"ಬೈಲಹೊಂಗಲ ಹೊಸೂರ ಗ್ರಾಮದ ಸೈನಿಕರ ತ್ಯಾಗ ಯುವ ಸಮುದಾಯಕ್ಕೆ ಮಾದರಿ"
ಅಸ್ಮಿತೆ ವರದಿ, ಅ.೧೫: "ಸಂಘಟನಾತ್ಮಕ ಹೋರಾಟ ಮಾಡುವದರೊಂದಿಗೆ ಬ್ರಿಟಿಷ್ ಸರ್ಕಾರಕ್ಕೆ ಸವಾಲವೆಸೆದು ಯರವಾಡ ಜೈಲು ವಾಸಿಯಾಗಿದ್ದ ಬೈಲಹೊಂಗಲ ತಾಲೂಕಿನ ಹೊಸೂರ ಗ್ರಾಮದ ನೂರಾರು ಸ್ವಾತಂತ್ರ್ಯ ಹೊರಾಟಗಾರರ ಆದರ್ಶ ಜೀವನ ಮಂದಿನ ಪೀಳಿಗೆಗೆ ಅನುಕರಣೀಯ" ಎಂದು ನಿವೃತ್ತ ಶಿಕ್ಷಕ ಮಹಾಂತೇಶ ಕಮತಗಿ ಹೇಳಿದ್ದಾರೆ.
80 ನೆಯ ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ಹೊಸೂರ ಗ್ರಾಮದಲ್ಲಿ ಶುಕ್ರವಾರ ಮಧ್ಯರಾತ್ರಿ ಆಯೋಜಿಸಲಾದ ಅಖಂಡ ಭಾರತ ಸಂಕಲ್ಪದಿನ ಹಾಗೂ ಗ್ರಾಮದ 215ಕ್ಕೂ ಹೆಚ್ಚಿನ ಸ್ವಾತಂತ್ರ್ಯಹೋರಾಟಗಾರರ ಸ್ಮರಣೆಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
"ಗ್ರಾಮದ ಯುವಕರು ಸುಶಿಕ್ಷಿತರಾಗಿ ಸಾಧನೆ ಮೂಲಕ ತಮ್ಮ ಜೀವನದಲ್ಲಿ ಸಾಧನೆಯ ಉತ್ತುಂಗಕ್ಕೆ ತೆಗೆದುಕೊಂಡು ಹೋಗಬೇಕು. ಹೋರಾಟ ಬಲಿದಾನದಿಂದ ಭಾರತವನ್ನು ಬ್ರೀಟಿಷರ ದಾಸ್ಯದಿಂದ ಮುಕ್ತಗೊಳಿಸಿದ ಮಹನೀಯರ ಬಗ್ಗೆ ಗೌರವ ಇರಲಿ. ದೇಶದ ರಕ್ಷಣೆ ಕಾನೂನು ಸುವ್ಯವಸ್ಥೆಯ ಪಾಲನೆ ನಮ್ಮೆಲ್ಲರ ಆದ್ಯ ಕರ್ತವ್ಯವಾಗಬೇಕು" ಎಂದು ಸೂಚಿಸಿದರು.
ನ್ಯಾಯವಾದಿ ಎಫ್. ಎಸ್.ಸಿದ್ದನಗೌಡರ, 1905 ರಲ್ಲಿ ರಾಷ್ಟ್ರಾಭಿಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಗ್ರಾಮದ ಯುವ ಪಡೆ, ಬ್ರೀಟಿಷರ್ ವಿರುದ್ದ ಹೋರಾಟ ಮಾಡಿ ಯರವಾಡ ಜೈಲುವಾಸ ಅನುಭವಸಿದ ಸ್ವಾತಂತ್ರ್ಯ ಹೊರಾಟಗಾರರನ್ನು ಪ್ರತಿಯೊಬ್ಬರು ಸ್ಮರಣೆ ಮಾಡಬೇಕಾಗಿದೆ. ಗ್ರಾಮಸ್ಥರ ಹೋರಾಟದ ಮನೊಭಾವನೆ ಕಂಡು ಅಂದು ಗ್ರಾಮಕ್ಕೆ ಗಾಂಧೀಜಿ ಭೆಟ್ಟಿ ನೀಡಿ 94 ವರ್ಷವಾಗಿದೆ. ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್ ಆಗಮಿಸಿ 93 ವರ್ಷ ಸಂದಿದೆ. ಬಾಲಗಂಗಾಧರ ತಿಲಕರು ಗ್ರಾಮಕ್ಕೆ ಬಂದು 121 ವರ್ಷ ಸಂದಿರುವ ಪ್ರಯುಕ್ತ ಪ್ರತಿ ವರ್ಷ ಗ್ರಾಮದ ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸಿ ಅಗಸ್ಟ್ 14 ರಂದು ಮಧ್ಯರಾತ್ರಿ12 ಘಂಟೆಗೆ ಧ್ವಜಾರೋಹಣ ಮಾಡುವ ಮೂಲಕ ಸ್ವಾತಂತ್ರ್ಯೋತ್ಸವ ಅಚರಿಸುತ್ತಾ ಬಂದಿರುವದು ನಮ್ಮೂರಿನ ಹೆಮ್ಮೆ. ಗ್ರಾಮದ 215ಕ್ಕೂ ಹೆಚ್ಚು ಸ್ವಾತಂತ್ರ್ಯದ ಹೋರಾಟದಲ್ಲಿ ಪಾಲ್ಗೊಂಡಿರುವದು ಗ್ರಾಮದ ಹೆಮ್ಮೆಯ ಸಂಗತಿ " ಎಂದರು
ಗ್ರಾಮದ ಹಿರಿಯ ಸೋಮಲಿಂಗಪ್ಪ ಕೋಟಗಿ ಅಧ್ಯಕ್ಷತೆ ವಹಿಸಿದ್ದರು.ಗ್ರಾಮದ ಸ್ವಾತಂತ್ರ್ಯ ಹೋರಾಟಗಾರ ವಾರಸುದಾರರಾದ, ಮಂಜುನಾಥ ಮೂಲಿಮನಿ, ಶಿವಪ್ರಕಾಶ ಹೀರೆಮಠ, ಉಮೇಶ ಸಂಗೋಳ್ಳಿ, ಮಹಾಂತೇಶ ಹುರಕಡ್ಲಿ,ರಾಚ್ಚಪ್ಪ ಬೋಳೆತ್ತಿನ ಗೌಡಪ್ಪ ಹೊಸಮನಿ, ನಾಗರಾಜ ಬುಡಶೆಟ್ಟಿ, ಉಮೇಶ ಬೋಳೆತ್ತಿನ, ದಿಲಾವಾರ ದುಪದಾಳ, ಮುನಿರ ಶೇಖ, ಕಲ್ಲಪ್ಪ ಚಳಕೊಪ್ಪ, ರಮೇಶ ವಕ್ಕುಂದು, ದಾದಫೀರ ಶೇಖ, ಮಂಜು ಕಳ್ಳಿ, ಮಲ್ಲಿಕಾರ್ಜುನ ಕರಡಿಗುದ್ದಿ, ಶ್ರೀಕಾಂತ್ ಬೂದಿಹಾಳ, ಮಡಿವಾಳಪ್ಪ ಚಿಕ್ಕೊಪ್ಪ, ಸಂಜು ಜುಮೆತ್ರಿ, ಮಂಜುನಾಥ ಬುಡಶೆಟ್ಟಿ,
ಬಸವರಾಜ ಬಾಳೆಕುಂದರಗಿ, ಈರಣ್ಣ ಚಿಕ್ಕೊಪ್ಪ, ಸಂಜು ಚಿಕ್ಕೊಪ್ಪ, ಬಸವರಾಜ ಬೂದಿಹಾಳ, ಪುಟ್ಟು ಕಲ್ಲೇದ, ಮಲ್ಲಿಕಾರ್ಜುನ ಚಿಕ್ಕೊಪ್ಪ, ಸೊಮಪ್ಪ ವಕ್ಕುಂದ, ಪ್ರಕಾಶ್ ಹುರಕಡ್ಲಿ, ರಾಖೇಶ ನಾಗನಗೌಡರ, ರಾಜು ಯರಗಟ್ಟಿಮಠ, ಮಲ್ಲಿಕಾರ್ಜುನ ಸಂಗಣ್ಣವರ, ಭೀಮು ಹಾಗೂ ನೂರಾರು ಸಂಖ್ಯೆಯಲ್ಲಿ ದೇಶಭಕ್ತರು ಸೇರಿದ್ದರು.
ಮುರಗೋಡ ಠಾಣೆಯ ಪಿಎಸ್.ಆಯ್ ಡಬ್ಲೂ.ಎಚ್. ಯಾದವಾಡ,ಪ್ರಬೆಶನರಿ ಪಿ ಎಸ್.ಆಯ್ ಮಾರುತಿ ಲಮಾನಿ ಹವಾಲ್ದಾರ್ ಎಫ್.ಎಮ್.ಮದ್ಲಿ ನೆತೃದಲ್ಲಿ ಪೋಲಿಸರು ಬಂದುಬಸ್ತ ಒದಗಿಸಿದ್ದರು.
ಕಲ್ಲಪ್ಪ ಚಳಕೊಪ್ಪ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿಸರು.ಬಸವರಾಜ ಬಾಳೆಕುಂದರಗಿ ವಂದಿಸಿದರು.
***
ಈ ಲೇಖನ ಹಂಚಿಕೊಳ್ಳಿ