ನನ್ನ ದೇಹದಲ್ಲಿ ಈಗಲೂ ಗುಂಡುಗಳಿವೆ: ಮಾಜಿ ಸೈನಿಕ ಪ್ರಕಾಶ ಪಾಟೀಲ
ಅಸ್ಮಿತೆ ವರದಿ, ಅ.೧೫ : ಬಸವ ಕಾಯಕ ಜೀವಿಗಳ ಸಂಘ ಹಾಗೂ ರಾಷ್ಟ್ರೀಯ ಬಸವದಳ ಬೆಳಗಾವಿ ಜಿಲ್ಲಾ ಘಟಕ ಶುಕ್ರವಾರ ಆಯೋಜಿಸಿದ 80ನೇ ಸ್ವಾತಂತ್ರ್ಯೋತ್ಸವ ವಿಶ್ವಗುರು ಬಸವ ಮಂಟಪದಲ್ಲಿ ಮಾಜಿ ಯೋಧ ಪ್ರಕಾಶ ಪಾಟೀಲ ಧ್ವಜಾರೋಹಣ ನೆರವೇರಿಸಿದರು.
ನಂತರ ಮಾತನಾಡಿದ ಪ್ರಕಾಶ ಪಾಟೀಲ, "ಶತ್ರುಗಳ ಜೊತೆಗೆ ಕಾದಾಡುವಾಗ ಕೈಕಳೆದುಕೊಳ್ಳಬೇಕಾಯಿತು.ನನ್ನ ದೇಹದಲ್ಲಿ ಈಗಲೂ ಗುಂಡುಗಳಿವೆ." ಎಂದು ಭಾರತೀಯ ಸೇನೆಯಲ್ಲಿ ತಮ್ಮ ಹೋರಾಟದ ಸಾಹಸಗಳನ್ನು ಸ್ಮರಿಸಿಕೊಂಡರು.
ಮಹಿಳೆಯರು, ಮಕ್ಕಳಿಂದ ನಡೆದ ಸಾಂಸ್ಕೃತಿಕ ಕಾರ್ಯಗಳು ಗಮನ ಸೆಳೆದವು.
ಮುಖಂಡರಾದ ಶಂಕರ ಗುಡಸ, ಇವೆಂಟ್ ಮ್ಯಾನೇಜರ್ ಸಂತೋಷ ಗುಡಸ, ಬಸವ ಕಾಯಕ ಜೀವಿಗಳ ಸಂಘದ ಅಧ್ಯಕ್ಷ ಸೂರ್ಯಕಾಂತ ಭಾಂವಿ, ರಾಷ್ಟ್ರೀಯ ಬಸವದಳ ಬೆಳಗಾವಿ ಜಿಲ್ಲಾಧ್ಯಕ್ಷ ಅಶೋಕ್ ಬೆಂಡಿಗೇರಿ, ಪದಾಧಿಕಾರಿಗಳಾದ ಕೆ. ಶರಣ ಪ್ರಸಾದ್, ಮಹಾಂತೇಶ ಗುಡಸ, ಬಸವರಾಜ ಗುಡಸ, ಸಿದ್ದಾರ್ಥ್ ಗುಡಸ, ಮಲ್ಲಿಕಾರ್ಜುನ ಆಡಿನ್, ವೀರೇಶ್ ಉಳವಿ, ಶ್ರೀರಾಜ್ ಹಾವನ್ನವರ, ನೀತಿನ್ ಗುಡಸ, ಶರಣು ಲಿಂಗಾಯತ, ಸಂಕಲ್ಪ ಗುಡಸ, ಬಸವರಾಜ ಹಂಪಣ್ಣವರ, ಶ್ಯಾಮ ಗೌಡರ ಸೇರಿ ಮತ್ತಿತರರು ಇದ್ದರು.
***
ಈ ಲೇಖನ ಹಂಚಿಕೊಳ್ಳಿ