ಬ್ರೇಕಿಂಗ್
ಶರಣರ ಅನುಭವ ಮಂಟಪಕ್ಕೆ ಭೆಟ್ಟಿ ನೀಡಿದ AI ರೇಖಾ ಚಿತ್ರಗಳನ್ನು ಹಂಚಿಕೊಂಡ ಮುಖ್ಯಮಂತ್ರಿ ಅಂಗನವಾಡಿಯಿಂದ ಪಿಯುಸಿ ವರೆಗೂ ನಾಳೆ ರಜೆ ಬೆಳಗಾವಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಭೆ : 397  ಕಾಳಜಿ ಕೇಂದ್ರಗಳ ಸೌಲಭ್ಯ ಪರಿಶೀಲನೆಗೆ ಜಿಲ್ಲಾಧಿಕಾರಿ‌ ಮೊಹಮ್ಮದ್ ರೋಷನ್ ಸೂಚನೆ ತುಂಬಿದ ಜೀವಜಲ : ಹಸಿರಾದ ಇಳೆ, ಖುಷಿಗೊಂಡ ರೈತ ಸರ್ಕಾರದ ಸೂಚನೆ ಬೆಳಗಾವಿ ಪಾಲಿಕೆ ಪಾಲಿಸದಿದ್ದರೆ ಸೂಪರ್ ಸೀಡ್ ಮಾಡಬಹುದು - ಸಚಿವರಿಗೆ ಕನ್ನಡ ಸಂಘಟನೆಗಳ ಮನವರಿಕೆ ವಿಟಿಯು ಜಾಗತಿಕ ಮಟ್ಟದ ಖ್ಯಾತಿಗೆ ಗುಣಮಟ್ಟದ ಶಿಕ್ಷಣ ಅಳವಡಿಕೆ ಅಗತ್ಯ : ಕುಲಪತಿ ವಿದ್ಯಾಶಂಕರ್ ಸಲಹೆ ಮಳೆಯಾಗುತ್ತಿದ್ದು ಸದ್ಯ ಆತಂಕ ನಿವಾರಣೆ : ಸಚಿವ ಸತೀಶ ಜಾರಕಿಹೊಳಿ ಮೇಘಮೈತ್ರಿ ಸಾಹಿತ್ಯ ಸಂಭ್ರಮ: ಸಂಘ - ಸಂಸ್ಥೆಗಳ ಪ್ರಶಸ್ತಿ ಪ್ರದಾನ ಪರಂಪರೆ  ಗೌರವಯುತ ಕಾರ್ಯ - ಎಚ್.ಐ. ತಿಮ್ಮಾಪುರ ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ ಅರ್ಜಿ ಸಲ್ಲಿಕೆಗೆ ದಿನಾಂಕ ವಿಸ್ತರಣೆ ಫುಟ್ ಪಾತ್ ಪಾದಚಾರಿಗಳ ಹಕ್ಕು; ಹಾದಿಮ್ಯಾಲಿನವರ ಬದುಕಿನ ಹಕ್ಕಿನ ದಿಕ್ಕು? ಶರಣರ ಅನುಭವ ಮಂಟಪಕ್ಕೆ ಭೆಟ್ಟಿ ನೀಡಿದ AI ರೇಖಾ ಚಿತ್ರಗಳನ್ನು ಹಂಚಿಕೊಂಡ ಮುಖ್ಯಮಂತ್ರಿ ಅಂಗನವಾಡಿಯಿಂದ ಪಿಯುಸಿ ವರೆಗೂ ನಾಳೆ ರಜೆ ಬೆಳಗಾವಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಭೆ : 397  ಕಾಳಜಿ ಕೇಂದ್ರಗಳ ಸೌಲಭ್ಯ ಪರಿಶೀಲನೆಗೆ ಜಿಲ್ಲಾಧಿಕಾರಿ‌ ಮೊಹಮ್ಮದ್ ರೋಷನ್ ಸೂಚನೆ ತುಂಬಿದ ಜೀವಜಲ : ಹಸಿರಾದ ಇಳೆ, ಖುಷಿಗೊಂಡ ರೈತ ಸರ್ಕಾರದ ಸೂಚನೆ ಬೆಳಗಾವಿ ಪಾಲಿಕೆ ಪಾಲಿಸದಿದ್ದರೆ ಸೂಪರ್ ಸೀಡ್ ಮಾಡಬಹುದು - ಸಚಿವರಿಗೆ ಕನ್ನಡ ಸಂಘಟನೆಗಳ ಮನವರಿಕೆ ವಿಟಿಯು ಜಾಗತಿಕ ಮಟ್ಟದ ಖ್ಯಾತಿಗೆ ಗುಣಮಟ್ಟದ ಶಿಕ್ಷಣ ಅಳವಡಿಕೆ ಅಗತ್ಯ : ಕುಲಪತಿ ವಿದ್ಯಾಶಂಕರ್ ಸಲಹೆ ಮಳೆಯಾಗುತ್ತಿದ್ದು ಸದ್ಯ ಆತಂಕ ನಿವಾರಣೆ : ಸಚಿವ ಸತೀಶ ಜಾರಕಿಹೊಳಿ ಮೇಘಮೈತ್ರಿ ಸಾಹಿತ್ಯ ಸಂಭ್ರಮ: ಸಂಘ - ಸಂಸ್ಥೆಗಳ ಪ್ರಶಸ್ತಿ ಪ್ರದಾನ ಪರಂಪರೆ  ಗೌರವಯುತ ಕಾರ್ಯ - ಎಚ್.ಐ. ತಿಮ್ಮಾಪುರ ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ ಅರ್ಜಿ ಸಲ್ಲಿಕೆಗೆ ದಿನಾಂಕ ವಿಸ್ತರಣೆ ಫುಟ್ ಪಾತ್ ಪಾದಚಾರಿಗಳ ಹಕ್ಕು; ಹಾದಿಮ್ಯಾಲಿನವರ ಬದುಕಿನ ಹಕ್ಕಿನ ದಿಕ್ಕು?
08 ಜುಲೈ 2026
ಕಾರ್ಮಿಕರ ಕನಿಷ್ಠ ವೇತನ ಹಂತಹಂತವಾಗಿ ಹೆಚ್ಚಿಸಲು ವಿರೋಧವಿಲ್ಲ
📄 ಬೆಳಗಾವಿ ಜಿಲ್ಲೆಯ ಸುದ್ದಿ
Dr. K N Doddmani · · 48 ವೀಕ್ಷಣೆಗಳು

ಕಾರ್ಮಿಕರ ಕನಿಷ್ಠ ವೇತನ ಹಂತಹಂತವಾಗಿ ಹೆಚ್ಚಿಸಲು ವಿರೋಧವಿಲ್ಲ

ಕನಿಷ್ಠ ವೇತನ ಹೆಚ್ಚಳ ವಿರೋಧಿಸಿ ಬೆಳಗಾವಿಯಲ್ಲಿ ಇಂದು ವ್ಯಾಪಾರಿಗಳು, ಉದ್ಯಮಿಗಳು ಹಾಗೂ ಸಂಘಟನೆಗಳ ಸದಸ್ಯರು ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಜಿಲ್ಲಾಧಿಕಾರಿಗೆ‌ ಮನವಿ

ಕಾರ್ಮಿಕರ ಕನಿಷ್ಠ ವೇತನ ಹಂತಹಂತವಾಗಿ ಹೆಚ್ಚಿಸಲು ವಿರೋಧವಿಲ್ಲ : ನಾಗರಮುನೋಳಿ

ಈಗಾಗಲೇ ಉದ್ಯಮಗಳು ಬೆಲೆ ಏರಿಕೆಯಿಂದ ತತ್ತರಿಸಿವೆ.  ಪುನಃ ಕನಿಷ್ಠ ವೇತನವನ್ನು ಹೆಚ್ಚಿಸಿದರೆ ಬಹಳಷ್ಟು ಉದ್ಯಮಗಳು ಬಾಗಿಲು ಮುಚ್ಚಲಿವೆ. ಇದರಿಂದ ನಿರುದ್ಯೋಗ ಸಮಸ್ಯೆಯೂ ಉಲ್ಬಣವಾಗಲಿದೆ. ಯಾವುದೇ ಕಾರಣಕ್ಕೂ ಕನಿಷ್ಠ ವೇತನ ನಿಯಮವನ್ನು ಜಾರಿಗೆ ತರಬಾರದು ಎಂದು ಒಕ್ಕೋರಲಿನಿಂದ ವಿರೋಧಿಸಿರುವ ಬೆಳಗಾವಿ ಉದ್ಯಮಿದಾರರು ಕನಿಷ್ಠ ವೇತನವನ್ನು ಹಂತ ಹಂತವಾಗಿ ಹೆಚ್ಚಿಸುವುದಕ್ಕೆ ನಮ್ಮ ವಿರೋಧವಿಲ್ಲ‌‌ ಎಂದು ಸ್ಪಷ್ಟಪಡೆಸಿದ್ದಾರೆ.

ಕನಿಷ್ಠ ವೇತನ ಹೆಚ್ಚಳ ವಿರೋಧಿಸಿ ಬೆಳಗಾವಿಯಲ್ಲಿ ಇಂದು ವ್ಯಾಪಾರಿಗಳು, ಉದ್ಯಮಿಗಳು ಹಾಗೂ ಸಂಘಟನೆಗಳ ಸದಸ್ಯರು ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರಿಗೆ ಮನವಿ ಸಲ್ಲಿಸಿದರು

ಈ ಸಂದರ್ಭದಲ್ಲಿ ಮಾತನಾಡಿದ ವಾಣಿಜ್ಯೋದ್ಯಮ ಸಂಘದ ಅಧ್ಯಕ್ಷ ಪ್ರಭಾಕರ ನಾಗರಮನೋಳಿ,  ಒಮ್ಮೆಲೆ ಭಾರೀ ಪ್ರಮಾಣದಲ್ಲಿ ಹೆಚ್ಚಿಸುವುದು ಉದ್ಯಮಗಳಿಗೆ ದೊಡ್ಡ ಹೊಡೆತ ಬೀಳಲಿದೆ. ಕನಿಷ್ಠ ವೇತನ ಹೆಚ್ಚಳದಿಂದ ವ್ಯಾಪಾರ, ಕೈಗಾರಿಕೆ ಹಾಗೂ ಸಣ್ಣ ಮತ್ತು ಮಧ್ಯಮ ಉದ್ಯಮಗಳ ಮೇಲೆ ಹೆಚ್ಚುವರಿ ಆರ್ಥಿಕ ಹೊರೆ ಬೀಳಲಿದ್ದು, ಈ ನಿರ್ಧಾರವನ್ನು ಮರುಪರಿಶೀಲಿಸುವಂತೆ ಸರ್ಕಾರವನ್ನು ಒತ್ತಾಯಿಸಿದರು.

ಪಕ್ಕದ ರಾಜ್ಯಗಳಲ್ಲಿ ಕನಿಷ್ಠ ವೇತನ ಅತ್ಯಂತ ಕಡಿಮೆ ಇದೆ. ಆದರೆ ಕರ್ನಾಟಕದಲ್ಲಿ ಮಾತ್ರ ಏಕಾಏಕಿ ದೊಡ್ಡ ಪ್ರಮಾಣದಲ್ಲಿ ಹೆಚ್ಚಿಸಲಾಗಿದೆ. ಉದ್ಯಮಗಳ ಉಳಿವಿಗೆ ಯಾವುದೇ ಸಹಾಯ ಮಾಡದೆ ಈ ರೀತಿ ವೇತನ ಹೆಚ್ಚಿಸುವುದರಿಂದ ಇಡೀ ಉದ್ಯಮವಲಯಕ್ಕೆ ಆಘಾತವಾಗಿದೆ ಎಂದು ತಿಳಿಸಿದರು.

ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಉದ್ಯಮಿಗಳ ಮನವಿಯನ್ನು ಸರ್ಕಾರದ ಗಮನಕ್ಕೆ ತರುವುದಾಗಿಯೂ, ಶೀಘ್ರವೇ ನೂತನವಾಗಿ ನೇಮಕವಾಗಲಿರುವ ಕಾರ್ಮಿಕ ಸಚಿವರು ಹಾಗೂ ಕೈಗಾರಿಕಾ ಸಚಿವರ ಜೊತೆ ಸಭೆಯನ್ನು ಆಯೋಜಿಸಲು ಪ್ರಯತ್ನಿಸುವುದಾಗಿಯೂ ಭರವಸೆ ನೀಡಿದರು.

ಚೇಂಬರ್ ಆಫ್ ಕಾಮರ್ಸ್ ಕಾರ್ಯದರ್ಶಿ ಸತೀಶ್ ಕುಲಕರ್ಣಿ, ವಾಣಿಜ್ಯೋದ್ಯಮ ಸಂಘದ ಎಲ್ಲಾ ಪದಾಧಿಕಾರಿಗಳು, ಸಣ್ಣ ಕೈಗಾರಿಕಾ ಸಂಘದ ಪದಾಧಿಕಾರಿಗಳು, ನಗರದ ವಿವಿಧ ಉದ್ಯಮಗಳ ನೂರಾರು ಪ್ರತಿನಿಧಿಗಳು ಸೇರಿದಂತೆ ಬೇರೆ ಬೇರೆ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

**

ಈ ಲೇಖನ ಹಂಚಿಕೊಳ್ಳಿ

ಇನ್ನಷ್ಟು ಓದಿ

ಬೆಳಗಾವಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಭೆ : 397  ಕಾಳಜಿ ಕೇಂದ್ರಗಳ ಸೌಲಭ್ಯ ಪರಿಶೀಲನೆಗೆ ಜಿಲ್ಲಾಧಿಕಾರಿ‌ ಮೊಹಮ್ಮದ್ ರೋಷನ್ ಸೂಚನೆ ಬೆಳಗಾವಿ ಜಿಲ್ಲೆಯ ಸುದ್ದಿ

ಬೆಳಗಾವಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಭೆ : 397  ಕಾಳಜಿ ಕೇಂದ್ರಗಳ ಸೌಲಭ್ಯ ಪರಿಶೀಲನೆಗೆ ಜಿಲ್ಲಾಧಿಕಾರಿ‌ ಮೊಹಮ್ಮದ್ ರೋಷನ್ ಸೂಚನೆ

ಜಿಲ್ಲೆಯಲ್ಲಿ ಸಂಭವನೀಯ ಪ್ರವಾಹ ಪರಿಸ್ಥಿತಿಯಲ್ಲಿ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ಎಸ್.ಡಿ.ಆರ್.ಎಫ್.‌ನ 5, ಅಗ್ನಿಶಾಮಕ ಇಲಾಖೆಯ 9, ತಾಲೂಕಿನಲ್ಲಿ 27 ಸೇರಿದಂತರ  ಒಟ್ಟು 41 ಬೋಟುಗಳು‌ ಲಭ್ಯವಿರುತ್ತವೆ. ಸಂಭವನೀಯ ಪ್ರವಾಹ ಸಂದರ್ಭದಲ್ಲಿ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು ಜಿಲ್ಲೆಯಲ್ಲಿ 397 ಪರಿಹಾರ ಕೇಂದ್ರ ಹಾಗೂ 129 ಗೋಶಿಬಿರಗಳನ್ನು ಗುರುತಿಸಲಾಗಿದೆ  ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

Admin
ಸರ್ಕಾರದ ಸೂಚನೆ ಬೆಳಗಾವಿ ಪಾಲಿಕೆ ಪಾಲಿಸದಿದ್ದರೆ ಸೂಪರ್ ಸೀಡ್ ಮಾಡಬಹುದು - ಸಚಿವರಿಗೆ ಕನ್ನಡ ಸಂಘಟನೆಗಳ ಮನವರಿಕೆ ಬೆಳಗಾವಿ ಜಿಲ್ಲೆಯ ಸುದ್ದಿ

ಸರ್ಕಾರದ ಸೂಚನೆ ಬೆಳಗಾವಿ ಪಾಲಿಕೆ ಪಾಲಿಸದಿದ್ದರೆ ಸೂಪರ್ ಸೀಡ್ ಮಾಡಬಹುದು - ಸಚಿವರಿಗೆ ಕನ್ನಡ ಸಂಘಟನೆಗಳ ಮನವರಿಕೆ

ಜುಲೈ 8 ರಂದು ಮುಂಬೈಯಲ್ಲಿ ಅಲ್ಲಿಯ ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಗಡಿವಿವಾದ ಸಂಬಂಧ ಉನ್ನತಾಧಿಕಾರ ಸಮಿತಿಯ ಸಭೆ ನಡೆಯಲಿದ್ದು, ಯಾವದೇ ಸಮಯದಲ್ಲಿ ಸುಪ್ರೀಂ ಕೋರ್ಟಿನ ಮುಂದೆ ಗಡಿವಿವಾದ ಪ್ರಕರಣ ವಿಚಾರಣೆಗೆ ಬರಬಹುದು. ಬೆಳಗಾವಿ ಪಾಲಿಕೆಯಲ್ಲಿ "ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ" ಎಂಬ ಗೊತ್ತುವಳಿ ಪಾಸಾದರೆ ಅದನ್ನು ಕರ್ನಾಟಕ ಪರವಾಗಿ ಕೋರ್ಟಿನಲ್ಲಿ ಸಲ್ಲಿಸಲು ಅವಕಾಶ ಸಿಗಲಿದೆ ಎಂದು ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಮುಖಂಡರು ವಿವರಿಸಿದ್ದಾರೆ.

Admin