ಉಮಾಶಂಕರ್, ಭೀಮ ಪುತ್ರಿ ನಾಗಮ್ಮ ಸೇರಿ ೩೩ ಸಾಧಕರಿಗೆ ರಾಜ್ಯ ಮಟ್ಟದ ಅಂಬೇಡ್ಕರ್ ಪ್ರಶಸ್ತಿ
ಅಸ್ಮಿತೆ ವರದಿ, ಅ.೨೮ : ಭಾರತದ ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಹೆಸರಿನಲ್ಲಿ ಚಿಕ್ಕೋಡಿಯ ಎ ವಿ ಎಸ್ ಎಸ್ ಸಂಘವು ಕೊಡಮಾಡುವ ರಾಜ್ಯಮಟ್ಟದ ಪ್ರಸಕ್ತ ಸಾಲಿನ ಪ್ರಶಸ್ತಿಯನ್ನು ಡಾ. ಉಮಾಶಂಕರ, ಭೀಮಾ ಪತ್ರಿ ನಾಗಮ್ಮ, ಸಿದ್ಧರಾಮ ಹಿಪ್ಪರಗಿ ಸೇರಿದಂತೆ ೩೩ ವಿವಿಧ ಕ್ಷೇತ್ರದ ಸಾಧಕರನ್ನು ಗುರುತಿಸಿ ಪ್ರಶಸ್ತಿ ಆಯ್ಕೆ ಮಾಡಲಾಗಿದೆ ಎಂದು ಸಂಘದ ನಿರ್ವಾಹಕ ಸದಸ್ಯ ದಯಾನಂದ ಕಾಂಬಳೆ ತಿಳಿಸಿದ್ದಾರೆ.
ಪ್ರಶಸ್ತಿಗೆ ಆಯ್ಕೆ ಮಾಡಲಾದ ಎಲ್ಲರೂ ರಾಜ್ಯವ್ಯಾಪಿ ಸಮಾಜದ ಶೋಷಿತ ಸಮುದಾಯಗಳ ಪರವಾಗಿ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡಿದವರಾಗಿದ್ದಾರೆ ಎಂದು ದಯಾನಂದ ಕಾಂಬಳೆ ಹಾಗೂ ಸಂಘದ ಇತರೆ ಪದಾಧಿಕಾರಿಗಳು ಗುರುವಾರದಂದು ಚಿಕ್ಕೋಡಿಯಲ್ಲಿ ನಡೆಸಲಾದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.
ವಿಜಯಕುಮಾರ್ ಬಾಗಿವಾಳು- ಮಾಧ್ಯಮ, ಯೋಗೀಶ -ಸಂಗೀತ , ಶಂಭು ಎನ್ ಕಾಳೆ- ಸಮಾಜ ಸೇವೆ, ಸಿ ವೈ ಸಂಗಮ -ಶಿಕ್ಷಣ, ಡಾ.ಚಿಂ.ಬಬಸವರಾಜು- ಬೌದ್ಧ ಧರ್ಮ ಪ್ರಚಾರ, ಚಿದಾನಂದ ಕಾಂಬಳೆ- ಸಮಾಜ ಸೇವೆ, ಸಿದ್ಧರಾಮ ಹಿಪ್ಪರಗಿ - ಸಂಘಟನೆ, ನಾಗರಾಜು ತಲಕಾಡು -ಸಾಹಿತ್ಯ ಮತ್ತು ಸಿನಿಮಾ, ಆತ್ಮಾನಂದ ಎನ್. ಆರ್- ಸಂಘಟನೆ, ಡಾ.ನಂಜಯ್ಯ ಹೊಂಗನೂರು - ಸಮಾಜ ಸೇವೆ, ಡಾ.ಮಂಜು ಎಚ್ .ಪಿ - ಜಾನಪದ, ಡಾ.ಪ್ರಸನ್ನ -ಸಾಹಿತ್ಯ, ವಿನೋದ್ ಮಹದೇವಪುರ- ಪತ್ರಿಕಾ ಮಾಧ್ಯಮ, ಡಾ.ಭೈರಪ್ಪ ಕೆ.ಎಂ - ಸಾಹಿತ್ಯ, ನೀಲಾಮಲ್ಲೆ- ಶಿಕ್ಷಣ, ಶರಣು ಸಿಂಧೆ- ಸಂಘಟನೆ, ಬಸವರಾಜು ಬೆನ್ನೂರು -ಸಂಘಟನೆ, ವಿಠಲ್ ವಗ್ಗನ -ನ್ಯಾಯವಾದಿ, ರವಿ ನಾಯ್ಕರ -ಸಾಹಿತ್ಯ ಚಳುವಳಿ, ಡಾ.ಸುಬ್ಬರಾವ್ ಎಂಟತ್ತಿನವರ- ಸಾಹಿತ್ಯ, ರಾಘವೇಂದ್ರ ಅಪೂರ್ವ- ಆಡಳಿತ, ಡಾ.ಕುಮಾರಸ್ವಾಮಿ ಬೆಜ್ಜಿಹಳ್ಳಿ - ಶಿಕ್ಷಣ, ಡಾ.ಸಿ.ರಂಗಸ್ವಾಮಿ- ಶಿಕ್ಷಣ, ಡಾ.ಹೊಂಬಯ್ಯ- ಸಾಹಿತ್ಯ, ಡಾ.ಶಿವಕುಮಾರ - ಶೈಕ್ಷಣಿಕ,ಡಾ.ಲಕ್ಷ್ಮಿಕಾಂತ್ ಸಿಂಗ್ - ಸಾಮಾಜಿಕ, ಡಾ.ಉಮಾ ಎ -ಶಿಕ್ಷಣ, ಪ್ರಕಾಶ್ ಬೀರಪ್ಪ ಗೋಡ್ಬೋಲೆ - ಬೌದ್ಧ ಧರ್ಮ ಪ್ರಚಾರ, ನಿತನ್ ತೊರವಿ- ರಾಜಕೀಯ, ಕುಮಾರ ಎಂ ತಳವಾರ್ - ಕನ್ನಡ ಸಂಘಟನೆ, ವಿಠಲ್ ಮಾದರ- ಸಾಮಾಜಿಕ ಹೋರಾಟ ಪ್ರಶಸ್ತಿಗೆ ಆಯ್ಕೆಯಾದ ಸಾಧಕರು.
ಆಗಸ್ಟ್ 30ರಂದು ಚಿಕ್ಕೋಡಿಯ ಎ.ಜಿ ಫಾರಂ ಹೌಸ್ ನಲ್ಲಿ ಜರುಗಲಿರುವ ಸಮಾರಂಭದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ದಯಾನಂದ ಕಾಂಬಳೆ ತಿಳಿಸಿದ್ದಾರೆ.
ಅಂದು ನಡೆಯಲಿರುವ ಸಮಾರಂಭಕ್ಕೆ ಮೈಸೂರಿನ ಉರಲಿಂಗಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ ಉಪಸ್ಥಿತರಿವರು. ಅಧ್ಯಕ್ಷತೆಯನ್ನು ಎ ವಿ ಎಸ್ ಎಸ್ ಸಂಸ್ಥಾಪಕ ತುಂಬಲ ರಾಮಣ್ಣ ವಹಿಸಲಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ರಮೇಶ್ ಬೋಸ್ಲೆ, ಶಾಂತ ರಾಯನ್ನ, ಶ್ರೀನಾಥ್ ಇತರ ಪದಾಧಿಕಾರಿಗಳು ಉಪಸ್ಥಿರಿದ್ದರು.
***
ಈ ಲೇಖನ ಹಂಚಿಕೊಳ್ಳಿ