತ್ತದೆ. ಫಿಲಾಟಲಿ ಕ್ವಿಜ್ ನಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳು ಅಂಚೆ ಇಲಾಖೆಯು ನೀಡುವ ಫಿಲಾಟೆಲಿಕ್ ಪ್ರಾಜೆಕ್ಟ್ ಅನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ಸಲ್ಲಿಸಬೇಕಾಗುತ್ತದೆ.
Level-1 ಫಿಲಾಟೆಲಿಕ್ ಕ್ವಿಜ್ ನಲ್ಲಿ ಭಾಗವಹಿಸಲು ಅರ್ಜಿಯನ್ನು ಸಲ್ಲಿಸುವ/ಅಂಚೆ ಮೂಲಕ ಕಳುಹಿಸುವ ಕೊನೆಯ ದಿನಾಂಕ ೧೦.೦೯.೨೦೨೬ ಆಗಿರುತ್ತದೆ. ಕರ್ನಾಟಕದ ಎಲ್ಲಾ ಶಾಲೆಗಳು ತಮ್ಮ ವಿದ್ಯಾರ್ಥಿಗಳನ್ನು ಈ ವಿದ್ಯಾರ್ಥಿ ವೇತನ ಯೋಜನೆಯಲ್ಲಿ ಭಾಗವಹಿಸಲು ಪ್ರೋತ್ಸಾಹಿಸುವಂತೆ ಕೋರಲಾಗಿದೆ.
ಹೆಚ್ಚಿನ ಮಾಹಿತಿಗಾಗಿ www.indiapost.gov.in ಹಾಗೂ ಕರ್ನಾಟಕ ವೃತ್ತದ ಪೋರ್ಟಲ್‌ಗೆ ಭೇಟಿ ನೀಡಬಹುದು ಎಂದು ಗೋಕಾಕ ವಿಭಾಗದ ಅಂಚೆ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
****
ಈ ಲೇಖನ ಹಂಚಿಕೊಳ್ಳಿ