ಬ್ರೇಕಿಂಗ್
ಗಿರೀಶ್ ಕಾರ್ನಾಡರ 'ತುಘಲಕ್' ನಾಟಕದ ಓದು: "ವೇದಿಕೆಯ ಸಿದ್ಧತೆಗೆ ಓದು ಮೊದಲ ಹೆಜ್ಜೆ; ಕಾರ್ನಾಡ್ ರ ನಾಟಕ ಸಮಕಾಲೀನ ವೈರುದ್ಯಗಳ ಪ್ರತಿಬಿಂಬ" ವಿನೋಧ ಜಾಧವ ಅವರಿಗೆ ಪಿಎಚ್.ಡಿ. ಡಾಕ್ಟರೇಟ್ ಬೆಳಗಾವಿಯ ICMR ದಲ್ಲಿ ರಾಷ್ಟ್ರೀಯ ಉನ್ನತ ಮಟ್ಟದ ಸಭೆ - ಆಯುಷ್ - ಆಧುನಿಕ‌ ಔಷಧಿ ಹೊಸ ಪ್ರಯೋಗ ಶಿಕ್ಷಕಿ ಶುಭಾ ಹೆಗಡೆಗೆ ಬೇಲಾ ಟೀಚರ್ಸ್ ಅವಾರ್ಡ್ ಮರಾಠಾ ಎಲ್‌ಐಆರ್‌ಸಿ ಕೇಂದ್ರದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ 'ಛಾತ್ರೋಂ ಕಿ ಗೂಂಜ್' -'ವಿದ್ಯಾರ್ಥಿಗಳ ಪ್ರತಿಧ್ವನಿ' ಅಭಿಯಾನದ ಮೂಲಕ ಶೈಕ್ಷಣಿಕ ಬದಲಾವಣೆಗೆ ಸರ್ಕಾರ ನಿರ್ಧಾರ ಸ್ವಯಂ ಪ್ರೇರಿತ ರಕ್ತದಾನ : 4634 ಯುನಿಟ್ ದಾಖಲಾರ್ಹ ರಕ್ತ ಸಂಗ್ರಹಣೆ ದಲಿತರು ಆರ್ಥಿಕತೆ ಸಬಲತೆಗೆ ಆಧ್ಯತೆ ನೀಡಬೇಕು - ಎಸ್. ಪಿ. ತಳವಾರ ಜನರನ್ನು ವಿಭಜಿಸುವ  ವಿಷಾದನೀಯ ಬೆಳವಣಿಗೆ : ಎಚ್.ಬಿ. ರಾಜಶೇಖರ ಕೂಲಿ ನೇಕಾರ ಕಾರ್ಮಿಕ ಕಲ್ಯಾಣ ಮಂಡಳಿ ಸ್ಥಾಪನೆಗೆ ಕಾರ್ಮಿಕರ  ಸಂಘಟಿತ ಹೋರಾಟ ಗಿರೀಶ್ ಕಾರ್ನಾಡರ 'ತುಘಲಕ್' ನಾಟಕದ ಓದು: "ವೇದಿಕೆಯ ಸಿದ್ಧತೆಗೆ ಓದು ಮೊದಲ ಹೆಜ್ಜೆ; ಕಾರ್ನಾಡ್ ರ ನಾಟಕ ಸಮಕಾಲೀನ ವೈರುದ್ಯಗಳ ಪ್ರತಿಬಿಂಬ" ವಿನೋಧ ಜಾಧವ ಅವರಿಗೆ ಪಿಎಚ್.ಡಿ. ಡಾಕ್ಟರೇಟ್ ಬೆಳಗಾವಿಯ ICMR ದಲ್ಲಿ ರಾಷ್ಟ್ರೀಯ ಉನ್ನತ ಮಟ್ಟದ ಸಭೆ - ಆಯುಷ್ - ಆಧುನಿಕ‌ ಔಷಧಿ ಹೊಸ ಪ್ರಯೋಗ ಶಿಕ್ಷಕಿ ಶುಭಾ ಹೆಗಡೆಗೆ ಬೇಲಾ ಟೀಚರ್ಸ್ ಅವಾರ್ಡ್ ಮರಾಠಾ ಎಲ್‌ಐಆರ್‌ಸಿ ಕೇಂದ್ರದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ 'ಛಾತ್ರೋಂ ಕಿ ಗೂಂಜ್' -'ವಿದ್ಯಾರ್ಥಿಗಳ ಪ್ರತಿಧ್ವನಿ' ಅಭಿಯಾನದ ಮೂಲಕ ಶೈಕ್ಷಣಿಕ ಬದಲಾವಣೆಗೆ ಸರ್ಕಾರ ನಿರ್ಧಾರ ಸ್ವಯಂ ಪ್ರೇರಿತ ರಕ್ತದಾನ : 4634 ಯುನಿಟ್ ದಾಖಲಾರ್ಹ ರಕ್ತ ಸಂಗ್ರಹಣೆ ದಲಿತರು ಆರ್ಥಿಕತೆ ಸಬಲತೆಗೆ ಆಧ್ಯತೆ ನೀಡಬೇಕು - ಎಸ್. ಪಿ. ತಳವಾರ ಜನರನ್ನು ವಿಭಜಿಸುವ  ವಿಷಾದನೀಯ ಬೆಳವಣಿಗೆ : ಎಚ್.ಬಿ. ರಾಜಶೇಖರ ಕೂಲಿ ನೇಕಾರ ಕಾರ್ಮಿಕ ಕಲ್ಯಾಣ ಮಂಡಳಿ ಸ್ಥಾಪನೆಗೆ ಕಾರ್ಮಿಕರ  ಸಂಘಟಿತ ಹೋರಾಟ
19 ಸೆಪ್ಟೆಂ 2026
ಸುವರ್ಣ ಸೌಧದ ಎದುರು ಅಂತರಾಷ್ಟ್ರೀಯ ಯೋಗ‌ ದಿನಾಚರಣೆ
📄 ಬೆಳಗಾವಿ ಜಿಲ್ಲೆಯ ಸುದ್ದಿ
Dr. K N Doddmani · · 51 ವೀಕ್ಷಣೆಗಳು

ಸುವರ್ಣ ಸೌಧದ ಎದುರು ಅಂತರಾಷ್ಟ್ರೀಯ ಯೋಗ‌ ದಿನಾಚರಣೆ

ಸುವರ್ಣ ಸೌಧದ ಎದುರು ಅಂತರಾಷ್ಟ್ರೀಯ ಯೋಗ‌ ದಿನಾಚರಣೆ

ಅಸ್ಮಿತೆ ಸುದ್ದಿ : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಮಹಾನಗರ ಪಾಲಿಕೆ  ಹಾಗೂ ಜಿಲ್ಲಾ ಆಯುಷ ಇಲಾಖೆ ಸಹಯೋಗದಲ್ಲಿ ಬೆಳಗಾವಿ ಸುವರ್ಣ ವಿಧಾನ ಸೌಧದಲ್ಲಿ ಇಂದು ಜರುಗಿದ 12ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಗ್ರಾಹಕರ ವ್ಯವಹಾರಗಳ, ಆಹಾರ ಮತ್ತು ಸಾರ್ವಜನಿಕ ವಿತರಣೆ ಮತ್ತು ಹೊಸ ಹಾಗೂ ನವೀಕರಿಸಬಹುದಾದ ಇಂಧನ ಕೇಂದ್ರ ಸಚಿವ ಪ್ರಹ್ಲಾದ ಜೋಶಿ  ಸಸಿಗೆ ನೀರು ಎರೆಯುವುದರ ಮೂಲಕ ಚಾಲನೆ ನೀಡಿದರು.

ನಂತರ ಸಚಿವರು ಒಳಗೊಂಡು , ಶಾಸಕ ಅಭಯ ಪಾಟೀಲ, ಬೆಳಗಾವಿ ಮಹಾನಗರ ಪಾಲಿಕೆ ಮಹಾಪೌರೆ ಪ್ರೀತಿ ಕಾಮಕಾರ, ಉಪ ಮಹಾಪೌರ ಹನುಂಮತ‌ ಕೊಂಗಾಲಿ, ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್,ಪೋಲಿಸ್ ಆಯುಕ್ತ ಭೋರಸೆ ಗುಲಾಬರಾವ್ ಭೂಷಣ,ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಜಿಲ್ಲಾ‌ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ ಶಿಂಧೆ, ಮಹಾನಗರ ಪಾಲಿಕೆ ಆಯುಕ್ತ ಕಾರ್ತಿಕ ಎಂ,ಪ್ರಶಿಕ್ಷಣಾರ್ಥಿ ಆಯ್.ಎ.ಎಸ್.ಅಧಿಕಾರಿ ರೋಹಿತ್ ಸಿಂಗ್, ಜಿಲ್ಲಾ ಆಯುಷ್ ಅಧಿಕಾರಿ ಶ್ರೀಕಾಂತ ಸುಣದೊಳಿ, ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು, ಯೋಗಾಸಕ್ತರು ವಿವಿಧ ಭಂಗಿಯ ಯೋಗಾಸನದಲ್ಲಿ ಪಾಲ್ಗೊಂಡರು

ನಂತರ ಮಾತನಾಡಿದ ಸಚಿವ ಪ್ರಲ್ಹಾದ ಜೋಶಿ, ಯೋಗಾಸನ ವೈದ್ಯಕೀಯ ಕ್ಷೇತ್ರದಲ್ಲಿ ಮಹತ್ವದ ಪಾತ್ರ ಹೊಂದಿದ್ದು, ಪ್ರತಿನಿತ್ಯ ಯೋಗಾಸನ ಮಾಡುವುದರಿಂದ ನಮ್ಮ ಶರೀರದಲ್ಲಿನ ರೋಗ ರುಜಿನಗಳನ್ನು ದೂರ ಮಾಡಿಕೊಳ್ಳುವುದರ ಜೊತೆಗೆ ಮನಸ್ಸನ್ನು ಸಮಚಿತ್ತದಿಂದ ಇಟ್ಟುಕೊಳ್ಳಬಹುದಾಗಿದೆ ಎಂದು ಹೇಳಿದ್ದಾರೆ.

ಸ್ಪರ್ಧಾತ್ಮಕ ಜೀವನ ಶೈಲಿಯಲ್ಲಿ   ನಿತ್ಯದ ಕೆಲಸದಲ್ಲಿ ನಿಪುಣತೆಯನ್ನು ಸಾಧಿಸಲು  ಯೋಗಾಸನ ಅಗತ್ಯವಾಗಿದ್ದು ಯೋಗಾಸನ ಮಾಡಲು ಸರಿಯಾದ ಆಸನದ ಜ್ಞಾನ ಹೊಂದುವುದು ಕೂಡಾ ಅಷ್ಟೇ ಪ್ರಮುಖವಾಗಿದೆ. ವೇದ ಉಪನಿಷತ್ತುಗಳ ಪ್ರಕಾರ ಜೂನ್ 21 ನೇ ದಿನ ಪ್ರಾಮುಖ್ಯತೆಯನ್ನು ಹೊಂದಿದ ದಿನವಾದ್ದರಿಂದ ಅಂತರಾಷ್ಟ್ರೀಯ ಯೋಗ ದಿನವನ್ನಾಗಿ ಆಚರಿಸಲಾಗುತ್ತಿದೆ. ಐದು ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಯೋಗಾಸನವನ್ನು 140 ಕ್ಕೂ ಹೆಚ್ಚಿನ ದೇಶಗಳು ಒಪ್ಪಿಕೊಂಡಿವೆ. ದಿನದ ಇಪ್ಪತ್ತನಾಲ್ಕು ಗಂಟೆಗಳಲ್ಲಿ ಪ್ರಪಂಚದ ಯಾವುದಾದರೂ ಒಂದು ಪ್ರದೇಶದಲ್ಲಿ ಯೋಗಾಭ್ಯಾಸ ಜರುಗುತ್ತಿರುವುದರಿಂದ   ಯೋಗಾಸನಕ್ಕೆ ಗೋಲ್ಡನ್ ರಿಂಗ್ ಎಂದು ಕರೆಯಲಾಗುತ್ತದೆ ಎಂದರು.

ಅಂರಾಷ್ಟ್ರಿಯ ಯೋಗ ತರಬೇತಿದಾರರಾದ ಆರತಿ ಸಂಕೇಶ್ವರಿ ಅವರ ಮಾರ್ಗದರ್ಶನದಲ್ಲಿ ಅಂತರಾಷ್ಟ್ರೀಯ ಯೋಗ ಪಟುಗಳಾದ ಸತ್ಯಮ್ ಹಾಗೂ ಗಾಯತ್ರಿ ಅವರುಗಳಿಂದ ವಿವಿಧ ಯೋಗಾಸನದ ಭಂಗಿಗಳನ್ನು ಪ್ರದರ್ಶಿಸಿ ಅವುಗಳ ಮಹತ್ವವನ್ನು ವಿವರಿಸಿದರು.

***

ಈ ಲೇಖನ ಹಂಚಿಕೊಳ್ಳಿ

ಇನ್ನಷ್ಟು ಓದಿ