ಬೆಳಗಾವಿ ,ಚಿಕ್ಕೋಡಿ ಅಂಚೆ ಇಲಾಖೆಯ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
ಅಸ್ಮಿತೆ ವರದಿ, ಅ.೨೫: ಭಾರತೀಯ ಅಂಚೆ ಇಲಾಖೆಯ ಬೆಳಗಾವಿ ಹಾಗೂ ಚಿಕ್ಕೋಡಿ ಅಂಚೆ ವಿಭಾಗದ ವ್ಯಾಪ್ತಿಯ ವಿವಿಧ ಅಂಚೆ ಕಚೇರಿಗಳಲ್ಲಿ ಖಾಲಿ ಇರುವ ಗ್ರಾಮೀಣ ಡಾಕ್ ಸೇವಕ (GDS), ಶಾಖಾ ಅಂಚೆ
ಪಾಲಕ (BMP) ಹಾಗೂ ಸಹಾಯಕ ಶಾಖಾ ಅಂಚೆ ಪಾಲಕ (ABMP) ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಬೆಳಗಾವಿ ವಿಭಾಗೀಯ ಅಂಚೆ ಕಚೇರಿಗಳಲ್ಲಿ ೧೦ನೇ ತರಗತಿಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಒಟ್ಟು ೧೯ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.
ಅದೇ ರೀತಿ ಚಿಕ್ಕೋಡಿ ವಿಭಾಗದ ಕಚೇರಿಗಳಿಗಾಗಿ ೧೦ನೇ ತರಗತಿಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಒಟ್ಟು ೧೪ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.
ಅರ್ಹ ಅಭ್ಯರ್ಥಿಗಳು ಆಗಸ್ಟ್ ೩೧ ರಿಂದ ಸೆಪ್ಟೆಂಬರ್ ೧೯ ರ ವರೆಗೆ ಆನ್ಲೈನ್‌ನಲ್ಲಿ ಒನ್-ಟೈಮ್ ನೋಂದಣಿ (OTR) ಹಾಗೂ ಸೆಪ್ಟೆಂಬರ್ ೨ ರಿಂದ ೨೧ ರವರೆಗೆ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಕೆ ಮತ್ತು ಶುಲ್ಕ ಪಾವತಿಗೆ ಅವಕಾಶ ಕಲ್ಪಿಸಲಾಗಿದೆ.
ಅರ್ಹ ಅಭ್ಯರ್ಥಿಗಳು ಭಾರತೀಯ ಅಂಚೆ ಇಲಾಖೆಯ ಅಧಿಕೃತ GDS ನೇಮಕಾತಿ ಪೋರ್ಟಲ್ Indiapost.gov.in/gdsonlineengagement ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಬೆಳಗಾವಿ ಮತ್ತು ಚಿಕ್ಕೋಡಿ ಅಂಚೆ ವಿಭಾಗದ ಅಂಚೆ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
***
ಈ ಲೇಖನ ಹಂಚಿಕೊಳ್ಳಿ