ಬ್ರೇಕಿಂಗ್
◆ಬೆಳಗಾವಿ ಅಧಿವೇಶನ: ಅಭಿವೃದ್ಧಿ ಕುರಿತು ಚರ್ಚೆಗೆ ಪ್ರಾಧಾನ್ಯತೆ ಸಭಾಧ್ಯಕ್ಷ - ಸಭಾಪತಿ ಮಾಹಿತಿ ◆ಕನ್ನಡ ಅಭಿಮಾನಕ್ಕೆ ಬೆಳಗಾವಿ ಮಾದರಿ :  ಉಪ ಪೊಲೀಸ್‌  ಆಯುಕ್ತ ನಾರಾಯಣ  ಬರಮನಿ ◆ಬೆಳಗಾವಿ ಅಧಿವೇಶನ ಉತ್ತರ ಕರ್ನಾಟಕದ ಸೂಕ್ತ ಸ್ಪಂದನೆಗೆ ಆಗ್ರಹಿಸಿ ಸರ್ಕಾರಿ ಸೌಲಭ್ಯ ‌ನಿರಾಕರಿಸಿದ ಶಾಸಕ ಶರಣಗೌಡ ◆"ಪತ್ರಕರ್ತ ಜವಾಬ್ದಾರಿಯಿಂದ ನುಣಚಿಕೊಂಡರೆ ಸತ್ಯ ಸಾಯುತ್ತದೆ" ◆ಇಮಾಮ್ ಅವರಿಗೆ ಶನಿವಾರ ರೋಹಿತ್ ಪತ್ರಿಕೋದ್ಯಮ ಪ್ರಶಸ್ತಿ ಪ್ರದಾನ ◆ಸಕ್ಕರೆ ಮಾರಾಟದ ಲಾಭ ಹಂಚಿಕೆ ಸೂತ್ರ- ಇತಿಹಾಸದಲ್ಲಿ ಮೊದಲು ಜಾರಿ ◆ಕನ್ನಡ ಮನಸ್ಸುಗಳನ್ನು ಒಂದುಗೂಡಿಸುವ ಕಸಾಪ ಕಳೆದುಕೊಂಡರೆ ಮತ್ತೊಂದನ್ನು ಕಟ್ಟಲು ಸಾಧ್ಯವಿಲ್ಲ : ಜಾಣಗೆರೆ ವೆಂಕಟರಾಮಯ್ಯ ◆ಟನ್ ಕಬ್ಬಿಗೆ 3,600 ಕಾರ್ಖಾನೆಗಳ ನಿಗದಿಗೆ ನಿಟ್ಟುಸಿರು ಬಿಟ್ಟ ರೈತರು ಹೋರಾಟದ ಬಿಸಿ ಉಸಿರು ◆ಬೆಳಗಾವಿ ಪಾಲಿಕೆಯಿಂದ ಪತ್ರಕರ್ತರಿಗೆ ಆರೋಗ್ಯ ವಿಮಾ ಕಾರ್ಡ್ ವಿತರಣೆ ◆ಕನ್ನಡ – ಮರಾಠಿ ಸಾಂಸ್ಕೃತಿಕ ಅನುಸಂಧಾನಕಾರ ಡಿ.ಎಸ್. ಚೌಗಲೆ ◆ಬೆಳಗಾವಿ ಅಧಿವೇಶನ: ಅಭಿವೃದ್ಧಿ ಕುರಿತು ಚರ್ಚೆಗೆ ಪ್ರಾಧಾನ್ಯತೆ ಸಭಾಧ್ಯಕ್ಷ - ಸಭಾಪತಿ ಮಾಹಿತಿ ◆ಕನ್ನಡ ಅಭಿಮಾನಕ್ಕೆ ಬೆಳಗಾವಿ ಮಾದರಿ :  ಉಪ ಪೊಲೀಸ್‌  ಆಯುಕ್ತ ನಾರಾಯಣ  ಬರಮನಿ ◆ಬೆಳಗಾವಿ ಅಧಿವೇಶನ ಉತ್ತರ ಕರ್ನಾಟಕದ ಸೂಕ್ತ ಸ್ಪಂದನೆಗೆ ಆಗ್ರಹಿಸಿ ಸರ್ಕಾರಿ ಸೌಲಭ್ಯ ‌ನಿರಾಕರಿಸಿದ ಶಾಸಕ ಶರಣಗೌಡ ◆"ಪತ್ರಕರ್ತ ಜವಾಬ್ದಾರಿಯಿಂದ ನುಣಚಿಕೊಂಡರೆ ಸತ್ಯ ಸಾಯುತ್ತದೆ" ◆ಇಮಾಮ್ ಅವರಿಗೆ ಶನಿವಾರ ರೋಹಿತ್ ಪತ್ರಿಕೋದ್ಯಮ ಪ್ರಶಸ್ತಿ ಪ್ರದಾನ ◆ಸಕ್ಕರೆ ಮಾರಾಟದ ಲಾಭ ಹಂಚಿಕೆ ಸೂತ್ರ- ಇತಿಹಾಸದಲ್ಲಿ ಮೊದಲು ಜಾರಿ ◆ಕನ್ನಡ ಮನಸ್ಸುಗಳನ್ನು ಒಂದುಗೂಡಿಸುವ ಕಸಾಪ ಕಳೆದುಕೊಂಡರೆ ಮತ್ತೊಂದನ್ನು ಕಟ್ಟಲು ಸಾಧ್ಯವಿಲ್ಲ : ಜಾಣಗೆರೆ ವೆಂಕಟರಾಮಯ್ಯ ◆ಟನ್ ಕಬ್ಬಿಗೆ 3,600 ಕಾರ್ಖಾನೆಗಳ ನಿಗದಿಗೆ ನಿಟ್ಟುಸಿರು ಬಿಟ್ಟ ರೈತರು ಹೋರಾಟದ ಬಿಸಿ ಉಸಿರು ◆ಬೆಳಗಾವಿ ಪಾಲಿಕೆಯಿಂದ ಪತ್ರಕರ್ತರಿಗೆ ಆರೋಗ್ಯ ವಿಮಾ ಕಾರ್ಡ್ ವಿತರಣೆ ◆ಕನ್ನಡ – ಮರಾಠಿ ಸಾಂಸ್ಕೃತಿಕ ಅನುಸಂಧಾನಕಾರ ಡಿ.ಎಸ್. ಚೌಗಲೆ
21 ನವೆಂ 2026
ಬೆಳಗಾವಿ ಅಧಿವೇಶನ: ಅಭಿವೃದ್ಧಿ ಕುರಿತು ಚರ್ಚೆಗೆ ಪ್ರಾಧಾನ್ಯತೆ ಸಭಾಧ್ಯಕ್ಷ - ಸಭಾಪತಿ ಮಾಹಿತಿ
📄 ಕರ್ನಾಟಕ ಸುದ್ದಿ
Dr. K N Doddmani · · 12 ವೀಕ್ಷಣೆಗಳು

ಬೆಳಗಾವಿ ಅಧಿವೇಶನ: ಅಭಿವೃದ್ಧಿ ಕುರಿತು ಚರ್ಚೆಗೆ ಪ್ರಾಧಾನ್ಯತೆ ಸಭಾಧ್ಯಕ್ಷ - ಸಭಾಪತಿ ಮಾಹಿತಿ

ಬೆಳಗಾವಿ ಅಧಿವೇಶನ: ಅಭಿವೃದ್ಧಿ ಕುರಿತು ಚರ್ಚೆಗೆ ಪ್ರಾಧಾನ್ಯತೆ ಸಭಾಧ್ಯಕ್ಷ - ಸಭಾಪತಿ ಮಾಹಿತಿ

ಅಸ್ಮಿತೆ ವರದಿ, ನ.೨೧: ಡಿಸೆಂಬರ್ 2 ರಿಂದ 11 ರ ವರೆಗೆ ಬೆಳಗಾವಿಯ ಸುವರ್ಣ ಸೌಧದಲ್ಲಿ  ನಡೆಯಲಿರುವ ವಿಧಾನ ಮಂಡಳ‌ ಚಳಿಗಾಲ ಅಧಿವೇಶನದಲ್ಲಿ ನಾಡಿನ  ಅಭಿವೃದ್ಧಿ ಕುರಿತ ಚರ್ಚೆಗೆ ಆದ್ಯತೆ ನೀಡಲಾಗುವುದು. ಎಲ್ಲ ಶಾಸಕರು ಹಾಜರಾಗಲು ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಲು‌ ನಿರ್ಧರಿಸಲಾಗಿದೆ ಎಂದು ವಿಧಾನಸಭಾಧ್ಯಕ್ಷರಾದ ಜಿ.ಎಸ್.ಪಾಟೀಲ ತಿಳಿಸಿದ್ದಾರೆ.

ಅಧಿವೇಶನ ಹಿನ್ನೆಲೆಯಲ್ಲಿ ಸಭಾಪತಿ ಸಲೀಂ‌ ಅಹಮದ್ ಅವರೊಂದಿಗೆ ಬೆಳಗಾವಿ ಸುವರ್ಣ ಸೌಧದಲ್ಲಿನ ಪೂರ್ವ ಸಿದ್ಧತೆ ಪರಿಶೀಲಿಸಿ  ಹಾಗೂ ಅಧಿಕಾರಿಗಳ ಸಭೆಯ ನಂತರ ಅವರು ಸುದ್ದಿಗಾರರಿಗೆ ಮಾಹಿತಿ ನೀಡಿದರು.

ಶಾಸಕರ ವಸತಿಗೆ ಅನುಕೂಲವಾಗುವಂತೆ ಶಾಸಕರ ಭವನದ ಮಾದರಿಯಲ್ಲಿ ಕಟ್ಟಡ‌ ನಿರ್ಮಿಸುವ ಯೋಚನೆ ಇದೆ. ಈ ಬಗ್ಗೆ ಮುಖ್ಯಮಂತ್ರಿ ಜತೆ‌ ಚರ್ಚಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು.  ಪ್ರತಿ ತಿಂಗಳು ಒಂದು ಸದನ ಸಮಿತಿಯ ಸಭೆಯನ್ನು ಸುವರ್ಣವಿಧಾನಸೌಧದಲ್ಲಿ ನಡೆಸಲು ಉದ್ಧೇಶಿಸಲಾಗಿದೆ ಎಂದು ತಿಳಿಸಿದರು.

ಅಧಿವೇಶನ ಸಂದರ್ಭದಲ್ಲಿ  ಸುವರ್ಣ ಸೌಧದಲ್ಲಿ ಪುಸ್ತಕ ಮೇಳ, ಯೋಗಾಭ್ಯಾಸ ಹಾಗೂ  ಶಾಲಾ‌ ಮಕ್ಕಳಿಗೆ ಎ.ಐ. ಮೂಲಕ ಸಂವಾದ ನಡೆಸುವ ಕಾರ್ಯಕ್ರಮ ನೂತನ ಕಾರ್ಯಕ್ರಮ ಆಯೋಜಿಸಲಾಗುವುದು. ಇದರೊಂದಿಗೆ ಸಾಂಸ್ಕೃತಿ ಕಾರ್ಯಕ್ರಮಗಳಿಗೆ ಅವಕಾಶ ನೀಡಲಾಗುವುದು ಎಂದು ತಿಳಿಸಿದ ವಿಧಾನ ಸಭಾಧ್ಯಕ್ಷರು ಪ್ರತಿಭಟನೆಗೆ ಸಂಬಂಧಿಸಿದಂತೆ ಜಿಲ್ಲಾ ಹಾಗೂ ತಾಲ್ಲೂಕುಮಟ್ಟದಲ್ಲಿ ಬಗೆಹರಿಯಬಹುದಾದ ಸಮಸ್ಯೆಗಳನ್ನು ಚರ್ಚಿಸಲು  ಸೂಚಿಸಿದೆ ಎಂದು ತಿಳಿಸಿದರು.

ವಿಧಾನಪರಿಷತ್ ಸಭಾಪತಿ ಸಲೀಂ‌ ಅಹಮದ್ ಮಾತನಾಡಿ,  ಅಧಿವೇಶನದಲ್ಲಿ ಸಮಗ್ರ ಕರ್ನಾಟಕದ ಅಭಿವೃದ್ಧಿಯ ಜತೆಗೆ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ವಿಶೇಷ ಚರ್ಚೆಯನ್ನು ನಡೆಸಲು ಅವಕಾಶ ಕಲ್ಪಿಸಲಾಗುವುದು. ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷಗಳು ಎಲ್ಲರೂ ಸೇರಿ ಸಮಸ್ಯೆಗಳ ಪರಿಹಾರ ಕಂಡುಕೊಳ್ಳಲು ಆದ್ಯತೆ ನೀಡಲಾಗುವುದು. ಪ್ರತಿಭಟನೆಗೂ ಮುಂಚೆ ಸಮಸ್ಯೆಗಳ ಪರಿಹಾರಕ್ಕೆ‌ ಚರ್ಚಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಪ್ರತಿಭಟನೆಗಳು ಪ್ರಜಾಪ್ರಭುತ್ವದಲ್ಲಿ ಅವಶ್ಯಕ. ಇದರಿಂದ ಸದನದ ಕಲಾಪಗಳಿಗೆ ತೊಂದರೆಯಾಗದಿರಲಿ ಎಂದು ತಿಳಿಸಿದರು.

ಸರಕಾರ-ವಿರೋಧಪಕ್ಷಗಳ ಮುಖಂಡರ ಜತೆ‌ ಸಮಾಲೋಚಿಸಿ ಸದನದಲ್ಲಿ‌ ಚರ್ಚಿಸಬೇಕಾಗಿರುವ ವಿಷಯಗಳನ್ನು ನಿರ್ಧರಿಸಲಾಗುವುದು. ಸದನದಲ್ಲಿ‌ ಹಾಜರಾತಿ ಹೆಚ್ಚಳಕ್ಕೆ ಅಗತ್ಯ ಕ್ರಮ ವಹಿಸಲಾಗುವುದು ಶಾಸಕರ ಭವನ ನಿರ್ಮಾಣದ ಚಿಂತನೆಯಿದೆ. ವಿಸ್ತೃತವಾಗಿ ಚರ್ಚಿಸಿದ ಬಳಿಕ ಸೂಕ್ತ ನಿರ್ಣಯ ಕೈಗೊಳ್ಳಲಾಗುವುದು ಎಂದು ಸಭಾಪತಿ ಸಲೀಂ‌ ಅಹಮದ್ ಮಾಹಿತಿ ನೀಡಿದರು.

***

ಈ ಲೇಖನ ಹಂಚಿಕೊಳ್ಳಿ

ಇನ್ನಷ್ಟು ಓದಿ

ಬೆಳಗಾವಿ ಅಧಿವೇಶನ ಉತ್ತರ ಕರ್ನಾಟಕದ ಸೂಕ್ತ ಸ್ಪಂದನೆಗೆ ಆಗ್ರಹಿಸಿ ಸರ್ಕಾರಿ ಸೌಲಭ್ಯ ‌ನಿರಾಕರಿಸಿದ ಶಾಸಕ ಶರಣಗೌಡ ಕರ್ನಾಟಕ ಸುದ್ದಿ

ಬೆಳಗಾವಿ ಅಧಿವೇಶನ ಉತ್ತರ ಕರ್ನಾಟಕದ ಸೂಕ್ತ ಸ್ಪಂದನೆಗೆ ಆಗ್ರಹಿಸಿ ಸರ್ಕಾರಿ ಸೌಲಭ್ಯ ‌ನಿರಾಕರಿಸಿದ ಶಾಸಕ ಶರಣಗೌಡ

ಗುರುಮಿಟ್ಕಲ್ ಶಾಸಕ ಶರಣಗೌಡ ಕಂದಕೂರು ಅವರ ನಿರ್ಧಾರದ ಹಿಂದಿರುವ ಕಾಳಜಿ ಉತ್ತರ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕದ ಇನ್ನೂಳಿದ ಜನಪ್ರತಿನಿಧಿಗಳಿಗೆ ಈ ಭಾಗದ ಸಮಸ್ಯೆಗಳ ಸ್ಪಂದನೆಗೆ ಸರ್ಕಾರದ ಮೇಲೆ ಒತ್ತಡ ತರುವ ಪ್ರಬಲವಾದ ನಿರ್ಧಾರಕ್ಕೆ ಕಾರಣವಾಗಬಹುದೇ ಕಾಯ್ದು ನೋಡಬೇಕಾಗಿದೆ!

Admin
ರೈತರು ಹಾಗ ಕಾರ್ಖಾನೆ ಮಾಲೀಕರರೊಂದಿಗಿನ ಸಂವಾದ ಸುಖಾಂತ : ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಕರ್ನಾಟಕ ಸುದ್ದಿ

ರೈತರು ಹಾಗ ಕಾರ್ಖಾನೆ ಮಾಲೀಕರರೊಂದಿಗಿನ ಸಂವಾದ ಸುಖಾಂತ : ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ

"ಕಳೆದ 10 ವರ್ಷಗಳಿಂದ ಕೇಂದ್ರ ಸರ್ಕಾರ ಕಬ್ಬಿನ ಬೆಲೆ ನಿಗದಿ ಮಾಡದೇ ಇರುವುದರಿಂದ ಸಮಸ್ಯೆ ತೀವ್ರಗೊಂಡಿದೆ. ಈ ಬಗ್ಗ ಸೂಕ್ತ ತೀಮಾರ್ಣ ತೆಗೆದುಕೊಳ್ಳುವ ಬಗ್ಗೆ ಕರ್ನಾಟಕದವರೇ ಆದ ಕೇಂದ್ರ ಸಚಿವರಾದ ಪ್ರಲ್ಹಾದ ಜೋಶಿ ಇವರು ಭರವಸೆ ನೀಡಿದ್ದಾರೆ. ಅವರು ಕಬ್ಬಿಗೆ ಸೂಕ್ತ ಬೆಲೆ ನಿಗದಿಗೊಳಿಸುವ ಬಗ್ಗೆ ಸರ್ಕಾರ, ರೈತರು ಹಾಗೂ ಕಾರ್ಖಾನೆಯವರು ವಿಶ್ವಾಸ ಹೊಂದಿದ್ದಾರೆ"

Admin