ಬ್ರೇಕಿಂಗ್
◆"ಪತ್ರಕರ್ತ ಜವಾಬ್ದಾರಿಯಿಂದ ನುಣಚಿಕೊಂಡರೆ ಸತ್ಯ ಸಾಯುತ್ತದೆ" ◆ಇಮಾಮ್ ಅವರಿಗೆ ಶನಿವಾರ ರೋಹಿತ್ ಪತ್ರಿಕೋದ್ಯಮ ಪ್ರಶಸ್ತಿ ಪ್ರದಾನ ◆ಸಕ್ಕರೆ ಮಾರಾಟದ ಲಾಭ ಹಂಚಿಕೆ ಸೂತ್ರ- ಇತಿಹಾಸದಲ್ಲಿ ಮೊದಲು ಜಾರಿ ◆ಕನ್ನಡ ಮನಸ್ಸುಗಳನ್ನು ಒಂದುಗೂಡಿಸುವ ಕಸಾಪ ಕಳೆದುಕೊಂಡರೆ ಮತ್ತೊಂದನ್ನು ಕಟ್ಟಲು ಸಾಧ್ಯವಿಲ್ಲ : ಜಾಣಗೆರೆ ವೆಂಕಟರಾಮಯ್ಯ ◆ಟನ್ ಕಬ್ಬಿಗೆ 3,600 ಕಾರ್ಖಾನೆಗಳ ನಿಗದಿಗೆ ನಿಟ್ಟುಸಿರು ಬಿಟ್ಟ ರೈತರು ಹೋರಾಟದ ಬಿಸಿ ಉಸಿರು ◆ಬೆಳಗಾವಿ ಪಾಲಿಕೆಯಿಂದ ಪತ್ರಕರ್ತರಿಗೆ ಆರೋಗ್ಯ ವಿಮಾ ಕಾರ್ಡ್ ವಿತರಣೆ ◆ಕನ್ನಡ – ಮರಾಠಿ ಸಾಂಸ್ಕೃತಿಕ ಅನುಸಂಧಾನಕಾರ ಡಿ.ಎಸ್. ಚೌಗಲೆ ◆ಗಣಿ ಇಲಾಖೆ ಸಿಬ್ಬಂದಿಗೆ ಅನಧಿಕೃತ ಹಣದ ವಹಿವಾಟು- ಉಪ ಲೋಕಾಯುಕ್ತ ಬಿ. ವೀರಪ್ಪ ◆ಮರು ನೋಂದಣಿ ಮಾಡದ ಶಾಲಾ ವಾಹನ, ಅನಧಿಕೃತ ವಾಹನಗಳ ಮುಲಾಜಿಲ್ಲದೆ ಜಪ್ತಿ ಮಾಡಿ- ಉಪ ಲೋಕಾಯುಕ್ತರ ಕಡಕ್ ಸೂಚನೆ ◆ಮುಚ್ಚಂಡಿ ಗ್ರಾಮ ಪಂಚಾಯತಿ: ಕರ್ತವ್ಯ ಲೋಪ, ಅನುದಾನ ದುರ್ಬಳಕೆ - ಮುಲಾಜಿಲ್ಲದೆ ಕ್ರಮ - ಉಪ ಲೋಕಾಯುಕ್ತರ ಎಚ್ಚರಿಕೆ ◆"ಪತ್ರಕರ್ತ ಜವಾಬ್ದಾರಿಯಿಂದ ನುಣಚಿಕೊಂಡರೆ ಸತ್ಯ ಸಾಯುತ್ತದೆ" ◆ಇಮಾಮ್ ಅವರಿಗೆ ಶನಿವಾರ ರೋಹಿತ್ ಪತ್ರಿಕೋದ್ಯಮ ಪ್ರಶಸ್ತಿ ಪ್ರದಾನ ◆ಸಕ್ಕರೆ ಮಾರಾಟದ ಲಾಭ ಹಂಚಿಕೆ ಸೂತ್ರ- ಇತಿಹಾಸದಲ್ಲಿ ಮೊದಲು ಜಾರಿ ◆ಕನ್ನಡ ಮನಸ್ಸುಗಳನ್ನು ಒಂದುಗೂಡಿಸುವ ಕಸಾಪ ಕಳೆದುಕೊಂಡರೆ ಮತ್ತೊಂದನ್ನು ಕಟ್ಟಲು ಸಾಧ್ಯವಿಲ್ಲ : ಜಾಣಗೆರೆ ವೆಂಕಟರಾಮಯ್ಯ ◆ಟನ್ ಕಬ್ಬಿಗೆ 3,600 ಕಾರ್ಖಾನೆಗಳ ನಿಗದಿಗೆ ನಿಟ್ಟುಸಿರು ಬಿಟ್ಟ ರೈತರು ಹೋರಾಟದ ಬಿಸಿ ಉಸಿರು ◆ಬೆಳಗಾವಿ ಪಾಲಿಕೆಯಿಂದ ಪತ್ರಕರ್ತರಿಗೆ ಆರೋಗ್ಯ ವಿಮಾ ಕಾರ್ಡ್ ವಿತರಣೆ ◆ಕನ್ನಡ – ಮರಾಠಿ ಸಾಂಸ್ಕೃತಿಕ ಅನುಸಂಧಾನಕಾರ ಡಿ.ಎಸ್. ಚೌಗಲೆ ◆ಗಣಿ ಇಲಾಖೆ ಸಿಬ್ಬಂದಿಗೆ ಅನಧಿಕೃತ ಹಣದ ವಹಿವಾಟು- ಉಪ ಲೋಕಾಯುಕ್ತ ಬಿ. ವೀರಪ್ಪ ◆ಮರು ನೋಂದಣಿ ಮಾಡದ ಶಾಲಾ ವಾಹನ, ಅನಧಿಕೃತ ವಾಹನಗಳ ಮುಲಾಜಿಲ್ಲದೆ ಜಪ್ತಿ ಮಾಡಿ- ಉಪ ಲೋಕಾಯುಕ್ತರ ಕಡಕ್ ಸೂಚನೆ ◆ಮುಚ್ಚಂಡಿ ಗ್ರಾಮ ಪಂಚಾಯತಿ: ಕರ್ತವ್ಯ ಲೋಪ, ಅನುದಾನ ದುರ್ಬಳಕೆ - ಮುಲಾಜಿಲ್ಲದೆ ಕ್ರಮ - ಉಪ ಲೋಕಾಯುಕ್ತರ ಎಚ್ಚರಿಕೆ
19 ನವೆಂ 2026
ಸಕ್ಕರೆ ಮಾರಾಟದ ಲಾಭ ಹಂಚಿಕೆ ಸೂತ್ರ- ಇತಿಹಾಸದಲ್ಲಿ ಮೊದಲು ಜಾರಿ
🌾 ಕೃಷಿ
Dr. K N Doddmani · · 4,944 ವೀಕ್ಷಣೆಗಳು

ಸಕ್ಕರೆ ಮಾರಾಟದ ಲಾಭ ಹಂಚಿಕೆ ಸೂತ್ರ- ಇತಿಹಾಸದಲ್ಲಿ ಮೊದಲು ಜಾರಿ

ರಾಷ್ಟ್ರಮಟ್ಟದಲ್ಲಿ ಇದೇ ಮೊದಲ ಬಾರಿಗೆ "ಲಾಭ ಹಂಚಿಕೊಳ್ಳುವ(Profit Sharing)" ಸೂತ್ರ ಜಾರಿಗೊಳಿಸಲಾಗುತ್ತಿದೆ ಎಂದು ಬೆಳಗಾವಿ ಜಿಲ್ಲಾ ಆಡಳಿತ  ಇಂದು ಪ್ರಕಟಣೆ ಹೊರಡಿಸಿದೆ

ಅಸ್ಮಿತೆ ವರದಿ, ನ.೦೫: ಕಬ್ಬು ಬೆಳೆಗಾರರ ಹಿತರಕ್ಷಣೆಗೆ ಮುಂದಾಗಿರುವ ಬೆಳಗಾವಿ ಜಿಲ್ಲಾಡಳಿತ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ "ಲಾಭ ಹಂಚಿಕೊಳ್ಳುವ(Profit Sharing)" ಸೂತ್ರದಡಿಯಲ್ಲಿ ಕಬ್ಬಿನ ಬೆಲೆಯನ್ನು ನಿಗದಿಪಡಿಸಿದೆ ಆದೇಶ ಹೊರಡಿಸಿದೆ.

ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಸಕ್ಕರೆ ಕಾರ್ಖಾನೆ ಮಾಲೀಕರ ಸಭೆಯಲ್ಲಿ ಈ ಸೂತ್ರವನ್ನು ಸಿದ್ಧಪಡಿಸಲಾಗಿದೆ. ರೈತರ ಬೇಡಿಕೆಗಳಿಗೆ ಅನುಗುಣವಾಗಿರುವ ಈ‌ ಸೂತ್ರಕ್ಕೆ ಕಾರ್ಖಾನೆ ಮಾಲೀಕರು ಸಹಮತ ಸೂಚಿಸಿದ್ದು, ರಾಷ್ಟ್ರಮಟ್ಟದಲ್ಲಿ ಇದೇ ಮೊದಲ ಬಾರಿಗೆ "ಲಾಭ ಹಂಚಿಕೊಳ್ಳುವ(Profit Sharing)" ಸೂತ್ರ ಜಾರಿಗೊಳಿಸಲಾಗುತ್ತಿದೆ ಎಂದು ಬೆಳಗಾವಿ ಜಿಲ್ಲಾ ಆಡಳಿತ  ಇಂದು ಪ್ರಕಟಣೆ ಹೊರಡಿಸಿದೆ.

ಈ ಮುಂಚೆ ಕಾರ್ಖಾನೆಗಳ ಒಟ್ಟು ಆದಾಯದ ಮೇಲೆ ಲಾಭ ಹಂಚಿಕೆ ಇರುತ್ತಿತ್ತು. ಆದರೆ ಈ ಹೊಸ ಸೂತ್ರದ ಪ್ರಕಾರ ಸಕ್ಕರೆ ಮಾರಾಟದ ಸರಾಸರಿ ಲಾಭವನ್ನು ಹಂಚಿಕೊಳ್ಳಲು ನಿರ್ಧರಿಸಲಾಗಿದೆ. ಮುಂಬರುವ ದಿನಗಳಲ್ಲಿ ಇದರಿಂದ ಕಬ್ಬು ಪೂರೈಸುವ ರೈತರಿಗೆ ಇನ್ನಷ್ಟು ಉತ್ತಮ ದರ ಸಿಗಲಿದೆ ಎಂದು ಜಿಲ್ಲಾ ಆಡಳಿತ ನಿರೀಕ್ಷಿಸಿದೆ.

ಕಬ್ಬಿನ ದರ ಹೆಚ್ಚಿಸುವಂತೆ ಆಗ್ರಹಿಸಿ ರೈತರು ಹಲವಾರು ದಿನಗಳಿಂದ ರಾಜ್ಯದಾದ್ಯಂತ ಪ್ರತಿಭಟನೆ ನಡೆಸುತ್ತಿದ್ದು, ರಾಜ್ಯ ಸರಕಾರ ಕೂಡ ಪ್ರೋತ್ಸಾಹ ಧನವನ್ನು ಹೆಚ್ಚಿಸಬೇಕು ಎಂಬುದು ಪ್ರಮುಖ ಬೇಡಿಕೆಯಾಗಿತ್ತು.

ಈ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್‌ ಜಾರಕಿಹೊಳಿ ಅವರ ನೇತೃತ್ವದಲ್ಲಿ ಜಿಲ್ಲಾಡಳಿತವು ಸಕ್ಕರೆ ಕಾರ್ಖಾನೆಗಳ ಮಾಲೀಕರು ಹಾಗೂ ಕಬ್ಬು‌ ಬೆಳೆಗಾರರ ಜತೆ ಹಲವು ಸುತ್ತಿನ‌ ಮಾತುಕತೆಯ ಬಳಿಕ ರೈತರ ಹಿತರಕ್ಷಣೆ ದೃಷ್ಟಿಯಿಂದ ಇತಿಹಾಸದಲ್ಲೇ ಮೊದಲ ಎನ್ನಲಾಗಿರುವ "ಲಾಭ ಹಂಚಿಕೆ" ಸೂತ್ರವನ್ನು ರೂಪಿಸಿರುತ್ತದೆ.

ಕಬ್ಬಿನ ಪಾವತಿಯ ವಿವರಗಳು ಈ ಕೆಳಗಿನಂತಿವೆ.

1ನೇ ಕಬ್ಬಿನ ಮುಂಗಡ - ಪ್ರತಿ ಮೆ.ಟನ್‌ಗೆ ರೂ. 3500

2ನೇ ಕಬ್ಬಿನ ಮುಂಗಡ - ಹಂಗಾಮು ಮುಕ್ತಾಯಗೊಂಡ ನಂತರ ಪ್ರತಿ ಮೆ.ಟನ್‌ಗೆ ರೂ. 100

3ನೇ (ಅಂತಿಮ) ಕಬ್ಬಿನ ಬಿಲ್ - ಹೊಸ ಹಂಗಾಮು ಪ್ರಾರಂಭವಾಗುವ ಮೊದಲು ಸರಾಸರಿ ಸಕ್ಕರೆ ದರವು ಪ್ರತಿ ಕೆ.ಜಿ.ಗೆ ರೂ. 45ಕ್ಕಿಂತ ಹೆಚ್ಚಿದ್ದಲ್ಲಿ, ಅಂತಿಮ ಕಬ್ಬಿನ ಬಿಲ್ಲನ್ನು ಕೋಷ್ಠಕದಲ್ಲಿ ವಿವರಿಸಿದಂತೆ ಪಾವತಿಸತಕ್ಕದ್ದು ಎಂಬ ಒಪ್ಪಂದಕ್ಕೆ ಬರಲಾಗಿದೆ.

***

ಈ ಲೇಖನ ಹಂಚಿಕೊಳ್ಳಿ

ಇನ್ನಷ್ಟು ಓದಿ