ಬ್ರೇಕಿಂಗ್
ಗಿರೀಶ್ ಕಾರ್ನಾಡರ 'ತುಘಲಕ್' ನಾಟಕದ ಓದು: "ವೇದಿಕೆಯ ಸಿದ್ಧತೆಗೆ ಓದು ಮೊದಲ ಹೆಜ್ಜೆ; ಕಾರ್ನಾಡ್ ರ ನಾಟಕ ಸಮಕಾಲೀನ ವೈರುದ್ಯಗಳ ಪ್ರತಿಬಿಂಬ" ವಿನೋಧ ಜಾಧವ ಅವರಿಗೆ ಪಿಎಚ್.ಡಿ. ಡಾಕ್ಟರೇಟ್ ಬೆಳಗಾವಿಯ ICMR ದಲ್ಲಿ ರಾಷ್ಟ್ರೀಯ ಉನ್ನತ ಮಟ್ಟದ ಸಭೆ - ಆಯುಷ್ - ಆಧುನಿಕ‌ ಔಷಧಿ ಹೊಸ ಪ್ರಯೋಗ ಶಿಕ್ಷಕಿ ಶುಭಾ ಹೆಗಡೆಗೆ ಬೇಲಾ ಟೀಚರ್ಸ್ ಅವಾರ್ಡ್ ಮರಾಠಾ ಎಲ್‌ಐಆರ್‌ಸಿ ಕೇಂದ್ರದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ 'ಛಾತ್ರೋಂ ಕಿ ಗೂಂಜ್' -'ವಿದ್ಯಾರ್ಥಿಗಳ ಪ್ರತಿಧ್ವನಿ' ಅಭಿಯಾನದ ಮೂಲಕ ಶೈಕ್ಷಣಿಕ ಬದಲಾವಣೆಗೆ ಸರ್ಕಾರ ನಿರ್ಧಾರ ಸ್ವಯಂ ಪ್ರೇರಿತ ರಕ್ತದಾನ : 4634 ಯುನಿಟ್ ದಾಖಲಾರ್ಹ ರಕ್ತ ಸಂಗ್ರಹಣೆ ದಲಿತರು ಆರ್ಥಿಕತೆ ಸಬಲತೆಗೆ ಆಧ್ಯತೆ ನೀಡಬೇಕು - ಎಸ್. ಪಿ. ತಳವಾರ ಜನರನ್ನು ವಿಭಜಿಸುವ  ವಿಷಾದನೀಯ ಬೆಳವಣಿಗೆ : ಎಚ್.ಬಿ. ರಾಜಶೇಖರ ಕೂಲಿ ನೇಕಾರ ಕಾರ್ಮಿಕ ಕಲ್ಯಾಣ ಮಂಡಳಿ ಸ್ಥಾಪನೆಗೆ ಕಾರ್ಮಿಕರ  ಸಂಘಟಿತ ಹೋರಾಟ ಗಿರೀಶ್ ಕಾರ್ನಾಡರ 'ತುಘಲಕ್' ನಾಟಕದ ಓದು: "ವೇದಿಕೆಯ ಸಿದ್ಧತೆಗೆ ಓದು ಮೊದಲ ಹೆಜ್ಜೆ; ಕಾರ್ನಾಡ್ ರ ನಾಟಕ ಸಮಕಾಲೀನ ವೈರುದ್ಯಗಳ ಪ್ರತಿಬಿಂಬ" ವಿನೋಧ ಜಾಧವ ಅವರಿಗೆ ಪಿಎಚ್.ಡಿ. ಡಾಕ್ಟರೇಟ್ ಬೆಳಗಾವಿಯ ICMR ದಲ್ಲಿ ರಾಷ್ಟ್ರೀಯ ಉನ್ನತ ಮಟ್ಟದ ಸಭೆ - ಆಯುಷ್ - ಆಧುನಿಕ‌ ಔಷಧಿ ಹೊಸ ಪ್ರಯೋಗ ಶಿಕ್ಷಕಿ ಶುಭಾ ಹೆಗಡೆಗೆ ಬೇಲಾ ಟೀಚರ್ಸ್ ಅವಾರ್ಡ್ ಮರಾಠಾ ಎಲ್‌ಐಆರ್‌ಸಿ ಕೇಂದ್ರದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ 'ಛಾತ್ರೋಂ ಕಿ ಗೂಂಜ್' -'ವಿದ್ಯಾರ್ಥಿಗಳ ಪ್ರತಿಧ್ವನಿ' ಅಭಿಯಾನದ ಮೂಲಕ ಶೈಕ್ಷಣಿಕ ಬದಲಾವಣೆಗೆ ಸರ್ಕಾರ ನಿರ್ಧಾರ ಸ್ವಯಂ ಪ್ರೇರಿತ ರಕ್ತದಾನ : 4634 ಯುನಿಟ್ ದಾಖಲಾರ್ಹ ರಕ್ತ ಸಂಗ್ರಹಣೆ ದಲಿತರು ಆರ್ಥಿಕತೆ ಸಬಲತೆಗೆ ಆಧ್ಯತೆ ನೀಡಬೇಕು - ಎಸ್. ಪಿ. ತಳವಾರ ಜನರನ್ನು ವಿಭಜಿಸುವ  ವಿಷಾದನೀಯ ಬೆಳವಣಿಗೆ : ಎಚ್.ಬಿ. ರಾಜಶೇಖರ ಕೂಲಿ ನೇಕಾರ ಕಾರ್ಮಿಕ ಕಲ್ಯಾಣ ಮಂಡಳಿ ಸ್ಥಾಪನೆಗೆ ಕಾರ್ಮಿಕರ  ಸಂಘಟಿತ ಹೋರಾಟ
19 ಸೆಪ್ಟೆಂ 2026
ಮುಂದಿನ ಶತಮಾನ ವಿಶ್ವಕ್ಕೆ ಮಾರ್ಗದರ್ಶನ ನೀಡುವ ಭಾರತೀಯ ಶತಮಾನ ಮಾನ್ಯತೆ ಪಡೆಯಲಿದೆ- ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್
📄 ಬೆಳಗಾವಿ ಜಿಲ್ಲೆಯ ಸುದ್ದಿ
Dr. K N Doddmani · · 86 ವೀಕ್ಷಣೆಗಳು

ಮುಂದಿನ ಶತಮಾನ ವಿಶ್ವಕ್ಕೆ ಮಾರ್ಗದರ್ಶನ ನೀಡುವ ಭಾರತೀಯ ಶತಮಾನ ಮಾನ್ಯತೆ ಪಡೆಯಲಿದೆ- ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್

ಅಸ್ಮಿತೆ ಸುದ್ದಿ: ಬೆಳಗಾವಿಯ ಗುರುದೇವ ರಾನಡೆ ಮಂದಿರದ ತುಲನಾತ್ಮಕ ತತ್ವಶಾಸ್ತ್ರ  ಮತ್ತು ಧಾರ್ಮಿಕ ಅಕಾಡೆಮಿಯ ಶತಮಾನೋತ್ಸವ ಉದ್ಘಾಟನೆ ಹಾಗೂ ಗುರುದೇವ ರಾನಡೆ ಅವರ ಸಂಪೂರ್ಣ ಬರಹ ಒಳಗೊಂಡ ೨೮ ಸಂಪುಟಗಳನ್ನು ಕೇಂದ್ರದ ಸಂಸ್ಕೃತಿಕ ಹಾಗೂ ಪ್ರವಾಸೋದ್ಯಮ ಇಲಾಖೆ ಸಚಿವ ಗಜೇಂದ್ರ ಸಿಂಗ್‌ ಶೇಖಾವತ್‌ ಇಂದು ಬೆಳಗಾವಿಯ ಗೋಗಟೆ ಕಾಲೇಜಿನ ಕೆ.ಕೆ. ಗೋಣುಗೋಪಾಲ ಸಭಾಂಗಣದಲ್ಲಿ ಲೋಕಾಪರ್ಣೆ ಮಾಡಿದರು.

ರಾಜ್ಯ ಸಭಾ ಸದಸ್ಯ ಈರಣ್ಣ ಕಡಾಡಿ, ಆರ್.ಎಸ್.ಎಸ್.‌ ರಾಜ್ಯದ ಉತ್ತರ ಪ್ರಾಂತದ ಕಾರ್ಯಕಾರಿಣಿ ಸದಸ್ಯ ಅರವಿಂದ ದೇಶಪಾಂಡೆ, ನವದೆಹಲಿ ದೀನ್‌ ದಯಾಳ ಉಪಾಧ್ಯಾಯ ಸಂಶೋಧನಾ ಸಂಸ್ಥೆಯ ನಿರ್ದೇಶಕ ಅತುಲ್‌ ಜೈನ್‌, ಎಂ.ಜಿ. ಝಿರಲೆ, ವಿವಿಧ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ಸಿ.ಎಂ. ತ್ಯಾಗರಾಜ್‌, ಡಾ. ವಿಷ್ಣುಕಾಂತ್‌ ಚಟ್ಟಪಲ್ಲಿ, ಡಾ. ಆನಂದ ದೇಶಪಾಂಡೆ, ಕೆ.ಎಲ್.ಎಸ್.‌ ಸದಸ್ಯ ಕಾರ್ಯದರ್ಶಿ ಸುಧೀಂದ್ರ ಗಣಾಚಾರಿ, ಉದ್ಯಮಿ ಗೋಪಾಲ ಜಿನಗೌಡ, ಡಾ. ವಿನೋಧ ದೊಡ್ಡಣ್ಣವರ, ರಾಜೇಂದ್ರ ದೇಸಾಯಿ, ರಾಮ್‌ ಭಂಡಾರಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಸಚಿವ ಗಜೇಂದ್ರ ಸಿಂಗ್‌ ಶೇಖಾವತ್‌ ಅವರಿಗೆ ಪೇಟಾ ತೊಡಿಸಿ, ಕಂಬಳಿ ಹೊದಿಸಿ, ದಂಡ ನೀಡಿ ಗೌರವಿಸಲಾಯಿತು.

ಭಾರತ ಸಮೃದ್ಧಿ, ಸಾಮಾರ್ಥ್ಯ ಸಾಧಿಸಿ ತನ್ನ ದಾರ್ಶನಿಕ ಪರಂಪರೆಯ ಭವ್ಯ   ಸಾಂಸ್ಕೃತಿಯ ಮರು ಜಾಗೃತಿಯ ಮೂಲಕ ಇಡೀ ಜಗತ್ತಿಗೆ ಮಾಗದರ್ಶನ ನೀಡುವುದರ ಮೂಲಕ ಬರುವ ಶತಮಾನ ಭಾರತೀಯ ಶತಮಾನದ ಮಾನ್ಯತೆ  ಪಡೆಯಲಿದೆ ಎಂದು ಕೇಂದ್ರ ಸಂಸ್ಕೃತಿಕ ಹಾಗೂ ಪ್ರವಾಸೋದ್ಯಮ ಇಲಾಖೆಯ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ತಿಳಿಸಿದ್ದಾರೆ.

ಜಗತ್ತು ಭಾರತವನ್ನು ಹೊಸ ದೃಷ್ಟಿಕೋನದ  ಆಶಾಭಾವನೆ ಹಾಗೂ ಗೌರವದಿಂದ ಗಮನಿಸುತ್ತಿರುವ ಸಂದರ್ಭದಲ್ಲಿ ಸತ್ಯದರ್ಶನದ ಅನುಭೂತಿ ಹೆಚ್ಚಿನ ಮಾನ್ಯತೆ ದೊರೆಯುತ್ತಿರುವ ಸಂದರ್ಭಣದಲ್ಲಿ ಗುರುದೇವ ರಾನಡೆ ಅವರ ಕೃತಿಗಳು ಲೋಕಾಪರ್ಣೆಗೋಳ್ಳುತ್ತಿರುವುದು ಕೇವಲ ಗ್ರಂಥಗಳ ಲೋಕಾರ್ಪಣೆಯಾಗಿರದೆ ಸತ್ಯ ದರ್ಶನದ ಅನುಭೂತಿ ವಿಚಾರ ಪರಂಪರೆಯ ಪುನರ್‌ ಪ್ರತಿಪಾದನೆಯಾಗಿದೆ ಎಂದು ತಿಳಿಸಿದರು.

ಜ್ಞಾನ ಈಶ್ವರನ ಸಮೀಪ ಕರೆದೊಯ್ಯುದಾಗ ಅದು ಪೂರ್ಣತೆಯನ್ನು ಸಾಧಿಸುತ್ತದೆ. ಜಗತ್ತಿನ ಮಹಾನ್‌ ವ್ಯಕ್ತಿಗಳು, ಭಾರತೀಯ ಋಷಿ ಮುನಿಗಳು ಬುದ್ಧ, ಮಹಾವೀರ, ಬಸವಣ್ಣ, ಶಂಕರಾಚಾರ್ಯರಂಥ ದಾರ್ಶಿನಿಕರು  ಅನುಭೂತಿನ ಆಧಾರಿತ ಸತ್ಯ ದರ್ಶದ ದೀರ್ಘ ಪರಂಪರೆಯನ್ನು ಸಾಧಿಸಿದ್ದಾರೆ.  ಸತ್ಯದರ್ಶನದ ಜಾಗತಿಕ ವಿಭಿನ್ನ ಪರಂಪರೆಗಳು ಪರಸ್ಪರ ಪ್ರತಿಸ್ಪರ್ಧಿಗಳಾಗಿರದೆ ಪರಸ್ಪರ ಸಂವಾದ ಮಾದರಿಯಾಗಿವೆ. ಅವು ಏಕತೆಯತ್ತ ಸಾಗುವ ಪಿರ್ಯಾಮಿಡ್‌ ಮಾದರಿಯನ್ನು ಹೊಂದಿದೆ ಎಂದು ಗುರುತಿಸಿರುವ ಗುರದೇವ ರಾನಡೆ ಅವರು ಭಾರತೀಯ ಅಧ್ಯಾತ್ಮಿಕ ಪರಂಪರೆಯ ಗೌರವ ಹೆಚ್ಚಿಸಿದ್ದಾರೆ ಎಂದು ಬಣ್ಣಿಸಿದರು.

ಸತ್ಯ ಯಾವ ರಾಷ್ಟ್ರೀಯ ಸಂಪತ್ತು ಆಗಿರದೆ, ಅದು ಮಾನವನ ಸದಾಚಾರದ ಪರಂಪರೆಯಾಗಿದೆ. ಅರಿಸ್ಟಾಟಲ್‌ ಪ್ಲೇಟೊ ತತ್ವಜ್ಞಾನಿಗಳು ಒಳಗೊಂಡಂತೆ ಹಲವಾರು ತತ್ವಜ್ಞನಿಗಳು, ದಾರ್ಶನಿಕರು ತನ್ನನ್ನು ತಾನು ತಿಳಿದುಕೊಳ್ಳುವ ಮತ್ತು ಮನುಷ್ಯನ ಪ್ರಯೋಜನೆತೆಯ ಬಗ್ಗೆ ಪ್ರಶ್ನೆ ಮಾಡಿ ಆತ್ಮಶೋಧದ ಮೂಲಕ ಸತ್ಯದರ್ಶನ ಮಾಡುತ್ತ ಬಂದಿದ್ದಾಋೆ. ಇಂದಿನ ಡಿಜಿಟಲ್‌, ಕೃತಕ ಬುದ್ಧಿಮತ್ತೆಯ ಪ್ರಬುದ್ಧತೆಯ ಮಧ್ಯ ಮನುಷ್ಯನ ಆತ್ಮಶೋಧದ ಪ್ರಶ್ನೆ ಮುಖ್ಯವಾಗುತ್ತದೆ. ಇದಕ್ಕೆ ಗುರುದೇವ ರಾನಡೆ ಅವರ ಅವರ ಕೃತಿಗಳು ಮರು ಜಾಗೃತ್ತಿ ಮೂಡಿಸುತ್ತವೆ ಎಂದು ಸಚಿವರು  ತಿಳಿಸಿದರು.

ಅರವಿಂದ ದೇಶಪಾಂಡೆ ಅವರು, ಸಮಾಜದಲ್ಲಿ ಇಂದು ಅಧ್ಯಾತ್ಮ ಹಾಗೂ ನೈತಿಕತೆಗೆ ಬೆಂಬಲ ದೊರೆಯದ ಸಂದರ್ಭದಲ್ಲಿ ರಾನಡೆ ಅಕಾಡೆಮಿ ಕಳೆದ ಹಲವಾರು ವರ್ಷಗಳಿಂದ ಕೆಲಸ ಮಾಡುತ್ತಿರುವುದು ಶ್ಲಾಘನೀಯ. ಜಗತ್ತಿಗೆ ಗುರುವಿನ ಸ್ಥಾನ ಹೊಂದಿರುವ ರಾನಡೆ ಅವರು ಆಧ್ಯಾತ್ಮಕ ದೃಷ್ಟಿಯಲ್ಲಿ ಮೇರು ಸದೃಶ್ಯ ವ್ಯಕ್ತಿತ್ವ ಹೊಂದಿದವರು ಎಂದು ಬಣ್ಣಿಸಿದರು.

ಈ ಲೇಖನ ಹಂಚಿಕೊಳ್ಳಿ

ಇನ್ನಷ್ಟು ಓದಿ