ಬ್ರೇಕಿಂಗ್
◆ಬೆಳಗಾವಿ ಅಧಿವೇಶನ ಉತ್ತರ ಕರ್ನಾಟಕದ ಸೂಕ್ತ ಸ್ಪಂದನೆಗೆ ಆಗ್ರಹಿಸಿ ಸರ್ಕಾರಿ ಸೌಲಭ್ಯ ‌ನಿರಾಕರಿಸಿದ ಶಾಸಕ ಶರಣಗೌಡ ◆"ಪತ್ರಕರ್ತ ಜವಾಬ್ದಾರಿಯಿಂದ ನುಣಚಿಕೊಂಡರೆ ಸತ್ಯ ಸಾಯುತ್ತದೆ" ◆ಇಮಾಮ್ ಅವರಿಗೆ ಶನಿವಾರ ರೋಹಿತ್ ಪತ್ರಿಕೋದ್ಯಮ ಪ್ರಶಸ್ತಿ ಪ್ರದಾನ ◆ಸಕ್ಕರೆ ಮಾರಾಟದ ಲಾಭ ಹಂಚಿಕೆ ಸೂತ್ರ- ಇತಿಹಾಸದಲ್ಲಿ ಮೊದಲು ಜಾರಿ ◆ಕನ್ನಡ ಮನಸ್ಸುಗಳನ್ನು ಒಂದುಗೂಡಿಸುವ ಕಸಾಪ ಕಳೆದುಕೊಂಡರೆ ಮತ್ತೊಂದನ್ನು ಕಟ್ಟಲು ಸಾಧ್ಯವಿಲ್ಲ : ಜಾಣಗೆರೆ ವೆಂಕಟರಾಮಯ್ಯ ◆ಟನ್ ಕಬ್ಬಿಗೆ 3,600 ಕಾರ್ಖಾನೆಗಳ ನಿಗದಿಗೆ ನಿಟ್ಟುಸಿರು ಬಿಟ್ಟ ರೈತರು ಹೋರಾಟದ ಬಿಸಿ ಉಸಿರು ◆ಬೆಳಗಾವಿ ಪಾಲಿಕೆಯಿಂದ ಪತ್ರಕರ್ತರಿಗೆ ಆರೋಗ್ಯ ವಿಮಾ ಕಾರ್ಡ್ ವಿತರಣೆ ◆ಕನ್ನಡ – ಮರಾಠಿ ಸಾಂಸ್ಕೃತಿಕ ಅನುಸಂಧಾನಕಾರ ಡಿ.ಎಸ್. ಚೌಗಲೆ ◆ಗಣಿ ಇಲಾಖೆ ಸಿಬ್ಬಂದಿಗೆ ಅನಧಿಕೃತ ಹಣದ ವಹಿವಾಟು- ಉಪ ಲೋಕಾಯುಕ್ತ ಬಿ. ವೀರಪ್ಪ ◆ಮರು ನೋಂದಣಿ ಮಾಡದ ಶಾಲಾ ವಾಹನ, ಅನಧಿಕೃತ ವಾಹನಗಳ ಮುಲಾಜಿಲ್ಲದೆ ಜಪ್ತಿ ಮಾಡಿ- ಉಪ ಲೋಕಾಯುಕ್ತರ ಕಡಕ್ ಸೂಚನೆ ◆ಬೆಳಗಾವಿ ಅಧಿವೇಶನ ಉತ್ತರ ಕರ್ನಾಟಕದ ಸೂಕ್ತ ಸ್ಪಂದನೆಗೆ ಆಗ್ರಹಿಸಿ ಸರ್ಕಾರಿ ಸೌಲಭ್ಯ ‌ನಿರಾಕರಿಸಿದ ಶಾಸಕ ಶರಣಗೌಡ ◆"ಪತ್ರಕರ್ತ ಜವಾಬ್ದಾರಿಯಿಂದ ನುಣಚಿಕೊಂಡರೆ ಸತ್ಯ ಸಾಯುತ್ತದೆ" ◆ಇಮಾಮ್ ಅವರಿಗೆ ಶನಿವಾರ ರೋಹಿತ್ ಪತ್ರಿಕೋದ್ಯಮ ಪ್ರಶಸ್ತಿ ಪ್ರದಾನ ◆ಸಕ್ಕರೆ ಮಾರಾಟದ ಲಾಭ ಹಂಚಿಕೆ ಸೂತ್ರ- ಇತಿಹಾಸದಲ್ಲಿ ಮೊದಲು ಜಾರಿ ◆ಕನ್ನಡ ಮನಸ್ಸುಗಳನ್ನು ಒಂದುಗೂಡಿಸುವ ಕಸಾಪ ಕಳೆದುಕೊಂಡರೆ ಮತ್ತೊಂದನ್ನು ಕಟ್ಟಲು ಸಾಧ್ಯವಿಲ್ಲ : ಜಾಣಗೆರೆ ವೆಂಕಟರಾಮಯ್ಯ ◆ಟನ್ ಕಬ್ಬಿಗೆ 3,600 ಕಾರ್ಖಾನೆಗಳ ನಿಗದಿಗೆ ನಿಟ್ಟುಸಿರು ಬಿಟ್ಟ ರೈತರು ಹೋರಾಟದ ಬಿಸಿ ಉಸಿರು ◆ಬೆಳಗಾವಿ ಪಾಲಿಕೆಯಿಂದ ಪತ್ರಕರ್ತರಿಗೆ ಆರೋಗ್ಯ ವಿಮಾ ಕಾರ್ಡ್ ವಿತರಣೆ ◆ಕನ್ನಡ – ಮರಾಠಿ ಸಾಂಸ್ಕೃತಿಕ ಅನುಸಂಧಾನಕಾರ ಡಿ.ಎಸ್. ಚೌಗಲೆ ◆ಗಣಿ ಇಲಾಖೆ ಸಿಬ್ಬಂದಿಗೆ ಅನಧಿಕೃತ ಹಣದ ವಹಿವಾಟು- ಉಪ ಲೋಕಾಯುಕ್ತ ಬಿ. ವೀರಪ್ಪ ◆ಮರು ನೋಂದಣಿ ಮಾಡದ ಶಾಲಾ ವಾಹನ, ಅನಧಿಕೃತ ವಾಹನಗಳ ಮುಲಾಜಿಲ್ಲದೆ ಜಪ್ತಿ ಮಾಡಿ- ಉಪ ಲೋಕಾಯುಕ್ತರ ಕಡಕ್ ಸೂಚನೆ
19 ನವೆಂ 2026
ಬೆಳಗಾವಿ ಅಧಿವೇಶನ ಉತ್ತರ ಕರ್ನಾಟಕದ ಸೂಕ್ತ ಸ್ಪಂದನೆಗೆ ಆಗ್ರಹಿಸಿ ಸರ್ಕಾರಿ ಸೌಲಭ್ಯ ‌ನಿರಾಕರಿಸಿದ ಶಾಸಕ ಶರಣಗೌಡ
📄 ಕರ್ನಾಟಕ ಸುದ್ದಿ
Dr. K N Doddmani · · 8 ವೀಕ್ಷಣೆಗಳು

ಬೆಳಗಾವಿ ಅಧಿವೇಶನ ಉತ್ತರ ಕರ್ನಾಟಕದ ಸೂಕ್ತ ಸ್ಪಂದನೆಗೆ ಆಗ್ರಹಿಸಿ ಸರ್ಕಾರಿ ಸೌಲಭ್ಯ ‌ನಿರಾಕರಿಸಿದ ಶಾಸಕ ಶರಣಗೌಡ

ಗುರುಮಿಟ್ಕಲ್ ಶಾಸಕ ಶರಣಗೌಡ ಕಂದಕೂರು ಅವರ ನಿರ್ಧಾರದ ಹಿಂದಿರುವ ಕಾಳಜಿ ಉತ್ತರ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕದ ಇನ್ನೂಳಿದ ಜನಪ್ರತಿನಿಧಿಗಳಿಗೆ ಈ ಭಾಗದ ಸಮಸ್ಯೆಗಳ ಸ್ಪಂದನೆಗೆ ಸರ್ಕಾರದ ಮೇಲೆ ಒತ್ತಡ ತರುವ ಪ್ರಬಲವಾದ ನಿರ್ಧಾರಕ್ಕೆ ಕಾರಣವಾಗಬಹುದೇ ಕಾಯ್ದು ನೋಡಬೇಕಾಗಿದೆ!

ಬೆಳಗಾವಿ ಅಧಿವೇಶನ ಉತ್ತರ ಕರ್ನಾಟಕದ ಸೂಕ್ತ ಸ್ಪಂದನೆಗೆ ಆಗ್ರಹಿಸಿ ಸರ್ಕಾರಿ ಸೌಲಭ್ಯ ‌ನಿರಾಕರಿಸಿದ ಶಾಸಕ ಶರಣಗೌಡ

ಶಾಸಕರ ನಿರ್ಧಾರ ಸರ್ಕಾರದ ಕಣ್ಣು ತೆಗೆಸಬಹುದೆ, ಈ ಭಾಗದ ಇನ್ನುಳಿದವರಿಗೆ ಪ್ರೇರಣೆಯಾಗಬಹುದೆ?

ಅಸ್ಮಿತೆ ವರದಿ, ನ.೧೯: ಉತ್ತರ ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕದ ಸಮಸ್ಯೆಗಳಿಗೆ ಬೆಳಗಾವಿ ಅಧಿವೇಶನದಲ್ಲಿ ಸೂಕ್ತ ಪರಿಹಾರ ಸಿಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿರುವ ಗುರುಮಿಟ್ಕಲ್ ಶಾಸಕ ಶರಣಗೌಡ ಕಂದಕೂರು, ಈ ಬಾರಿಯ ಚಳಿಗಾಲದ ಅಧಿವೇಶನದಲ್ಲಿ ಸರ್ಕಾರದಿಂದ ಯಾವುದೇ ಸೌಲಭ್ಯ ಪಡೆಯುವುದಿಲ್ಲ ಎಂದು ಘೋಷಿಸಿಸುವುದರ ಮೂಲಕ ಈ‌ ಭಾಗದ ಸಮಸ್ಯೆಗಳ ನಿವಾರಣೆಗೆ ಅಧಿವೇಶನ ಪ್ರಾಧಾನ್ಯತೆ ವಹಿಸಬೇಕೆಂದ ಕಳಕಳಿ ವ್ಯಕ್ತಪಡಿಸಿದ್ದಾರೆ.

ವಸತಿ, ಊಟ ಸೇರಿದಂತೆ ಯಾವುದೇ ಭತ್ಯೆ ಅಥವಾ ಸೌಲಭ್ಯ ಪಡೆಯದೆ ಸ್ವಂತ ಖರ್ಚಿನಲ್ಲೇ ಅಧಿವೇಶನದಲ್ಲಿ ಪಾಲ್ಗೊಳ್ಳುವುದಾಗಿ ವಿಧಾನಸಭಾಧ್ಯಕ್ಷರಿಗೆ ಪತ್ರ ಬರೆದಿದ್ದಾರೆ.

ನವೆಂಬರ್ 18, 2026ರಂದು ಬರೆದಿರುವ ಪತ್ರದಲ್ಲಿ ಕಂದಕೂರು, ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಸುವ ಉದ್ದೇಶ ಉತ್ತರ ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕದ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುವುದು, ಈ ಭಾಗಕ್ಕೆ ಅಗತ್ಯ ಸೌಲಭ್ಯ ಕಲ್ಪಿಸುವುದು ಹಾಗೂ ಪ್ರಾದೇಶಿಕ ಹಿತಾಸಕ್ತಿಗಳನ್ನು ರಕ್ಷಿಸುವುದಾಗಿದೆ ಎಂದು ಹೇಳಿದ್ದಾರೆ.

ಆದರೆ, ಕಳೆದ ಬಾರಿ ನಡೆದ ಅಧಿವೇಶನದಲ್ಲಿ ಚರ್ಚೆಯಾದ ವಿಷಯಗಳು ಕಾರ್ಯರೂಪಕ್ಕೆ ಬಂದಿಲ್ಲ. ಈ ಭಾಗದ ಜನರಿಗೆ ಅಧಿವೇಶನ ಕೇವಲ ಕಣ್ಣೊರೆಸುವ ತಂತ್ರ ಎಂಬ ಭಾವನೆ ಮೂಡಿದೆ. ಇದನ್ನು ತಾವು ಸದನದಲ್ಲೇ ಬಲವಾಗಿ ವಿರೋಧಿಸಿದ್ದಾಗಿ ತಿಳಿಸಿದ್ದಾರೆ.

ಕಳೆದ ಬಾರಿಯ ಚಳಿಗಾಲದ ಅಧಿವೇಶನದಲ್ಲಿಯೂ ಸರ್ಕಾರದಿಂದ ವಸತಿ, ಊಟ ಅಥವಾ ಯಾವುದೇ ಭತ್ಯೆ ಪಡೆಯದೆ, ಸಂಪೂರ್ಣ ಖರ್ಚನ್ನು ಸ್ವತಃ ಭರಿಸಿ ಅಧಿವೇಶನದಲ್ಲಿ ಭಾಗವಹಿಸಿದ್ದಾಗಿ ಅವರು ನೆನಪಿಸಿಕೊಂಡಿದ್ದಾರೆ.

ರೈತರ ಸಂಕಷ್ಟ, ಜನರ ವಲಸೆ ಬಗ್ಗೆ ಕಳವಳ:

ಕಿತ್ತೂರು ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕದ ಜನರಿಗೆ ಬರಗಾಲ ಬದುಕಿನ ಭಾಗವಾಗಿಬಿಟ್ಟಿದೆ. ರೈತರು ಕಷ್ಟಪಟ್ಟು ಬಿತ್ತಿದ ಬೆಳೆ ಕೈಕೊಟ್ಟರೆ, ಬಿತ್ತನೆ ಮಾಡಿದ ಬೀಜವೇ ಮಣ್ಣಿನಲ್ಲಿ ವ್ಯರ್ಥವಾದರೆ ರೈತರು ವಿಷ ಕುಡಿಯುವುದನ್ನು ಬಿಟ್ಟು ಬೇರೆ ದಾರಿ ಏನು? ಎಂದು ಕಂದಕೂರು ಪ್ರಶ್ನಿಸಿದ್ದಾರೆ.

ಹಸಿರು ಮೇವು, ಉದ್ಯೋಗ, ಶಾಲೆ, ಆಸ್ಪತ್ರೆ ಮತ್ತು ಕುಡಿಯುವ ನೀರಿನಂತಹ ಮೂಲಸೌಲಭ್ಯಗಳಿಲ್ಲದೆ ಜನರು ಹೇಗೆ ಬದುಕಬೇಕು ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ. ಸಮಸ್ಯೆಗಳ ನಡುವೆ ಸರತಿ ಸಾಲಿನಲ್ಲಿ ನಿಂತು ಕಾಯುತ್ತಿರುವ ಜನರು ಬಸವಳಿದಿದ್ದಾರೆ.

ಸಾಲದ ಹೊರೆ ಹೊತ್ತು, ಮಕ್ಕಳನ್ನೇ ಮಾರುವಂತಹ ಪರಿಸ್ಥಿತಿಗೆ ತಲುಪಿ, ಬದುಕಿಗಾಗಿ ಬೆಂಗಳೂರು, ಮುಂಬೈ, ಪುಣೆ ಮತ್ತು ಹೈದರಾಬಾದ್‌ಗೆ ವಲಸೆ ಹೋಗುತ್ತಿರುವ ಜನರ ಸ್ಥಿತಿ ಕಂಡರೆ ಯಾರ ಮನಸ್ಸಾದರೂ ಕರಗುತ್ತದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

"ಜನರಿಂದ ಮತ ಪಡೆದು, ಭರವಸೆಗಳ ಗೋಪುರ ಕಟ್ಟಿ ಜನಪ್ರತಿನಿಧಿಯಾಗಿದ್ದೇವೆ. ಆದರೆ ಜನರ ಆಶೋತ್ತರಗಳನ್ನು ಈಡೇರಿಸಲು ಸಾಧ್ಯವಾಗದಿದ್ದರೆ ನಾವು ಶಾಸಕರಾಗಿರುವುದರ ಉದ್ದೇಶವೇನು? ಈ ನಿರಾಶೆಯ ಭಾವನೆ ನನ್ನನ್ನು ಕಾಡುತ್ತಿದೆ" ಎಂದು ಅವರು ಹೇಳಿದ್ದಾರೆ.

ಗುರುಮಿಟ್ಕಲ್ ಶಾಸಕ ಶರಣಗೌಡ ಕಂದಕೂರು ಅವರ ನಿರ್ಧಾರದ ಹಿಂದಿರುವ ಕಾಳಜಿ ಉತ್ತರ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕದ ಇನ್ನೂಳಿದ ಜನಪ್ರತಿನಿಧಿಗಳಿಗೆ ಈ ಭಾಗದ ಸಮಸ್ಯೆಗಳ ಸ್ಪಂದನೆಗೆ ಸರ್ಕಾರದ ಮೇಲೆ ಒತ್ತಡ ತರುವ ಪ್ರಬಲವಾದ ನಿರ್ಧಾರಕ್ಕೆ ಕಾರಣವಾಗಬಹುದೇ ಕಾಯ್ದು ನೋಡಬೇಕಾಗಿದೆ!

****

ಈ ಲೇಖನ ಹಂಚಿಕೊಳ್ಳಿ

ಇನ್ನಷ್ಟು ಓದಿ

ರೈತರು ಹಾಗ ಕಾರ್ಖಾನೆ ಮಾಲೀಕರರೊಂದಿಗಿನ ಸಂವಾದ ಸುಖಾಂತ : ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಕರ್ನಾಟಕ ಸುದ್ದಿ

ರೈತರು ಹಾಗ ಕಾರ್ಖಾನೆ ಮಾಲೀಕರರೊಂದಿಗಿನ ಸಂವಾದ ಸುಖಾಂತ : ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ

"ಕಳೆದ 10 ವರ್ಷಗಳಿಂದ ಕೇಂದ್ರ ಸರ್ಕಾರ ಕಬ್ಬಿನ ಬೆಲೆ ನಿಗದಿ ಮಾಡದೇ ಇರುವುದರಿಂದ ಸಮಸ್ಯೆ ತೀವ್ರಗೊಂಡಿದೆ. ಈ ಬಗ್ಗ ಸೂಕ್ತ ತೀಮಾರ್ಣ ತೆಗೆದುಕೊಳ್ಳುವ ಬಗ್ಗೆ ಕರ್ನಾಟಕದವರೇ ಆದ ಕೇಂದ್ರ ಸಚಿವರಾದ ಪ್ರಲ್ಹಾದ ಜೋಶಿ ಇವರು ಭರವಸೆ ನೀಡಿದ್ದಾರೆ. ಅವರು ಕಬ್ಬಿಗೆ ಸೂಕ್ತ ಬೆಲೆ ನಿಗದಿಗೊಳಿಸುವ ಬಗ್ಗೆ ಸರ್ಕಾರ, ರೈತರು ಹಾಗೂ ಕಾರ್ಖಾನೆಯವರು ವಿಶ್ವಾಸ ಹೊಂದಿದ್ದಾರೆ"

Admin
ಕಾರ್ಖಾನೆ ಮಾಲಿಕರು, ಅಧಿಕಾರಿಗಳು ಕೇಂದ್ರದೊಂದಿಗೆ ಸಮಾಲೋಚಿಸಿ ಕ್ರಮ - ಸಿಎಂ ಭರವಸೆ ಕರ್ನಾಟಕ ಸುದ್ದಿ

ಕಾರ್ಖಾನೆ ಮಾಲಿಕರು, ಅಧಿಕಾರಿಗಳು ಕೇಂದ್ರದೊಂದಿಗೆ ಸಮಾಲೋಚಿಸಿ ಕ್ರಮ - ಸಿಎಂ ಭರವಸೆ

ಸಕ್ಕರೆ ಬೆಲೆ ಹೆಚ್ಚಾಗುವವರೆಗೆ  ಕಬ್ಬಿನ ಬೆಲೆ ಹೆಚ್ಚಾಗುವುದಿಲ್ಲ. ಹಣಕಾಸಿನ ಕೊರತೆ , ಬರಗಾಲ ಪರಿಸ್ಥಿತಿ ; ಫ್ಯಾಕ್ಟಿರಿಯವರು ಮೈಗೆ ಎಣ್ಣೆ ಹಚ್ಚಿಕೊಂಡಿರುತ್ತಾರೆ; ಕೇಂದ್ರದಿಂದ ಬೆಲೆ ನಿಗದಿಗೆ ಸರ್ಕಾರ ರೈತರೊಂದಿಗಿದೆ- ಸಭೆಯಲ್ಲಿ ಮುಖ್ಯಮಂತ್ರಿ ಹೇಳಿಕೆ

Admin