ಬ್ರೇಕಿಂಗ್
ಗಿರೀಶ್ ಕಾರ್ನಾಡರ 'ತುಘಲಕ್' ನಾಟಕದ ಓದು: "ವೇದಿಕೆಯ ಸಿದ್ಧತೆಗೆ ಓದು ಮೊದಲ ಹೆಜ್ಜೆ; ಕಾರ್ನಾಡ್ ರ ನಾಟಕ ಸಮಕಾಲೀನ ವೈರುದ್ಯಗಳ ಪ್ರತಿಬಿಂಬ" ವಿನೋಧ ಜಾಧವ ಅವರಿಗೆ ಪಿಎಚ್.ಡಿ. ಡಾಕ್ಟರೇಟ್ ಬೆಳಗಾವಿಯ ICMR ದಲ್ಲಿ ರಾಷ್ಟ್ರೀಯ ಉನ್ನತ ಮಟ್ಟದ ಸಭೆ - ಆಯುಷ್ - ಆಧುನಿಕ‌ ಔಷಧಿ ಹೊಸ ಪ್ರಯೋಗ ಶಿಕ್ಷಕಿ ಶುಭಾ ಹೆಗಡೆಗೆ ಬೇಲಾ ಟೀಚರ್ಸ್ ಅವಾರ್ಡ್ ಮರಾಠಾ ಎಲ್‌ಐಆರ್‌ಸಿ ಕೇಂದ್ರದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ 'ಛಾತ್ರೋಂ ಕಿ ಗೂಂಜ್' -'ವಿದ್ಯಾರ್ಥಿಗಳ ಪ್ರತಿಧ್ವನಿ' ಅಭಿಯಾನದ ಮೂಲಕ ಶೈಕ್ಷಣಿಕ ಬದಲಾವಣೆಗೆ ಸರ್ಕಾರ ನಿರ್ಧಾರ ಸ್ವಯಂ ಪ್ರೇರಿತ ರಕ್ತದಾನ : 4634 ಯುನಿಟ್ ದಾಖಲಾರ್ಹ ರಕ್ತ ಸಂಗ್ರಹಣೆ ದಲಿತರು ಆರ್ಥಿಕತೆ ಸಬಲತೆಗೆ ಆಧ್ಯತೆ ನೀಡಬೇಕು - ಎಸ್. ಪಿ. ತಳವಾರ ಜನರನ್ನು ವಿಭಜಿಸುವ  ವಿಷಾದನೀಯ ಬೆಳವಣಿಗೆ : ಎಚ್.ಬಿ. ರಾಜಶೇಖರ ಕೂಲಿ ನೇಕಾರ ಕಾರ್ಮಿಕ ಕಲ್ಯಾಣ ಮಂಡಳಿ ಸ್ಥಾಪನೆಗೆ ಕಾರ್ಮಿಕರ  ಸಂಘಟಿತ ಹೋರಾಟ ಗಿರೀಶ್ ಕಾರ್ನಾಡರ 'ತುಘಲಕ್' ನಾಟಕದ ಓದು: "ವೇದಿಕೆಯ ಸಿದ್ಧತೆಗೆ ಓದು ಮೊದಲ ಹೆಜ್ಜೆ; ಕಾರ್ನಾಡ್ ರ ನಾಟಕ ಸಮಕಾಲೀನ ವೈರುದ್ಯಗಳ ಪ್ರತಿಬಿಂಬ" ವಿನೋಧ ಜಾಧವ ಅವರಿಗೆ ಪಿಎಚ್.ಡಿ. ಡಾಕ್ಟರೇಟ್ ಬೆಳಗಾವಿಯ ICMR ದಲ್ಲಿ ರಾಷ್ಟ್ರೀಯ ಉನ್ನತ ಮಟ್ಟದ ಸಭೆ - ಆಯುಷ್ - ಆಧುನಿಕ‌ ಔಷಧಿ ಹೊಸ ಪ್ರಯೋಗ ಶಿಕ್ಷಕಿ ಶುಭಾ ಹೆಗಡೆಗೆ ಬೇಲಾ ಟೀಚರ್ಸ್ ಅವಾರ್ಡ್ ಮರಾಠಾ ಎಲ್‌ಐಆರ್‌ಸಿ ಕೇಂದ್ರದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ 'ಛಾತ್ರೋಂ ಕಿ ಗೂಂಜ್' -'ವಿದ್ಯಾರ್ಥಿಗಳ ಪ್ರತಿಧ್ವನಿ' ಅಭಿಯಾನದ ಮೂಲಕ ಶೈಕ್ಷಣಿಕ ಬದಲಾವಣೆಗೆ ಸರ್ಕಾರ ನಿರ್ಧಾರ ಸ್ವಯಂ ಪ್ರೇರಿತ ರಕ್ತದಾನ : 4634 ಯುನಿಟ್ ದಾಖಲಾರ್ಹ ರಕ್ತ ಸಂಗ್ರಹಣೆ ದಲಿತರು ಆರ್ಥಿಕತೆ ಸಬಲತೆಗೆ ಆಧ್ಯತೆ ನೀಡಬೇಕು - ಎಸ್. ಪಿ. ತಳವಾರ ಜನರನ್ನು ವಿಭಜಿಸುವ  ವಿಷಾದನೀಯ ಬೆಳವಣಿಗೆ : ಎಚ್.ಬಿ. ರಾಜಶೇಖರ ಕೂಲಿ ನೇಕಾರ ಕಾರ್ಮಿಕ ಕಲ್ಯಾಣ ಮಂಡಳಿ ಸ್ಥಾಪನೆಗೆ ಕಾರ್ಮಿಕರ  ಸಂಘಟಿತ ಹೋರಾಟ
19 ಸೆಪ್ಟೆಂ 2026
ಭಾರತದ ಆರ್ಥಿಕ ಭದ್ರತೆಗೆ ಭದ್ರ ಬುನಾದಿ ಹಾಕಿದವರು  ಡಾ. ಬಿ. ಆರ್. ಅಂಬೇಡ್ಕರ್ : ಪ್ರೊ. ಶೀಲಾಧರ ಮುಗಳಿ
🎓 ಶಿಕ್ಷಣ
Dr. K N Doddmani · · 133 ವೀಕ್ಷಣೆಗಳು

ಭಾರತದ ಆರ್ಥಿಕ ಭದ್ರತೆಗೆ ಭದ್ರ ಬುನಾದಿ ಹಾಕಿದವರು  ಡಾ. ಬಿ. ಆರ್. ಅಂಬೇಡ್ಕರ್ : ಪ್ರೊ. ಶೀಲಾಧರ ಮುಗಳಿ

ಭಾರತೀಯ ರಿಸರ್ವ್ ಬ್ಯಾಂಕ್ (RBI) ಸ್ಥಾಪನೆಯಾಗಲು ಅಂಬೇಡ್ಕರ್ ಅವರು ಹಿಲ್ಲನ್ ಯಂಗ್ ಕಮಿಷನ್ ಮುಂದೆ ಮಂಡಿಸಿದ ಮಾರ್ಗಸೂಚಿಗಳು ಮತ್ತು ಅವರ ‘ದಿ ಪ್ರಾಬ್ಲಮ್ ಆಫ್ ದಿ ರೂಪಿ’ (The Problem of the Rupee) ಎಂಬ ಆರ್ಥಿಕ ಸಂಶೋಧನಾ ಗ್ರಂಥವೇ ಮೂಲ ಪ್ರೇರಣೆಯಾಗಿದೆ.

ಅಸ್ಮಿತೆ ವರದಿ, ಅ.೨೫ : "ಭಾರತದ ಹಣಕಾಸು ವ್ಯವಸ್ಥೆ ಹಾಗೂ ಆರ್ಥಿಕ ಭದ್ರತೆಗೆ ಭದ್ರವಾದ ಬುನಾದಿ ಹಾಕಿದವರು ಭಾರತ ರತ್ನ ಡಾ. ಬಿ. ಆರ್. ಅಂಬೇಡ್ಕರ್" ಎಂದು ಧಾರವಾಡ ಕರ್ನಾಟಕ ವಿಶ್ವವಿದ್ಯಾನಿಲಯದ ಇತಿಹಾಸ ಮತ್ತು ಪ್ರಾಚಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊಫೆಸರ್ ಶೀಲಾಧರ ಮುಗಳಿ ತಿಳಿಸಿದ್ದಾರೆ.

ಬೆಳಗಾವಿಯ ಕಿತ್ತೂರ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಡಾ. ಬಿ. ಆರ್. ಅಂಬೇಡ್ಕರ್ ಅಧ್ಯಯನ ಪೀಠ ಹಾಗೂ ಸಂಕೇಶ್ವರದ ಎಸ್. ಡಿ. ವಿ. ಎಸ್. ಸಂಘದ ಎಸ್. ಎಸ್. ಆರ್ಟ್ಸ್ ಕಾಲೇಜು ಮತ್ತು ಟಿ. ಪಿ. ಸಾಯಿನ್ಸ್  ಇನ್ಸ್ಟಿಟ್ಯೂಟ್   ಸಹಯೋಗದಲ್ಲಿ  "ಇಂದಿನ ಯುವ ಜನತೆಗೆ ಡಾ. ಬಿ. ಆರ್. ಅಂಬೇಡ್ಕರ್ ಅವರ ವಿಚಾರಧಾರೆಯ ಪ್ರಸ್ತುತತೆ" ಕುರಿತು ಸಂಕೇಶ್ವರ ಕಾಲೇಜಿನಲ್ಲಿ ಇಂದು ಆಯೋಜಿಸಲಾದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ  ಅವರು ಮಾತನಾಡಿದರು.

"ಮಹಾನ್ ಆರ್ಥಿಕ ತಜ್ಞರಾಗಿದ್ದ ಬಾಬಾಸಾಹೇಬರು, ಬಿಕ್ಕಟ್ಟಿನ ಸಂದರ್ಭಗಳಲ್ಲಿ ದೇಶದ ಸಾಮಾನ್ಯ ಅರ್ಥ ವ್ಯವಸ್ಥೆಯನ್ನು "ಯುದ್ಧ ಅರ್ಥ ವ್ಯವಸ್ಥೆಯಾಗಿ" (War Economy) ಪರಿವರ್ತಿಸುವಲ್ಲಿ ಮಹತ್ತರವಾದ ಆರ್ಥಿಕ ಕಾರ್ಯತಂತ್ರಗಳನ್ನು ರೂಪಿಸಿದ್ದರು. ಇದು ಅವರ ದೂರದರ್ಶಿತ್ವ ಹಾಗೂ ಆರ್ಥಿಕ ಚತುರತೆಗೆ ಸಾಕ್ಷಿಯಾಗಿದೆ. ಭಾರತೀಯ ರಿಸರ್ವ್ ಬ್ಯಾಂಕ್ (RBI) ಸ್ಥಾಪನೆಯಾಗಲು ಅಂಬೇಡ್ಕರ್ ಅವರು ಹಿಲ್ಲನ್ ಯಂಗ್ ಕಮಿಷನ್ ಮುಂದೆ ಮಂಡಿಸಿದ ಮಾರ್ಗಸೂಚಿಗಳು ಮತ್ತು ಅವರ ‘ದಿ ಪ್ರಾಬ್ಲಮ್ ಆಫ್ ದಿ ರೂಪಿ’ (The Problem of the Rupee) ಎಂಬ ಆರ್ಥಿಕ ಸಂಶೋಧನಾ ಗ್ರಂಥವೇ ಮೂಲ ಪ್ರೇರಣೆಯಾಗಿದೆ" ಎಂದು ಡಾ. ಶೀಲಾಧರ ಮುಗಳಿ ತಿಳಿಸಿದರು.

ಅಧ್ಯಕ್ಷತೆ ವಹಿಸಿದ ಕಾಲೇಜು ಸ್ಥಾನಿಕ ನಿಯಂತ್ರಣ ಸಮೀತಿ ಅಧ್ಯಕ್ಷೆ ಆರ್.ಬಿ. ಪಾಟೀಲ  "ಆಧುನಿಕತೆಯ ಸಂದರ್ಭದಲ್ಲಿ ಯಾರು ತಮಗೆ ಮಾದರಿ ವ್ಯಕ್ತಿತ್ವ ಎಂದು ಗುರುತಿಸಿಕೊಳ್ಳುವಲ್ಲಿ ಯುವ ಸಮುದಾಯ ತಪ್ಪು ಹೆಜ್ಜೆ ಇಡುತ್ತಿದೆ. ಕ್ಷಣಿಕ ಆಕರ್ಷಣೆಗಳಿಗೆ ಒಳಗಾಗದೆ, ಡಾ. ಬಿ. ಆರ್. ಅಂಬೇಡ್ಕರ್ ಅವರ ಜ್ಞಾನದಾಹ, ನೈತಿಕತೆ, ಶಿಸ್ತು ಮತ್ತು ದೇಶಪ್ರೇಮದ ಆದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು ಮಾದರಿಯನ್ನಾಗಿಸಿಕೊಳ್ಳಬೇಕು" ಎಂದು ಸೂಚಿಸಿದರು.

ಆಡಳಿತಾಧಿಕಾರಿ ಡಾ.ಬಿ.ಎ ಪೂಜಾರ, "ಸಮ ಸಮಾಜಕ್ಕೆ ಅಂಬೇಡ್ಕರ್  ವಿಚಾರಗಳು ಸಾರ್ವಕಾಲಿಕ ಮೌಲ್ಯ ಹೊಂದಿವೆ" ಎಂದು ಹೇಳಿದರು.

 ಕಾಲೇಜಿನ ಪ್ರಾಂಶುಪಾಲ ಡಾ.ಡಿ.ಎಸ್ ಕಾಂಬಳೆ ಅವರು ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ, "ಅಂಬೇಡ್ಕರ್ ಅವರು ಉದ್ದಕ್ಕೂ ನೋವು - ಅವಮಾನಗಳನ್ನು ಅನುಭವಿಸಿದವರು.  ಕಠಿಣ ಪರಿಸ್ಥಿತಿಯಲ್ಲೂ ಅವರಿಗೆ  ಶಕ್ತಿ ಮತ್ತು ಸ್ಪೂರ್ತಿ ನೀಡಿದ್ದು  ಪುಸ್ತಕಗಳು. ಜೀವನದ ಹೆಚ್ಚಿನ ಸಮಯವನ್ನು  ಓದಿಗಾಗಿ ಮೀಸಲಿಟ್ಟು ಜ್ಞಾನದ ಹಸಿವನ್ನು ನೀಗಿಸಿಕೊಳ್ಳಲು ನಿರಂತರ ಅಧ್ಯಯನದಲ್ಲಿ ತೊಡಗುತ್ತಿದ್ದರು" ಎಂದು ಹೇಳಿದರು.

ಪ್ರೊ.ದೇಮಣ್ಣ ಸೊಗಲದ ಅತಿಥಿಗಳ ಪರಿಚಯಿಸಿದರು. ಡಾ.ವಿಜಯಮಾಲಾ ನಾಗನೂರಿ ನಿರೂಪಿಸಿದರು ಕು. ಲಕ್ಷ್ಮೀ ಗಡಕರಿ ಅಂಬೇಡ್ಕರ್ ಗೀತೆ ಹಾಡಿದರು, ಪ್ರೊ.ಕುಮಾರ ಮರಾಠೆ ವಂದಿಸಿದರು .

 ಸಮಾರಂಭದಲ್ಲಿ  ಐ. ಕ್ಯೂ.ಎ.ಸಿ ಸಂಯೋಜಕ ಪ್ರೊ.ಎಂ. ಆರ್. ಪಾಟೀಲ, ಡಾ. ಪಿ. ಎಸ್. ಮುನ್ನೊಳಿ ಹಾಗೂ ಕಾಲೇಜಿನ  ಅಧ್ಯಾಪಕರು, ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

***

ಈ ಲೇಖನ ಹಂಚಿಕೊಳ್ಳಿ

ಇನ್ನಷ್ಟು ಓದಿ